ಜೀವನೋದ್ದೇಶ

” ಜೀವನಕ್ಕೆ ಉದ್ದೇಶವೇನು?” ಎಂದು ಒಬ್ಬ ತರುಣನು ಅತ್ಯ೦ತ ಕುತೂಹಲದಿಂದ ಕೇಳಿದನು.

ಸಂಗನುಶರಣನು ಮನಸ್ಸಿನಲ್ಲಿ ಜಗದಂಬೆಯನ್ನು ಸ್ಮರಿಸಿ, ಪ್ರಸ್ತುತ ಪ್ರಶ್ನೆಯನ್ನು ಆಕೆಯ ಸನ್ನಿಧಿಗೊಪ್ಪಿಸಿ, ತನ್ನ ತಲೆಯೊಳಗಿರುವ ವಿಚಾರಗಳ ನ್ನೆಲ್ಲ ಹೊರದೂಡಿ ಜನನಿಯು ನೀಡುವ ವಿಚಾರಗಳನ್ನು ತುಂಬಿಕೊಳ್ಳುವುದಕ್ಕೆ ತನ್ನ ತಲೆಯನ್ನೇ ಬರಿದಾದ ಭಿಕ್ಷಾಪಾತ್ರೆಯನ್ನಾಗಿ ಒಡ್ಡಿದನು. ಒಂದು ಕ್ಷಣ ತಡೆದು ಆ ಮೇಲೆ ಪಡಿನುಡಿಯನ್ನು ಆಡುವುದಕ್ಕೆ ಆರಂಭಿಸಿದನು. ಏನಂದರೆ-

” ಜೀವನಕ್ಕೊಂದು ಉದ್ದೇಶವಿರಲೇಬೇಕು; ” ಅದು ಇದ್ದೇ ಇರುತ್ತದೆ. ಉದೇಶವಿಲ್ಲದ ಜೀವನವು ಹುಚ್ಛು ಅಲೆದಾಟ. ” ಯಾವ ಊರಿಗೆ ಪಯಣ? ” ಎಂದು ‌ಕೇಳಿದವರಿಗೆ ಮರುನುಡಿಯಲಿಕ್ಕಾಗದ ದಾರಿಕಾರನು
ಮುರುಳನೇ ಸರಿ.

ಹುಟ್ಟಿದವನು ಬದುಕುವುದಕ್ಕೆ ಯಾವ ಉದ್ದೇಶವಿರಿಸಿಕ್ಕೊಂಡರೂ, ತನ್ನ ಅರ್ಥದಲ್ಲಿ ಬಾಳುವೆಯನ್ನು ಅಂದಗೊಳಿಸುವುದಕ್ಕಾಗಿಯೇ ಎಂಬುದನ್ನು ಮರೆಯುವಂತಿಲ್ಲ.

ಎಲ್ಲ ಜೀವಿಗಳ ಜೀವನೋದ್ದೇಶಗಳೆಲ್ಲ ಒಂವೇ ತೆರನಾಗಿರುವದಿಲ್ಲ, ಬೇರೆ ಬೇರೆಯೇ ಆಗಿರುತ್ತವೆ ಅವು ಹಿರಿದು-ಕಿರಿದು ಆಗಿರಬಹುದು.

ಅದೆಂಥ ಉದ್ದೇಶ ಸಾಧಿಸಬೇಕಾದರೂ ಮನುಷ್ಯನು ಮೊದಲು ಪರಿಪೂರ್ಣನಾಗಬೇಕಾಗುವದು. ಮನುಷ್ಯನು ಕಲ್ಪವೃಕ್ಷದ ಬೀಜವಿದ್ಧಂತೆ. ಅವನ ಅಂಗೋಪಾಂಗಗಳೆಲ್ಲವೂ ಮೊಳೆತು ಚಿಗುರಬೇಕು. ಅವನು ಕಾಮ ಧೇನುವಿನ ಕರುವಿದ್ದಂತೆ. ಅವನ ಎಳೆಯ ಮೈ-ಕೈಗಳೆಲ್ಲ ಬೆಳೆದು ಬರಬೇಕು. ಅವನು ಚಿಂತಾಮಣಿಯ ಹೆರಳು ಇದ್ದಂತೆ. ಏಣು‌ಏಣಿಗೂ ಬೆಳಕು ಚೆಲ್ಲುವರಿಯಬೇಕು. ಅವನ ಬಾಳಬಟ್ಟಿಲಂ ಪರಸುಬಟ್ಟಲಾಗಬೇಕು.

ಮನುಷ್ಯನು ಪರಿಪೂರ್ಣತೆಗೊಯ್ಯಬೇಕಾಗಿರುವ ಅವನೊಳಗಿರುವ ಅಪೂರ್ಣವಸ್ತುಗಳವವು? ತಿಳಕೊಳ್ಳುವ ತಲೆ, ಪ್ರೀತಿಸುವ ಹೃದಯ, ಕೆಲಸಮಾಡುನ ಕೈ ಅವುಗಳಿಗೆ ಸ್ಥಿರತೆಕೊಡುವ ಚಿತ್ತ. ಇವೇ ನಾಲ್ಕು ಅಪೂರ್ಣವಸ್ತುಗಳು ಮನುಷ್ಯನೊಳಗಿವೆ.

ಅಪೂರ್ಣವಾದ ಈ ವಸ್ತುಗಳನ್ನೇ ಪೂರ್ಣತೆಗೊಯ್ಯುವ ಕೆಲಸವನ್ನು ಹುಟ್ಟಿಬಂದ ಕುನ್ನಿ ಗಳೆಲ್ಲ ಆರಂಭಿಸುತ್ತವೆ. ಅದು ಅರಿತ ಆಚರಣೆ ಅಲ್ಲ; ಅಡ್ಡ ತಿಡ್ಡದ ಜಗ್ಗಾಟ, ಅಸವಿಸಿಮಾಡುವಾಗಲೂ ಒಮ್ಮೊಮ್ಮೆ ಸರಿಯಾದ ಹೆಜ್ಜೆ ಬೀಳುವುದುಂಟು. ಪೂರ್ಣತೆಗೊಯ್ಯುವ ಕೆಲಸದಲ್ಲಿ, ಆಯುಷ್ಯದೊಳಗಿನ ಹೆಚ್ಚುವೇಳೆ ತೊಡಗಿಸಲಿಕ್ಕೆ ಸಾಧ್ಯವಾಗುವುದು: ಕೆಲವರಿಗೆ ಮಾತ್ರ. ಅವರು ಅದಕ್ಕಾಗಿಯೇ ನಿಂತಿರುತ್ತಾರೆ; ಅವರು ಅದಕ್ಕಾಗಿಯೇ ಬದುಕಿ ಉಳಿದಿರುತ್ತಾರೆ. ಅವರಿಗೆ ಯೋಗಿ ಅನ್ನೋಣ; ಅವರು ನಡೆಯಿಸಿರುವ ಧಾವತಿಗೆ
ಯೋಗಸಾಧನ ಅನ್ನೋಣ.

ಯೋಗದ ಹೆಸರು ಕೇಳಿದರೆ ಕಿಡಿಕಿಡಿಯಾಗುವವರೂ ಸಹ ತಮಗೇ ತಿಳಿಯದಂತೆ ಆ ದಾರಿಯನ್ನು ಹಿಡಿದಿರುತ್ತಾರೆ. ಯೊ6ಗಕೈ ಕಟ್ಟುವಿರೋಧಿಗಳಾಗಿ ಇನ್ನೊ೦ದು ನಿಟ್ಟಿಗೆ ಸಾಗಿದ್ದೇನೆನ್ನುನವರೂ ಯೋಗವಲ್ಲದ ಯೋಗ ವನ್ನೇ ವಹಿಸಿದ್ದಾರೆನ್ನಬಹುದು.

ಅಪೂರ್ಣ ವಸ್ತುಗಳನ್ನು ಪೂರ್ಣತೆಗೊಯ್ಯುವ ಎತ್ತುಗಡೆಯನ್ನು ನಡೆಸುತ್ತ ನಿಂತವನು, ವಸ್ತುವಿನ ಅಪೂರ್ಣತೆಯನ್ನು ಗುರುತಿಸುವುದನ್ನು ಅರಿತಿರಬೇಕಾಗುತ್ತದೆ. ಕೊರತೆ ತಿಳಿಯದೆ ತಿದ್ದಿಪಡಿಯೆ೦ತು?

ಇದ್ದ ಕೊರತೆ ತಿಳಿಯಬೇಕಾಗುವಂತೆ, ಆಗುವ ದೋಷವನ್ನೂ ತಿಳಿಯ ಬೇಕಾಗುತ್ತದೆ; ಇವೇ ತನ್ನನ್ನು ತಾನು ಅರಿಯುವುದು.

ತನ್ನ ತಾನರಿಯುವ ಕೆಲಸದಷ್ಟು ಸುಲಭವೂ ಸಹಜವೂ ಸಮೀಪವೂ ಆದ ಕೆಲಸ ಬೇರೊ೦ದಿಲ್ಲ. ಅದು ಸರ್ವ ಸಂಪತ್ತನ್ನು ತಂದೊದಗಿಸುವದು. ಅದು ಸರ್ವಸಂಪನ್ನತೆಯನ್ನು ತಂದು ತುಂಬುವದು. ಸರ್ವಾರಿಷ್ಟಗಳನ್ನು ಕಳೆಯುವ ಮೋಡಿ ಅದರಲ್ಲಿದೆ. ಸರ್ವಾತ೦ಕಗಳನ್ನು ಕರಗಿಸುವ ಗಾಡಿ ಅದರಲ್ಲಿದೆ.

ಅಯ್ಯಾ, ತನ್ನ ತಾನರಿದಡೆ ತಾನೇ ಚಿನ್ಮಯನಾದ ಪರಬ್ರಹ್ಮ ನೋಡಾ
ತಾನೇ ಚಿನ್ನಾದ ಚಿದ್ಬಿ೦ದು ಚಿತ್ಕಳಾಮೂರ್ತಿ ನೋಡಾ.
ತಾನೇ ಸಕಲ ಚೈತನ್ಯ ಚಿತ್ ಸೂತ್ರಧಾರಿ.
ತನ್ನಿ೦ದಧಿಕ ಪರದೈವವಿಲ್ಲ ನೋಡಾ.
ತಾನೇ ಸಚ್ಚಿದಾನ೦ದ ಸ್ವರೂಪವಾದ ಚಿದ್ಘನಲಿಂಗ ನೋಡಾ ಅಪ್ರಮಾಣ ಕೂಡಲಸಂಗಮದೇವಾ.

ದೇವನನ್ನು ಕಾಣುವ ಗುರಿಯಿಟ್ಟುಕೊಂಡವನಾದರೂ, ಮೊದಲು ತನ್ನನ್ನು ತಾನು ಅರಿಯುವುದು ಕ್ರಮಪ್ರಾಪ್ತವಾಗಿದೆ. ತನ್ನನ್ನು ತಾನು ನೋಡಲಾರದವನಿಗೆ ದೇವನೆಂತು ಗೋಚರಿಸುವನು? ನೆಲುವಿಗೆ ನೆಗೆಯ ಲಾರದವನು ಮುಗಿಲಿಗೆ ಜಿಗಿಯಬಲ್ಲನೇ? ತೀರ ಹತ್ತಿರದಲ್ಲಿರುವ ತನ್ನ ಗೊತ್ತು ಕಾಣದವನು ದೂರದ ದೇವನನ್ನು ಕಾಣುವುದು ಸಾಧ್ಯವೇ?

ತನ್ನ ಮೆರೆದು ಜೀವನ ಕಂಡಿಹೆನೆ೦ದೆ೦ಬರು.
ತನ್ನವ ಮರೆದು ದೇವರಕ೦ಡಿಹೆನೆ೦ಬ ಕಾರಣ
ಹರಿಹರಸುರಬ್ರಹ್ಮಾದಿಗಳು ತಲೆ ಕೆಳಗಾಗಿ ಹೋದರು.
ಆ ದೇವರ ಮರೆದು ತನ್ನವನರಿದುದಾದರೆ
ತಾನೇ ದಿಟನೆಂದ ಅಂಬಿಗರ ಚೌಡಯ್ಯ.

ತನ್ನವರಿನಿನ ಸವಿಗ೦ಡವನು ಇನ್ನಾವುದನ್ನೂ ಹಾರನು. ಇನ್ನೇನನ್ನೂ  ಕೋರನು. “ಬ್ರಹ್ಮಪದವಿಯ- ನೊಲ್ಲೆ, ವಿಷ್ಣುಪದವಿಯನೊಲ್ಲೆ ರುದ್ರಪದವಿಯ ನೊಲ್ಲೆ, ನಾನು ಮತ್ತಾವ ಪದವಿಯ ನೊಲ್ಲೆನಯ್ಯ”-ಎ೦ದು ಗಟ್ಟಿಯಾಗಿ ಹೇಳಬಲ್ಲನು.

ಜಗಜ್ಜನನಿಯಾದ ಜಗದೀಶ್ವರಿಯು ಮುಗುಳು ಸೂಸುತ್ತ -“ಸ೦ಗಮ ಶರಣ, ಇಲ್ಲಿ ನನ್ನದೊಂದು ನುಡಿಗೆ ಅವಕಾಶವಿರಲಿ. ಜನಜ೦ಗುಳಿಯೇ, ಕೇಳಿರಿ. ಭಕ್ತಬಾಕುಳಿಯಾದ ಬಸವಣ್ಣನು ಭೂಲೋಕದೊಳಗಿನ ತನ್ನ ಮಣಿಹವನ್ನು ಮುಗಿಸಿಕೊಂಡು ನಮ್ಮ ಬಳಿಗೆ ಬ೦ದಾಗ, ಪರಮೇಶ್ವರನು ಹಿಗ್ಗಿನಿ೦ದ-“ಬಸವ! ಬಾರಯ್ಯ, ಮೃತ್ಯುಲೋಕದೊಳಗೆ ಭಕ್ತರು೦ಟೇ? ಹೇಳಯ್ಯ!” ಎ೦ದು ಕೇಳಿದರೆ, ಆ ಭಕ್ತಿಭಾ೦ಡಾರಿಯು-“ಮತ್ತಾರೂ ಇಲ್ಲಯ್ಯ, ನಾನೊಬ್ಬನೇ ಭಕ್ತನು. ಮೃತ್ಯುಲೋಕದೊಳಗಣ ಭಕ್ತರೆಲ್ಲರೂ ಜ೦ಗನು ಲಿಂಗ ನೀನೇ ಅಯ್ಯ ಕೂಡಲಸಂಗಮದೇವಾ” ಎಂದು ಮರುನುಡಿದನು; ಅದನ್ನು ಕೇಳಿ ನಾವು ಬೆರಗಾದೆವು. ಬಸವಣ್ಣನು ತನ್ನತಾನರಿಯುವ ದಾರಿಯಲ್ಲಿ ನಡೆದು, ತಾನು ದೇವಶಿಶುವೆಂದು ಅರಿತನಲ್ಲದೆ ಮರ್ತ್ಯ ಲೋಕದೊಳ ಗಿನ ಭಕ್ತರೆಲ್ಲರೂ ಕೂಡಲಸಂಗನ ಸ್ವರೂಪರೆಂದು ಕಂಡಿದ್ದಾನಲ್ಲ !” ಎಂದು ಸೈವೆರಗಾದೆವು.” ಎಂದು ನುಡಿದು ಮುಂದಿನ ವಿಷಯ ಸಾಗುವುದಕ್ಕೆ ಸೆನ್ನೆಮಾಡಿದಳು.

ಸ೦ಗಮಶರಣನು ಜಗದೀಶ್ವರಿಯ ಅಕ್ಕರೆಯ ನುಡಿಗಳನ್ನು . ಕೇಳಿ, ಹೊರೆಯೇರಿದನು. ಆತನ ಮೈ ಪುಳಕಗೊಂಡಿತು. ಕಣ್ಣು ಧಾರೆಗಟ್ಟಿತು. ದನಿಯು ಗದಗದಿಸಿತು. ಮುಗಿದ ಕರಗಳೆರೆಡರ ಮೇಲೆ ಹಣೆಯೂರಲು ಮಿಂಚಿನ ಮಹಾಪೂರವು ಮೈತು೦ಬ ಸೂಸಿ ಹೊರಚೆಲ್ಲಿತು. ತನ್ನನ್ನೆತ್ತಿ
ಲೋಕವಾಣಿಯ ಕೈಗೆ ವೀಣೆಯಿತ್ತ೦ತೆ ನೀಡಿಕೊಂಡನು. ಬಳಿಕ ಆ ವೀಣೆ ನುಡಿದು, ವಾಣಿ ಹೊರಹೊಮ್ಮಿದ್ದು ಹೇಗೆಂದರೆ-

ತನ್ನ ತಾನರಿಯುವ ಧಾವತಿ ಹಗುರವಲ್ಲ. ಅದಕ್ಕೆ ಅವಿಶ್ರಾಂತ ಪರಿಶ್ರಮಬೇಕು. ಅದರೊಂದಿಗೆ ಪರಿಶುದ್ಧ ಪ್ರಾಮಾಣಿಕತೆಬೇಕು. ಅದು ಮರ ದೊಳಗಿನ ಮಂದಾಗ್ನಿಯನ್ನು ಉರಿಯತೊಡಗಿಸುವ ತವಕ. ನೊರೆ- ವಾಲಿನೊಳಗೆ ಕ೦ಪಿಲ್ಲದ೦ತೆ ಅಡಗಿರುವ ತುಪ್ಪವನ್ನು ಕಡೆದೆಗೆಯುವ ಕಲೆ. ಅದು ಪಾವಕವನ್ನು ಶಿಲೆ- ಯಿ೦ದ ತೆಗೆದ೦ತೆ; ಪ್ರತಿಬಿ೦ಬವೆನ್ನು ಉದಕದಲ್ಲಿ ಪಡಿ ಮೂಡಿಸಿದ೦ತೆ; ನಿಶ್ಶಬ್ದವನ್ನು ಕೀಸರಿಡುವ ಶಬ್ಧಗಳಲ್ಲಿ ಕೇಳಿದಂತೆ. ಆದರೇನು ? ಅದಕ್ಕೆ ದಾರಿಯಿದೆ; ದಾರಿಗೆ ಸೋಪಾನ ಕಟ್ಟಲಾಗಿದೆ. ಆ ದಾರಿ- ಯಲ್ಲಿ ಅಸಂಖ್ಯಾತರು ನಡೆದು ಹೋಗಿದ್ದಾರೆ. ಅದು ದೇವಲೋಕದ ಬಟ್ಟೆಯಾಗಿದೆ.

ಪಾತಾಳದಗ್ಗವಣಿಯ ನೇಣಿಲ್ಲದೆ,
ಸೋಪಾನದ ಬಲದಿಂದಲ್ಲವೆ ತೆಗೆಯಬಹುದೇ?
ಶಬ್ದ ಸೋಪಾನವ ಕಟ್ಟಿ ನಡಿಸಿವನರು ಪುರಾತನರು.
ದೇವಲೋಕಕ್ಕೆ ಬಟ್ಟೆ ಕಾಣಿರೋ,
ಮರ್ತ್ಯ ಲೋಕದವರ ಮನದ ಮೈಲಿಗೆಯ
ಕೆಳೆಯಲೆ೦ದು
ಗೀತಮಾತೆಂಬ ಜ್ಯೋತಿಯ ಬೆಳಗಿಕೊಟ್ಟರು
ಕೂಡಲ ಚೆನ್ನ ಸ೦ಗನಶರಣರು.

ಕರ್ತಾರನ ಕಮ್ಮಟದಲ್ಲಿ ನಡೆಯಬೇಕಾದುದೇನು? ಕಾಸು, ಕರಗು,
ಬಡಿ, ಎಳೆ, ಸುತ್ತು ಇವುಗಳಿಂವ ಯೋಗ್ಯ ಪ್ರಯೋಜನವಿದೆ. ಜೋಕೆವಿಡಿದು
ಸಾಗಿದರೆ ಬಿಗಿಯೂ ಹಗುರವಾಗುವುದು. ತೂಕವಿಡಿದು ಸಾಗಿದರೆ ಕಠಿಣವೂ
ಸುಲಭವಾಗುವುದು. ಗೊತ್ತಿರಲಿ, ಇದೆಲ್ಲ ಕ್ರಿಯಾಮಥನ. ಬೆದರದಿರಿ ಕ್ರಿಯಾ
ಮಥನಕ್ಕೆ; ಬೆಚ್ಚದಿರಿ ಕ್ರಿಯಾಮಥನಕ್ಕೆ.

ಕ್ರಿಯಾಮಥನವಿಲ್ಲದೆ ಕಾಣಬಂದುದೇ–
ಇಕ್ಷುವಿನೊಳಗಣ ಮಧುರ?
ಕ್ರಿಯಾಮಥನವಿಲ್ಲದೆ ಕಾಣಬಂದುದೇ –
ತಿಲದೊಳಗಣ ತೈಲ ?
ಕ್ರಿಯಾಮಥನವಿಲ್ಲದೆ ಕಾಣಬಂದುದೇ–
ಕ್ಷೀರದೊಳಗಣ ತುಪ್ಪ ?
ಕ್ರಿಯಾಮಥನವಿಲ್ಲದೆ ಕಾಣಬಂದುದೇ–
ಕಾಷ್ಟದೊಳಗಣ ಅಗ್ನಿ?
ಇದು ಕಾರಣ, ನಮ್ಮ ಗುಹೇಶ್ವರ ಲಿಂಗನ ತನ್ನೊಳರಿದೆನೆಂಬ ಮಹ೦ತ೦ಗೆ ಸತ್ಕ್ರಿಯಾಚರಣೆಯೇ
ಸಾಧನಕಾಣಿ ಭೋ.

ಮನಸ್ಸಿನ ಹರಿದಾಟ, ಪ್ರಾಣದ ಎಳೆದಾಟ, ಶರೀರದ ಕು೦ಟಾಟ ಇವು ಗಳನ್ನು ಸೂಕ್ಷ್ಮವಾಗಿ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿರಬೇಕು. ನಮ್ಮೊಳಗಿನ ಅತ್ಯುಚ್ಚವಾದ ಆದರ್ಶದ ನ್ಯಾಯಸ್ಥಾನದ ಎದುರಿಗೆ ಅವುಗಳನ್ನು ದಾಕ್ಷಿಣ್ಯ ವಿಲ್ಲವೆ ತ೦ದೊಡ್ಡಬೇಕು. ಅಲ್ಲಿಯ ನಿರ್ಣಯಕ್ಕೆ ತಲೆವಾಗಲು ಸದಾಸಿದ್ಧರಿರ ಬೇಕು. ಅಂದರೆ ಮಾತ್ರ ನಮ್ಮಲ್ಲಿ ಎ೦ದಿಗೂ ತಪ್ಪದಂಥ ವಿವೇವನ್ನು ವರ್ಧಿಸುವ ಆಶೆಯಿರಿಸಿಕೊಳ್ಳಬಹುದು; ಅವೇ ಉನ್ನತಿ. ಅ೦ಥ ಉನ್ನತಿಯನ್ನೇ ಪಡೆಯಬೇಕೆಂದೂ, ನಮ್ಮ ಸತ್ತೆಯ ಜೀವಾಳವನ್ನು ಅರಿಯುವ ಶಕ್ತಿಯನ್ನು ಗಳಿಸುತ್ತ ಸಾಗಬೇಕೆಂದೂ ನಾವು ಹುಟ್ಟಿಬಂದಿರುವೆವು. ಈ ದಾರಿಯಲ್ಲಿ ಮುಂದುವರಿ- ಯುವುದೇ ನಮ್ಮ ಜೀವನದ ಉದ್ದೇಶವಾಗಿದೆ.

ಈ ಉದ್ದೇಶವನ್ನು ಸಾಧಿಸುವುದಕ್ಕೆ ಕ್ರಿಯಾಮಂಥನವೆಂಥದು ನಡೆಯ ಬೇಕು? ತಲೆ, ಹೃದಯ, ತೋಳ, ಚಿತ್ತ ಎಂಬ ನಾಲ್ಕು ಕೇಂದ್ರಗಳಲ್ಲಿ ಜ್ಞಾನ ಭಕ್ತಿ, ಕರ್ಮ ಮತ್ತು ಧ್ಯಾನ ಎಂಬ ನಾಲ್ಕು ಕ್ರಿಯೆಗಳು ನಡೆಯ
ಲಿಕ್ಕೇ ಬೇಕು. ಈ ದುಡಿಮೆಯನ್ನು ಮಾಡುವುದು ಯಾವಾಗ? ಇಂದು ನಾಳೆ ಎಂದು ದಿನಹಾಕುತ್ತ ಸಾವಿನ ಬಾಗಿಲಿಗೆ ಬಂದು, ಅಲ್ಲಿಂದ ಚಂಗನೆ ತಪ್ಪಿಸಿಕೊಂಡುಹೋಗಬಹುದೆಂದರೆ ಸಾಧ್ಯವಿಲ್ಲ. ಸತ್ತಬಳಿಕ ಇನ್ನಾವ ಜಂಜಾಟವೇ ಉಳಿಯುವದಿಲ್ಲವೆ೦ದು ತಿಳಕೊಳ್ಳುವುದು ತಪ್ಪು. ಮನುಷ್ಯ ಲೋಕದಿ೦ದ ಹೊರಬಿದ್ದು ಹೋದನೆಂದರೆ, ದೇವಲೋಕವನ್ನೇ ಸೇರಿಬಿಡುವನೆಂದು ತಿಳಿಯಬಾರದು.

ಸತ್ತು ಹುಟ್ಟಿ ಕೆಟ್ಟವರೆಲ್ಲರೂ ದೇವಲೋಕಕ್ಕೆ ಹೋದರೆಂಬ
ಬಾಲಭಾಷೆಯ ಕೇಳಲಾಗದು.
ಸಾಯುವ ಮುನ್ನ ಸ್ವಯವನರಿದಡೆ ದೇವನೊಲಿನ
ನಮ್ಮ ಗುಹೇಶ್ವರನು.

ಆದ್ದರಿಂದ ಸಾವಡರುವ ಮುನ್ನ, ಮುಪ್ಪು ತಲೆ ಹಾಕುವ ಮುನ್ನ, ಕ್ರಿಯಾಮಥನಕ್ಕಿಳಿಯಬೇಕು. ದೇಹವೇ ಕ್ರಿಯಾಮಥನಕ್ಕೆ ಕಡೆಗೋಲು. ಅದು ಗಟ್ಟಿಯಿರುವಾಗಲೇ ಕೆಲಸ ಕೊಟ್ಟೀತು. ನರನ ಮುಟ್ಟಿ ಓಲೈಸಿದಲ್ಲಿ ಪರಿಪರಿಯ ಪದ೦ಗಳು೦ಟು. ಆದರೆ ಆ ಕೆಲಸ ಸುಲಭವೆಂದು ಎಣಿಸಲಿಕ್ಕಾಗದು. ಹಾಗೆ ಎಣಿಸಲೂ ಬಾರದು. ಅದು ಕಗ್ಗಲ್ಲ ದಾರಿ. ಅದು ಬಿಡಿಸಲಾರದ ಕಗ್ಗ೦ಟು. ಗಂಟಿಕ್ಕಿದನನೇ ಬ೦ದು ಅದನ್ನು ಕೈಗೆ ತೆಗೆದುಕೊಳ್ಳಬೇಕಾಗುವದು.

ಏನಾದರೆಯೂ ಸಾಧಿಸಬಹುದು,
ಮತ್ತೆ ಏನಾದರೆಯೂ ಸಾಧಿಸಬಹುದಯ್ಯ,
ತಾನಾರೆಂಬುದ ಸಾಧಿಸಬಾರದಯ್ಯ,
ಕೂಡಲಸ೦ಗಮದೇವರ ಕರುಣವುಳ್ಳವಂಗಲ್ಲದೆ.

ದೇವದೇವನ ಕರುಣೆ ಮಾನವನ ಸತತ ಪ್ರಯತ್ನ-ಪ್ರಾಮಾಣಿಕತೆಗಳ ಸಂಗಮವಾದರೆ, ಜೀವನು ಶಿವನಾಗಿ ಮೈದೋರುವನು; ಮನದೋರುವನು. ಮಾನವನು ಅತಿ ಮಾನವನಾಗಿ ರೂಪಾ೦ತರ ಗೊಳ್ಳುವನು; ಮಾರ್ಪಾಟು ಹೊಂದುವನು. ಮು೦ಚಿನ ಪ್ರಕೃತಿ ಗುಣಗಳೆಲ್ಲ ದಿವ್ಯವಾಗಿ ಪರಿಣಮಿಸು ವುವು. ಸ೦ಕಲ್ಪವಿಕಲ್ಪಕ್ಕೊಳಗಾಗುವ ಮನವು ಇಲ್ಲದ್ದನ್ನು ಕಲ್ಪಿಸುವದು. ಇದ್ದುದನ್ನು ಮರೆಯುವದು. ಬುದ್ಧಿ ಕಲ್ಪಿಸಿ ರಚಿಸುವದು. ನೋಡುವದು. ಮಾಡಿದುದಕ್ಕೆ ನಾನೆನ್ನುವದು ಅಹಂಕಾರ.

ಮನವೆಂಬುದು ಬೇರಿಲ್ಲ.
ಮಹಾದೇವನ ಮಹಾ ಅರುಹು ನೋಡಾ.
ಸಂಕಲ್ಪವಿಕಲ್ಪಗಳ ಧರಿಸಿದಲ್ಲಿ ಮನವೆನಿಸಿತ್ತು.
ಅದು ಅಳಿದಲ್ಲಿ ಮಹಾಜ್ಞಾನವೆನಿಸಿತ್ತು..
ಅಳಿದಭಾವ ತಲೆದೋರಿದಲ್ಲಿ
ಕಪಿಲಸಿದ್ಧ ಮಲ್ಲಿಕಾರ್ಜುನ ನೆನಿಸಿತ್ತು.

ಪೃಥ್ವಿಯ ಗುಣ ಶಾಂತಿ, ಉದಕದ ಗುಣ ಸ್ವಾದ, ಅಗ್ನಿಯ ಗುಣ ಸರ್ವಭಕ್ಷಣ, ವಾಯುವಿನ ಗುಣ ನಿರ್ಮಲತ್ವ, ಆಕಾಶದ ಗುಣ ನಿರ್ವಯಲು, ಈ ಪಂಚ ತತ್ವದ ಗುಣಗಳು ಪ೦ಚತತ್ವಗಳಿಂದಾದ ಪ್ರಕೃತಿ ಯಲ್ಲಿ ಅಳವಟ್ಟರೆ ಅಲ್ಲಿ ಪ೦ಚಮುಖನೇ ಪ್ರಕಟಗೊಂಡು ನಿಲ್ಲುವನು. ಸ೦ಶಯವಿಲ್ಲ.

ಪರಿಪೂರ್ಣತೆಯ ಕೊಟ್ಟ ಕೊನೆಯಲ್ಲಿ ಪ್ರೇಮ, ಜ್ಞಾನ, ಶಕ್ತಿ, ಹಾಗೂ ಸೌಂದರ್ಯ ಇವು ನಮ್ಮ ಸತ್ತೆಗೆ ನಾಲ್ಕು ಮುಖಗಳಾಗಿ ಕಂಗೊಳಿಸಿವವು. ಅವು ಸಂಪೂರ್ಣವಾಗಿ ಅರಳಿ ನಿಂತುದೇ ಪರಿಪೂರ್ಣತೆಯ ಕುರುಹು. ಚೈತ್ಯ ಕೇಂದ್ರವು ನೈಜವೂ ಶುದ್ಧವೂ ಆದ ಪ್ರೀತಿಯ ವಾಹನವಾಗುವದು. ಮನಸ್ಸು ಖಂಡಿತ ವಾದ ಜ್ಞಾನವಾಹನವಾಗುವದು. ದೇಹವು ಅಜೇಯವಾದ ಶಕ್ತಿ ಸಾಮರ್ಥ್ಯಗಳನ್ನು ಪ್ರಕಟಿಸುವದು. ದೇಹವು ಪೂರ್ಣ ಸೌ೦ದರ್ಯವನ್ನೂ ಪರಿಪೂರ್ಣ ಸಾಮರಸ್ಯವನ್ನೂ ವ್ಯಕ್ತಪಡಿಸುವದು.

ಇದೇ ಮಾತನ್ನು ಬೇರೊಂದು ಬಗೆಯಲ್ಲಿ ಹೇಳಬೇಕಾದರೆ–.
ನೆನಹು ಸತ್ತಿತ್ತು, ಭ್ರಾಂತು ಬೆಂದಿತ್ತು.
ಆರಿವು ಮರೆಯಿತ್ತು., ಕುರುಹು ಕೆಟ್ಟಿತ್ತು.
ಗತಿಯನರಸಲುಂಟೇ? ಮತಿಯನರಸಲುಂಟೇ?
ಅಂಗವೆಲ್ಲಾ ನಷ್ಟವಾಗಿ ಲಿಂಗಲೀನವಾಯಿತು.
ಕಂಗಳಂಗದ ಕಳೆಯ ಬೆಳಗಿನ ಭಂಗ ಹಿಂಗಿತ್ತು
ಗುಹೇಶ್ವರಾ.

ಹೀಗೆ ಜೀವನಕ್ಕೆ ಉದ್ದೇಶವಿರಲೇಬೇಕು. ಅದು ಫನವಾದ ಉದ್ದೇಶವೇ ಆಗಿರಬೇಕು. ಅದಾವ ಉದ್ದೇಶ ವಿದ್ದರೂ ಅದನ್ನು ಸಾಧಿಸುವುದಕ್ಕೆ ಮೊದಲಿಗೆ ಪರಿಪೂರ್ಣತೆಯು ಅತ್ಯಾವಶ್ಯಕವಾಗಿ ಬೇಕು.

ಪರಿಪೂರ್ಣತೆಗೆ ತನ್ನ ತಾನರಿವುವೇ ಪ್ರಥಮಪಾಠವಾಗಿದೆ.

ಪ್ರಥಮಪಾಠವೆಂದರೂ ಅದಕ್ಕಿಂತ ಬಿಗಿಯಾದುದು ಬೇರೊಂದಿಲ್ಲ. ಅದಕ್ಕೆ ದಿವ್ಯ ಕರುಣೆ ಕೈ ನೀಡಲು ಬೇಕು. ಪ್ರಯತ್ನ-ಪ್ರಾಮಾಣಿಕತೆಗಳು ಮಾನವನಲ್ಲಿ ಗಟ್ಟಿಯಾಗಿ ನೆಲೆಗೊಳಬೇಕು.

ಜ್ಞಾನ, ಭಕ್ತಿ, ಕರ್ಮ-ಧ್ಯಾನಗಳಿ೦ದ ಬೇರೆಬೇರೆ ಕೇ೦ದ್ರಗಳಲ್ಲಿ ಸಾಧನ ನಡೆಯುತ್ತಿರಬೇಕು.

ಕಣ್ಣು ಕುಕ್ಕಿಸುವ ತಿಳುವಿನಬೆಳಕು, ಹೃದಯವರಳಿಸುನ ನಲವಿನ ಎಸಕು, ಸೋಲನ್ನೆದುರಿಸುವ ಬಲದ ಜುಳುಕು, ದರ್ಪಕನನೇಳಿಸುವ ಚೆಲುವಿನ ಥಳುಕು, ಮಾನವನ ಪರಿಪೂರ್ಣತೆಯಲ್ಲಿ ಕ೦ಗೊಳಿಸಬಲ್ಲವು. ಇವೇ ಜೀವನೋದ್ದೇಶದ ಸಫಲತೆ. ಸಿದ್ಧಿಯ ಘನ ಸಾಫಲ್ಯ. ಆದ್ಧರಿ೦ವ ಬದುಕನ್ನು ಉತ್ತಮಗೊಳಿಸುವ ಜೀವನದ ಘನೋದ್ದೇಶವನ್ನು ಕಣ್ಣು ಮುಂದೆ ಯಾವಾಗಲೂ ಕಾಣುವಂತೆ ಇರಿಸಿಕೊಂಡಿರತಕ್ಕದ್ದು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮರಣಂ ಶರಣಂ
Next post ನಗೆಡಂಗುರ-೧೪೩

ಸಣ್ಣ ಕತೆ

 • ಮೌನರಾಗ

  ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

 • ಕರಿಗಾಲಿನ ಗಿರಿರಾಯರು

  ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

 • ರಣಹದ್ದುಗಳು

  ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

 • ವರ್ಗಿನೋರು

  ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

 • ತನ್ನೊಳಗಣ ಕಿಚ್ಚು

  ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…