ಬೆಳಗು

ಮಂಗಳಕರ ದಿನದಾಗಮನದ ಘೋಷಣೆಯಾಗಿ
ಕತ್ತಲೆ ಚಾಪೆಯ ಸುತ್ತುತಿದೆ
ಬಾನಿನ ಕಣ್ಣುಗಳು ಮಂಕಾಗುತಿವೆ
ಭೂಮಿಯ ಕಣ್ಣುಗಳು ತೆರೆಯುತಿವೆ
ಹಕ್ಕಿಗಳು ಕಲರವ ಎಬ್ಬಿಸಿವೆ
ಪ್ರಕೃತಿ ಮಾತೆಯ ನಿತ್ಯದ ಸೂಚನೆಯಾಗಿ.

ನಂಬಿಕೆ, ಶ್ರದ್ಧಾ ಮನೆ ಮಂದಿರಗಳಲಿ
ಮೊಳಗುತಿವೆ ಶುಭ ಸೂಚಕ ಘಂಟೆಗಳು
ಮೊರೆಯುತಿವೆ ಸುಶ್ರಾವ್ಯ ‘ಎದ್ದೇಳು…’ ಗೀತೆಗಳು
ಸ್ಪುರಿಸಿವೆ ಭಕ್ತಿಯ ಮನಗಳಲಿ
ಸುಟ್ಟುಕೊಂಡು ಸುಗಂಧ ಬೀರುವ
ದೀಪ, ದೂಪದ ಬತ್ತಿಗಳು ಸೇರಿ.

ಬಾಳುವ ಮನೆಗಳ ಅಂಗಳಗಳಲಿ
ಕಾರಣೆ ನಡೆದಿದೆ
ಅರಳುತಿವೆ ವಿಧ, ವಿಧ ರಂಗೋಲಿ ಹೂವುಗಳು
ಶಿಶುಗಳ ಮುಕ್ತ ನಗೆಯಂತೆ
ಸ್ವಚ್ಛತೆ, ಶೃಂಗಾರ ಮೊದಲೆಂಬಂತೆ

ನಿಧಾನವಾಗಿ ಮನೆಯೊಳ ಹೊರಗೆ ಹೆಜ್ಜೆಯ ಹಾಕುತ
ಎಲ್ಲದನು, ಎಲ್ಲರನು ಗಮನಿಸುತ
ಮಾಡಿದ ಕೆಲಸವ ಒರಗೆ ಹಚ್ಚುತ

ಮಾಡಬೇಕಾದುದೆಲ್ಲವನು ವಿವರಿಸುತ, ತಾಕೀತು ಮಾಡುತ್ತ
ಬೆಳಕಿನ ಕೋಲನು ಚಮಕಾಯಿಸುತ್ತ
ಹಿರಿಯರು ನಡೆಸಿಹರು
ಬಾಳಿನ ಬೆಳಗು ಅಧಿವೇಶನವ.

ದುಡಿಮೆಯೇ ದೇವರು ನಡೆ, ನುಡಿಯ
ಅನ್ನದಾತರು, ಶ್ರಮಿಕರ ಕುಟೀರಗಳಲಿ
ಸಿದ್ಧ ಮಾಡುತಿಹರು
ಬಾಳಿನ ಕಣ್ಣುಗಳು, ಸಹನೆ, ಸಮನ್ವಯ ಸಾಧಕ ನಾರಿಯರು
ದುಡಿಯುವ ಕಣಗಳು, ಹೊಲ ಗದ್ದೆಗೆ ತೆರಳುವ
ಮನೆ ಮಂದಿಗೆ ಬುತ್ತಿ.

ಮೊದಲಿಗೆ ಎದ್ದ ಮೊದಲ ಗುರುಗಳ ಸಂಕುಲದವರು
ಬದಲಾಯಿಸುವರು
ಅಸಹಿಸಿಕೊಳ್ಳದೆ ಒದ್ದೆ ಮಾಡಿದ ಹಾಸಿಗೆ, ಹೊದಿಕೆ;
ಬೈಯ್ಯುತ ಎಳೆಯರ ಪ್ರೇಮದಲಿ
ಹಾಗೇ ಮೆಲ್ಲಗೆ ತಟ್ಟಿ ಮತ್ತೆ ಮಲಗಿಸುತಲಿ.

ಹಗಲು, ರಾತ್ರಿ ಸತ್ತಿಹ ಪೇಟೆ, ಪಟ್ಟಣಗಳಲಿ
ನೋಡಸಿಗುವರು…
ಆರೋಗ್ಯ ಪ್ರಿಯ ಅನುಕೂಲ, ಅವಕಾಶ ಹೊಂದಿದವರು,
ಹಿರಿಯರು,
ಪ್ರಶಸ್ತತೆ ಸವಿಯುವ, ಹುರಿಗೊಳ್ಳುವ ಭಾವದಲಿ
ದಟ್ಟಣೆ ವಿರಳ ವನ, ರಸ್ತೆಗಳಲಿ
ಕುಕ್ಕುಲೋಟ, ಆರಾಮದ ನಡೆಯಲಿ
ಸಹ ವಿಹಾರಿ ಸಂಗಾತಿ, ಮಿತ್ರರ ಜೊತೆಯಲಿ
ವಿದ್ಯಮಾನಗಳ ಲಘು ಪರಾಮರ್ಶೆಯ ನಡೆಸುವರು:

ಹದಿ ಹರೆಯದವರು, ನಾನಾ ಗುರಿ, ಕನಸಿಗರು
ಗರಡಿ, ಮೈದಾನ, ಮಂದಿರಗಳಲಿ
ಬೆಳಗಿನ ಗಾಳಿಗೆ ತುಸು ತುಸು ತಂಪು, ಬಿಸಿ ಬೆರೆಸುವರು.

ಬಾಳಿನ ಅವಶ್ಯ
ನಿಸರ್ಗ ದೇವಿಯ ನಿಯಮ, ನಿರ್ಲಿಪ್ತತೆ ಪ್ರತಿಪಾದಕನು
ನಿತ್ಯನು, ದಿನಕರನು ಅವತರಿಸುವನು
ಮೂಡಣ ದಿಗಂತದಂಚಿನಿಂದ
ಪೂರ್ಣತೆಯಾಕಾರದಲಿ;
ಕಡು ಕಿತ್ತಳೆ ಬಣ್ಣದ ಓಕುಳಿಯೆಲ್ಲೆಡೆ ಎರಚಾಡುವನು
ಜೀವ ಸಮಯದ ವಿವಿಧ ಮಜಲುಗಳ ನಿರೂಪಕನು
ಹೂ ಬಿಸಿಲಿನ ಕಾರಂಜಿಯಾಗಿ
ಕಣ್ಮನ ಶಕ್ತಿಯ ಪೂರಕನಾಗಿ
ಬೆಳಗಿನ ಸಂಪೂರ್ಣತೆ ರೂಪನಾಗಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೀ ಬರುವ ದಾರಿಯಲಿ
Next post ಅಂತರಾಳ

ಸಣ್ಣ ಕತೆ

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…