ಮೊಳಕೆ ಬಂದ ಬೀಜವೊಂದು ಹುಳುವು ಹತ್ತಿ ಬೆಳೆಯದಾತು ಒಳಗೆ ಒಳಗೆ ಅಳುಕುತಳುತ ಕೊಳೆಯತೊಡಗಿತು. ಮಳೆಯು ಭರನೆ ಬಂದಿತೊಮ್ಮೆ ಹುಳುವು ಅದುರಿ ಬಿದ್ದು ಹೋತು ; ಹಳೆಯ ಜಾಡ್ಯ ಕೊಡವಿ ಬೀಜ ಬೆಳೆಯಲೆಸಗಿತು. ಬೆಳೆಯುತಿದ್ದ ಬೀಜ ಕಂಡು ಹುಳುವು ಹೆದರಿ ಗದರಿಕೊಂಡು ಗಳನೆ ನುಂಗಲೆಂದು ತನ್ನ ಕೈಯ ಚಾಚಿತು. ಬೆಳೆವ ಭರದಲಿದ್ದ...

ಬೆಳಕು ಬೆಳಕು ಕೊನೆಯಿರದ ಬೆಳಕು ಕತ್ತಲೆಗೆ ಖಣವೆ ಇಲ್ಲ. ಪ್ರಾಣದಲ್ಲಿ ಅಜ್ಞಾತ-ಖಾತ ತೆರೆವುದು ರಹಸ್ಯವೆಲ್ಲ. ಜಡದಗಾಧ ಆಖಾತ ಮುಂಚೆ ಮುಚ್ಚಿತ್ತು ತನ್ನ ನೆಲೆಯ. ಲವಲವಿಕೆಯಲ್ಲಿ ಎಚ್ಚೆತ್ತು ಈಗ ಎತ್ತಿಹುದು ತನ್ನ ತಲೆಯ. ಬೆಳಕು, ಹೊತ್ತಿರದ ಬೆಳಕು ...

೧ ಕೆಳದಿಯರನೊಡಗೊಂಡು ಕೆಲೆಕೆಲೆ- ದುಲಿದು ಮೇಲಕೆ ಹಾರಿ, ಇಳೆಯವರನಣಕಿಸುತೆ ಪಕ್ಕವ ಕೆಳರಿ ಬಾನೆಡೆಗೇರಿ, ತಳರುತಿಹೆ ನೀನೆಲ್ಲಿ? ಹಕ್ಕಿಯ- ಕುಲದರಸೆ ಹೇಳಿಲ್ಲಿ! ಗೆಳೆಯನೆಡೆ ದೊರೆಯುವುದೆ ನೀನಡೆ- ದುಳಿವ ದಾರಿಯೊಳೆಲ್ಲಿ? ದೊರೆತರಾತಗೆ ನೀನು&#8230...

ಏಕೆ ಗೆಳತಿ ವಿರಹವೇದನೆಯ ಸಹಿಸಲಾಗದೆ ತೊಳಲಾಡುತಿರುವೆ| ಸಣ್ಣ ಸಣ್ಣ ವಿಷಯಗಳಿಗೇಕೆ ನೀನೇ ಗಂಡನ ಮನೆಯ ತೊರೆದು ಮನೆ ಮನಗಳ ಅಸಮಧಾನಕೆ ಎಡೆಮಾಡುವೆ| ನಾನು ಸರಿಸಮನಾಗೆ ದುಡಿವೆ ಎಂಬ ಹಮ್ಮಿನಿಂದೇಕೆ ನಿನ್ನ ಜೀವನ ಬರಡಾಗಿಸುವೆ|| ನಾನು ಸರಿಸಮನಾಗಿ ದುಡ...

ಬೇರು ಕಿತ್ತ ಮರ, ನಾರು ನನ್ನ ನರ ಹಗ್ಗವಾಯಿತು ನಿಮಗೆ ಉರುಳು ನನಗೆ ಸಾವ ನೇಯುವ ನೂಲು, ಭಾವ ಬತ್ತಿದ ಮಾಲು ಬಣ್ಣ ಬಣ್ಣದ ನೇಯ್ಗೆ ಬಿದ್ದೆ ಬಲೆಗೆ. ನಿಮ್ಮ ಅನ್ನದ ಅಗುಳು, ಯಾರೂ ತಿನ್ನದ ಉಗುಳು ಕಾಲು ಒತ್ತುವ ಕಾಲ-ಎಲ್ಲ ನಾನು ಹುಟ್ಟು ಹಬ್ಬದ ಕಾಳು...

ಥಾಮಸ್ ಹಾರ್ಡಿಯ “The Return of the Native” ಕೃತಿ Architectonic ಎಂದು ಕರೆಯಲ್ಪಡುವಷ್ಟು ಕಲಾತ್ಮಕವಾಗಿ ನೇಯಲ್ಪಟ್ಟ ಕಾದಂಬರಿ. ವಿಮರ್ಶಕರು ಒಪ್ಪುವಂತೆ ಕಥಾ ಹಂದರ ಅಪೂರ್ವ ಸಂರಚನೆ. ಅದು ಸುಂದರ ಪ್ರಾಕೃತಿಕ ಸೊಬಗಿನ Egdon ...

ರಾಮು ಹಳ್ಳಿ ಬಾಲಕ ಇಟ್ಟಿಹ ರಕ್ತದ ತಿಲಕ ಅವನ ಆಶೆ ಸೈನಿಕ ಆಗೋ ಮಾತು ಕೇಳಿ ಅಪ್ಪ ಅಮ್ಮ ಓದಿಲ್ಲ ದೇಶ ಅಂದರೆ ಗೊತ್ತಿಲ್ಲ ನಾನು ಓದಲು ಕಲಿಸುವೆ ದೇಶ ಭಕ್ತಿಯ ಬೆಳೆಸುವೆ ನಿತ್ಯ ನಿಯಮಿತ ವ್ಯಾಯಾಮ ದೇಹಕೆ ಹೊಸದು ಆಯಾಮ ಎತ್ತರ ದಪ್ಪ ಬೆಳೆಯುವೆ ಸೈನ್ಯ...

ಬಾರೋ ಬಾರೋ ಚಂದಮಾಮ ನಿನ್ನಯ ಅಂದಕೆ ಯಾರು ಸಮ ಒಟ್ಟಿಗೆ ಮಾಡೋಣ ಊಟ ಆಮೇಲೆ ಆಡೋಣ ಆಟ ದಿನವೂ ಕರೆವಳು ನನ್ನಮ್ಮ ನಕ್ಕು ನಗಿಸು ನೀನಮ್ಮ ಇರುವೆ ಏಕೆ ನೀನಲ್ಲೇ ಬಂದು ಬಿಡು ನೀ ನಮ್ಮಲ್ಲೇ ರೊಟ್ಟಿಯ ಗಾತ್ರಕೆ ನೀನಿದ್ದೆ ಕಿಲಕಿಲವೆಂದು ನಗುತ್ತಿದ್ದೆ ಈ ...

ಜನಜಂಗುಳಿಯಲ್ಲಿ ಕಳೆದಿರುವ ಬದುಕಿನ ಜೊತೆಗಾರನಿಗೆ ಮತ್ತೆ ಮತ್ತೆ ಹುಡುಕುತ್ತೇನೆ, ಕೀವು ಸೋರುವ ಗಾಯಗಳಿಗೆ ಮತ್ತೆ ಮತ್ತೆ ತೊಳೆಯುತ್ತೇನೆ, ಮುಲಾಮು ಸವರುತ್ತೇನೆ, ಎಂದಿಗೂ ಒಂದಾಗದ ರೈಲು ಹಳಿಗಳಂತೆ ಕ್ಷಿತಿಜದಲ್ಲಿ ಎಂದಿಗೂ ಸೇರದ ನದಿಯ ಎರಡು ದಡಗಳ...

ಈ ಇಂಥ ಕಂದ ಹಿಂದೆ ಇರಲಿಲ್ಲ ಮುಂದಿರುವುದಿಲ್ಲ ಎಂದು ಹೆಸರಿಟ್ಟೆವು ಅಪೂರ್‍ವ ಎಂದು ನಮ್ಮೊಲುಮೆಯಲ್ಲಿ ಸುತ್ತಿಟ್ಟೆವು ನಮ್ಮೊಲುಮೆಯಲ್ಲಿ ಉಣಿಸಿದೆವು ತಿನಿಸಿದೆವು ಹಾಲೂಡಿಸಿದೆವು ತೊಟ್ಟಿಲಲಿರಿಸಿ ಹಾಡಿದೆವು ತೂಗಿದೆವು ಅವಳು ನಿದ್ರಿಸಿಯೆ ನಾವು ನ...

ಭವ್ಯ ಭಾರತ ಇನ್ನು ಓಬಿರಾಯನ ಕಾಲದಲ್ಲಿದೆಯೆನಿಸುವುದು. ಇನ್ನೂ ಹಳ್ಳಿಗಳಲ್ಲಿ ಕುಗ್ರಾಮಗಳಲ್ಲಿ ಜಾತಿ, ಮತ, ಕುಲ, ಭೇದಗಳ ಜೊತೆಗೆ ಕಂದಾಚಾರ ಮೂಢನಂಬಿಕೆಗಳ ಆಚರಣೆಗಳನ್ನು ಗಮನಿಸಿದರೆ ಇನ್ನೂ ತೀರಾ ಹಿಂದುಳಿದ ದೇಶವೆಂದು ಅನಿಸುವುದು. ದಿನಾಂಕ ೨೭-೭-...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...