Home / Kannada

Browsing Tag: Kannada

ತಂದೆ-ತಾಯಿಯ ಮುದ್ದಿನ ಮಗನಾಗಿ ಸಹೋದರ-ಸಹೋದರಿಯರ ಮಮತೆ-ಕರುಣೆಯ ಸಹೋದರನಾಗಿ ಕೈಹಿಡಿದ ಸತಿಗೆ ಪ್ರೀತಿಯ ಅಕ್ಕರೆ ತೋರುವ ಪತಿಯಾಗಿ ತನ್ನ ಅತ್ತೆ ಮಾವನಿಗೆ ವಿಶ್ವಾಸ ಸುತ್ತುವರಿದಿರುವ ಆತ್ಮೀಯ ಬಂದು ಕುಟುಂಬಕ್ಕೆ ಸ್ನೇಹಿತನಾಗಿ ಉತ್ಸಾಹ ಆನಂದ ತುಂಬು...

ಮತ್ತೆ ಅಳಿದುಳಿದ ಮಂದಿ ಹೊರಟಾಗ ಕತ್ತಲೆಗೆ ದೂಳು ಹೊಗೆ ಮತ್ತು ಶಬ್ದ ನಿಂತಾಗ ಕತ್ತಲೆಗೆ ಬದುಕಿ ಉಳಿದ ಭೂಮಿಯತ್ತ ನೋಡಿದಾಗ ಕತ್ತಲೆಗೆ ಕಂಡದ್ದು ಕಾಣಿಸಲಿಲ್ಲ ಕೇಳಿದ್ದು ಕೇಳಿಸಲಿಲ್ಲ ಸಮುದ್ರ ಕೊರೆದು ಹೊಡೆವ ಧ್ವನಿ ಮಾತ್ರ ಕೇಳಿಸಿತು-ಮನುಷ್ಯ ಧ್ವ...

ಹೊರಟೆ ಎಲ್ಲಿಗೆ ಅಭಿಸಾರಿಕೆ ನಿರ್ಧಯಳೇ ಕಂದನ ಕರೆಗೆ ಬಿಂಕ ಬಿನ್ನಾಣವ ಉಟ್ಟು ಮುತ್ತು ರತ್ನವ ತೊಟ್ಟು ಹೊರಟೆ ಎಲ್ಲಗೆ ನೀ ಎಲ್ಲಿಗೆ? ಈ ಸೌಂದರ್ಯದ ಪ್ರಖರತೆ ಆಗಬಾರದೆ ಅತ್ಮದ್ದು ಹಿಂದೊಮ್ಮೆ ಹೊರಟಿದ್ದಳು ಅಕ್ಕ ದೂರಾಗಿಸಲು ಮನದೊಳಗಿನ ದುಃಖ ಭವಬಂಧ...

ಇವನೊಬ್ಬನಿದ್ದಾನಲ್ಲಾ ಈ ಒಳಗಿನವನು? ಅಬ್ಬಬ್ಬಾ ಇವನದೆಂತಾ ಮಂಗನಾಟ? ನನ್ನ ಬೊಗಸೆಯನ್ನೂ ಮೀರಿ ನೂರು ನೋಟ! ಪಾತಾಳದಲ್ಲೇ ಕುಬ್ಜಳಾದಾಗ ಮೇಲೆತ್ತಿ ಗತ್ತಿನಿಂದ ಶಿಖರವೇರಿ ನಿಂತಾಗ ಕೆಳಕ್ಕೊತ್ತಿ, ತಪ್ಪುಗಳೇ ಅಪರಾಧವೆಂಬಂತೆ ಚುಚ್ಚಿ ದೌರ್ಬಲ್ಯಗಳ ಸಧ...

ಮೋಹದಿಂದ ಬೆಸೆದುಕೊಂಡು ತತ್ತಿಗಳನ್ನಿಟ್ಟು ಸರದಿಯಲ್ಲದಕೆ ಕಾವು ಕೊಟ್ಟು, ಹೊರಬಂದ ಬೆಂಕಿ ಕೆಂಡದ ಕೊಂಡೆಬಾಯಿಗೆ ಗುಟುಕನ್ನಿಟ್ಟು ಪುಟ್ಟ ಪುಟ್ಟ ರೆಕ್ಕೆಪುಕ್ಕ ಹುಟ್ಟಿದ ಪುಟ್ಟನಿಗೆ ಕುಪ್ಪಳಿಸುವುದ ಕಲಿಸಿ ಹಾರಿಬಿಟ್ಟೆವು ನೋಡು ಗಗನಕ್ಕೆ ಅದೀಗ ಸು...

ಪುಟ್ಟ ಹೃದಯನಾದೊಡೆ ಏನು? ಹರುಷ ಹೊನಲು! ವಿರಸವರಿಯದ ಸರಸ ಸೊಗಸು ಏನು? ನಿಮ್ಮ ಜೀವನರಾಗ ಎನಗಿಂತ ಬಲು ಮಿಗಿಲು ಸುಖಜನ್ಮ ಸಾರ್ಥಕತೆ ನಿಮಗೆ ಏನು? ಸರ್ರೆಂದು ಬುರ್ರೆಂದು ಹಾರುವಿರಿ! ಎಲ್ಲಿಗೋ ? ಆಚೆಯಾ ಗಿಡದ ಪಕ್ಕದಾ ಹೊಲಕೋ? ಗುಡ್ಡದೋರೆ‌ಇಂದಿಳೆವ...

ನಡೆದಿದೆ ಪೂಜಾರತಿ ವಿಶ್ವದೇಹಿಗೆ ನಭದ ನೀಲ ತಳಿಗೆಯಲ್ಲಿ ಚುಕ್ಕಿ ಚೆಲ್ಲಿವೆ, ರವಿ ಚಂದಿರ ನೀಲಾಂಜನ ಜ್ವಲಿಸಿ ಉರಿದಿವೆ ಚಂದನವನ ಚಾಮರ ಬೀಸುತಲಿದೆ ಪರಿಮಳ, ಭೂಕಂಠದಿ ಹೊಮ್ಮಿದೆ ಹಕ್ಕಿ ಕಲರವ ಕೋಟಿ ಕೋಟಿ ಗಿಡಮರ ಚಿತ್ರಾಂಕಿತ ಕಂಬ ರಾಶಿರಾಶಿ ಬಣ್ಣದ...

ಪ್ರೇಮಿಗಳು ಎಲ್ಲೆಂದರಲ್ಲಿ ತಮ್ಮ ಹೆಸರಿನ ಹಚ್ಚೆ ಕೊರೆದು ದಾಖಲಿಸಿಕೊಳ್ಳುವುದ ನೆನಪಿಸುತ ನಾನೂ….. ಮರುಭೂಮಿಯಲಿ ಹೆಜ್ಜೆ ಮೂಡಿಸಲು ಹಿಮದಲಿ ಅಕ್ಷರ ಕೆತ್ತಲು ಸಮುದ್ರದಲಿ ಪ್ರೇಮ ದೋಣಿ ಬಿಡಲು ಆಕಾಶದಲಿ ಕಾಮನಬಿಲ್ಲು ಮೂಡಿಸಲು ಹೋದೆ…...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...