ಪ್ರಗತಿ ಅಥವಾ ದಾಸ್ಯವಿಮೋಚನೆ – ೧ನೆಯೆ ಖಂಡ – ಸ್ವಾತಂತ್ರ್ಯ ಪ್ರೀತಿ

ಪ್ರಗತಿ ಅಥವಾ ದಾಸ್ಯವಿಮೋಚನೆ – ೧ನೆಯೆ ಖಂಡ – ಸ್ವಾತಂತ್ರ್ಯ ಪ್ರೀತಿ

ಪ್ರಗತಿಯನ್ನು ಹೊಂದಲಿಚ್ಚಿಸುವವನಲ್ಲಿ “ಸ್ವಾತಂತ್ರ್ಯಪ್ರೀತಿ” ಎಂಬ ಗುಣವು ಅತ್ಯವಶ್ಯವು. ಇಡಿ ಆಯುಷವನ್ನು ನಿರಾಶೆಯಿಂದ ಮುಕ್ತಮಾಡಲಿಕ್ಕೂ, ಚಿಂತಾರಹಿತಮಾಡಲಿಕ್ಕೂ, ದುಃಖಗಳಿಂದ ವಿಮುಖಮಾಡಲಿಕ್ಕೂ ಸ್ವಾತಂತ್ರ್ಯ ಪ್ರೀತಿಯು ಮನುಷ್ಯನಿಗೆ ಸಹಾಯಕವಾಗುವದು. ಆರಂಭದಿಂದಲೇ ಸ್ವಾತಂತ್ರ್ಯ ಪ್ರೀತಿಯುಳ್ಳವನಿಗೆ ಯಾವ ದುಃಖಸಂಕಟಗಳಲ್ಲಿ ಸಿಲುಕುವ ಪ್ರಸಂಗವೇ ಬರುವದಿಲ್ಲ.

ಸ್ವಾತಂತ್ರ್ಯವಿಲ್ಲದ ಮನುಷ್ಯನು ಒಂದಿಲ್ಲೊಂದು ರೀತಿಯಿಂದ ಪರರಿಗೆ ದಾಸನಾಗಿರಬೇಕಾಗುವದು ಸಹಜವು. ಅಂಧ ಮನುಷ್ಯನು ಸನ್ಮಾನನೀಯ ಅಮಲದಾರನಿದ್ದರೂ ಅಷ್ಟೇ; ಯಕಃಶ್ಚಿತ ಕೂಲಿಕಾರನಿದ್ದರೂ ಅಷ್ಟೇ. ಯಾವನಲ್ಲಿ ವಿಚಾರಸ್ವಾಂತ್ರವಿಲ್ಲವೋ, ಆಚಾರ ಸ್ವತಂತ್ರವಿಲ್ಲವೋ ಅವನು ಮನುಷ್ಯನಾಗಿ ಹುಟ್ಟಿದ್ದು ನಿರರ್ಥಕವೆಂದು ಹೇಳಬಹುದು. ಯಾಕಂದರೆ, ಲೋಕದಲ್ಲಿಯ ಪ್ರತಿಯೊಂದು ಆಚೇತನ ಹಾಗು ಸಚೇತನ ವಸ್ತುಗಳು ಸ್ವಭಾವತಃ ಸ್ವತಂತ್ರವಾಗಿಯೇ ಇರುವವು. ಅವುಗಳ ಉತ್ಪತ್ತಿಯು ಸ್ವತಂತ್ರ ಸ್ವರೂಪಾದಿಭೇದಗಳು ಸ್ವತಂತ್ರ ಕಾರ್ಯಕಾರಣಭಾವಗಳು ಸ್ವತಂತ್ರ, ಹೀಗಿರಲು ಮನುಷ್ಯನಂಥ ಎಏವಲ ಬುದ್ಧಿ ಮಾನಪ್ರಾಣಿಯು ಅಸ್ವತಂತ್ರನಾಗಿ ಪರರ ದಾಸ್ಯತ್ವವನ್ನು ವಹಿಸಲಿಕ್ಕೆ ಕಾರಣವೇನಿರಬಹುದೆಂಬದು ವಿಚಾರಣೀಯ ಮಾತಾಗಿದೆ. ಆದರೆ ಮನುಷ್ಯನು ಪರಾಧೀನ-ಅಸ್ವತಂತ್ರ ನಾಗಲಿಕ್ಕೆ ಅವನಲ್ಲಿಯ ಸ್ವಾತಂತ್ರ್ಯಪ್ರೀತಿಯು ನಷ್ಟವಾದದ್ದೇ ಕಾರಣವಾಗಿದೆ ಎಂದು ಹೇಳಬಹುದು.

“ಪ್ರಾರಂಭದಿಂದಲೇ ತಾನೊಬ್ಬ ದೊಡ್ಡ ಸಂಸ್ಥೆಯ ಯಜಮಾನನು ಇಲ್ಲವೆ ಅರಸು, ಅಥವಾ ಧರ್ಮಾಧಿಕಾರಿಯು ಆಗಬೇಕು ಎಂಬ ಕಾಲ್ಪನಿಕ ವಿಚಾರಗಳಿಂದಲೇ ಯಾಕಾಗಲೊಲ್ಲದು; ಯಾವನು ತನ್ನ ಜೀವನಾರ್ಧಕಲಹವನ್ನು ಸಾಗಿಸಲು ಪ್ರಯೆತ್ನಿಸದೆ, ಕೇವಲ ದಿಗ್ಮೂಢನಾಗಿ ಹ್ಯಾಗಾದರೂ ಜೀವನಾರ್ಥವನು, ದೊರಕಿಸಲು ಯತ್ಸ್ನಿಸುವನೋ ಅವನಿಗೆ ಒಂದು ಪೈಯನ್ನು ಕೂಡ ಸಹಾಯಮಾಡುವ ಇಚ್ಚೆಯು ನನಗಾಗುವದಿಲ್ಲ” ಎಂದು ಅಂದ್ರೊ ಕಾರ್ನೆಚಿ ಎಂಬ ಪ್ರಖ್ಯಾತ ಅಮೇರಿಕನ್ ಕೋಟ್ಯಾಧೀಶನು ಒಂದು ಪ್ರಸಂಗದಲ್ಲಿ ಹೇಳಿರುವನು. ಈ ಉದಾಧೀಯನು ಸುಮಾರು ೨೦ ಕೋಟಿ ರೂಪಾಯಿಗಳನ್ನು ಬರೇ ಪ್ರಸ್ತಕ ಪ್ರಕಟಿಸುವವರ ಸಲುವಾಗಿ ಖರ್ಚು ಮಾಡಿರುವನು! ಇವನು ತನ್ನ ನೌಕರರಿಗೆ ಮೇಲಿಂದ ಮೇಲೆ ಬೋಧಿಸುವುವದೇನೆಂದರೆ, “ನೀವು ಹೆಚ್ಚು ಪಗರಾದ ಇಲ್ಲವೆ ದೊಡ್ಡ ಹುದ್ದೆಯ ಕೆಲಸಗಾರರಾಗುವ ಇರಾದೆಯಿಂದ ನನ್ನಲ್ಲಿ ದುಡಿಯಬೇಡಿರಿ. ಕಲ್ಪನಾಸೃಶ್ಟಿಯಲ್ಲಿಯೇ ಯಾಕಾಗಲೊಲ್ಲದು. ನಿವು ನನ್ನಂಥ ಇಲ್ಲವ ನನ್ನಗಿಂತಲೂ ವಿಖ್ಯಾತ ಉದೋಗಸ್ತರಾಗಬೇಕೆಂಬ ವಿಚಾರದಿಂದ ಪ್ರೇರಿತರಾಗಿ ಉದ್ಯೋಗ ತತ್ಪರರಾಗಿರಿ. ಈ ಸ್ವತಂತ್ರ ವಿಚಾರದಿಂದ ನಿಮ್ಮ ಉಚ್ಪ್ರೇಯವು ಬಹುಬೇಗ ಆಗುವದರಲ್ಲಿ ಸಂಶಯವಿಲ್ಲ?

ಈ ಮೇಲಿನ ನಮ್ಮ ಸನ್ಮಾನನೀಯ ಅಮೇರಿಕನ್‌ ಕೋಟ್ಯಾಧೀಶರ ಅರ್ಥ ಪೂರ್ಣವಾದ ಸ್ವಾತಂತ್ರ್ಯ ಪ್ರೀತಿಯ ವಿಷಯದ ಉದ್ಗಾರದಿಂದ ಒಂದು ಮಾತು ಸಿದ್ಧವಾಗುತ್ತದೆ. ಅದು ಯಾವದೆಂದರೆ, ಮನುಷ್ಯನು ಹುಟ್ಟಿದಂದಿನಿಂದ ಸಾಯುವವರೆಗೆ ಯಾವಾಗಲೂ ಉದ್ಯೋಗಿಯಾಗಿರಬೇಕಲ್ಲದೆ ಆಲಸ್ಯನೂ, ನಿರುದ್ಯೋಗಿಯೂ, ಹೇಡಿಯೂ, ಇದ್ದ ಸ್ತಿತಿಯಲ್ಲಿ ಕೊಳೆಯುವವನೂ ಆಗಬಾರದು. ನಾನು ಇಂಥಾದೊಂದು ಕೆಲಸ ಮಾಡಿದರೆ ಕುಕೃತ್ಯನಾದೆನೆಂದು ಯಾರೂ ಎಂದೂ ಭುವಿಸಬಾರದು. ಮನುಷ್ಯನ ಅಂತಿಮಧ್ಯೇಯವಾದ ಮೋಕ್ಷಪ್ರಾಪ್ತಿಯಾಗುವವರೆಗೆ ಮನುಷ್ಯನು ತನ್ನ ಯೋಗ್ಯತೆಯೆಂತೆ, ಸದಸದ್ವಿವೇಕದಂತೆ ಪ್ರತಿಕ್ಷಣಕ್ಕೂ ಪ್ರಗತಿಯನ್ನು ಪಡೆಯುತ್ತಿರಬೇಕು; ಶಾರೀರಿಕದಾರ್ಢ್ಯಕ್ಕಿಂತಲೂ ಮನೋಧಾರ್ಡ್ಯವು ಮಹತ್ವದ್ದಿರುವದರಿಂದ ಪರಮಶ್ರೇಯಸ್ಕರವಾದ ಮನೋದಾರ್ಢ್ಯವೇ ಸ್ಪಾತಂತ್ರ್ಯದ ವೃಕ್ಶವೆಂದು ತಿಳಿಯಲ್ಬಡುವದು;

ಇಂಥ ಸ್ಪತಂತ್ರವಿಚಾರ ಪ್ರೇರಿತವಾದ ರಾಷ್ಟ್ರವು ಧನ್ಯವು! ಅಲ್ಲಿಯ ಜನರೇ ಮಾನಾರ್ಹರು!! ಆದರೆ ಭಾರತೀಯರಾದ ನಾವು ಸದ್ಯಕ್ಕೆ ಸ್ವಾತಂತ್ರ್ಯಹೀನರಾದ್ದರಿಂದ, ಈ ವಿಚಾರಗಳನ್ನು ತಿಳಿಯಲು ಮಂದಿಯ ಮೋರೆಯನ್ನು ನೋಡುವ ಪ್ರಸಂಗಬಂದಿದೆ. ನಮ್ಮ ಪೂರ್‍ವಜರು ಸ್ವಾತಂತ್ರ್ಯದ ಪರಮಭೋಗ್ತರೂ, ಸ್ವಾತಂತ್ರ್ಯದ ಮೂರ್ತಿಗಳೂ ಆಗಿದ್ದರು. ಅವರು ಸ್ವತಂತ್ರ ಮನಸ್ಕರಾದ್ದರಿಂದಲೇ ಅವರ ಅಗಿನ ಕೃತಿಗಳಿಂದ ಇಡಿಜಗತ್ತು ಈಗಲೂ ನಡುಗುತ್ತಿರುವದು. ಅವರ ಆಚಾರಸ್ವತಂತ್ರ್ಯ, ವಿಚಾರಸ್ವಾತಂತ್ರ್ಯಗಳು ಅನುಕರಣೀಯಗಳಾಗಿರುವವು. “ಉತ್ತಮಖೇತಿ, ಮಧ್ಯಮಬೇಪಾರ ಕನಿಷ್ಟಚಾಕರಿ” ಎಂಬ ನಾಣ್ಣುಡಿಯ ಗರ್ಭಿರಾರ್ಥವು ಸ್ವಾತಂತ್ರ್ಯ ಶಬ್ದದ ವಿವರಣೆಯನ್ನು ಚನ್ನಾಗಿ ಮಾಡುತ್ತದೆ. ಈ ನಾಣ್ಣುಡಿಯಲ್ಲಿ ಕೇವಲ ಸ್ವತಂತ್ರನಾಗಿ ಹೊಲಮಾಡುವದೂ, ಸ್ವತಂತ್ರ-ಪಾರತಂತ್ರ್ಯಗಳ ಮಿಶ್ರಣದಿಂದ ವ್ಯಾಪಾರಮಾಡುವದೂ, ಕೇವಲ ಸ್ವಾತಂತ್ರ್ಯಹೀನನಾಗಿ ನೌಕರಿಮಾಡುವದೂ ಎಂದು ಹೇಳಿದೆ. ಸಾವಿರಾರು ರೂಪಾಯಿತಲಬಿನ ದೊಡ್ಡ ಹುದ್ದೆಯ ನೌಕರನಿದ್ದರೂ, ಅವನು ಸ್ವಾತಂತ್ರ್ಯಹೀನನೇ ಸರಿ. ಅವನಿಗೆ ಒಬ್ಬ ಬಡ ರೈತನ ಸ್ಟಾತಂತ್ರ್ಯ ಸುಖವು ಎಂದಿಗೂ ಪ್ರಾಪ್ತವಾಗಲಾರದು. ಬಹು ದಿವಸಗಳವರೆಗೆ ಪರರ ಚಾಕರಿಯಲ್ಲಿದ್ದದರಿಂದ ಸ್ವಾತಂತ್ರ್ಯ ಮೊದಲಾದ ಶ್ರೇಷ್ಟ ಗುಣಗಳು ಮನುಷ್ಯನಲ್ಲಿ ಲೋಪವಾಗುವವು. ಶೋಧಕ ಹಾಗು ಕುಶಾಗ್ರಬುದ್ಧಿಯು ಸ್ವತಂತ್ರಮನುಶ್ಯನಿಗಿಂತ ಪರಾಧೀನ-ನೌಕರ ಮನುಷ್ಯನಲ್ಲಿ ವಿಕಸಿತ-ವಾಗುವದು ಕಡಿಮೆ. ತನ್ನ ಸ್ವಂತದ ಕೆಲಸದ ಸಲುವಾಗಿ ಉಪಯೋಗಿಸುವಷ್ಟು ಬುದ್ಧಿ, ಶ್ರಮ, ಯುಕ್ತಿಗಳನ್ನು ಮಂದಿಯ ಕೆಲಸಕ್ಕೆ ಯಾರೂ ಉಪಯೋಗಿಸುವದಿಲ್ಲವೆಂಬದು ಸಿದ್ಧಾಂತವು. ಎಂಥ ಪ್ರಾಮಾಣಿಕ ನೌಕರನಿಂದಾದರೂ ಈ ಸರ್ವ ಸಾಧಾರಣನಿಯಮವನ್ನ ಉಲ್ಲಂಘಿಸಲಿಕ್ಕಾಗುವದಿಲ್ಲ. ಹೆರವರ ನೌಕರಿಯಲ್ಲಿರುವಾಗ ಯಜಮಾನನಿಗೆ ಪ್ರಾಪ್ತವಾಗುವಂಥ ಕಶ್ಟನಶ್ಟಗಳು ನೌಕರನಿಗೆ ಬರುವ ಸಂಭವವು ಕಡಿಮೆಯಾದ್ದರಿಂದ ಪ್ರತಿಯೊಂದು ಕಠಿಣಪ್ರಸಂಗಕ್ಕೆ ಎದೆಗೊಟ್ಟೇಗೊಡುವೆನೆಂಬ ಆತ್ಮ ವಿಶ್ವಾಸವು ಆ ನೌಕರನಲ್ಲಿ ಪ್ರಾಪ್ತವಾಗಲಾರದು. ಸ್ವಂತದಸಲುವಾಗಿ ನಾವು ಬೇಕಾದ್ದನ್ನು ಮಾಡಲಿಕ್ಕೂ, ಬೇಕಾದಲ್ಲಿಗೆ ಹೋಗಲಿಕ್ಕೂ, ಬೇಕಾದಷ್ಟು ಕಷ್ಟಪಡಲಿಕ್ಕೂ, ಸಿಕ್ಕ ಅಲ್ಪ ಪ್ರತಿಫಲದಲ್ಲಿ ಕೂಡ ಸಂತೋಶಪಡಲಿಕ್ಕೂ ಸಿದ್ಧರಾಗಿರುತ್ತೇವೆ. ಆದರೆ ನಾವು ನೌಕರರಿರುವಾಗ ನಮ್ಮ ಸ್ಥಿತಿಯು ವಿಪರೀತವಾಗುವದು. ನಾವು ಹೆರವರ ನೌಕರರಿದ್ದರೂ, ಅವರ ಪ್ರತಿಯೊಂದು ಕೃತಿಯು ನಮಗ ಒತ್ತಾಯದ್ದಾಗಿ ತೋರುವದು, ಕಿಂಚಿತ್ ಕಷ್ಟವೂಸಹಿಸದಾಗುವದು, ಎಷ್ಟು ಪ್ರತಿಪಲದೊರೆತರೂ ಅಲ್ಪವಾಗಿ ತೋರಿ ದುಃಖವಾಗುವದು.

ನೌಕರಿಮಾಡದೆ ಸ್ವತಂತ್ರರೀತಿಯಿಂದ ಚರಿತ್ರಾರ್ಥಸಾಗಿಸಿಕೊಳ್ಳುವ ಜನರೇ ದೇಶದ ಪ್ರಗತಿಗೆ ಕಾರಣರೂ ಆಧಾರಸ್ಥಂಭರೂ ಆಗಿರುವರು. ಅವರು ರಾಷ್ಟ್ರ್‍ಅವೆಂಬ ದೇಹದ ಬಲವಾದ ಸ್ಮಾಯುಗೆಳೆಂದು ಅನ್ನಲು ಬಾಧೆಯಿಲ್ಲ. ಸ್ವಾತಂತ್ರ್ಯದಲ್ಲಿ ವಿಶೇಷ ಕಷ್ಟಗಳನ್ನು ಸಹಿಸಿ ಪ್ರಸಿದ್ಧಿಗೆ ಬರುವ ಹಾಗು ಕೀರ್ತಿಯುತರಾಗುವ ಕಠಿಣಪಾರಗಳು ಅವರಿಗೆ ಕಲಿಸಲ್ಪಟ್ಟಿರುತ್ತವೆ. ಮತ್ತು ಈ ಶಿಕ್ಷಣವೇ ಆವರ ಪ್ರಗತಿಗೆ ಕಾರಣವಾಗಿರುತ್ತದೆ. ಅವರ ಪ್ರಗತಿಯ ಎಲ್ಲ ಶ್ರೇಯಸ್ಸು ಅವರಲ್ಲಿಯ ಸ್ವಾತಂತ್ರ್ಯಪ್ರೀತಿಯದೇ ಆಗಿರುತ್ತದೆ. ಇಂಥವರು ನೌಕರರಾಗಿದ್ದರೆ, ಈ ಮಹತ್ವವು ಅವರಿಗೆ ಎಂದೂ ಪ್ರಾಪ್ತವಾಗುತ್ತಿದ್ದಿಲ್ಲ.

ಸಾಮಾನ್ಯವಾಗಿ ವಿಚಾರಮಾಡಿದರೆ, ಯಾವನು ಹೆರವರೆ ಸೇವೆಯಲ್ಲಿ ಬಹು ದಿವಸಗಳನ್ನು ಕಳೆದಿರುವನೋ, ಯಾವನು ಪ್ರತಿ ಕೆಲಸಕ್ಕೆ ಮಂದಿಯ ಉಪದೇಶವನ್ನು ಗ್ರಹಿಸಬೇಕಗುವದೋ, ಸ್ವಮತ ಪ್ರತಿಪಾದನದ ಸಂಧಿಯು ಯಾವನಿಗೆ ಇಡಿ ಜನ್ಮದಲ್ಲಿ ದೊರಕುವದಿಲ್ಲವೋ, ಇಂಥವನು ಜವಾಬುದಾರಿಯ ಕೆಲಸಮಾಡಲಕ್ಕೆ ಸಹಸಾ ಮುಂದುವರಿಯುವದಿಲ್ಲವೆಂಬದು ವ್ಯಕ್ತನಾಗುವದು, ಮಂದಿಯ ಹುಕುಮಿನಿಂದ ನಡೆದುನಡೆದು ಇಂಥವರ ಸ್ವತಂತ್ರವಿಚಾರಗಳೂ, ಸ್ವಮತಗಳೂ ಲುಪ್ತವಾಗಿರುತ್ತೈದೆ. ಇಂಥವರು “ಒಡೆಯನ ಹೇಳಿಕೆ, ಬಡಿಗನ ಮಾಟ”ವೆಂಬಂತೆ ಬರೇ ಹೇಳಿದಷ್ಟು ಕೇಳುವವರಾಗಿರುತ್ತಾರೆ. ಈ ನಿರುಪಯೋಗಿ ಜನರನ್ನು ಪ್ರಸಂಗವಶಾತ್ ನೌಕರಿಯಿಂದ ಬಿಡಿಸಿಬಿಟ್ಟರೆ, ಮೀನುಗಳನ್ನು ನೀರೊಳಗಿಂದ ಹೊರೆಗೆ ಬಿಸುಟಿದಂತಾಗಿ ಮುಂದುಗಾಣದಾಗುವರು. ಬಹಳ ದಿವಸಗಳವರೆಗೆ ಸರಕಾರಿ ನೌಕರಿಯನ್ನು ಮಾಡಿ, ಪೆನ್‌ಶನ್‌ ತೆಗೆದುಕೊಂಡಕೂಡಲೆ ತಮ್ಮ ಗತಿಯು ಮುಂದೆ ಹ್ಯಾಗಾಗುವದೋ ಎಂಬ ದುರ್ಬಲ ಮಾನಸಿಕವ್ಯಥೆಯಿಂದ ಪೀಡಿತರಾಗಿ ಕಠಿಣವಾದ ಬೇನೆಗೆ ಇಲ್ಲವೆ ಆಕಸ್ಮಿಕಮರಣಕ್ಕೆ ಗುರಿಯಾಗುವ ಜನರನ್ನು ನೋಡಿದರೆ ನಮ್ಮ ಮೇಲಿನ ಬರಹದ ಸತ್ಯತೆಯು ಕಂಡುಬರುವದು.

ನಿಜವಾದ ದೊಡ್ಡಸ್ತಿಕೆಯು ನೆಲೆಗೊಳ್ಳಬೇಕಾದರೆ, ಮನುಷ್ಯನಲ್ಲಿ ಆಚಾರಸ್ವಾತಂತ್ರ್ಯ, ವಿಚಾರಸ್ವಾತಂತ್ರ್ಯಗಳಿರಬೇಕಾಗುವವು. ಪೂರ್ಣಸ್ವಾತಂತ್ರ್ಯವು ಸಿಕ್ಕ ಹೊರತು ಮನುಷ್ಯನ ಮನಸ್ಸು ಹೊಸ ಹಾಗು ಅಕಲ್ಪಿತವಾದ ಕಾರ್ಯಕ್ಷೇತ್ರದಲ್ಲಿ ಪ್ರವೇಶಿಸಲಾರದು. ಸ್ವಾವಲಂಬನವೇ ಮನುಷ್ಯನಲ್ಲಿ ಮನುಷ್ಯತ್ವವನ್ನುಂಟುಮಾಡುವ ಪ್ರಾಮುಖ್ಯಸಾಧನವಾಗಿದೆ. ಅಂತೇ ಹಿಂದೆ ಹೇಳಿದಂತೆ ದೊಡ್ಡ ಹುದ್ದೆಯ ಅಮಲದಾರನಿಗಿಂತ ಕೂಳಿಲ್ಲದ ಬಡ ರಯತನು ಹೆಚ್ಚು ಯೋಗ್ಯತೆಯವನೆಂದು ಎಣಿಸಲ್ಪಡುವನು. ಆದ್ದರಿಂದ ಸ್ವಾವಲಂಬನವೇ ಮನುಷ್ಯನ ಧ್ವೇಯವಾಗಿರಬೇಕು.

ತನ್ನ ಸ್ವಂತದ ಉದ್ಯೋಗದಲ್ಲಿ ತತ್ಪರನಾದಾಗ ಮನುಷ್ಯನಿಗೆ ಆಯಾ ಉದ್ಯೋಗದ ಉತ್ಕರ್ಷ ಮಂದತ್ವಗಳ, ಅನುಕೂಲ ಪ್ರತಿಕೂಲತೆಗಳ ವಿಚಾರವನ್ನು ಮಾಡಬೇಕಾಗುತ್ತದೆ. ಈ ವಿಚಾರದಿಂದ ಅವನಲ್ಲಿ ಒಂದು ಪ್ರಕಾರದ ಗ್ರಹಣಶಕ್ತಿಯು, ಸಹನಶೀಲತೆಯು ದೂರ ದೃಷ್ಟಿಯು ಹಾಗೂ ಮುಂದುವರಿದುಹೋಗುವ ಸ್ವಭಾವವು ಬೆಳೆಯಹತ್ತುತ್ತವೆ. ಎರಡನೆಯವರ ಸಲುವಾಗಿ ಮಾಡಿದ ಎಂಥ ವಿಶಿಷ್ಟ ಪ್ರಯತ್ನದಿಂದಲೂ ಈ ಗುಣಗಳು ಮನುಷ್ಯನಲ್ಲಿ ಪ್ರಾದುರ್ಭವಿಸುವ ಸಂಭವವಿರುವದಿಲ್ಲ. ಸ್ವಂತದ ಉದ್ಯೋಗದಲ್ಲಿ ಸ್ವಂತದ ಲಾಭ ಹಾನಿಗಳ ಪರವಿಯೇ ಯಾವಾಗಲೂ ನಮ್ಮನ್ನು ಜಾಗ್ರತಗೊಳಿಸುವದು; ಹಾಗು ಸತತ ಪರಿಶ್ರಮ ಮಾಡಲಿಕ್ಕೆ ಕಾರಣೀಭೂತವಾಗುವದು. ಸ್ವಂತದ ಉದ್ಯೋಗಗಳಲ್ಲಿ ನಮ್ಮ ಶೋಧಕಬುದ್ಧಿಯ ಪೂರ್ಣ ಉಪಯೋಗಮಾಡಿಕೊಳ್ಳಲಿಕ್ಕೆ ಬರುತ್ತಿರುವದರಿಂದ, ನಮ್ಮ ಮಾನಸಿಕ ಶಕ್ತಿಯ ಹಾಗು ಬುದ್ಧಿಯ ವಿಕಾಸಕ್ಕೆ ಬಾಧೆಬಾರದೆ, ಅವು ಕ್ರಮೇಣ ಬೆಳೆದು ನಮ್ಮ ಪ್ರಗತಿಗೆ ಕಾರಣಗಳಾಗುವವು. ಯಾಕಂದರೆ, ಯೌವ ಪರಿಸ್ಥಿತಿಯಲ್ಲಿ ನಮಗೆ ಹೆಚ್ಚು ವಿಚಾರಮಾಡುವ, ಮನನ ಇಲ್ಲವೆ ಚಿಂತನಮಾಡುವ, ಅಭ್ಯಾಸಮಾಡುವ, ಕಾರ್ಯಕ್ರಮಗೊಳಿಸುವ ಹಾಗು ಅದರಂತೆ ನಡೆಯುವ ಯೋಗ್ಯ ಸಂಧಿಯು ಸಿಗುವದೋ, ಆ ಪರಿಸ್ಥಿತಿಯ ಯೋಗದಿಂದ ನಮ್ಮ ಉನ್ನತಿಯಾಗುತ್ತದೆ. ಆ ಪರಿಸ್ಥಿತಿಯಂದರೇ ಸ್ವಾತಂತ್ರ್ಯ.

ಈಗಿನಂಥ ಭಯಂಕರ ಮಹರ್ಗತೆಯ ಕಾಲದಲ್ಲಿ ಸ್ವಲ್ಪ ಬಂಡವಲದಿಂದ ಯಾವದಾದರೊಂದು ಸ್ವತಂತ್ರ ಉದ್ಯೋಗವನ್ನು ತೆಗೆಯುವ ಮನುಷ್ಯನು, ನಿಕರದ ಪ್ರಸಂಗದಲ್ಲಿ ಹತ್ತರದ ಮದ್ದುಗುಂಡು ತೀರುತ್ತಬಂದದ್ದ ಸೇನಪತಿಯು ವರ್ತಿಸುವಂತೆ ಬಹಳ ಎಚ್ಚರಿಕೆಯಿಂದ ನಡೆಯಬೇಕಾಗುವದು. ಅವನು ಕಾರ್ಯಸಾಧನಕ್ಕಾಗಿ ತನ್ನ ಕಾಯಿಕ-ವಾಚಿಕ-ಮಾನಸಿಕ ಮೊದಲಾದ ಎಲ್ಲ ಶಕ್ತಿಗಳನ್ನೂ ಸದಸದ್ವಿವೇಕಬುದ್ಧಿಯನ್ನೂ, ಧೈರ್ಯ ಹಾಗು ಸಹನಶೀಲತೆ-ಶ್ರಮ ಸಹಿಷ್ಣುತೆಗಳನ್ನೂ ಸಹಾಯಕ್ಕೆ ತೆಗೆದುಕೊಳ್ಳಬೇಕು. ತನ್ನ ಒಂದೂ ಮನೋಭಿಲಾಷೆಯ ಗುರಿಯು ವ್ಯರ್ಥವಾಗದಂತೆ ಒಂದು ಪೈಕೂಡ ಅಕ್ರಮವಾಗಿ ವೆಚ್ಚವಾಗದಂತೆ, ಪ್ರತಿಯೊಂದು ಪ್ರಯತ್ನವೂ ನಿಶ್ಪಲವಾಗದಂತೆ ಜಾಗರೂಕನಾಗಿರಬೇಕು. ಅಂದರೆ ಅವನ ಪ್ರಗತಿಯಾಗಹತ್ತುತ್ತದೆ: ಮಹತ್ವಾಕಾಂಕ್ಷೆಯು ತನ್ನಿಂದ ಎಂಥ ಪರಿಶ್ರಮವನ್ನು ಮಾಡಿಸಿಕೊಳ್ಳುತ್ತದೆಂಬದು ನಿದರ್ಶನಕ್ಕೆ ಬರಹತ್ತುತ್ತದೆ. ಅತ್ಯಂತ ಕಠಿಣ ಹಾಗು ತೊಡಕಿನ ಪ್ರಸಂಗಗಳಿಗೆ ಮೇಲಿಂದ ಮೇಲೆ ಎದೆಗೊಡಬೇಕಾಗುವದರಿಂದಲೂ, ಮನುಷ್ಯನ ಬಹಿಃಪ್ರಾಣವಾದ ಹಣದ ಸಲುವಾಗಿ ಆಗಾಗ್ಗೆ ಕಷ್ಟ-ನಷ್ಟಗಳನ್ನು ಹೊಂದಬೇಕಾಗುವದರಿಂದಲೂ, ತೇಜಿ-ಮಂದತ್ವಗಳ ಆಘಾತಗಳಿಂದ ಮನಸ್ಸಿನಲ್ಲಿ ಉಂಟಾಗುವ ಧೈರ್ಯ-ದೌರ್ಬಲ್ಯಗಳಿಂದಲೂ ಆ ಮನುಷ್ಯನ ಸ್ಥಿತಿಯು ಚದರಂಗದ ಆಟದಲ್ಲಿ ಸೋತ ಮನುಷ್ಯನಂತೆ ಆಗುವದು. ಈ ಹೊಸ ಉದ್ಯೋಗಸ್ತನು ಸ್ವಪ್ನದಲ್ಲಿ ಕೂಡ ಅಜಾಗರೂಕನಾಗಿರಬಾರದು; ಕ್ಷುಲ್ಲಕ ತಪ್ಪು ಕೂಡ ಪ್ರಸಂಗವಶಾತ್‌ ಅವನ ನಾಶಕ್ಕೆ ಕಾರಣವಾಗುವದು. ಅವನು ಒಂದು ಕ್ಷಣವನ್ನು ಕೂಡ ಆಲಸ್ಯದಲ್ಲಿ ಯಾಗಲಿ, ನಿಷ್ಕಾಳಜಿಯಲ್ಲಾಗಲಿ ಕಳೆಯ ಕೂಡದು. ಯಾಕಂದರೆ ಅವನ ಉದ್ಯೋಗದ ಉಚ್ಪ್ರೇಯ್-ಅಪಚ್ಪೇಯಗಳು ಆಗಿನ ಅವನ ವರ್ತನ ಚಾತುರ್ಯವನ್ನು ಹೆಚ್ಚಾಗಿ ಆವಲಂಬಿಸಿರುತ್ತವೆ; ಈ ಕಾಲದಲ್ಲಿ ಅವನು ಮಹಾಯುದ್ಧದ ಪ್ರಸಂಗದಲ್ಲಿ ಕಣ್ಣಲ್ಲಿ ಎಣ್ಣೆ ಹಾಕಿಕೊಂಡು ಹಗಲು-ರಾತ್ರಿ ಒಂದೇಸವನೆ ತಮ್ಮ ಶಿಬಿರವನ್ನು ಕಾಯುವ ಕಾವಲುಗಾರರಂತೆ ಬಹಳ ಎಚ್ಚರದಿಂದಿರೆ ಬೇಕಾಗುವದು.

ಎರೆಡನೆಯವರ ಸಲುವಾಗಿ ನೌಕರನಾಗಿ ದುಡಿಯಬೇಕಾಗಿದ್ದಾಗ ಮನುಷ್ಯನ ಮಹತ್ವಾಕಾಂಕ್ಷೆಯು ಬಹಳವಾದರೆ, ಅತಿದೊಡ್ಡ ಪಗಾರದೊರಕಿಸುವ ಬಹಳ ದೊಡ್ಡಹುದ್ದೆಯನ್ನು ಪಡೆಯುವವರೆಗೆ ಮಾತ್ರ ಇರುವದು. ಆದರೆ ತನ್ನ ಸ್ವಂತದ ಉದ್ಯೋಗದಲ್ಲಿ ತೊಡಗಿದ ಮನುಷ್ಯನಿಗೆ ಬೇರೆತರದ ಮಹತ್ವಾಕಾಂಕ್ಷೆಯ ಸ್ಪುರಣವಾಗುತ್ತಿರುತ್ತದೆ. ಸ್ಪಾತಂತ್ರ್ಯದ ಮಧುರ ಫಲಗಳ ಸೇವನದ ಅನುಭವವೇ ಲಭಿಸುತ್ತಿದ್ದದರಿಂದ ಅವನು ಆ ಸ್ವಾತಂತ್ರ್ಯರಕ್ಷಣಕ್ಕಾಗಿಯೂ ಅದನ್ನು ವೃದ್ಧಿಗೊಳಿಸುವದಕ್ಕಾಗಿಯೂ ಬೇಕಾದಷ್ಟು ಶ್ರಮವಹಿಸಲು ಸಂತೋಷದಿಂದ ಸಿದ್ಧನಾಗಿರುತ್ತಾನೆ. ಅಂಗೀಕೃತ ಉದ್ಯೋಗವನ್ನು ಮನಃಪೂರ್ವಕವಾಗಿ ಮಾಡುವಾಗ ಯಾವ ಹೊಸ ಹೊಸ ಸಂಗತಿಗಳ ಅನುಭವವು-ಶಿಕ್ಷಣವು ಮನುಷ್ಯನಿಗೆ ಎಷ್ಟುತೀವ್ರ ಪ್ರಾಪ್ತವಾಗುವವೋ ಆ ಪ್ರಕಾರದ ಅನುಭವವೂ ಶಿಕ್ಷಣವೂ ಪರರ ದಾಸ್ಯತ್ವದಲ್ಲಿದ್ದಾಗ ಜನ್ಮಜನ್ಮಾಂತರದಲ್ಲಿಯೂ ದೊರಕದು.

ಜವಾಬದಾರಿಯೆ ಭುವನೆಯೇ ಶಿಕ್ಷಣಹೊಂದುವ ಸುಲಭಮಾರ್‍ಗವಾಗಿದೆ. ಬಹಳಕಠಿಣ ಹಾಗು ಜವಾಬುವಾರಿಯ ಪ್ರಸಂಗಗಳು ಬಂದಹೊರತು ತಾವು ಮುಂದೆ ಏನು ಮಾಡಬಹುದೆಂಬದನ್ನು ಊಹಿಸಲಿಕ್ಕಾಗುವದಿಲ್ಲ; ನಮ್ಮ ಸಾಮರ್ಥ್ಯದ ಕಲ್ಪನೆಯು ನಮಗಿರುವದಿಲ್ಲ. ಆದರೆ ಯಾವಾಗ ನಮಗೆ ಎರಡನೆ ಕಡೆಯಿಂದ ಸಹಾಯವು ದೊರೆಯುವ ಸಂಭವವಿರುವದಿಲ್ಲವೋ, ಸ್ವಂತದ ಕಾಲಮೇಲೆ ನಿಂತ ಹೊರತು ಅನ್ಯಮಾರ್ಗವಿರುವದಿಲ್ಲೋ ಆವಾಗ್ಗೇ ನಾವು ನಿಕರದಿಂದ ಪ್ರಯತ್ನಮಾಡಹತ್ತುತ್ತೇವೆ. ಈ ನಿಕರದ ಪ್ರಯತ್ನದಲ್ಲಿ ಈಶ್ವರನು ನಿಶ್ಚಯದಿಂದ ನಮಗೆ ಯೆಶಸ್ಸು ಕೊಡುವನು.

ಸೇವಾಧರ್ಮಕ್ಕೆ ಕನಿಷ್ಠತ್ವಬರಲಿಕ್ಕೆ ಮುಖ್ಯಕಾರಣವೇನಂದರೆ, ಸೇವಾಧರ್ಮದಿಂದ ಸೇವಕನ ಸತ್ವಕ್ಕೆ ಭಂಗಬರುತ್ತಿದ್ದು, ಪ್ರಗತಿ ಮಾರ್ಗಾವಲಂಬನಕ್ಕೆ ಅವನಿಗೆ ಸಂಧಿಯೇ ಸಿಗೆದಾಗುವದು. ಹೀಗೆ ನೈಸರ್ಗಿಕಗುಣಗಳ ವೃದ್ಧಿಗೇ ಭಂಗಬರುತ್ತಿರಲು, ಪ್ರಯತ್ನಪೂರ್ವಕ ಸಾಧಿಸಬೇಕಾದ ಪ್ರಗತಿಯ ಗತಿಯೇನು? ಹೀಗಾಗಿ ಸೇವಕನು ಎಲ್ಲ ಬಗೆಯಿಂದಲೂ ದಾಸ್ಯವಿಮೋಚನ ಮಾಡಿಕೊಳ್ಳಲು (ಪ್ರಗತಿ ಹೊಂದಲು) ಅಯೋಗ್ಯನಾಗುತ್ತಾನೆ.

ಇನ್ನು ಕೆಲವರು ಹೀಗೆ ತರ್ಕಿಸಬಹುದು, ನಾವು ಎಲ್ಲರೂ ಸ್ಪತಂತ್ರರಾಗುವದೂ ಎಲ್ಲರೂ ಉದ್ಯೋಗಸ್ತರಾಗುವದೂ ಅರಸರಾಗುವದೂ ಶೆಕ್ಯವಾಗಿಯಾದರೂ ತೋರುವದೋ? ಎಲ್ಲರೂ ಪಲ್ಲಕ್ಕಿಯಲ್ಲಿ ಕೂತರೆ ಪಲ್ಲಕ್ಕಿ ಹೊರುವವರಾರು” ತಾರ್ಕಿಕರ ಈ ತರ್ಕವು ವಿಚಾರಣೀಯೆವಾಗಿದೆ, ಆದರೆ ಇದೇ ವಿಚಾರವು ಸ್ವತಂತ್ರರೀಯಿಂದ ಇರುವ ಉದ್ಯೋಗಸ್ಥರ, ರಯತರ ಇಲ್ಲವೆ ಅರಸರ ಮನಸಿನಲ್ಲಿ ಬಂದು ಅವರು ತಮ್ಮ ತಮ್ಮ ವೃತ್ತಿಗಳನ್ನು ಬಿಟ್ಟುಕೊಟ್ಟು ನಮ್ಮಂತೆ ನೌಕರೆರಾಗಬಯೆಸಿದರೆ ನಮ್ಮ ತಾರ್ಕಿಕರ ತರ್ಕಕ್ಕೇನೆನ್ನಬೇಕಾಗುವದು? ಆಗ ನಾವು ನೌಕರಿ ಮಾಡುವದಾದರೂ ಯಾರದು? ಹೊರಲಿಕ್ಕೆ ಪಲ್ಲಕ್ಕಿಯಾದರೂ ಯಾರದುಸಿಗುವದು? ಆದ್ದರಿಂದ ಸ್ವಾತಂತ್ರ್ಯ ಪ್ರೀತಿಯುಳ್ಳ ಮನುಜನು ಹೊಲ್ಲದ ಈ ಹೇಡಿಕುತರ್ಕಗಳಿಗೆ ಮನಸ್ಸನ್ನೆಳಿಸದೆ, ತನ್ನ ಅಂತಃಕರಣಕ್ಕೆ ಸರಿದೋರುವ ಮಾರ್ಗವನ್ನು ಹಿಡಿದು ತೀವ್ರವಾಗಿ ಪ್ರಗತಿಯನ್ನು ಹೊಂದಲುಯತ್ನಿಸಬೇಕು. ಸ್ವಾತಂತ್ರ್ಯಪ್ರೀತಿಯುಳ್ಳ ಎಲ್ಲ ವ್ಯಕ್ತಿಗಳ ಅಧಿಕಾರವು ಲೋಕದಲಿ ಒಂದೇಸವನೆ ಆಗಿರುವದು. ಆ ವೃತ್ತಿಯಿಂದ ನಮನ್ನು ಪರಾಙ ಖಮಾಡಲಿಕ್ಕೆ ಯಾವನಿಗೂ ಅಧಿಕಾರವಿರುವುದಿಲ್ಲ. ಸ್ವಾತಂತ್ರ್ಯ ಪ್ರೀತಿಯನ್ನು ವೃದ್ಧಿಗೊಳಿಸದೆ ಕುಗ್ಗಿಸುವದೆಂದರೆ, ಮನುಷ್ಯತ್ವದ ಕರ್ತವ್ಯಕ್ಕೆ ಭಂಗತಂದಂತಾಗುವದು. ಆದ್ದರಿಂದ ಮನುಷ್ಯತ್ವಕಾಯ್ದುಕೊಳ್ಳುವದಕ್ಕಾಗಿ ಪ್ರತಿಯೊಬ್ಬನೂ ಸ್ವಾತಂತ್ರ್ಯ ಪ್ರಿಯನಾಗಬೇಕು.

ಪರತಂತ್ರ ಮನುಷ್ಯನು ಸ್ವತಂತ್ರನಾಗಬಯಸಿ ಪ್ರಯತ್ನಪಡಹತ್ತಿದರೆ ಅವನಿಗೆ ಒಮ್ಮೆಲೆ ಸರ್ವವೂ ಸಾಧ್ಯವಾಗಲಾರದೆಂಬದು ನಿಜವು; ಯಾಕಂದರೆ ಗತಆಯುಷ್ಯವು ಪಾರತಂತ್ರ್ಯರಜ್ಜುವಿನಿಂದ ಬಿಗಿಯಲ್ಪಟ್ಟಿತ್ತಾದ್ದರಿಂದ, ಈಗಲೂ ಅವನ ದೇಹದ ಮೇಲೆ, ಮನಸ್ಸಿನ ಮೇಲೆ ಆ ರಜ್ಜುವಿನ ಬಾಸಾಳಗಳು ಮೂಡಿರುವದರಿಂದ, ಕೆಲಕೆಲವು ಪ್ರಸಂಗಗಳಲ್ಲಿ ತನ್ನಿಂದ ತಾನೇ ಅವನು ತನ್ನ ಸ್ವಾತಂತ್ರ್ಯಭಂಗಕ್ಕೆ ಕಾರಣನಾಗಿ, ಪ್ರಗತಿಗೆ ಆಗಿನ ಮಟ್ಟಿಗೆ ಬಾಧೆತಂದುಕೊಳ್ಳುವನು. ಆ ರಜ್ಜುವಿನ ಬಾಸಾಳಗಳು ಸಂಪೂರ್ಣ ಇಲ್ಲದಂತಾಗಲು ಅವನ ಪ್ರಗತಿಯು ಒಳ್ಳೇ ಒತ್ತರದಿಂದ ಆಗಹತ್ತುವದು. ಆಗ ಅವನು ತನ್ನ ಮೊದಲಿನ ಹಾಗು ಈಗಿನ ಮಹತ್ವಾಕಾಂಕ್ಷೆಗಳ ತುಲನೆಯನ್ನು ಮಾಡಿದರೆ, ತನ್ನಲ್ಲಿ ಒಂದು ಪ್ರಕಾರದ ಸಾಮರ್ಥ್ಯವು ಉಂಟಾಗಿರುವದೆಂದು ಅವನಿಗೆ ಕಂಡುಬರುವದು. ಸ್ವಾವಲಂಬನದ ಸುಖದ ಮುಂದೆ ಪರಾವಲಂಬನದ ಸುಖವು ಅವನಿಗೆ ತುಚ್ಛವಾಗಿ ಕಾಣಹತ್ತುವದು. ಆಗುವದು ಸಿದ್ಧಮಾತಾಗಿದ್ದರೂ ನಮ್ಮಲ್ಲಿಯ ಬಹುಜನರು ತಿಂಗತಿಂಗಳಿಗೆ ತಪ್ಪದೆ ಸಿಗುವ ಪಗಾರಕ್ಕಾಗಿಯೊ, ಹೆಚ್ಚು ಜವಾಬುದಾರಿ ಸಾಹಸಗಳಿಂದ ಅಲಿಪ್ತರಾಗುವದಕ್ಕಾಗಿಯೂ, ತಮ್ಮ ದೇಹವನ್ನು ಮಾರಿ ಕೊಳ್ಳುವರು. ಇವರು ತಮ್ಮ ಭಾಷಣಸ್ವಾತಂತ್ರ್ಯ, ಆಚಾರಸ್ವಾತಂತ್ರ್ಯ, ವಿಚಾರಸ್ವಾತಂತ್ರ್ಯಗಳನ್ನು ಕಳಕೊಂಡು ತಮ್ಮ ಪ್ರಗತಿಯನ್ನು ತಮ್ಮ ಕಾಲಿಲೆ ತುಳಿದು ನಾಶಮಾಡಿಕೊಳ್ಳುತ್ತಾರೆ. ಈಗಿನ ಕಾಲದಲ್ಲಿ ದೊಡ್ಡ ಪದವೀಧರರು ಮೊದಲುಮಾಡಿಕೊಂಡು, ಅಕ್ಷರ ಶೆತ್ರುವಿನವರೆಗೆ ಪ್ರತಿಯೊಬ್ಬನ ಒಲವೂ ಚಾಕರಿಯ ಕಡೆಗೇ ಇರುವದು. ಬಿ. ಏ. ಪಾಸಾದರೂ ನೌಕರಿಯ ಬಯಕೆಯು; ಎಂ. ಏ ಪಾಸಾದರೂ ನೌಕರಿಯ ಬಯಕೆಯು; ಆಯ್. ಸೀ. ಎಸ್., ಪಾಸಾದರೂ ನೌಕರಿಯ ಬಯಕೆಯು; ಹರಹರ! ಸ್ವಾಮಿತ್ತ ಮೆರೆಯಿಸುವದಕ್ಕಾಗಿ, ಬೇಕಾದ ಸಂಗತಿಯನ್ನು ಸಂಧ ಸಾಧ್ಯಮಾಡಿಕೊಳ್ಳುವದಕ್ಕಾಗಿ, ಸ್ಟಾತಂತ್ರ್ಯಕ್ಕಾಗಿ, ಕರ್ತವ್ಯನಿಷ್ಠೆಯನ್ನು ತೋರಿಸುವದಕ್ಕಾಗಿ ಮತ್ತು ಸ್ವಾವಲಂಬನಕ್ಕಾಗಿ ಹುಟ್ಟಿ ಬೆಳೆದ ಮನುಷ್ಯಪ್ರಾಣಿಯು ಸೇವಾಧರ್ಮದಲ್ಲಿ ಸುಖಸಮಾಧಾನದಿಂದಿರುವದು ಯೋಗ್ಯವೆ! ಹೇಳಿದ ಚಾಕರಿಮಾಡಿಕೊಂಡು, ಹಾಕಿದಷ್ಟು ಬಕ್ಕರಿಯನ್ನು ತಿನ್ನುವ ನಾಯಿಯಂತೆ ದಾಸ್ಯದಲ್ಲಿ ಸುಖ ಸಮಾಧಾನಗಳಿಂದಿರುವದು ಭೂಷಣವೇ? ಕುಂಠಿತ ಪ್ರಗತಿಗಾಮಿಗಳಾಗಿ ಸದೈವದಾಸ್ಯತ್ವದಲ್ಲಿರಲು ಹವಣಿಸುವದು ಎಂಥ ಖೇದಕರವಾದ ಮಾತಿದು!

ಸ್ಟಾಂತ್ರ್ಯಸುಖವನ್ನು ಅನುಭವಿಸಲಕ್ಕೂ, ಸ್ವಕರ್ತವ್ಯದಿಂದ ಉನ್ನತಿಯನ್ನು ಹೊಂದಲಿಕ್ಕೂ, ಸ್ವಂತದ ಬಗ್ಗೆ ಸ್ಪತಂತ್ರ ವಿಚಾರ ಮಾಡಿ ಧ್ಯೇಯವನ್ನು ಗೊತ್ತುಮಾಡಿಕೊಳ್ಳಲಿಕ್ಕೂ ಈಶ್ವರನು ಮನುಷ್ಯ ಪ್ರಾಣಿಯನ್ನು ನಿರ್ಮಿಸಿರುವನು. ಹೀಗಿದ್ದು ನಾವು ಪೂರ್ವಸುಕೃತದಿಂದ ಪ್ರಾಪ್ತವಾದ ನಮ್ಮ ಮನುಷ್ಯದೇಹವನ್ನು ಪರರ ದಾಸ್ಯತ್ವದಲ್ಲಿ ಕಳೆಯುವದು ಯೋಗ್ಯವಾಗಬಹುದೇ? ಇನ್ನು ಯಾವನಿಗೆ ಸ್ಪತಂತ್ರ ವಿಚಾರಗಳು ಹರಿಯುವದಿಲ್ಲವೊ, ಯಾವನು ಪರರ ದಾಸ್ಟು ದಲ್ಲಿಯೇ ಅಂತಃಕರಣ ಪೂರ್ವಕವಾಗಿ ಸುಖಿಯಾಗಿರುವನೋ, ದೇವರು ಇಟ್ಟ ಸ್ಥಿತಿಯೆಲ್ಲಿಯೇ ಯಾವನು ಪರಮ ಸುಖಿಯಾಗಿರುವನೋ ಅವನು ತನ್ನ ಇಚ್ಛೆಯಂತೆ ಇರಲ್ಲಿ. ಆದರೆ ಯಾವನು ಮೇಲಿನ ಎಲ್ಲ ದುಃಖಗಳನ್ನು ಅಂತಃಕರಣದಲ್ಲಿ ದುಃಖಗಳೆಂದು ಭಾವಿಸಿ, ತೋರಿಕೆಯಲ್ಲಿ ಸುಖಿಯೊಗಿರುವವನಂತೆ ತೋರುವನೋ ಅವನು ಮಾತ್ರ ಕೂಡಲೆ ತನ್ನ ಸ್ವಾತಂತ್ರ್ಯಪ್ರೀತಿಯನ್ನು ಜಾಗ್ರತಗೊಳಿಸಿಕೊಂಡು ದಾಸ್ಯವಿಮೋಚನಕ್ಕೆ ಪ್ರಯತ್ನಿಸತಕ್ಕದ್ದು. ಪ್ರಗತಿ ಮಾರ್ಗವು ಕಷ್ಟಸಾಧ್ಯವಾಗಿದೆ ಎಂಬದು ನಿಜವಾಗಿದ್ದರೂ, “ಹುಚ್ಚೆ ಹೋಗದೆ ಲಗ್ನವಾಗದು, ಲಗ್ನವಾಗದೆ ಹುಚ್ಚು ಹೋಗದು” ಇಲ್ಲವೆ “ಈಸುಬಂದ ಹೊರತು ನೀರಹೆದರಿಕೆ ಹೋಗುವದಿಲ್ಲ, ನೀರಹೆದರಿಕೆ ಹೋದ ಹೊರತು ಈಸುಬರುವದಿಲ್ಲ” ಎಂಬಂತೆ ಪ್ರಗತಿಮಾರ್ಗದಲ್ಲಿ ಪ್ರವೇಶಿಸಿದ ಹೊರತು ಪುಗತಿಹೊಂದುವ ಬಗೆ ಹ್ಯಾಗೆ? ಆದ್ದರಿಂದ ಮನುಷ್ಯನು ಸ್ಟಾತಂತ್ರ್ಯ ಪ್ರೀತಿಯೆಂಬ ಈಸಗುಂಬಳಕಾಯಿಯನ್ನು ಕಟ್ಟಿಕೊಂಡು ಈ ಸಂಸಾರವೆಂಬ ಸಾಗರದಲ್ಲಿ ಬಿದ್ದುಬಿಟ್ಟರೆ, ಅವನು ಪ್ರಗತಿಪಧವನ್ನು ಹಿಡಿದು, ಶ್ರೇಷ್ಟವಾದ ಮಾನ-ಕೀರ್ತಿಗಳಿಂದ ಯುಕ್ತನಾಗಿ ಭವವನ್ನು ನಿರುಯಾಸವಾಗಿ ದಾಟುವನು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಣೇಶ ಪರ್ವ
Next post ಬೆಳಕಾಗಿ ಬಂತು

ಸಣ್ಣ ಕತೆ

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

cheap jordans|wholesale air max|wholesale jordans|wholesale jewelry|wholesale jerseys