ಬಯಕೆ ಕಣ್ಣಿನಭ್ಯರ್ಥಿಗಳೆಷ್ಟೊಂದು ಎನ್ನ ಸುತ್ತ
ಬಯ್ಕು ಬೇಕೆಂಬ ಮಗನ ಕಣ್ಣೆನ್ನತ್ತ
ಬಾಯ್ಬಿಟ್ಟಂಬಾ ಎನುವ ತಾಯಿಗೇನಿಡಲಿ ತುತ್ತ
ಹಾಯೆನಲು ಬಂದು ಪೋಪರೊಲೈಕೆಗಿಲ್ಲಾಗಿದೆ ಚಿತ್ತ
ಮಾಯೆ ಬಯಕೆಗಳಬ್ಬರಕನ್ನ ಚಿತ್ತ ಹಾವಿನ ಹುತ್ತ – ವಿಜ್ಞಾನೇಶ್ವರಾ