ಕಾಲವೊಂದಿತ್ತಂದು ತಿಪ್ಪೇಶನೆಂಬೊಬ್ಬ ದೇವನಿರುತಿ
ರಲು ಉತ್ತು ಬಿತ್ತಿ ಬೆಳೆವನ್ನದುದ್ಯೋಗದೊಳು
ಎಲ್ಲರಿಗೂ ವಿಹಿತದಾಸಕ್ತಿ ಆದಾಯವಿರುತ್ತಿತ್ತು
ಬಲ್ಲಿದರವರಿಗವರೇ ಮಾಲಿ, ಹಮಾಲಿ, ಜಾಡಮಾಲಿ
ಮಾಲಿಕರಾಗಿರಲನ್ನದೊಳು ಅನುರಾಗವಡಗಿತ್ತು – ವಿಜ್ಞಾನೇಶ್ವರಾ
*****