ತಿಪ್ಪೆಗುಂಡಿಯ ಬಿಸಿಯ ಬೂದಿಯಲಿ ಮೈಮುದುರಿ ಮಲಗಿ ಜೋಂಪಿಸುತಿರುವ ಗಂಡು ನಾಯಿ; ಹಸಿದು ಕುಸಿದಿಹ ಹೊಟ್ಟೆಗೊಂದು ತುಕಡಿಯ ಬಯಸಿ ಮೆಲ್ಲನೆದ್ದಿತು; ಅಂತೆ ಮೈಯ ಮಣಿಸಿತು ನಿಂತು ತೆರೆದು ಬಾಯಿ. ಲಟಪಟನೆ ಕಿವಿಯ ಬಾರಿಸಿ ದೂಳು ಜಾಡಿಸಿತು ಹೊರಟಿತು ಸಂದಿಯಲಿ ಗತ್ತು ಹಿಡಿದು. ಮೂಲೆಗಲ್ಲನು ಕಂಡು ಕಾಲನೆತ್ತುವ ಜಾತಿ ...

ಸೆಟ್ಟಾಗುವವರೆಗೆ ಹುಡುಗಿಯ ಹಿಂದೆ ಹುಡುಗ ಸಟ್ಟಾದ ಮೇಲೆ ಹುಡುಗನ ಹಿಂದೆ ಹುಡುಗಿ ಸೆಟ್ಟಾಗುವವರೆಗೆ ಹಲ್ಲು ದಾಳಿಂಬೆ ಕಾಳು ಸೆಟ್ಟಾದ ಮೇಲೆ ಹಿಂದಿನದೆಲ್ಲಾ ಓಳು ಸೆಟ್ಟಾಗುವವರೆಗೆ ಮೂಗು ಗಿಳಿಯ ಮೂಗು ಸೆಟ್ಟಾದ ಮೇಲೆ ಮೂಗು ಹಾಗೂ ಹೀಗೂ ಸೆಟ್ಟಾಗುವವ...

ನನ್ನಾಕೆಯಂತಾಕೆ ಲೋಕಕೆ ಒಬ್ಬಾಕೆ ಅವಳಿಗೆ ಅವಳೆ ಹೋಲಿಕೆ. ಓದಿಯೂ ಓದದ ದೂರದವಳಲ್ಲದ ಇವಳ ಮಾಡಿಕೊಂಡು ಬಂದೆ ಇವಳ ಜೋಡಿ ಸಂಸಾರ ನನಗೆ ಕತ್ತಿ ಮೇಲೆ ಸಾಮು ಮಾಡಿದಂಗಾಗುತಿಹುದು. ಮೇಲೆ, ನೋಡೋಕೆ ಇವಳು ಮೆತ್ತನ್ನಾಕೆ ಒಳಗೆ ಬಲು ಘಾಟಿಯೀಕೆ ಸದಾ ನೆರೆಕೆ...

ನುಜ್ಜುಗುಜ್ಜಾಗಿದೆ ಪ್ರೀತಿ ಸಿಲುಕಿ ಈ ಚಕ್ರದಡಿ ಬೂದಿಯಾಗಿದೆ ಸುಟ್ಟು ಬೆಟ್ಟದ ಆ ತಪ್ಪಲಲಿ ಅಗೋ ಅಲ್ಲಿ ತೂಗುತಿದೆ ಮರದಲಿ ಇಗೋ ಇಲ್ಲಿ ತೇಲುತ್ತಿದೆ ಹುಚ್ಚು ಹೊಳೆಯಲಿ. ಕೊಚ್ಚಿ ಹಾಕಿಹರು ಅದನು ಕೂಡು ರಸ್ತೆಯಲಿ ವಿಷಕೆ ವಶವಾಗಿ ರೋಷಕ್ಕೆ ಈಡಾಗಿ ಎ...

ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು ಮಾಡಬೇಕೆಂದು ತೋಚದೆ ಕೈ ಮೇಲೆ ತಲೆ ಹೊತ್ತು ಕುಳಿತಿದ್ದರು. ಕಡಲ ತೀರದ ಒರ...

‘ಈ ಕಾರು ಯಾರದ್ದು?’ ಕೇಳಿದ ತಿಮ್ಮ ಯಜಮಾನ್ರನ್ನ ಮಗ ಒಯ್ದಾಗ ಅದು ಮಗಂದು ಮಗಳು ಒಯ್ದಾಗ ಅದು ಮಗಳದ್ದು ಅರ್ಧಾಂಗಿ ಕ್ಲಬ್ಬಿಗೆ ಒಯ್ದಾಗ ಅದು ಅರ್ಧಾಂಗೀದು ಎಂದ ಯಾವಾಗ ನಿಮ್ದಾಗುತ್ತೆ ಯಜಮಾನ್ರೇ? ಪುನಃ ಕೇಳಿದ ತಿಮ್ಮ ಅದನ್ನು ಗ್ಯಾರೇಜಿಗೆ ಒಯ್ದಾಗ...

ನಾನು ಚಿತ್ರಿಕನಲ್ಲ ಆದರೂ ಬಾಳಿನೊಂದು ಹಾಳೆಯಲಿ ಚಿತ್ತಾರ ಬರೆಯ ಬಯಸಿದೆ. ನನ್ನ ಬೆರಳುಗಳಲ್ಲಿ ರೇಖೆಗಳನ್ನೆಳೆಯುವ ಕಸುವಿಲ್ಲ ಕುಸುರಿ ಕೆಲಸದ ಚತುರತೆಯಿಲ್ ಬಣ್ಣಗಳ ಬಾಂಡಲಿಯೂ ನನ್ನಲ್ಲಿಲ್ಲ. ಆದರೂ ಆಸೆ – ಬಾಳ ಕೊನೆಯ ಸಂಪುಟದ ಒಂದು ಹಾಳೆಯ...

ನನ್ನಿಂದ ದೂರವಾಗಲು ಮಾಡು ಏನೆಲ್ಲ, ಈ ಉಸಿರಿರುವ ತನಕ ನೀನು ನನ್ನವನೇ; ನಿನ್ನೊಲವು ತೀರಿತೋ ನನಗೆ ಬಾಳೇ ಇಲ್ಲ, ಬಾಳಿಗವಲಂಬನೆ ನಿನ್ನೊಂದು ಸ್ನೇಹವೇ. ನನಗಿಲ್ಲ ಬಹು ದೊಡ್ಡ ಕೇಡು ಘಟಿಸುವ ಭಯವೆ, ಅತಿ ಸಣ್ಣ ಹಾನಿಗೇ ಈ ಬಾಳು ಕಳಚಲಿದೆ; ನೆಚ್ಚಬೇಕಿ...

ಮಾಯಾಯುದ್ಧ ಮರುದಿವಸ, ಸೂರ್ಯೋದಯಕ್ಕೆ ಮೊದಲೇ ಎಚ್ಚೆತ್ತ ಇಂದ್ರಜಿತುವು ಸ್ನಾನ, ಪೂಜೆ, ಮುಗಿಸಿ, ಸುಖಕರವಾದ ಸುಗ್ರಾಸ ಭೋಜನವನ್ನು ಮಾಡಿ ಯುದ್ಧಕ್ಕೆ ಹೊರಡಲು ಸಿದ್ಧನಾದನು. ಇಂದ್ರಜಿತುವಿನ ಪತ್ನಿ ಆರತಿಯನ್ನು ಮಾಡಿ ಹಣೆಗೆ ರಕ್ಷೆಯನ್ನಿಟ್ಟು ಜಯವಾ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...