ಪಾಪಿಯ ಪಾಡು – ೩

ಪಾಪಿಯ ಪಾಡು – ೩

ಇದಾದ ಸ್ವಲ್ಪ ದಿನಗಳಲ್ಲಿಯೇ ಗ್ರಾಮಾಧಿ ಕಾರಿಗೂ ಜೇವರ್ಟ ನಿಗೂ ಪ್ರಬಲವಾದ ಚರ್ಚೆಯು ನಡೆಯಿತು. ಫಾಂಟೈನ್ ಎಂಬ ಬಡ ಹೆಂಗಸು ತನ್ನನ್ನು ಬೀದಿಯಲ್ಲಿ ಅವಮಾನ ಪಡಿಸಿದ ಯಾವ ನೋ ಒಬ್ಬ ಪುರುಷನ ಮೇಲ್ಯರಿದು ಜಗಳವಾಡಿದಳೆಂಬ ತಪ್ಪಿತ ಕ್ಕಾಗಿ ಜೀವರ್ಟನು ಅವಳನ್ನು ದಸ್ತಗಿರಿ ಮಾಡಿದ್ದನು. ಇವನು ಆ ಊರಿನ ಸೊಗಸುಗಾರರಲ್ಲಿ ಒಬ್ಬನಾದ ತರಣನು. ಇವನು ಬಹಳ ಧನಿಕನಾಗಿ ದೊಡ್ಡ ಪದವಿಯಲ್ಲಿದ್ದುದರಿಂದ ಚೇವರ್ಟನು ಇವನಲ್ಲಿ ಬಹು ದಾಕ್ಷಿಣ್ಯವನ್ನಿಟ್ಟು ಯಾವಾಗಲೂ ಅವನಿಗನು ಕೂಲವಾಗಿಯೇ ಇದ್ದನು, ಫಾಂಟೆಸಳನ್ನು ಬಂದೀಖಾನೆಗೆ ಎಳೆದೊಯ್ಯಲು ಅವನು ಮೂರು ಮಂದಿಗೆ ಆಜ್ಞೆ ಮಾಡಿದನು. ಪಾಪ ! ಆ ಹೆಂಗಸು ತಾನು ನಿರಪರಾಧಿಸಿಯೆಂದು ಎಷ್ಟೋ ಹೇಳಿಕೊಂಡಳು. ಆದರೂ ಅವನು ‘ ನೀನು ಆರು ತಿಂಗಳು ಸೆರೆಮನೆ ಯಲ್ಲಿರಬೇಕು,’ ಎಂದುತ್ತರ ಕೊಟ್ಟನು.

ಆ ಹೆಂಗಸಿಗೆ ಕೊಸೆಟ್ ಎಂಬ ಮಗುವಿದ್ದಿತು. ಆ ಮಗುವಿನಲ್ಲಾದರೂ ಕನಿಕರವಿಟ್ಟು ತನ್ನಲ್ಲಿ ದಯೆ ತೋರಿಸ ಬೇಕೆಂದು ಅವಳು ಬಹಳವಾಗಿ ಬೇಡಿಕೊಂಡಳು ಈ ಮಗು ವನ್ನು ಬೇರೊಂದೂರಿನಲ್ಲಿದ್ದ ಒಂದು ಸತ್ತ್ರದ ಯಜಮಾನನೂ ಅವನ ಪತ್ನಿಯ ಸಹ, ತಮಗೆ ಇವಳಿಂದ ಬರಬೇಕಾಗಿ ಹಣ ಕ್ಯಾಗಿ, ತಮ್ಮ ವಶದಲ್ಲಿಯೇ ಇಟ್ಟುಕೊಂಡಿದ್ದರು. ತಾಯಿ ಯು ಸೆರೆ ಮನೆಯನ್ನು ಸೇರಿ ಆ ಮಗುವಿನ ಜೀವನಕ್ಕಾಗಿ ಹಣ ವನ್ನು ಕಳುಹಿಸದೆ ಹೋದರೆ ಆ ಸತ್ತ್ರದವನು ಮಗುವನ್ನು ದಿಕ್ಕು ಪಾಲು ಮಾಡಿಬಿಡುವನು. ಹೀಗಿದ್ದರೂ, ಅವಳು ಎಷ್ಟು ಆರ್ತೆ ಯಾಗಿ ಮೊರೆಯಿಟ್ಟರೂ ಜೇವರ್ಟನ್ನು, ಅವಳ ಪ್ರಾರ್ಥನೆಗೆ ಸ್ವಲ್ಪವೂ ಕಿವಿಗೊಡದೆ ಹೋದನು.

‘ಹೊರಡು ; ನಾನೆಲ್ಲವನ್ನೂ ಕೇಳಿದುದಾಯಿತು. ನಿನ್ನ ಗೋಳೆಲ್ಲವೂ ಮುಗಿಯಿತಷ್ಟೆ ? ಇನ್ನು ಒಂದು ಕ್ಷಣವೂ ವಿಳಂಬ ಮಾಡದೆ ಹೊರಟು ಹೋಗು, ನಿನಗೆ ಆರು ತಿಂಗಳು ಕಾರಾಗೃಹ ವಾಸವನ್ನು ವಿಧಿಸಿದೆ. ದೇವರೇ ಪ್ರತ್ಯಕ್ಷನಾಗಿ ಒಂದರೂ ಈ ವಿಧಿಯನ್ನು ತಪ್ಪಿಸಲಾರ ; ಹೊರಡು,’ ಎಂದು ಜೇವರ್ಟನು ಗಜರಿದನು.

ಇದಕ್ಕೆ ಕೆಲವು ನಿಮಿಷಗಳ ಮೊದಲೇ, ಮಾನ್‌ಸಿಯುರ್ ಮೇಡಲಿನನು ಇವರಿಗೆ ಕಾಣದಂತೆ ಅಲ್ಲಿ ಬಂದು, ಮೆಲ್ಲನೆ ಬಾಗಿ ಲನ್ನು ಮುಚ್ಚಿ, ಕದಕ್ಕೆ ಒರಗಿಕೊಂಡು ನಿಂತು, ಫಾಂಟೈನಳ ಅತ್ಯಂತ ದೈನ್ಯದ ಗೋಳೆಲ್ಲವನ್ನೂ ಕೇಳುತ್ತಿದ್ದನು. ಆ ಕ್ಷಣವೇ ಆತನು ಫಾಂಟೈನಳನ್ನು ಬಿಡುಗಡೆ ಮಾಡುವಂತೆ ಜೇವರ್ಟನನ್ನು ಬಲಾತ್ಕರಿಸಿ, ಅವನಿಗೆ ಅಲ್ಲಿಂದ ಹೊರಟು ಹೋಗುವಂತೆ ಆಜ್ಞೆ ಮಾಡಿದನು,

ಜೀವರ್ಟನು ಹೊರಟು ಹೋದಮೇಲೆ ಮಾನ್‌ಸಿಯರ್ ಮೇಡಲಿನನು ಆ ಹೆಂಗಸಿನ ಕಡೆಗೆ ತಿರುಗಿ, ” ಎಲ, ನೀನು ನನ ಗೇತಕ್ಕೆ ಈ ವಿಚಾರವನ್ನು ತಿಳಿಸಲಿಲ್ಲ ? ಚಿಂತೆಯಿಲ್ಲ. ಈಗ ನಾನು ನಿನ್ನ ಸಾಲವನ್ನು ತೀರಿಸಿ ನಿನ್ನ ಮಗುವನ್ನು ನಿನ್ನ ಬಳಿಗೆ ಕರೆಯಿಸಿ ಕೊಡುತ್ತೇನೆ ; ಅಥವಾ ನೀನಾದರೂ ಅಲ್ಲಿಗೆ ಹೋಗುವಂತೆ ಏರ್ಪಡಿಸುತ್ತೇನೆ. ನೀನು ಈ ಪ್ಯಾರಿಸ್ ನಗರದಲ್ಲಿ ಬೇಕಾದರೂ ಇರು ; ಇಲ್ಲವಾದರೆ ನಿನ್ನಿಷ್ಟಬಂದ ಕಡೆ ಇರು. ನಿನ್ನನ್ನೂ ನಿನ್ನ ಮಗುವನ್ನೂ ನನ್ನ ಪೋಷಣೆಯಲ್ಲಿಟ್ಟುಕೊಳ್ಳುತ್ತೇನೆ. ನಿನಗಿಷ್ಟ ವಿಲ್ಲದಿದ್ದರೆ ಇನ್ನು ಜೀವನಕ್ಕಾಗಿ ನೀನು ಕೆಲಸಮಾಡಬೇಕಾಗಿಲ್ಲ,’ ಎಂದು ಹೇಳಿದನು.

ಆ ಬಡಹೆಂಗಸು ಬಹಳವಾಗಿ ಕೆಮ್ಮಿನಿಂದ ನರಳುತ್ತಿದ್ದಳು. ಅವಳಿಗೆ ಹೊಟ್ಟೆಗಿಲ್ಲದೆ ಈ ಸ್ಥಿತಿಯಾಗಿದ್ದಿತೆಂದು ಕಂಡಿತು. ಮಾನ್‌ಸಿ ಯರ್‌ ಮೇಡಲಿನನ್ನು, ತನ್ನ ಮನೆಯಲ್ಲಿಯೇ ಇದ್ದ ವೈದ್ಯಶಾಲೆಗೆ ಅವಳನ್ನು ಕಳುಹಿಸಿ, ಅಲ್ಲಿದ್ದ ಕೆಲವು ಮಂದಿ ದಯಾಳುಗಳಾದ ದಾದಿಯರ ವಶಕ್ಕೆ ಒಪ್ಪಿಸಿದನು. ಅವಳಿಗಿದ್ದ ಆತುರವೆಲ್ಲವೂ ತನ್ನ ಮಗುವಿಗಾಗಿ, ಗ್ರಾಮಾಧಿಕಾರಿಯು ಕೋಸೆಟ್ಟಳನ್ನು ಕರೆತರು ವಂತೆ ಹೇಳಿ ಕಳುಹಿಸಿದನು, ಆದರೆ ಆ ಸತ್ಯಾಧಿಕಾರಿಯೂ, ಅವನ ಹೆಂಡತಿಯ ಈ ಸಂದರ್ಭದಲ್ಲಿ ತಾವು ಹೆಚ್ಚು ಹಣವನ್ನು ಸಂಗ್ರಹಿಸಬೇಕೆಂಬ ದುರುದ್ದೇಶದಿಂದ ಒಂದರ ಮೇಲೊಂದು ಏನೇನೋ ನೆಸದ ಕಾರಣಗಳನ್ನು ಕಲ್ಪಿಸಿ ಹೇಳುತ್ಯ, ಮಗುವನ್ನು ಕಳುಹಿಸದೆ ನಿಲ್ಲಿಸಿಕೊಂಡಿದ್ದರು. ಕಟ್ಟಕಡೆಗೆ ಗ್ರಾಮಾಧಿಕಾರಿಯು ತಾನೇ ಹೋಗಿಬರಬೇಕೆಂದು ನಿಶ್ಚಯಿಸಿದನು.

ಆತನು ಹೀಗೆ ಹೊರಡುವುದಕ್ಕೆ ಮೊದಲು ಚೆವರ್ಟನು ಅಕ ಸ್ಮಾತ್ತಾಗಿ ಆತನ ಕಚೇರಿಗೆ ಬಂದು, ತನ್ನನ್ನು ಪೊಲೀಸ್ ಕೆಲಸ ದಿಂದ ನಿವೃರ್ತಿ (dismiss) ಮಾಡಿಬಿಡಬೇಕೆಂಬ ವಿಚಿತ್ರ ಪ್ರಾರ್ಥನೆ ಯನ್ನು ಇವನಲ್ಲಿ ವಿಜ್ಞಾಪಿಸಿಕೊಂಡನು.

ಏತಕ್ಕೆಂದು ಮಾನ್ಸಿಯರ್ ಮೇಡಲಿನನು ಕೇಳಿದಾಗ, ಜೇವರ್ಟನು, ತಾನು ಆ ಪ್ಯಾರಿಸ್ ನಗರದ ಪೋಲೀಸು ಇಲಾ ಖೆಯ ಮುಖ್ಯಾಧಿಕಾರಿಗೆ, (Prefecture of Police ) ಗ್ರಾಮಾಧಿಕಾರಿಯ ಹಿಂದೆ ಅಪರಾಧಿಯಾಗಿ ಶಿಕ್ಷೆಯನ್ನನು ಭವಿಸಿದ್ದ ಜೀನ್’ ವಾಲ್ಜೀನನು ಎಂದು ಹೇಳಿಬಿಟ್ಟಿರುವೆನು,’ ಎಂದು ಉತ್ತರ ಕೊಟ್ಟನು.

ಆದರೆ, ಫಾದರ್ ಪ್ರಾಂಸ್‌ ಮ್ಯಾಥ್ಯ ಎಂಬ ಬೇರೊಬ್ಬ ಮನುಷ್ಯನನ್ನು , ಜೀನ್ ವಾಲ್ಜೀನನೆಂದು ದಸ್ತಗಿರಿ ಮಾಡಿದ್ದರು. ಅವನ ವಿಚಾರಣೆಯು ಆ ಮಾರನೆಯ ದಿನ ಆರಾಸ್ ಪಟ್ಟಣದಲ್ಲಿ ನಡೆಯಬೇಕಾಗಿದ್ದಿತು. ಇದರಿಂದ ತಾನು ಮಾಡಿದ್ದು ತಪ್ಪೆಂದು ಬೇವರ್ಟನ ಮನಸ್ಸಿಗೆ ತೋರಿತು.

ಗ್ರಾಮಾಧಿಕಾರಿಯು ಮರುಮಾತನಾಡದೆ ಜೇವರ್ಟನನ್ನು ಕಳುಹಿಸಿ ಕೊಟ್ಟು, ಹೊರಗೆ ಬಂದು, ಮರುದಿನ ಬೆಳಗಿನಜಾವದ ನಾಲ್ಲೂವರೆ ಗಂಟೆಗೆ ಒಂದು ಉತ್ತಮವಾದ ಕುದುರೆಯ ಬಂಡಿ ಯನ್ನು ಸಿದ್ದಪಡಿಸಿರಬೇಕೆಂದು ತನ್ನ ಜನರಿಗೆ ಆಜ್ಞೆ ಮಾಡಿದನು. ರಾತ್ರಿಯೆಲ್ಲವೂ ಇವನ ಆತ್ಮವು ಶಾಂತಿಯಿಲ್ಲದೆ ಅದಿರಿ ಅಲ್ಲಾಡಿ ಹೋಯಿತು. ಸ್ವಸ್ತ್ರ ಪ್ರಾಯವಾದ ಅನೇಕ ಆಲೋಚನಾ ತರಂಗಗಳು ಇವನ ಮನಸ್ಸಿನಲ್ಲಿ ತುಂಬಿ ಕೊಂಡಿದ್ದುವು.

ಅವನಿಗೆ ಆಗತಾನೆ ಏನೋ ವಿಚಿತ್ರವಾಗಿ ನಿದ್ದೆಯ ಮಂಪರ ದಿಂದ ಎಚ್ಚರವಾದಂತೆ ಆಯಿತು, ತಾನು ಮಧ್ಯರಾತ್ರಿಯಲ್ಲಿ ಒಂದು ಕಡಿದಾದ ಬಂಡೆಯಮೇಲಿಂದ ಜಾರು, ಗಡಗಡನೆ ನಡಗುತ್ತ, ಕೆಳಗೆ ಇದ್ದ ಒಂದು ಆಳವಾದ ಕಮರಿಯ ಅಂಚಿನಿಂದ ಬಹು ಪ್ರಯಾಸಪಟ್ಟು ಮೇಲಕ್ಕೆ ಬರಲು ಪ್ರಯತ್ನಿಸುತ್ತಿದ್ದಂತೆ ಅವನ ಮನಸ್ಸಿಗೆ ತೋರಿತು. ಈ ಅಂಧಕಾರದಲ್ಲಿ ಅಪರಿಚಿತನೊಬ್ಬನು ಇವನ ಕಣ್ಣಿಗೆ ಸ್ವಷ್ಟವಾಗಿ ಗೋಚರನಾದನು. ದೈವವು ಈ ಮನುಷ್ಯನನ್ನು ಜೀನ್ ವಾಲ್ಜೀನನೆಂಬ ತಪ್ಪು ಭಾವನೆಯಿಂದ ತನಗೆ ಪ್ರತಿಯಾಗಿ ಆ ಕಮರಿಯೊಳಕ್ಕೆ ತಳ್ಳುತ್ತಿದ್ದಂತೆ ಇವನಿಗೆ ಕಂಡಿತು. ಈ ಕಮರಿಯನ್ನು ಮುಚ್ಚಲು ಅದರೊಳಕ್ಕೆ ತಾನಾಗಲಿ ಮತ್ತೊಬ್ಬ ನಾಗಲಿ ಬೀಳಬೇಕಾದದಾವಶ್ಯಕವಾಗಿದ್ದಂತೆ ಇತ್ತು. ಈಗಿನ ಸಂ ದರ್ಭದಲ್ಲಿ ಆದುದಾಗಲೆಂದು ತಾನು ಸುಮ್ಮನಿದ್ದಂತೆ ತೋರಿತು.

ಕಳೆದ ಎಂಟು ವರ್ಷಗಳೊಳಗೆ ಜೀನ್ ವಾಲ್ಜೀನನು ತನ್ನ ದುರಾಲೋಚನೆ ಮತ್ತು ದುಷ್ಕಾರ್ಯಗಳಿಗಾಗಿ ದುಷ್ಫಲಾನು ಭವವನ್ನು ಪಡೆದುದು ಇದೇ ಮೊದಲು.

ಅವನು ಬಲು ಬೇಸರದಿಂದ ಆ ಚಿಂತೆಯನ್ನು ಒತ್ತಟ್ಟಿಗಿಟ್ಟು, ಇದರ ಅರ್ಥವೇನೆಂಬುದನ್ನು ತನ್ನಲ್ಲಿ ತಾನೇ ಆಲೋಚಿಸುತ್ತ, ‘ ನನ್ನ . ಉದ್ದೇಶವ ನೆರವೇರಿತು,’ ಎಂದುಕೊಂಡನು. ಅವನು ಇಷ್ಟು ದಿನಗಳು ಸತ್ಯವಂತನಾಗಿ ಜನಿಸಿದವರಲ್ಲಿ ಅವನ ಮುಖ್ಯ ವಾದ ಉದ್ದೇಶವು ಯಾವದು’ ಹಿಂದಿನಂತೆ ಪಾಪಕೃತ್ಯಗಳನ್ನು ಮೂಡುವುದನ್ನು ಬಿಟ್ಟು ಯೋಗ್ಯನಾಗಿರುವುದಷ್ಟೆ ! ಆದರೆ ಅವನು ಅದನ್ನು ಬಿಟ್ಟಂತಿರಲಿಲ್ಲ. ಪಾಪ! ಅವನು ತನಗೆ ಮಹಾ ದುಷ್ಕೀರ್ತಿಯನ್ನು ತರುವ ಮತ್ತೊಂದು ಮಹಾಪರಾಧವನ್ನು ಮಾಡಿ, ಮುಚ್ಚಿ ಹೋಗಿದ್ದ ಪಾಪಬುದ್ದಿಯ ದ್ವಾರವನ್ನು ಮತ್ತೆ ತೆರೆದಂತಾಯಿತು. ಹೇಗೆಂದರೆ : ಈಗ ಆವನು ಮತ್ತೆ ಅತಿ ನೀಚನಾದ ತಲೆಯೊಡಕನಂತೆ, ಮತ್ತೊಬ್ಬ ಮನುಷ್ಯನ ಜೀವಿತವನ್ನೇ ಹಾಳುಮಾಡಿ ಅವನ ಸಂತೋಷವನ್ನೂ ಪ್ರಾಣವನ್ನೂ ಕಳೆದು, ಅವನಿಗೆ ಈ ಲೋಕದಲ್ಲಿಯೇ ನಿಲ್ಲಲವಕಾಶವಿಲ್ಲದಂತೆ ಮಾಡುವ ದೊಡ್ಡ ಕೊಲೆಪಾತಕನೇ ಆಗಿದ್ದನು. ಎಂದರೆ, ಒಬ್ಬ ನಿರ್ಭಾಗ್ಯ ನಿಗೆ (ತನಗೆ ಪ್ರತಿಯಾಗಿ ಹಿಡಿಯಲ್ಪಟ್ಟಿದ್ದ ಫಾದರ್‌ ಪ್ಯಾಂಪ್ ಮ್ಯಾಥ್ಯೂಗೆ) ಗ್ಯಾಲಿಯಲ್ಲಿ ಶಿಕ್ಷೆಯನ್ನನುಭವಿಸುವ ಹಾಗೆ ಮಾಡಿ ಅವನನ್ನು ಸಜೀವನಾಗಿ ಸುಡಿಸುವನೋ ಎಂಬಂತಹ ಭಯಂಕರ ಮರಣರೂಪ ದಂಡನೆಗೆ ಗುರಿಮಾಡಿದ್ದನು.

ತನ್ನಿಂದ ಇಷ್ಟು ಅನರ್ಧವುಂಟಾಗಿರುವ ವಿಚಾರವೆಲ್ಲವೂ ಇವನ ಮನಸ್ಸಿಗೆ ಬಂದಾಗ, ಹಿಂದೆ ತನಗೆ ಸದುಪದೇಶ ಮಾಡಿದ ಪಾದ್ರಿಯು ತನ್ನೆದುರಿನಲ್ಲಿ ತನ್ನನ್ನೇ ನೆಟ್ಟ ದೃಷ್ಟಿಯಿಂದ ನೋಡುತ್ತ ನಿಂತಿದ್ದಂತೆ ಇವನಿಗೆ ಕಂಡಿತು. ಪರಮ ಗುಣಶಾಲಿಯೆನಿಸಿದ್ದ ಗ್ರಾಮಾಧಿಕಾರಿ ಮಾನ್‌ಸಿಯರ್ ಮೇಡಲಿನನು ಆ ಪಾದ್ರಿಯ ಕಣ್ಣಿಗೆ ಮಹಾ ದೊಹಿಯಾಗಿಯ, ಗಾಲಿಯಲ್ಲಿ ಗುಲಾಮ ನಾಗಿದ್ದ ಜೀನ್ ವಾಲ್ಜೀನನೇ ಶುದ್ಧನಾಗಿಯ ಕಂಡಂತೆ ಇವನಿಗೆ ತೋರಿತು. ಜನರು ತನ್ನ ವೇಷದಿಂದ ಭ್ರಾಂತರಾಗಿದ್ದರೆಂತಲೂ ಪಾದ್ರಿಯು ತನ್ನ ನಿಜತ್ವವನ್ನು ಬಲ್ಲನೆಂತಲೂ, ಜನರು ತನ್ನ ಸಜೀವ ವಿಗ್ರಹವನ್ನು ಮಾತ್ರ ನೋಡಿದ್ದರೆಂತಲೂ ಪಾದ್ರಿಯು ತನ್ನ ಮನಸ್ಸಾಕ್ಷಿಯಲ್ಲಿ ಹೊಕ್ಕು ನೋಡಿದ್ದ ನೆಂತಲೂ ಇವನ ಮನಸ್ಸಿಗೆ ನಿರ್ಧರವಾಯಿತು.

ಈಗ ಏನು ಮಾಡಬೇಕು ! ತಾನು ಆರಾಸ್ ಪಟ್ಟಣಕ್ಕೆ ಹೋಗಿ ಅಪರಾಧಿಯಾದ ಜೀನ್ ವಾಲ್ಜೀನನನ್ನು ದಂಡನೆಗಾಗಿ ಒಪ್ಪಿಸಿ, ನಿರಾಪರಾಧಿಯಾದ ಷ್ಯಾಂಪ್ ಮ್ಯಾಥ್ಯೂನನ್ನು ಶಿಕ್ಷೆ ಯಿಂದ ಪಾರುಮಾಡಬೇಕು. ಇದಲ್ಲವೇ ಆತ್ಮಾರ್ಪಣ ಕಾರ್ಯ ಗಳಲ್ಲಿ ಅತ್ಯಂತ ಸ್ತ್ರೋತ್ರಾರ್ಹವಾದುದು ! ಈ ಮನುಷ್ಯನ ಜೀವ ಮಾನದ ವಿಜಯ ಕಾರ್ಯಗಳಲ್ಲಿ ಅತ್ಯಂತ ಹೃದಯ ಭೇದಕವಾ ದುದು ! ಅಹುದು ; ಇದೇ ಇವನು ಮಾಡಬೇಕಾದ ಕಡೆಯ ಕರ್ತವ್ಯ ! ಇವನು ಆ ಕಾರ್ಯವನ್ನು ಮಾಡಲೇಬೇಕು. ಅಯ್ಯೋ ! ದುಷ್ಟ ವಿಧಿಯೇ ! ಅವನು ಭಗವಂತನ ದೃಷ್ಟಿಯಲ್ಲಿ ಪರಿಶುದ್ದನೆನಿಸಿ ಕೊಳ್ಳಬೇಕಾದರೆ ಜನರ ಕಣ್ಣಮುಂದೆ ಅಪಕೀರ್ತಿಗೆ ಮತ್ತೆ ಬೀಳ ಬೇಕಾಯಿತು. ಆಗ ತಾನು ಮಾತನಾಡುತ್ತಿರುವೆನೆಂದು ತನಗೇ ಗೋಚರವಿಲ್ಲದೆ ಅವನು, ‘ಆಗಲಿ ! ಇದೇ ಮಾರ್ಗವನ್ನೇ ಅನುಸರಿಸಬೇಕು. ಕರ್ತವ್ಯ ವನ್ನು ಮಾಡುವುದೇ ಸರಿ, ಆ ಮನುಷ್ಯನನ್ನು ಉಳಿಸುವದೇ ಸಿದ್ದಾಂತ,’ ಎಂದು ತನ್ನ ಮನಸ್ಸಿನಲ್ಲಿ ಉಂಟಾದ ಭಾವನೆಯನ್ನು ಗಟ್ಟಿಯಾಗಿ ಉಚ್ಚರಿಸಿದನು.

ಉತ್ತರ ಕ್ಷಣದಲ್ಲಿಯೇ ಇವನ ಮನಸ್ಸಿಗೆ ಇನ್ನೊಂದಾಲೋ ಚನೆಯು ಹೊಳೆಯಿತು. ತಾನು ತನ್ನ ಅಪರಾಧಿತ್ವವನ್ನು ಒಪ್ಪಿಕೊಂ ಡು ನಿಜಾಂಶವನ್ನು ವ್ಯಕ್ತಪಡಿಸಿದರೆ, ತನ್ನ ಧೀರತ್ವವನ್ನೂ, ಕಳೆದ ಎಂಟು ವರ್ಷಗಳಿಂದ ತಾನು ಸತ್ಯಶೀಲನಾಗಿದ್ದುದನ್ನೂ ತಾನು ದೇಶಕ್ಕೆ ಮಾಡಿರುವ ಉಪಕಾರವನ್ನೂ ಗೌರವಿಸಿ ಒಂದು ವೇಳೆ ತನ್ನನ್ನು ಕ್ಷಮಿಸಿದರೂ ಕ್ಷಮಿಸಬಹುದೆಂದು ಇವನಿಗೆ ತೋರಿತು.

ಆದರೆ ಈ ಭಾವವು ಬಹಳ ಹೊತ್ತು ಇವನ ಮನಸ್ಸಿನಲ್ಲಿ ನಿಲ್ಲಲು ಅವಕಾಶವಿರಲಿಲ್ಲ. ಕ್ಷಣಾರ್ಧದಲ್ಲಿ ಹಾರಿ ಹೋಯಿತು. ತಾನು ಪೆಟಿಟ್ ಜರ್ವೆಲ್ ಎಂಬ ಮಗುವಿನಿಂದ ನಲವತ್ತು ಸೌ ಗಳನ್ನು ಕದ್ದ ಅಪರಾಧಿ ಎಂದು ಜ್ಞಾಪಕವಾಯಿತು. ಈಗ ತನಗೆ ಕ್ಷಮೆ ದೊರೆತರೂ ಮುಂದೆ ಈ ಮರೆಮಾಚಿದ ಅಪರಾಧಕ್ಕಾಗಿ ನ್ಯಾಯರೀತಿಯಾಗಿ ತನಗೆ ಮರಣಾಂತವಾಗಿ ಕ್ರೂರದಂಡನೆಯು ವಿಧಿಸಲ್ಪಡುವುದೇ ನಿಜವೆಂತಲೂ ಆಲೋಚಿಸಿ, ಇವನು ನಿರಾಶೆ ಯಿಂದ ತನ್ನಲ್ಲಿ ತಾನು ಕಿರುನಗೆ ನಕ್ಕನು.

ಹಗಲೆಲ್ಲವೂ ಪ್ರಯಾಣಮಾಡಿ ಆ ರಾತ್ರಿ ಆರಾಸ್ ಪಟ್ಟಣ ವನ್ನು ಸೇರಿದನು. ನ್ಯಾಯಸ್ಥಾನದಲ್ಲಿ ಪ್ರೇಕ್ಷಕ ಜನರು ಕಿಕ್ಕಿರಿದು ನೆರೆದಿದ್ದರು. ಒಳಗೆ ಪ್ರವೇಶಕ್ಕೆ ಅವಕಾಶವು ಇವನಿಗೆ ಹೇಗೋ ದೊರಕಿತು. ಈ ಗುಂಪಿನಲ್ಲಿ ಇವನನ್ನು ಗಮನಿಸುವರು ಯಾರು ! ಎಲ್ಲರ ದೃಷ್ಟಿಯ ಒಂದು ವ್ಯಕ್ತಿಯ ಮೇಲೆಯೇ ಏಕಾಗ್ರವಾಗಿತ್ತು. ನ್ಯಾಯಾಧೀಶನು ಕುಳಿತಿದ್ದ ಗೋಡೆಯ ಎಡಭಾಗದಲ್ಲಿ ಒಂದು ಸಣ್ಣ ಬಾಗಿಲಿನ ಮುಂದೆ, ಮರದ ಕಾಲುಮಣೆಯ ಮೇಲೆ ಕೆಲವು ಮೇಣದ ಬತ್ತಿಗಳನ್ನು ಹಚ್ಚಿಟ್ಟಿದ್ದರು. ಈ ಕಾಲುಮಣೆಯ ಮೇಲೆ ಇಬ್ಬರು ಸಿಪಾಯಿಗಳ ನಡುವೆ ಒಬ್ಬ ಮನುಷ್ಯನು ನಿಂತಿದ್ದನು.

ಇವನಿಗೆ ಕಡೆಯಪಕ್ಷ ಅರವತ್ತು ವರ್ಷಗಳ ವಯಸ್ಸಾಗಿದ್ದಂತೆ ಕಂಡಿತು. ಆದರೂ ಇವನು ಅತ್ಯ೦ತ ಒರಟನಾಗಿಯೂ, ಶುಂಠ ನಾಗಿಯೂ ಮತ್ತು ಭಯಂಕರಾಕಾರನಾಗಿಯ ಕಾಣುತ್ತಿದ್ದನು.

ಜೀನ್ ವಾಲ್ಜೀನನು ಇವನನ್ನು ನೋಡಿದ ಕೂಡಲೆ ತನ್ನನ್ನೇ ತಾನು ನೋಡಿದಂತಾಯಿತು. ಆದರೆ ಆ ವ್ಯಕ್ತಿಗೆ, ತನಗಿಂತ ಸ್ವಲ್ಪ ಹೆಚ್ಚು ವಯಸ್ಸಾಗಿದ್ದಂತೆಯೂ, ರೂಪಿನಲ್ಲಿ ಕೇವಲ ತನ್ನ ಸ್ನೇ ಹೊಂದಿದ್ದರೂ, ಅವನ ಬಿರಿಗೂದಲಿನಿಂದಲೂ ಚಪಲವಾದ ಮತ್ತು ಭಯಂಕರವಾದ ಬಿರಿಗುಡ್ಡೆಗಳಿಂದಲೂ, ಅವನು ಹೊದೆದಿರುವ ಅಂಗವಸ್ತ್ರದಿಂದ ಅವನು ತನ್ನ ಹಾಗೆಯೇ ಇದ್ದಂತೆಯೂ ತೋರಿತು. ಅಲ್ಲದೆ ತಾನು ಗಾಲಿಯಲ್ಲಿದ್ದ ಹತ್ತೊಂಭತ್ತು ವರ್ಷಗಳಲ್ಲಿ ತನಗುಂಟಾಗಿದ್ದಂತಹ ಭಯಂಕ ರಾಲೋಚನೆಗಳಿಂದ ಕೂಡಿ ಅವನೂ ಕ್ರೋಧಾವೇಶಭರಿತನಾಗಿ ದ್ದಂತೆಯೇ ಜೀನ್ ವಾಲ್ಜೀನನಿಗೆ ಕಂಡಿತು.

ಗಡಗಡನೆ ನಡುಗಿ ತನ್ನ ತಾನು, ” ಅಯ್ಯೋ, ದೇವರೇ ! ನಾನು ಮತ್ತೆ ಈ ಸ್ಥಿತಿಗೆ ಬರಬೇಕೇ ?’ ಎಂದುಕೊಂಡನು.

ಜೀನ್‌ ವಾಲ್ಜೀನನಿಗೆ ಚಿತ್ರ ವಿಭಾ೦ತಿಯಾಯಿತು. ಸುತ್ತಲೂ ನೋಡಿದನು. ಎದೆ ಝಲ್ಲೆಂದಿತು. ಕಣ್ಣನ್ನು ಮುಚ್ಚಿ ಅಂತರಾತ್ಮ ದಿಂದ, ” ಇಲ್ಲ, ಇಲ್ಲ. ಎಂದಿಗೂ ಇಲ್ಲ,’ ಎಂದು ಕೂಗಿಕೊಂಡನು.
*****
ಮುಂದುವರೆಯುವುದು

ವಿಕ್ಬರ್ ಹ್ಯೂಗೋ ನ “ಲೆ ಮಿಸರಾ ಬಲ್ಸ್‌”
ಜೆ ಲ ಫಾರ್‍ಜ್ ರವರ ಸಂಕ್ಷೇಪ ಪ್ರತಿಯ ಅನುವಾದ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸತ್ಯ ಸಾಕ್ಷಾತ್ಕಾರ
Next post ವೈನಾಸಿ ಕೋಲೇ

ಸಣ್ಣ ಕತೆ

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…