(ಕ್ಯಾಂಡಿಯಾ ನಡುಗಡ್ಡೆಯ ಹತ್ತಿರ) ಕತ್ತಲೆಯ ಬರವನ್ನು ಸಾರುವಂತಹ ಕೊಂಬು ಅಂಬುಧಿಯೊಳಾಗಿಹುದು ಬೂದಿಬೆಳಕಿನ ಕಂಬ,- ಕಂಬ ಮರೆಯಾಗುತ್ತ, ಕೊಂಬು ಕಡೆಗಾಗುತ್ತ ನಿಶೆ ಬಂತು ದಶ ದಿಶೆಯಲಿ; ಚಂದ್ರಾಮಗಿಹುದೊಂದು ಕೋಡೆಂದು ಹಾಡಿನಲಿ ನುಡಿದಿದ್ದರಾಂಗ್ಲ ಕವಿಗಳು. ಕಂಡೆನದನಿಂದು: ಸಾಂದ್ರರಜನಿಯನಾಳ್ಪ ಚದುರಚ೦ದ್ರನ ತಲೆ...

ತುಂಬಿ ಬಂದ ಕಡಲಿಗೆ ಎಲ್ಲಿ ಅಂಕುಶ ಕಟ್ಟೆಯೊಡೆದ ಭಾವಕೆ ಇಹುದೆ ಕಲ್ಮಶ? || ಕಣ್ಣ ಕಣ್ಣ ಸೆಳೆತ ಅದಕೆ ಹೃದಯ ಮಿಡಿತ ತಡೆವರಾರು ಇಲ್ಲಿ? ಜೀವ ಸಹಜ ತುಡಿತ ಭಾವ ಸಹಜ ಯಾನ ಅದಕೆ ಯಾವ ನಿಯಮ? ಅದರ ದಿಕ್ಕು ಅದಕೆ ನಮ್ಮ ದಿಕ್ಕು ನಮಗೆ ತುಟಿಯ ಮೇಲೆ ನವಿಲು...

ನಾನು, ನೀನು ಬಾಳಿನಲ್ಲಿ ಒಬ್ಬರನ್ನೊಬ್ಬರು ನಂಬದಿದ್ದರೆ ಇರುವುದೇನು ಹೊಂದಿಕೆ? ಹೆಜ್ಜೆ, ಹೆಜ್ಜೆಗೆ ಅನುಮಾನಿಸುತ್ತ ನಡೆದರೆ ಕಾಣ ಬಹುದೇನು ನೆಮ್ಮದಿ? ತಪ್ಪು, ಒಪ್ಪು ಸಹಜ ಅನುಸರಿಸಿ ಕೊಂಡು ಹೋಗದಿದ್ದರೆ ಆಗುವವೇನು ಊರ್ಜಿತ? ದಿನ, ದಿನಕೆ ಕಷ್ಟಗ...

ಯಾರಿಗೆ ಏನೆಲ್ಲ ಕೊಟ್ಟೆ ಯಾರಿಂದ ಏನೆಲ್ಲ ಪಡೆದೆ? ಪ್ರೀತಿ, ಸ್ನೇಹ, ಕರುಣೆ ಕೂಡಿದೆ. ಸೇಡನ್ನು ಕೇಡಿನಿಂದಲೂ ಸಂಚನ್ನು ವಂಚನೆಯಿಂದಲೂ ಗುಣಿಸಿದೆ ಪ್ರೇಮವನ್ನು ಕಾಮನೆಯಿಂದ ಭಾಗಿಸಿದೆ. ಆನಂದ-ಅನುಭೂತಿಯ ಮೂಲ? ತಡಕಾಡಿದೆ… ಲೆಕ್ಕ ಪಕ್ಕಾ ಹೌದ...

ಆನಂದನಿಗಿಂದು ಆನಂದವಿಲ್ಲ. ಆತನ ಮೋರೆಯಲ್ಲಿ ನಿರಾಶೆಯು ರೂಪುಗೊಂಡು ನೆಲೆನಿಂತಂತಿದೆ. ತಾನಿದ್ದ ಹೋಟೆಲಿನ ಕೋಣೆಯೊಂದರಲ್ಲಿ ಮೊಣಕೈಗಳನ್ನು ಮೇಜಿಯ ಮೇಲೂರಿ ಚಿಂತೆಯ ಕಂತೆಯಂತಿದ್ದ ತನ್ನ ತಲೆಯನ್ನು ಅಂಗೈಗಳಿಂದಾಧರಿಸಿ ಮುರುಕು ಕುರ್ಚಿಯ ಮೇಲೆ ಕುಳಿತ...

ನಿದ್ದೆ ಬರುವುದುಂಟೆ ದಿಂಬಿಲ್ಲದೇ ಮಲಗುವುದಕ್ಕಂತೂ ಇರಲೇ ಬೇಕು ದಿಂಬು ತಲೆಗೆ ಆರಾಮು ಮನಕೆ ಹಿತ ಹೆಂಡತಿ ಹಾಕಿದ ಹೂವೊಂದಿದ್ದರೆ ಗಮ್ಮತ್ತೆ ಬೇರೆ ಸುಖ ನಿದ್ರೆಯಲಿ ಕನಸಿನ ಮೇಲೆ ಕನಸುಗಳು ಶಯನೋತ್ಸವಕೆ ಬೇಕು ಮೋಹಕ ದಿಂಬು ಅಂಚಿನಲಿ ನಯನ ಮನೋಹರ ಕು...

ಹೊತ್ತು ಏರುವ ಮುನ್ನ ಮುತ್ತು ಸುರಿಯುವ ಮುನ್ನ ಅಸ್ತಂಗತನಾದನು ರವಿಯು. ಕತ್ತಲಾಯಿತು ಜೀವನ. ಬರಿದಾಯಿತು ಒಡಲು ಬತ್ತಿ ಹೋಯಿತು ಒಲವು ನಿನ್ನ ನೆನಪಲ್ಲಿ ಕೊಚ್ಚಿ ಹೋಯಿತು ಜೀವಿಸುವ ನಿಲುವು. ಯಾವ ಜನ್ಮದ ವೈರಿ ನೀನು ಈ ಜನ್ಮದಲಿ ಬಂದು ನನ್ನ ಮಡಿಲು ...

ಹೋಗಿ ಬರಲೇ ? ನನ್ನ ಕೈಗೆಟುಕದವ ನೀನು, ನೀನು ಸಹ ಬಲ್ಲೆ ನಿನ್ನೆತ್ತರವ, ಅದ ನುಡಿವ ರಾಜಸನ್ನದು ನಿನ್ನ ಮುಕ್ತನನು ಮಾಡಿದೆ. ನಾನು ನಿನ್ನಲ್ಲಿಟ್ಟ ಸ್ನೇಹ ಪ್ರೀತಿಗಳೆಲ್ಲ ಇನ್ನಿಲ್ಲ, ಇದ್ದೀತು ಹೇಗೆ ಒಪ್ಪದೆ ನೀನೆ ? ಈ ಭಾಗ್ಯಕ್ಕೇನು ಅರ್ಹತೆ ತಾನ...

ವಿಭೀಷಣನ ನಿರ್ಗಮನ “ಅಗ್ರಜಾ ಇದಿಷ್ಟು ವಾಲಿ ಸುಗ್ರೀವರ ವೃತ್ತಾಂತ. ನೀನೇ ಯೋಚಿಸಿ ನೋಡು, ಶ್ರೀರಾಮನಲ್ಲೇನಿದೆ ತಪ್ಪು; ಪರಸ್ತ್ರೀಯರನ್ನು ಅಪಹರಿಸಿ ಭೋಗಿಸಿದವನಿಗೆ ಸರಿಯಾದ ಶಿಕ್ಷೆಯಾಯಿತು.” “ಅಂದರೆ ನೇರವಾಗಿ ಬೆರಳು ತೋರಿಸ...

ಇರುಳೆಲ್ಲ ಹಣ್ಣಾಗಿ ಬೆಟ್ಟಿಂಗಳಾದಂತೆ ಬೇಸಿಗೆಯ ಬಿಸಿ ಬಾನಬಸಿರಿನಲ್ಲಿ ಕಡಲೆದೆಯ ಉಪ್ಪುಂಡು ನೀರ ಮುತ್ತಾದಂತೆ ಚಿಗುರೇಳುವೊಲು ಮಣ್ಣ ಮಾಸಿನಲ್ಲಿ ನಂಜೆದೆಯ ಆಳದಲಿ ಮಡಗಿದ್ದ ಕಾರುಣ್ಯ ಝರಿಯೆದ್ದು ಮೇಲಕ್ಕೆ ಹರಿದಹಾಗೆ ಹೂವಗಲ್ಲಕೆ ಸೂಜಿದುಟಿಯು ತಾಕ...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...