ದರೆ ಮೇನೆ ಮೀವದೂ ಎತ್ತು | ಅಲ್ಲಿಗೇ ಜಾರೀ ಬಿತ್ತು
ನೋ ವನ್ನು ಮೂಗ್ನಲ್ಲಿ ನತ್ತೂ | ಬನವಾಸೀ ಕೆರಿಯಲ್ಲಿ ಬಿತ್ತೂ || ೧ ||

ಬನವಾಸೀ ಕೆರಿಯಲ್ಲಿ ಬಿತ್ತೂ | ವೈನಾಸಿ ವೈನಾಸಿ ಕೋಲೇ
ಗಾಳೀ ಬೀರಾನೋಂದು ಮೇಲೇ || ೨ ||

ನಾಮ ನಾಮಕೇ ಬಸವಣ್ಣ | ತೇರೂ ತಂದೋ ನಾನಾ
ಕಾಲಕೆ ಮೊಗುದರೆ ಕರತಾವೋ | ಪಾವು ಬಂಗುದಾ ಬಿರತಾವೋ || ೩ ||

ಬತ್ತಾ ಮುಸಲ್ಮಾನರ ತಮ್ಮಾ | ನಾವು ಜೀವಲರುವಲತಂಟ ಇರುತನಕಾ
ಹಲ್ಲಾಮೇನೆ ಹೊಡೀಸುವೇ ಕೊಟ್ಟೆ ಕೊಳೂರ್ಗುಲಲೀಸುವೇ || ೪ ||

ಕೋಡೇ ಕೊಳಗದಲ್ಲಳೀಸುವೇ | ಜೋಡೀ ಗೋಣಿ ತುಂಬಿಸುವೇ
ಜೋಡೀ ಗೋಣೀ ತುಂಬೀಸುವೇ | ನೆತ್ತೀ ಮೇನೋಂದೇರಿಸುವೇ || ೫ ||

ನೆತ್ತೀ ಮೇನೊಂದಿರೀಸುವೇ | ಬೊಂಬೈಲಾಗಬೋಟಿ ತುಂಬಿಸುವೇ
ಬೊಂಬೈಲಾಗಬೋಟಿ ತುಂಬಿಸುವೆ | ಬೊಂಬೈತಾರನಾ ಓಡಿಸುವೇ || ೬ ||

ಬೊಂಬೈತಾರನು ಓಡಿಸುವೇ | ಕುಮಟೀ ಬಂದರದಲಿ ತಾಡಿಸುವೇ
ಕುಮಟೀ ಬಂದರದಲ್ಲಿ ತಾಗಿಸುವೇ | ನೆತ್ತೀ ಮೇನೊಂದೇರಿಸುವೇ || ೭ ||

ನೆತ್ತೀ ಮೇನೋಂದೇರೀಸುವೇ | ಬೊಂಬೈತಾರನು ಓಡಿಸುವೇ
ಬೊಂಬೈ ತಾರನು ಓಡಿಸುವೇ ತಾರಿನ ಪತ್ರನು ಕಳಗಿಸುವೇ || ೮ ||
(ಇಲ್ಲಿ ತಾರು ಕಾಗದಪತ್ರ ಎಂದಿದ್ದು)
*****
ಹೇಳಿದವರು: ಅಪ್ಪು ನಾರಾಯಣ ಹರಕಂತ, ಹೊಲನಗದೆ

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.