ಹೊರಟೆ ಎಲ್ಲಿಗೆ ಅಭಿಸಾರಿಕೆ
ನಿರ್ಧಯಳೇ ಕಂದನ ಕರೆಗೆ
ಬಿಂಕ ಬಿನ್ನಾಣವ ಉಟ್ಟು
ಮುತ್ತು ರತ್ನವ ತೊಟ್ಟು
ಹೊರಟೆ ಎಲ್ಲಗೆ ನೀ ಎಲ್ಲಿಗೆ?
ಈ ಸೌಂದರ್ಯದ ಪ್ರಖರತೆ
ಆಗಬಾರದೆ ಅತ್ಮದ್ದು

ಹಿಂದೊಮ್ಮೆ ಹೊರಟಿದ್ದಳು ಅಕ್ಕ
ದೂರಾಗಿಸಲು ಮನದೊಳಗಿನ ದುಃಖ
ಭವಬಂಧನವ ತೊರೆದು
ಚೆನ್ನನ ಬೆನ್ನು ಹಿಡಿದು,
ಅಂದು ಆತ್ಮಸಾಕ್ಷಾತ್ಕಾರವಾದರೆ
ಇಂದು?

ನೀ ಎನ ತೊರೆದು ಹೊರಟಿರುವೆ
ನಿನಗ್ಯಾವ ಚೆನ್ನ ಕಾದಿಹನು
ಇನ್ನೊಬ್ಬ ಅಕ್ಕ ನೀನಾಗದಿದ್ದರೂ
ಆಗಬೇಡ ನೀ ಅಭಿಸಾರಿಕೆ
ಬೇಡ ಬೇಡ ಸಖಿ
ನಿನ್ನಧಃಪತನದ ಗತಿ
ಕೊಟ್ಟದ್ದಲ್ಲ ವಿಧಿ
ನೀನೇ ಅಗ್ನಿಯನ್ನಪ್ಪಿದರೂ
ಅಗ್ನಿಯೇ ನಿನ್ನನಪ್ಪಿದರೂ
ಸುಡುವುದು ನಿನ್ನೊಡಲು ಮಾತ್ರ
*****