ನೀ ಬರುವ ದಾರಿಯಲಿ

ನೀ ಬರುವ ದಾರಿಯಲಿ
ಅರಳಿವೆ ಹೂಗಳು
ಗಾಳಿ ಬೀಸಿವೆ ಚಿಗುರೆಲೆಗಳು
ನೆರಳು ನೀಡಿವೆ ಗಿಡ ಮರಗಳು

ನೀ ಬರುವ ದಾರಿಯಲಿ
ಹಾಡಿವೆ ಹಕ್ಕಿಗಳು
ಕುಣಿದಿವೆ ನವಿಲುಗಳು
ಬೆರಗಾಗಿ ನೋಡಿವೆ ಜಿಂಕೆ ಸಾರಂಗಗಳು

ನೀ ಬರುವ ದಾರಿಯಲಿ
ನೆರಳಾಗಿದೆ ಚಿತ್ತಾರ
ನೆಲವಾಗಿದೆ ಬಂಗಾರ
ಮಣ್ಣಾಗಿದೆ ಸಿಂಧೂರ

ನೀ ಬರುವ ದಾರಿಯಲಿ
ಕನಸೆದ್ದು ಕುಣಿದಿವೆ
ಮನಸನ್ನು ಕಾಡಿವೆ
ಹುಚ್ಚನ್ನು ಮಾಡಿವೆ

ನೀ ಬರುವ ದಾರಿಯಲಿ
ಎಲ್ಲ ದಾರಿ ಮರೆಯಾಗಿವೆ
ಎರಡು ದಾರಿ ಜತೆ ಸೇರಿವೆ
ಒಂದೆ ದಾರಿ ಅವು ಆಗಿವೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಮ್ ನಹಿಂ ಗದ್ಧಾ
Next post ಬೆಳಗು

ಸಣ್ಣ ಕತೆ

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…