ಗಟ್ಟಿ ಮೇಳ
ಗಟ್ಟಿ ಮೇಳ
ಎಂದು ಪುರೋಹಿತರು
ತೋರು ಬೆರಳೆತ್ತಿ
ಆಡಿಸತೊಡಗಿದಾಗ,
ವಾದ್ಯಗಳು ಮೊಳಗಿ
ತಾರಸ್ಥಾಯಿಯಲ್ಲಿ-
ಅಗ್ನಿ ದೇವ ಪ್ರಜ್ವಲಿಸಿ,
ಮಂತ್ರ ಘೋಷಗಳ
ಭೋರ್ಗರೆತದಲ್ಲಿ
ನೂರಾರು ಮನಗಳು
ಹರಸಿ, ಕೈಯೆತ್ತಿ
ಸಾವಿರಾರು
ಅಕ್ಷತೆ ಕಾಳಿನ ಹೂಮಳೆ
ಸುರಿಸುವ ಕ್ಷಣ
ರೋಮಾಂಚನ…
ಪ್ರಕೃತಿ – ಪುರುಷರ
ಸಮಾಗಮದ
ಮಂಗಳ ಮಹೂರ್ತ
ಬಾಳಿಗೆ ಕೊಡುವ
ಪರಮಾರ್ಥ
ಪ್ರತೀಕ
ಗಟ್ಟಿ ಮೇಳ
*****
೨೦-೦೭-೧೯೯೨