ಕರ್ನಾಟಕದ ಗಡಿ ಸಂಸ್ಕೃತಿಯ ಸ್ವರೂಪ ವೈವಿಧ್ಯಮಯವಾದುದು. ಭಾಷಿಕವಾಗಿ ಆರ್ಥಿಕವಾಗಿ, ರಾಜಕೀಯವಾಗಿ ವಿಭಿನ್ನ ಚಿತ್ರಗಳು ವಿಭಿನ್ನ ರಾಜ್ಯಗಳಿಗೆ ಅಂಟಿಕೊಂಡ ಕರ್ನಾಟಕದ ಗಡಿ ಪ್ರದೇಶಗಳಲ್ಲಿ ಕಾಣಸಿಗುತ್ತವೆ. ಇದರೊಂದಿಗೆ ಭೌಗೋಳಿಕ ವಾತಾವರಣದೊಂದಿಗೆ ಅಂ...
ಬಾರೆಲೆ ಗಿಳಿಯೇ ಮುದ್ದಿನ ಮಣಿಯೇ ಪಚ್ಚವ ಧರಿಸಿಹ ರೇಶಿಮೆ ಮರಿಯೇ ಹವಳದ ಕೊಕ್ಕಿನ ಮುತ್ತಿನ ಕಣ್ಣಿನ ಸುಂದರ ಪುಕ್ಕಿನ ಚಂದದ ಗಿಳಿಯೇ। ಬಾ ಬಾ ಬಾ ಮಾಟದ ಪಂಜರ ಬಣ್ಣದ ಹಂದರ ಅದರಲಿ ನಿನ್ನನು ಇರಿಸುವ ಬಾ ಬಾ| ಬಾರೆಲೆ ಬಗೆ ಬಗೆ ಹಣ್ಣನು ನಾ ಕೊಡಿಸುವೆ...
ಆಗಸದ ಕಡಲೊಡೆದು ಉಕ್ಕಿ ಹರಿಯುತಲಿಹುದು ಲೋಕದೀ ಬೊಕ್ಕಸವ ತುಂಬುತಿಹುದು. ಬೆಟ್ಟ ಗಿರಿ ತೂರೆ ತೋಡು ಕೆರೆ ಕುಂಟೆ ನದಿ ನದವು ಬರುವ ಗಂಗೆಯ ಕರೆದು ಮನ್ನಿಸುವುವು. ಆಗಸಕು ಭೂಮಿಗೂ ಬಾಂಧವ್ಯವನ್ನು ಬೆಳೆಸಿ ಮಣ್ಣೊಳಿಹ ಸತ್ವಗಳ ತೆಗೆದು ಸೂಸಿ; ಧನ್ಯರಾವ...
ಅಲ್ಲಲ್ಲಿ ನಿಂತು ಅಲ್ಲಲ್ಲಿ ತಡೆದು ದಾರಿ ಸಾಗುವುದೆ ಒಳ್ಳೆಯದು ಎಲ್ಲಿಯೂ ನಿಲ್ಲದೆ ಏನನೂ ಕಾಣದೆ ಧಾವಿಸುವುದೇ ತಲ್ಲಣ ಕೆರೆಯ ನೋಡುವುದು ಕೊಳವ ನೋಡುವುದು ಜಲಾಶಯದ ಬಳಿ ತಂಗುವುದು ಗಿರಿಯನೇರುವುದು ಕಣಿವೆಯನಿಳಿಯುವುದು ಬಳಸು ದಾರಿಗಳಲ್ಲಿ ಸರಿಯುವು...
‘ಕೊಲೆಸ್ಟ್ರಾಲ್’ ಹೆಚ್ಚಾದರೆ ಬೊಜ್ಜು ಬೆಳೆದು ಅಪಾಯಗಳಾಗಬಹುದೆಂದು ವೈದ್ಯಕೀಯವಾಗಿ ದೃಡಪಟ್ಟಿದೆ. ಕೈಕಾಲು ಹಿಡಿತ, ಹೃದಯಾಘಾತ, ಸೊಂಟನೋವು, ಚಟುವಟಿಕೆ ಗಳಿಲ್ಲದಿರುವುದು, ಮುಂತಾದ ಕಾಯಿಲೆಗಳು ಈ ಕೊರೆಸ್ಟ್ರಾಲ್ ಹೆಚ್ಚಾದಾಗ ಕಂಡು ಬರುತ್ತದೆ. ಆದ್...
ನನ್ನವಳಿದ್ದರೆ ಕುಕ್ಕರ್ಸಿರ್ತೀನಿ ಇರದಿದ್ದರೆ Cooker ಸ್ತೀನಿ! *****...
ಭಾವದ ಬೆನ್ನೇರಿ- ಆಕಾಶಕೆ ನೆಗೆಯುವೆಯೊ ಪಾತಾಳಕೆ ಇಳಿಯುವೆಯೊ ಕಡಲನು ಈಜುವೆಯೊ ಕಡಲಾಳವ ಸೇರುವೆಯೋ! || ಪ || ಭಾವದ ಬೆನ್ನೇರಿ- ಕೋಗಿಲೆ ಆಗುವೆಯೊ ನವಿಲಾಗಿ ಕುಣಿಯುವೆಯೊ ಕವಿತೆಯ ಬರೆಯುವೆಯೊ ಕತೆಯೇ ಆಗುವೆಯೋ! ಭಾವದ ಬೆನ್ನೇರಿ- ಗುರಿಯನು ಕಾಣುವೆ...
ಕವಿತೆಯೆಂದರೇ ವಿಸ್ಮಯ ಎಂದರು ಕೆಲವರು ಈ ಬದುಕು ಅದಕ್ಕಿಂತ ವಿಸ್ಮಯ ಎಲ್ಲೋ ಅಲ್ಲೊಮ್ಮೆ ಇಲ್ಲೊಮ್ಮೆ ಒಂದು ಪದವೋ ವಾಕ್ಯವೋ ಕೈ ಹಿಡಿದರೆ ಮಾತು ಬೆಳಕಾದರೆ ಒಂದು ಕವಿತೆ ಈ ಬದುಕೋ ಕ್ಷಣ ಬಿಡದಂತೆ ಕೈ ಹಿಡಿದು ದರದರ ಎಳೆದು ಆಕಾಶಕ್ಕೋ ಪಾತಾಳಕ್ಕೋ ಎಸೆ...
ಅವರು ತ್ರಿಶೂಲಗಳನ್ನು ಹಿಡಿದಿದ್ದಾರೆ ಇವರು ತಲವಾರಗಳನ್ನು ಹಿಡಿದಿದ್ದಾರೆ ಕಿಚ್ಚು ಹಾಯಿಸುವ ಹಬ್ಬದಲಿ ಇಬ್ಬರೂ ಹುರುಪಿನಲಿ ಪಾಲ್ಗೊಂಡಿದ್ದಾರೆ! ‘ಅಲ್ಲಾ’ ಎಂದರೆ ನೇರ ಸ್ವರ್ಗಕ್ಕೆ ಅಟ್ಟುತ್ತಾರೆ ‘ರಾಮ’ ಎಂದರೆ ಇಲ್ಲ...
“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...
ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...
ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...
ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...
ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...
ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...







