
ಯಾರಣ್ಣ ನೀ ಬಿಡುಗಣ್ಣನೇ | ಎದೆಗೆಳೆಯ ! ಕುಳಿತಿಹ ತಣ್ಣನೇ ಮಾನವನ ಕರ್ಮವ ಬಿಮ್ಮನೇ | ಸುಖದುಃಖ ನೋಡುವೆ ಸುಮ್ಮನೇ ಸಂತಾಪ ಜಾಲಕೆ ಅದರದೇ | ಮರಣಕ್ಕೂ ವಿಧಿಗೂ ಬೆದರದೇ ಕುರುಡು ಜಗ ಉರುಳುವುದ ಕಾಯುವೆ | ಸಾಕ್ಷಿ ಕಣ್ಣೂ ನೋಯವೇ ? ಈ ವಕ್ರಚಕ್ರದ ಜೊತ...
ಕಾನಡಾ ೧ ಒಡೆಯ ನಿನ್ನಡಿಯೆಡೆಯ ಹುಡುಕುತಲಿ ನಡೆದಿಹೆನು, ಅಡಿಗಡಿಗೆ ದಾರಿಯೊಳು ತಡೆವಡೆಯುತಿಹೆ ನಾನು, ಹಲವು ಮುನಿಗಳು ನುಡಿದ ಹಲವು ಮಾತುಗಳಿಂದೆ ಅಲುಗಾಡಿ ಮನವು ಉಯ್ಯಲೆಯಾಡುವಂತಿಹೆನು. ೨ ನಿನ್ನೆಡೆಗೆ ಬರುವದಿದೆ ನನ್ನ ಕೋರಿಕೆ ದೊರೆಯೆ, ನಿನ್ನ ...
ಅಮ್ಮ ನಿನ್ನ ಮಗನಮ್ಮಾ ಏನು ತುಂಟನಿವನಮ್ಮ| ನೀನೇ ಬುದ್ಧಿ ಕಲಿಸಮ್ಮ ಯಾರ ಮಾತ ಕೇಳನಮ್ಮ ನಿನ್ನ ಹೊರತು ಇನ್ನಾರಿಗೂ ಸ್ವಲ್ಪವೂ ಹೆದರನಮ್ಮ|| ಆಟದಲ್ಲಿ ಅವನೇ ಎಂದೂ ಗೆಲ್ಲಲೇಬೇಕಂತಲ್ಲಮ್ಮ! ಸೋತವರು ಅವನೇಳಿದಂತೆಯೇ ಕೇಳಬೇಕಂತಮ್ಮಮ್ಮ| ಮಾತಿನಲ್ಲೇ ಮನ...
ನಿಮ್ಮ ಹಣ ಬೇಡ ನಿಮ್ಮ ನೆಣ ಬೇಡ ಒಂದಿಷ್ಟು ಅಳು ಕೊಡುತ್ತೀರ ನನಗೆ? ನಿಮ್ಮ ಕಾರು ಬೇಡ ನಿಮ್ಮ ಜೋರು ಬೇಡ ಕೇವಲ ಒಂದಿಷ್ಟು ಅಳು ಕೊಡುತ್ತೀರ ನನಗೆ? ಸದ್ಯ ನಿಮ್ಮ ಭೂಮಿ ಬೇಡ ಬಂಗಲೆ ಬೇಡ ಮೊದಲು ಒಂದಿಷ್ಟು ಅಳು ಕೊಡುತ್ತೀರ ನನಗೆ? ನಿಮ್ಮ ಮರ್‍ಯಾದೆ ...
ತಂದೆಗೆ ಪುಟ್ಟನು ಕೇಳಿದನು ಕಲಿಸು ತನಗೆ ಈಜೆಂದನು ಹಳ್ಳದ ದಂಡೆಯ ಬಾವಿಗೆ ಹೋದರಿಬ್ಬರು ಜೊತೆ ಜೊತೆಗೆ ತಂದೆಯು ಧುಮುಕಿ ಈಜಿದನು ಪುಟ್ಟನು ಕುಳಿತು ನೋಡಿದನು ತಂದೆಯು ಕೈಯ ಹಿಡಿದೆಳೆದು ಸೊಂಟವ ಬಳಸಿ ನಡೆಸಿದನು ಪುಟ್ಟನು ಮೊದಲು ಚೀರಿದನು ಕೈ-ಕಾಲು ...
ನಾಡ ಕುದುರೆ ದಾರಿ ತಪ್ಪಿ ಕಾಡದಾರಿ ಹಿಡಿಯಿತು ಊರದಾರಿ ಕಾಣದಾಗ ಭಾರಿದಿಗಿಲು ಗೊಂಡಿತು ದೂರದಲ್ಲಿ ಕಾಡು ಕುದುರೆ ಇದನು ನೋಡಿ ನಕ್ಕಿತು ನಕ್ಕ ಕುದುರೆ ಕಂಡು ತಾನು ಧೈರ್ಯವನ್ನು ತಾಳಿತು ನಾಡಕುದುರೆ ಬಂದ ಸುದ್ದಿ ಪ್ರಾಣಿಗಳಿಗೂ ತಿಳಿಯಿತು ಹೊಸಬನನ್...
ಶತಮಾನಗಳ ಹಿಂದೆ ಲಜ್ಜೆಯ ಮುದ್ದೆಯಾಗಿ ಸಹನೆಗೆ ಸಾಗರವಾಗಿ, ಕ್ಷಮೆಗೆ ಭೂಮಿಯಾಗಿ, ತಾಳ್ಮೆಯ ಕೊಳ ತೊಟ್ಟು ದೇವಿಯ ಪಟ್ಟ ಪಡೆದು, ದಿನದಿನವೂ ಕತ್ತಲೆಯಲಿ ಅಸ್ತಿತ್ವ ಅಳಿಸಿಕೊಂಡು ಕನಸುಗಳ ಶೂಲಕ್ಕೇರಿಸಿ ಹೊಟ್ಟೆಯಲ್ಲಿ ಕೆಂಡದುಂಡೆಗಳ ಗಟ್ಟಿಯಾಗಿ ಕಟ್ಟ...
ಮರವೊಂದು ಬಿದ್ದಿದೆ ಬಿರುಗಾಳಿಗೆ ಅದು ದೊಪ್ಪೆಂದು ಬಿದ್ದಿತೊ ಸದ್ದಿಲ್ಲದೆ ಬಿದ್ದಿತೊ ಕೇಳಿದವರು ಇಲ್ಲ ಮುಂಜಾನೆಯೆದ್ದರೆ ಮರ ಬಿದ್ದಿದೆ ಉದ್ದಕೆ ಬುಡ ಮಗುಚಿ ಬಿದ್ದಿದೆ ಇನ್ನೆಂದು ಏಳದಂತೆ ಬಿದ್ದಿದೆ ಎಷ್ಟು ವರ್ಷದ ಮರ ಎಷ್ಟು ಯುಗ ಕಂಡ ಮರ ಮರವೆ ...
ದಿನ ಬೆಳಗಾಗದರೊಳಗಾಗಿ ಡಾ|| ಇಂದೇರ್ ಬಿರ್‌ಗಿಲ್ ವಿಶ್ವವಿಖ್ಯಾತಿ ಗಳಿಸಿರುವರು. ತೀರಾ ಉಲ್ಬಣಗೊಂಡ ಕಿಡ್ನಿ ಕ್ಯಾನ್ಸರ್ ರೋಗಿಗಳಿಗೆ ರೋಬಾಟ್ ಸರ್ಜರಿಗಳನ್ನು ಬಲು ಯಶಸ್ವಿಯಾಗಿ ನೆರವೇರಿಸುವ ಮೂಲಕ ಹೆಸರುವಾಸಿಯಾಗಿರುವರು. ಡಾ|| ಇಂದೇರ್ ಬಿರ್‌ಗಿ...
ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...
ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...
“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...
“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...
ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...
ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...















