ಏಷ್ಯಾ

ಕನ್ನಡದಲ್ಲಿ 400 ಕ್ಕೂ ಹೆಚ್ಚು ಪ್ರವಾಸ ಕಥನಗಳು ಈ ವರೆಗೆ ಪ್ರಕಟವಾಗಿರುವುದು ಅಂಕಿ ಅಂಶಗಳಿಂದ ತಿಳಿದುಬಂದಿದೆ. ಇವುಗಳಲ್ಲಿ ಬಹುಪಾಲು ಭಾರತ ಪ್ರವಾಸದ ಬಗೆಗೆ ಬರದವುಗಳಿವೆ. ಭಾರತ ಮತ್ತು ನಮ್ಮ ನೆರೆಯ ದೇಶಗಳ ಪ್ರವಾಸ ಸಾಹಿತ್ಯವನ್ನೊಳಗೊಂಡಂತೆ 150 ಪುಸ್ತಕಗಳಾದರೂ ಓದಲು ಸಿಗುತ್ತವೆ.

ಕನ್ನಡ ಪ್ರವಾಸ ಸಾಹಿತ್ಯದ ಇತಿಹಾಸ ಪ್ರಾರಂಭವಾಗುವುದು 1890 ರಲ್ಲಿ ಪ್ರಕಟವಾದ ಕರ್ಕಿವೆಂಕಟರಮಣಶಾಸ್ತ್ರಿ ಸೂರಿ ಅವರ “ದಕ್ಷಿಣ ಭಾರತ ಯಾತ್ರೆ” ಎಂಬ ಕೃತಿಯಿಂದ ಎಂದು ತಿಳಿದುಬರುತ್ತದೆ. ದಕ್ಷಿಣ ಭಾರತದ ಪವಿತ್ರ ಕ್ಷೇತ್ರಗಳ ಪರಿಚಯವವನ್ನು ಮಾಡಿಕೊಡುವ ಕೃತಿ ಇದಾಗಿದೆ. ಶಾಸ್ತ್ರಿಗಳು ಉಡುಪಿಯಿಂದ ಗುರುವಾಯೂರುಗಳ ವರೆಗಿನ ಕ್ಷೇತ್ರಗಳನ್ನು ಒಂದೊ ಎರಡೋ ಪದ್ಯಗಳಲ್ಲಿ ವರ್ಣಿಸಿದ್ದಾರೆಂದು ಮೂವತ್ತೇಳು ಪದ್ಯಗಳ ಅಂಗೈಅಗಲದ ಪುಸ್ತಕವೆಂದೂ ಇದರ ಬಗ್ಗೆ ಶ್ರೀನಿವಾಸ್ ಹಾವನೂರರು ಬರೆದಿದ್ದಾರೆ. ಇದರ ನಂತರ ಪ್ರಕಟವಾಗಿರುವ ಪುಟ್ಟಯ್ಯವನರ ‘ಅಭಿವೃದ್ಧಿ ಸಂದೇಶ’ ಪತ್ರರೂಪದ ಪ್ರವಾಸ ಕೃತಿಯಾಗಿದೆ. ಆದರೆ ಸಾಹಿತ್ಯಿಕ ಮೌಲ್ಯಗಳಿಂದ ಕೂಡಿದ, ಪ್ರವಾಸದ ಲಕ್ಷಣಗಳನ್ನೊಳಗೊಂಡ ಕೃತಿಯನ್ನು ಗುರುತಿಸುವಾಗ ವಿ.ಸೀ. ಅವರ ‘ಪಂಪಾಯಾತ್ರೆ’ ನಮಗೆ ಸಿಗುತ್ತದೆ. ಈವರೆಗೂ ಪಂಪಾಯಾತ್ರೆಯೇ ಕನ್ನಡ ಪ್ರವಾಸ ಸಾಹಿತ್ಯದ ಮೊದಲು ಕೃತಿ ಎಂದು ಗುರುತಿಸಲಾಗಿತ್ತು. ಆದರೆ ಸಂಶೋಧನೆ ಸಂದರ್ಭದಲ್ಲಿ ಕರ್ಕಿವೆಂಕಟರಮಣಶಾಸ್ತ್ರಿ ಸೂರಿಗಳು ಸಿಕ್ಕಿದ್ದಾರೆ.

ನಮ್ಮಲ್ಲಿ ಪ್ರವಾಸ ಎನ್ನುವ ಶಬ್ದಕ್ಕೆ ಮೊದಲೇ “ಯಾತ್ರೆ” ಅನ್ನುವ ಶಬ್ದವೇ ಎಲ್ಲರಿಗೂ ಪರಿಚಯದಲ್ಲಿತ್ತು. ಇಳಿವಯಸ್ಸಿನಲಿ, ಪುಣ್ಯಕ್ಷೇತ್ರಗಳಿಗೆ ಹೋಗಿ ದೇವರುಗಳ ದರ್ಶನಮಾಡಿಕೊಂಡು ಬರುವುದೇ ಆಗಿತ್ತು. ತೀರ್ಥಯಾತ್ರೆ, ಪುಣ್ಯಕ್ಷೇತ್ರಗಳ ಯಾತ್ರೆಯ ಅರ್ಥವೇ ಪವಿತ್ರ ನದಿಗಳಲ್ಲಿ ಸ್ನಾನಮಾಡಿ ಪಾಪಪರಿಹಾರ ಮಾಡಿಕೊಂಡು ದೇವರ ಸಾನಿಧ್ಯದಲ್ಲಿ ಅಡ್ಡಾಡಿ ಬರುವುದೇ ಎಂದಾಗಿತ್ತು. ಸ್ವಾಮಿ ಸೋಮನಾಥನಂದರ “ಹೈಮಾಚಲ ಸಾನಿಧ್ಯದಲ್ಲಿ” ಎಂಬ ಕೃತಿಯ ಮುನ್ನುಡಿಯಲ್ಲಿ ಕುವೆಂಪು ಅವರು “ತೀರ್ಥಯಾತ್ರೆಗಳಿಂದಲೂ
ಪುಣ್ಯಕ್ಷೇತ್ರಗಳಿಂದಲೂ ನೊಂದ ಜೀವಕ್ಕೂ ಬೆಂದ ಲೋಕಕ್ಕೂ ಶಾಂತಿ ಸಮಾಧಾನಗಳು ಮತ್ತೆ ಮತ್ತೆ ದೊರೆಯುತ್ತಿರುವುದರಿಂದಲೇ ಜನರು ಪ್ರಯಾಣದ ಕ್ಲೇಶ, ಕಷ್ಟ, ದುರ್ಗಮತೆ, ಅಪಾಯ, ಸಾವು ಯಾವುದನ್ನೂ ಲೆಕ್ಕಿಸದೇ ಮತ್ತೆ ಮತ್ತೆ ಅಂತಹ ಪ್ರವಾಸಗಳನ್ನು ಕೈಗೊಳ್ಳುತ್ತಿದ್ದರು ಎನ್ನುತ್ತಾರೆ. ಹಾಗೆಯೇ ಮುಂದುವರೆದು ಆಧ್ಯಾತ್ಮಿಕ ಭೂಮಿಕೆಯಲ್ಲಿ ಮುಂದುವರೆಯುವುದಕ್ಕಾಗಿ, ಅತ್ಮ ವಿಕಾಸಕ್ಕಾಗಿ, ಭಗವಂತನಲ್ಲಿ ಶರಣಾಗತಿ ಮತ್ತು ಸಮರ್ಪಣ ಬುದ್ಧಿ ಸಾದನೆಗಾಗಿ, ನಮ್ಮ ಯೋಗ ಕ್ಷೇಮವನ್ನು ಸಂಪೂರ್ಣವಾಗಿ ಭಗವಂತನ ಅಡಿದಾವರೆಗಳಿಗೆ ಅರ್ಪಿಸಿ ಹೃದಯದಲ್ಲಿ ನಿರ್ಭರತೆಯ ಭಾವವನ್ನು ಬಲಿಯುವುದಕ್ಕಾಗಿ, ಅಹಂಕಾರ ವಿಸರ್ಜನೆಗಾಗಿ, ಆಧ್ಯಾತ್ಮಕದಲ್ಲಿ ಮುಂದುವರಿದ ಸಿದ್ಧ ಪುರುಷರ ಸಂಗ ಸನ್ಮಾರ್ಗ ಸಾನಿಧ್ಯ ಸಂಪಾದನೆಗಾಗಿ, ಶತಮಾನಗಳಿಂದಲೂ ಕೋಟ್ಯಾಂತರ ಭಕ್ತರ ಸಾಧಕರ ಸಿದ್ಧರ ಕರೆಗೇಳಿ ಮೊರೆಗೇಳಿ ಕೃಪೆಯಿಂದಿಳಿದ ಭಗವಂತನ ಅನುಗ್ರಹದ ಜಾಗ್ರತಮೂರ್ತಿ ಸ್ಥಾನಗಳಲ್ಲಿ ತಮಃ ಪರಿಹಾರ ಮಾಡಿಕೊಳ್ಳುವ ಸಾಧನೆಗಾಗಿ ಕೈಗೊಳ್ಳುವ ತೀರ್ಥಯಾತ್ರಾರೂಪವಾದ ಪ್ರವಾಸವೇ
ಊರ್ಧ್ವಮುಖಿ ಎಂಬ ಹೆಸರಿಗೆ ಅರ್ಹವಾಗುತ್ತದೆ’ ಎಂದೂ ಹೇಳಿದ್ದಾರೆ.

‘ಹೈಮಾಚಲ ಪ್ರವಾಸ ಸಾನಿದ್ಯ’ ಪ್ರವಾಸ ಕಥನದಲ್ಲಿ ಹರಿದ್ವಾರದಿಂದ ಬದರಿವರೆಗಿನ ಅನುಭವಗಳ ಸಂಗ್ರಹ ಇದೆ. ನಮ್ಮ ಅನೇಕ ಪ್ರವಾಸಿ ಲೇಖಕರು ದೇಶದ ಉದ್ದಗಲಕ್ಕೂ ಅಡ್ಡಾಡಿ ಹೆಚ್ಚಾಗಿ ಕ್ಷೇತ್ರಗಳ ಪರಿಚಯ ಮಾಡಿಕೊಟ್ಟಿದ್ದಾರೆ.
ಅಲ್ಲಲ್ಲಿಯ ಸಂಪ್ರದಾಯಗಳು. ನಂಬಿಕೆಗಳು ದೇವರ ಮಹಿಮೆಗಳಿಂದ ಕೆಲವು ಕೃತಿಗಳು ತುಂಬಿಹೋಗಿವೆ. ಕೆಲವರ ಕೆಲವು ಲೇಖಕರು ಮಾತ್ರ ದೇಶದ ಸಾಂಸ್ಕೃತಿಕ ಬದುಕನ್ನು ಆಳವಾಗಿ ಕಂಡು ಸುಂದರವಾಗಿ ತಮ್ಮ ಕೃತಿಗಳಲ್ಲಿ ನಿರೂಪಿಸಿದ್ದಾರೆ.

ಶ್ರೀಮತಿ ಶಾಂತಾದೇವಿ ಮಾಳವಾಡರು ‘ಶ್ರೀಗಿರಿಯಿಂದ ಹಿಮಗಿರಿಗೆ’ ಎಂಬ ಪ್ರವಾಸ ಕಥನದಲ್ಲಿ ಭಾರತದ ಪುಣ್ಯಕ್ಷೇತ್ರಗಳ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಸ್ಥೂಲವಾಗಿ ಪರಿಚಯಮಾಡಿಕೊಟ್ಟಿದ್ಧಾರೆ. ಶ್ರೀಶೈಲ, ನಂದಿಬೆಟ್ಟ. ಐಹೊಳೆ. ಪಟ್ಟದಕಲ್ಲು, ಬಾದಾಮಿ, ಬನಶಂಕರಿ, ಕೆಮ್ಮಣ್ಣುಗುಂಡಿ, ಪಾಂಡಿಚೇರಿ, ಕಾಶ್ಮೀರ, ಶ್ರೀನಗರ, ತ್ರಿವೇಣಿಸಂಗಮ, ಕನ್ಯಾಕುಮಾರಿ, ಊಟಿ ಮುಂತಾದವುಗಳನ್ನು ನಮಗೆ ಪರಿಚಯಿಸುತ್ತ ನಮ್ಮನ್ನು ಕರೆದುಕೊಂಡುಹೋದ ಅನುಭವವಾಗುತ್ತದೆ.

ಹಾಗೆಯೇ ಎ.ವಿ.ಶಾಸ್ತ್ರಿಯವರ ‘ಭಾರತ ದರ್ಶನ ಭಾಗ 1’ ಎಂಬ ಕೃತಿಯಲ್ಲಿಯೂ ಅವರು ಇಡೀ ಭಾರತವನ್ನು ಸುತ್ತಾಡಿದ ಪರಿಚಯವನ್ನು ಕೊಡುತ್ತಾರೆ. ಅವರು ತಮ್ಮದೇ ಟ್ರಾವೆಲ್ ಸಂಸ್ಥೆಯ (ಶಾಸ್ತ್ರೀ ಟ್ರಾವೆಲ್ಸ್) ಮಾಖಾಂತರ ಭಾರತ ದರ್ಶನ ಏರ್ಪಡಿಸಿ ಪ್ರವಾಸಿಗರೊಂದಿಗೆ ತಾವೂ ಸುತ್ತಾಡಿಬಂದ ಅನುಭವಗಳನ್ನು ಹೇಳುತ್ತಾ ಹೋಗುತ್ತಾರೆ. ಮದರಾಸಿನಿಂದ ಪ್ರವಾಸ ಪ್ರಾರಂಭ ಮಾಡಿ ದೇಶದ ಉದ್ದಗಲಕ್ಕೂ ಅಡ್ಡಾಡಿದ್ದಾರೆ. ಕಾಶ್ಮೀರ ಸಿಮ್ಲಾ, ಹರಿದ್ದಾರ.
ಋಷಿಕೇಶ. ಕೇದಾರ ಬದರಿಗಳಲ್ಲಿ ಕಂಡಂತೆ ಸತ್ಯದರ್ಶನಗಳನ್ನೆಲ್ಲಾ ವಿವರಿಸುತ್ತಾ ಹೋಗುತ್ತಾರೆ.

ಪಾಟೀಲ ಪುಟ್ಟಪ್ಪನವರ ‘ನಮ್ಮದು ಈ ಭಾರತ ಭೂಮಿ’ ಕೃತಿಯಲ್ಲಿ ಭಾರತದ ರಾಜ್ಯಗಳ ಪ್ರದೇಶಗಳ ಪರಿಚಯವಿದೆ. ಪಾಟೀಲರು ಸಂಸತ್ತಿನ ಸದಸ್ಯರಾಗಿದ್ದ ಸಮಯದಲ್ಲಿ ಅನೇಕ ಕಡೆಗೆ ಪ್ರವಾಸಮಾಡಬೇಕಾಗಿ ಬಂದ ಸಂದರ್ಭಗಳಲ್ಲಿ ಅಲ್ಲಿಯ ಅನೇಕ ವಿಷಯಗಳನ್ನು ಬರೆಯುತ್ತಾ ಹೋಗಿದ್ದಾರೆ. ತಮ್ಮ ಸಮಗ್ರ ಅನುಭವದ ಹಿನ್ನೆಲೆಯಲ್ಲಿ ಒಂದೆಡೆಗೆ ಹೀಗೆ ಬರೆದಿದ್ದಾರೆ. ಭಾರತದ ಉದ್ದಗಲಗಳಲ್ಲಿ ಒಂದು ಭಾಷೆ ಇಲ್ಲ ಒಂದು ವೇಷವಿಲ್ಲ, ಊಟ ಉಪಚಾರ ಬೇರೆ ಬೇರೆ. ಜೀವನದ ರೀತಿ ನೀತಿ ಬೇರೆ. ಆದರೂ ತಾವು ಒಂದೇ ದೇಶಕ್ಕೆ ಸೇರಿದವರೆನ್ನುವ ಮನೋಬಾವನೆ ನಮ್ಮ ಜನರಿಗಿದೆ. ಮರದ ಟೊಂಗೆಗಳು ಅನೇಕವಾಗಿದ್ದರೂ ಅವೆಲ್ಲವೂ ಒಂದೇ ವೃಕ್ಷಮೂಲದಿಂದ ಪೋಷಣೆಯನ್ನು ಪಡಯುತ್ತವೆ.

ಡಿ.ಟಿ.ರಂಗಸ್ವಾಮಿಯವರ ‘ಭಾರತ ಯಾತ್ರೆ’ ಪ್ರವಾಸ ಕಥನದಲ್ಲಿ ಭಾರತದ ಅನೇಕ ಬಾಗಗಳಲ್ಲಿ ಸುತ್ತಾಡಿದ ಅವರ ಅನುಭವಗಳು ಕಂಡು ಬರುತ್ತವೆ ಮೈಸೂರು, ಮದ್ರಾಸ್, ಕೇರಳ, ಅಂದ್ರ, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ,
ಮುಂಬೈ, ಬಿಹಾರ, ಒಡಿಸ್ಸಾ, ದೆಲ್ಲಿ, ಪಂಜಾಬ್, ಕೇದಾರನಾಥ, ಬದರಿನಾಥ ಮುಂತಾದವುಗಳಲ್ಲಿ ಅಡ್ಡಾಡಿ ಮಾಹಿತಿಗಳು ಸಂಗ್ರಹಿಸುತ್ತಾ ಹೋಗಿದ್ದಾರೆ.

ಶಿವರಾಮಕಾರಂತರ ‘ಅಬೂವಿನಿಂದ ಬರಾಮಾಕ್ಕೆ’ ಪ್ರವಾಸ ಕೃತಿ ಓದುತ್ತಿದ್ದಂತೆ ಪ್ರವಾಸ ಸಾಹಿತ್ಯಕ್ಕೆ ಇರಬೇಕಾದ ಮೌಲತೆಗಳು ಕಾಣತೊಡಗುತ್ತವೆ. ಕೇವಲ ಸ್ಥಳ, ದೇವರುಗಳು, ಊರುಗಳು ಪರಿಚಯ ಮಾಡಿಕೊಡುವುದಕ್ಕಿಂತ
ಜೊತೆಜೊತೆಗೆ ಆ ನಾಡುಗಳ ಬದುಕು, ನಿಸರ್ಗಗಳ ಪರಿಚಯಮಾಡಿಕೊಂಡ ಬಗ್ಗೆ ಕಾರಂತರ ಬರವಣೆಗೆಯಲ್ಲಿ ತುಂಬಿಕೊಂಡಿದೆ. ಬರವಣಿಗೆಯ ಮಧ್ಯ ಅಲ್ಲಲ್ಲಿ ಹಾಸ್ಯದ ತುಣುಕುಗಳು ಕಂಡುಬರುತ್ತವೆ.

ಜಿ.ಮರುಳಸಿದ್ದಯ್ಯನವರ ‘ಭಾರತ ಪ್ರವಾಸ ಚಿತ್ರಗಳು’ ಎನ್ನುವ ಕೃತಿ ಅದ್ಭುತವಾದುದು. ಇದರಲ್ಲಿ ಭಾರತದ ಸಾಂಸ್ಕೃತಿಕ ಅಧ್ಯಯನಕ್ಕೆ ಸಂಬಂಧಪಟ್ಟಂತೆ ಅನೇಕ ವಿಷಯಗಳ ಪರಿಚಯ ಸಿಗುವುದರೊಂದಿಗೆ ಕಾಶಿ, ವಾರಣಾಸಿ, ಅಜಂತಾ ಎಲ್ಲೋರಾಗಳ ಪರಿಚಯವೂ ಇಲ್ಲಿದೆ. ಅಲ್ಲಲ್ಲಿಯ ವಾಸ್ತುಶಿಲ್ಪಗಳು. ಗುಡಿಗುಂಡಾರಗಳು ಕಲೆಯ ಬಗ್ಗೆ ಅಂದಂದಿನ ಸಾಂಸ್ಕೃತಿಕ ರಾಜಕೀಯ ಹಿನ್ನೆಲೆಯಲ್ಲಿ ಹೇಳುತ್ತಾ ಹೋಗಿದ್ದಾರೆ. ಹೀಗೆ ಸಮಗ್ರ ಭಾರತದರ್ಶನವನ್ನು ಕೆಲವೇ ಕೆಲವರು ಪರಿಚಯ ಮಾಡಿಕೊಟ್ಟಿರುವರು. ಅದರೆ ಬಿಡಿ ಬಿಡಿ ರಾಜ್ಯಗಳ ಮತ್ತು ಕರ್ನಾಟಕದ ಒಳನಾಡುಗಳ ಪರಿಚಯ ಮಾಡಿಕೊಟ್ಟಂತಹ ಪ್ರವಾಸ ಕೃತಿಗಳು ಕ್ಷೇತ್ರಪರಿಚಯಗಳು ಕನ್ನಡದಲ್ಲಿ ಇನ್ನೂ ಸಾಕಷ್ಟು ಇವೆ.

ವಿ.ಸಿ.ಯವರ (ಪಂಪಾಯಾತ್ರೆ) ಸಿದ್ಧವನಹಳ್ಳಿ ಕೃಷ್ಣಶರ್ಮರ (ವರ್ಧಾಯಾತ್ರೆ) ವಿ.ಚಿ. ಹಿತ್ತಲಮನಿ (ಶರಾವತಿಯಿಂದ ಸಾಬರಮತಿ) ಕೃಷ್ಣಾನಂದ ಕಾಮತರ (ವಂಗದರ್ಶನ, ಹಾಗೂ ನಾ ರಾಜಸ್ಥಾನದಲ್ಲಿ) ಮಿರ್ಜಿ ಅಣ್ಣಾರಾಯರ
(ನಾನು ಕಂಡ ನಾಡು) ಸ್ವಾಮಿ ಸೋಮನಾಥಾನಂದ (ಅಮರನಾಥ ಯಾತ್ರೆ) ಜಿ.ಎ.ನರಸಿಂಹಮೂರ್ತಿ (ಅಸೇತು ಹಿಮಾಚಲಯಾತ್ರೆ) ಎಸ್‌.ಶಂಕರನಾರಾಯಣ ಭಟ್ಟ (ಕೈಲಾಸ ಮಾನಸ ಸರೋವರ) ತ್ರೀಮತಿ ಗಿರಿಜಾಬಾಯಿ (ಭಾರತದ ಭವ್ಯ ನದಿಗಳು) ಪು.ತಿ.ನ. (ಮೇಲುಕೋಟೆ) ವಿ.ಕೃ.ಗೋಕಾಕ್ (ಇಂದಿನ ಕರ್ನಾಟಕ) ಶ್ರೀರಂಗ (ಮುಕ್ಕಣ್ಣ  ಯಾತ್ರೆ) ಪಾಟೀಲ ಪುಟ್ಟಪ್ಪ (ನನ್ನದು ಈ ಕನ್ನಡ ನಾಡು) ಕೆ.ಅನಂತರಾಮು (ಸಕ್ಕರೆ ಸೀಮೆ) ದೇ.ನಾ.ಶ್ರೀ. (ಗಿರಿಕಂದರ ಮೋಹಿತರು) ಜೀರಿಗೆ ಕಟ್ಟೆ ಬಸಪ್ಪ (ಕರ್ನಾಟಕ ಯಾತ್ರೆ) ಗುಂಡ್ಮಿ ಚಂದ್ರಶೇಖರ ಐತಾಳ್  ಸೌಂದರ್ಯದ ಸಾನಿಧ್ಯದಲ್ಲಿ) ಕೋ.ಚನ್ನಬಸಪ್ಪ (ದಕ್ಷಿಣೇಶ್ವರ ದರ್ಶನ) ಜಿ.ಕೆ.ಶಣೈ (ಪುತ್ತೂರಿನಿಂದ ಕಾಶ್ಮೀರಕ್ಕೆ) ಜಿ.ಎಸ್. ಶಿವರುದ್ರಪ್ಪ (ಗಂಗೆಯ ಶಿಖರಗಳಲ್ಲಿ) ಎಚ್‌.ಎಸ್, ರಾಘವೇಂದ್ರರಾವ್ (ಜನಗಣಮನ) ಜಿ.ಎಸ್. ಕಾಪಸೆ (ಶಾಲ್ಮಲೆಯಿಂದ ಗೋದಾವರಿವರೆಗೆ) ಜಾಣಗೆರೆ ವೆಂಕಟರಾಮಯ್ಯ (ಸುಡು ಗುಂಡುಗಳ ನಾಡಿನಲ್ಲಿ) ಜಿ.ಎ.ನರಸಿಂಹಮೂತಿ೯ (ಆ ಸೇತು ಹಿಮಾಚಲ ಯಾತ್ರೆ) ಪಿ.ಆರ್‌.ಜಯಲಕ್ಷ್ಮಮ್ಮ (ಬದರೀಯಾತ್ರೆ) ಗೌರೀಶ್‌ಕಾಯ್ಕಿಣಿ (ಗೋಕರ್ಣ) ಬಿ.ಶಿವಮೂರ್ತಿಶಾಸ್ತ್ರಿಗಳ (ಕರ್ನಾಟಕ ಸುದರ್ಶನ) ಕೃಷ್ಣಮೂರ್ತಿ ಪುರಾಣಿಕರ (ಬೆಳಗಾವಿ ಜಿಲ್ಲಾದರ್ಶನ) ಸ.ಸ.ಮಾಳವಾಡರ (ಪಯಣದ ಕತೆ) ವಸಂತಿ ಚಂದ್ರ (ಭಾರತ ದರ್ಶನ) ಹಿರೇಮಲ್ಲೂರ ಈಶ್ವರನ್ (ಕವಿ ಕಂಡ ನಾಡು) ಸಿಂಪಿಲಿಂಗಣ್ಣ (ಸನ್ಯಾಸಿ ದಿಬ್ಬ) ಗಣೇಶ ಶಣೈ (ಲಕ್ಷದ್ವೀಪದಲ್ಲಿ) ಜಿ.ಪಿ.ಬಸವರಾಜು (ನೀಲಾಚಲಗಳ ನಡುವೆ, ಪಂಚಮುಖಿ ಪಂಜಾಬ್) ಅನುಸೂಯರಾವ್ (ಸುಂದರ ಕರ್ನಾಟಕ) ಅಶೋಕವರ್ಧನ ಜಿ.ಎನ್. (ತಾತಾರ್ ತಿಖರೋಹಣ) ಉಪ್ಪುಂದ ಚಂದ್ರಶೇಖರ ಹೊಳ್ಳ (ಉತ್ತರಾ ಖಂಡ, ಸುಮೇರು ಬನ ಸನ್ನಿಧಿಯಲ್ಲಿ) ಕೃಷ್ಣಮೂರ್ತಿ ಪಿ.ವಿ.(ವಿಂದ್ಯ ನರ್ಮದೆಯರ ನಾಡಿನಲ್ಲಿ) ಕೆ.ಟಿ.ಗಟ್ಟಿ, (ನಿಸರ್ಗ ಕನ್ಯೆ ಅಂಡಮಾನ್) ಗುರುಮೂರ್ತಿ ಪೆಂಡಕೂರ (ಬಹುರೂಪಾ ವಸುಂಧರಾ, ಆಂದ್ರ ಪ್ರಪಂಚ, ಅಮರನಾಥ ಪ್ರವಾಸ) ಎಚ್‌.ಎಸ್.ಭೀಮನಗೌಡರ (ಕಲಾಮಂಡಲದ ನಾಡಿನಲ್ಲಿ) ಕೆ.ಮರುಳ ಸಿದ್ದಪ್ಪ (ನೋಟ ನಿಲುವು) ಎಚ್.ಎಸ್. ಮುಕ್ತಾಯಕ್ಕ (ಮದಿರೆಯ ನಾಡಿನಲ್ಲಿ) ಐ.ಎ.ಲೋಕಪುರ (ಲೋಕಾವಲೋಕನ) ರಾಘವೇಂದ್ರ ಪಾಟೀಲ (ಅಜ್ಞಾತ ಮುಂಬೈ) ವೆಂಕಟಸ್ವಾಮಿ ಎಂ.(ಅಲೆಮಾರಿಯ ಹೆಜ್ಜೆಗಳು) ಶಂಕ್ರಯ್ಯ ತೋಮ(ಸಾಹಿತಿಯ ಗೋವಾ ಪ್ರವಾಸ) ಸಿದ್ಧರಾಮ ಹೊನ್ಕಲ್ (ಪಂಚನದಿಗಳ ನಾಡಿನಲ್ಲಿ) ಎಸ್‌.ಪಿ.ಪದ್ಮಪ್ರಸಾದ್ (ಅರಮನೆಗಳ ರಾಜ್ಯದಲ್ಲಿ) ಕೆ. ಸತ್ಯನಾರಾಯಣ (ಸದ್ದು! ದೇವರು ಸ್ನಾನ ಮಾಡುತ್ತಿದ್ದಾರೆ) ಸುನೀತಾಶೆಟ್ಟಿ (ಪ್ರವಾಸಿಯ ಹೆಜ್ಜೆಗಳು) ಶಶಿಕಲಾ ನಾಯಕ (ವಿಶ್ವ ದರ್ಶನಗಳು) ಪ್ರೇಮಾಭಟ್ (ಪೂರ್ವಾಂಚಲದಲ್ಲಿ ಕೆಲವು ದಿನಗಳು) ಮಮತಾರಾವ್ (ಕೈಲಾಸಾದಿಪತಿಯ ಮನೆಯಂಗಳದಲ್ಲಿ) ಹೀಗೆ ಇನ್ನೂ ಅನೇಕ ಪ್ರವಾಸ ಕೃತಿಗಳು ಓದಲು ಸಿಗುತ್ತವೆ.

ಪ್ರಪಂಚದ ಅತ್ಯಂತ ಪ್ರಾಚೀನ ನಾಗರಿಕತೆಗಳಲ್ಲಿ ಒಂದಾದ ಭಾರತದ ಬಗೆಗೆ ನಮ್ಮಲ್ಲಿ ಲೇಖಕರು  ಹಾಡಿಹೊಗಳಿದ್ದಾರೆ. ಸಂತೃಪ್ತಭಾವನೆ ತುಂಬಿಕೊಂಡಿದ್ದಾರೆ. ಕನ್ಯಾಕುಮಾರಿಯಿಂದ ಹಿಮಾಲಯದವರೆಗೆ ಸಾಮಾಜಿಕ, ಧಾರ್ಮಿಕ, ರಾಜಕೀಯ. ಐತಿಹಾಸಿಕ ಪರಿಚಯ ಮಾಡಿಕೊಡುತ್ತ ಹೋಗುತ್ತಾರೆ. ಹೆಚ್ಚಿನ ಕೃತಿಗಳು ಆಯಾ ರಾಜ್ಯಗಳ. ಒಳನಾಡು ಸ್ಥಳಗಳ ಪರಿಚಯ ಮಾಡಿಕೊಟ್ಟಿವೆ. ಪೂನಾ, ಮುಂಬೈ, ಸೂರತ್, ಕಲ್ಕತ್ತಾ, ನೇಪಾಳ, ಕಾಶ್ಮೀರ, ಗಯಾ, ಬದರಿ, ಕೇದಾರ, ನಾಗಪುರ, ಪ್ರಯಾಗ, ಅಯೋಧ್ಯ, ಲಕ್ನೋ, ಜಯಪುರ, ಅಮೃತಸರ, ಮದರಾಸು, ವಿಶಾಖಪಟ್ಟಣ, ಪುರಿ, ಭುವನೇಶ್ಚರ, ತಿರುವನಂತಪುರ, ಕೋಚಿನ್ ಮುಂತಾದ ಊರುಗಳ ಸ್ಥಳ ಪರಿಚಯ ಮಾಡಿಕೊಡುತ್ತಾ ನಮ್ಮನ್ನು ಸುತ್ತಾಡಿಸುತ್ತಾರೆ.

ತಿರುಪತಿ, ಶ್ರೀಶೈಲ, ಕನ್ಯಾಕುಮಾರಿ, ನಲಂದಾ, ಬುದ್ಧಗಯಾ, ಕುರುಕ್ಷೇತ್ರಗಳಲ್ಲಿ ನಮ್ಮನ್ನು ಭಕ್ತಿ ಭಾವಪರವಶದಡೆಗೆ ಒಯ್ಯುತ್ತಾರೆ. ಜೊತೆಗೆ ಕರ್ನಾಕದೊಳಗಿನ ಎಲ್ಲ ಜಿಲ್ಲೆಗಳ, ನದಿಗಳ, ದೇವಸ್ಥಾನಗಳ ಜೊತೆಗೆ ಹಳೇಬೀಡು, ಬೇಲೂರು, ಶ್ರವಣಬೆಳಗೊಳ, ಐಹೊಳೆ, ಪಟ್ಟದಕಲ್ಪು ಹಂಪಿ ಅಂತಹ ಪ್ರೇಕ್ಷಣೀಯ ಐತಿಹಾಸಿಕ ಸ್ಮಾರಕಗಳ  ಕಲೆಯಬೀಡುಗಳಲ್ಲಿಯೂ ನಮ್ಮನ್ನು ಓಡಾಡಿಸುತ್ತಾರೆ. ಗೋರಿ, ಮಸೀದಿ, ಚರ್ಚುಗಳ ಬಗೆಗೂ ಬರೆದು ಭಾವೈಕ್ಯತೆ ಮೆರೆದಿದ್ದಾರೆ. ಹೀಗಾಗಿ ಒಮ್ಮೊಮ್ಮೆ ಕೆಲವು ಪುಸ್ತಕಗಳು ಇವು ಸ್ಥಳ ಪರಿಚಯ ಪುಸ್ತಕಗಳೋ ಅಥವಾ ಪ್ರವಾಸ ಸಾಹಿತ್ಯ ಕೃತಿಗಳೋ ಎನಿಸಿದ್ದುಂಟು. ಹೆಚ್ಚಿನ ಪ್ರವಾಸಿಗರು ಪ್ರವಾಸಿ ಸಂಸ್ಥೆಗಳ ಮುಖಾಂತರ ಪ್ರವಾಸಿಸುತ್ತಾ ಹೋಗಿದ್ದಾರೆ. ಅವರಿಗೆ ತಕ್ಷಣ ಕಂಡಿದ್ದೆಲ್ದಾ ದಾಖಲಿಸುವ ಹುಮ್ಮಸ್ಸು. ಹೀಗಾಗಿ ಸಾಹಿತ್ಯ ಸ್ಪರ್ಶದ ಸೂಕ್ಷ್ಮ  ಒಳನೋಟಗಳು ಕಡಿಮೆಯಾದಂತೆ ಕಾಣುತ್ತವೆ.

ಇತ್ತೀಚೆಗೆ ಚಾರಣ (ಟ್ರೆಕ್ಕಿಂಗ್) ಕ್ಕೆ ಹೋಗಿ ಬಂದ ಕೆಲವರು ಕೃತಿಗಳನ್ನು ರಚಿಸಿದ್ದಾರೆ. ಇವುಗಳು ತುಂಬಾ ಲವಲವಿಕೆಯಿಂದ ಕೂಡಿವೆ. ಪ್ರಭಾಕರ ಶಿಶಿಲ ಅವರ (ಜಲಲ ಜಲದಾರೆ) ಶಶಿದರ ಹೆಬ್ಬಾರ ಹಾಲಾಡಿ (ಹಿತ್ತಲಿನಿಂದ
ಹಿಮಾಲಯಕ್ಕೆ) ಮುನಿಯಾಲ ಗಣೇಶ ಶೆಣೈ (ಮಂಜು ಮುಸುಕಿನ ಕಣಿವೆಗಳಲ್ಲಿ)ಪರಂಜ್ಯೋತಿ (ಬೆಟ್ಟ ಸಾಲಿನ ಮೋಡಿ) ಮುಂತಾದವುಗಳು.

ಜಾಣಗೆರೆ ವೆಂಕಟರಾಮಯ್ಯನವರ ‘ನಾಡು ಗುಂಡುಗಳ ನಾಡಿನಲ್ಲಿ ಶಾಂತಿಯ ಕನಸು’ ಪ್ರವಾಸ ಕಥನ ಓದುಗರನ್ನು ಹಿಡಿದಿಡುತ್ತದೆ. ಪಂಜಾಬಿನಲ್ಲಿ ಹತ್ಯಾಕಾಂಡ ನಡೆಯುತ್ತಿದ್ದ ಸಂದರ್ಭದಲ್ಲಿ ಇವರು ಪತ್ರಕರ್ತರಾಗಿ ಅಲ್ಲಿಗೆ ಹೋಗಿದ್ದಾರೆ. ಪಂಜಾಬಿನ ಭಯೋತ್ಪಾದಕರ ಕಾರ್ಯಾಚರಣೆಯಲ್ಲಿ ಅಲ್ಲಿಯ ಸಾವು ನೋವುಗಳ ಬಗೆಗೆ ಸ್ವರ್ಣಮಂದಿರದಲ್ಲಿ ನಡೆದ ಕಾರ್ಯಾಚರಣೆಯೆ ಬಗೆಗೆ, ಆಗಿನ ರಾಜಕೀಯ ಸಾಮಾಜಿಕ ಪರಿಸ್ಥಿತಿಗಳ ಬಗೆಯನ್ನು ಸಮಕ್ಷಮ ಕಂಡ ಅನುಭವಗಳನ್ನು ಕಣ್ಮುಂದೆ ನಡೆದಂತೆಯೇ ವಿವರಿಸುತ್ತಾ ಹೋಗುವ ರೀತಿ ಮೆಚ್ಚುವಂಥದ್ದು.

ಪ್ರೊ. ಕು.ಶಿ.ಹರಿದಾಸ ಭಟ್ಟರ “ಜಗದಗಲ” ಕೃತಿಯಲ್ಲಿ ಕರ್ನಾಟಕ ಅಸ್ಸಾಂ, ಮೇಘಾಲಯಗಳಲ್ಲಿಯ ಸಾಮಾಜಿಕ ಬದುಕಿನ ಅನೇಕ ಆಯಾಮಗಳನ್ನು ಪರಿಚಯ ಮಾಡಿಕೊಡುತ್ತಾರೆ.

ಕೃಷ್ಣಾನಂದ ಕಾಮತ್‌ರ “ವಂಗದರ್ಶನ” ಕೃತಿ  ಬಂಗಾಲದ ಅಂದಿನ ದಿನಗಳಲ್ಲಿ ನಡೆದ (1972ರ ರಕ್ತಕ್ರಾಂತಿಯ) ಕ್ರಾಂತಿಯಿಂದಾಗಿ ಜನಜೀವನದ ಮೇಲೆ ಹೇಗೆ ಪ್ರಭಾವವಾಯಿತು. ನಕ್ಸಲೀಯರ ಚಟುವಟಿಕೆಗಳು, ಕೊಲೆ ಸುಲಿಗೆ
ಅತ್ಯಾಚಾರಗಳು, ಬಡತನಗಳ ಚಿತ್ರಣಗಳೆಲ್ಲ ಇದರಲ್ಲಿವೆ. ಬಂಗ್ಲಾದೇಶದ ನಿರಾತ್ರಿತರು ಭಾರತಕ್ಕೆ ಬಂದು ನೆಲೆಸಿದ ಸಂದರ್ಭಗಳೆಲ್ಲ ಆಳವಾಗಿ ತಿಳಿಸುತ್ತ ಹೋಗುತ್ತಾರೆ.

“ನಾ ರಾಜಸ್ಥಾನದಲ್ಲಿ” ಇದೂ ಕೃತಿ ಕೃಷ್ಣಾನಂದಕಾಮತ್‌ರದೆ. ರಾಜಾಸ್ಥಾನದ ಜನಜೀವನದ ಪರಿಚಯ ಮಾಡಿಕೊಡುತ್ತಾರೆ. ಮುಖ್ಯವಾಗಿ ಮರುಭೂಮಿಯ ಜನಜೀವನ ಇಲ್ಲಿ ಕಾಣುತ್ತೇವೆ.

ಪದ್ಮ ಪ್ರಸಾದ್‌ರ ‘ಅರಮನೆಗಳ ರಾಜ್ಯದಲ್ಲಿ’ ಪ್ರವಾಸ ಕಥನದಲ್ಲಿ ರಾಜಸ್ಥಾನದ ಬಗೆಗೆ ಇನ್ನೂ ಹೆಚ್ಚಿನ ವಿವರಗಳು ಸಿಗುತ್ತವೆ. ಲೇಖಕರು ವೀರದಾಸಿ ಪನ್ನೆ ರಾಣಾಪ್ರತಾಪಸಿಂಹ. ಪೃಥ್ವಿರಾಜ್ ಸಂಯುಕ್ತಯರ ಕತೆ ಮುಂತಾದವುಗಳಿಂದ
ಪ್ರಭಾವಿತರಾಗಿ ರಾಜಸ್ಥಾನದ ವೀರನಾಡು ಸುತ್ತಾಡಿದ್ದಾರೆ. ರಾಜಸ್ಥಾನದ ಐತಿಹಾಸಿಕ ಸ್ಥಳಗಳಾದ ಚಿತ್ತೂರಿನ ಕೋಟೆ, ಜೈಸಲ್ಮೇರ್ ಮರುಭೂಮಿಯಲ್ಲಿ ಕಟ್ಟಿದ ಕೋಟೆ, ಜೋದಪುರದ ಕೋಟೆ, ಅಲ್ಲಿಯ ವಿಜಯಸ್ಥಂಬಗಳನ್ನು, ಉದಯಪುರ ರಾಣಕ್‌ಪುರಗಳಲ್ಲಿನ ಭವ್ಯಮಂದಿರಗಳನ್ನು ನೋಡಿ ಸಂತಸಪಟ್ಟಿದ್ದಾರೆ, ಮೌಂಟ್ಅಬೂ, ದಿಲ್ದಾಡಾದ ಜಿನಮಂದಿರಗಳನ್ನು ನೋಡಿದ್ದಾರೆ. ಅಜ್ಮೀರದ ದರ್ಗಾಗಳ ಪರಿಚಯವೂ ಇಲ್ಲಾಗುತ್ತವೆ. ಹೀಗೆ ಪ್ರತಿಪುಟಗಳಲ್ಲಿಯೂ ರಾಜಸ್ಥಾನದ ಬಗೆಗೆ ಅನೇಕ ವಿವರಗಳನ್ನು ತಿಳಿಸುತ್ತಾ ಹೋಗಿದ್ದಾರೆ. ಈ ರಾಜ್ಯದ ಬಗ್ಗೆ ಇಷ್ಟೊಂದು ವ್ಯಾಪಕ ವಿವರ ನೀಡುವ ಕನ್ನಡದ ಕೃತಿ ಇದೇ ಮೊದಲೆಂದು ಲೇಖಕರು ಹೇಳಿಕೊಂಡಿದ್ದಾರೆ.

ಜಿ.ಪಿ.ಬಸವರಾಜ್ ರವರು “ಪಂಚಮುಖಿ ಪಂಜಾಬ” ಕೃತಿಯಲ್ಲಿ ಪಂಜಾಬದ ಪ್ರಮುಖ ಘಟನೆಗಳನ್ನು ಮೆಲಕು ಹಾಕುತ್ತಾರೆ. 1984ರಲ್ಲಿ ಭಯೋತ್ಪಾದಕದ ಕಾರ್ಯಾಚರಣೆಯಲ್ಲಿ ಸಿಕ್ಕು ತತ್ತರಿಸಿಹೋದ ಸ್ವರ್ಣ ಮಂದಿರದ
ಸಂಕೀರ್ಣ, ಯಾತ್ರಾರ್ಥಿಗಳ ಮುಗ್ಧಭಕ್ತರ ಹೆಣಗಳ ರಾಶಿ, ಮುಂತಾದವುಗಳನ್ನು ನಮ್ಮ ಸ್ಮೃತಿಪಟಲದಲ್ಲಿ ಮತ್ತೊಮ್ಮೆ ಹಾಯಿಸುತ್ತಾರೆ. ಜಾಲಿಯನ್‌ವಾಲಾಬಾಗ್‌ದ ಹತ್ಯಾಕಾಂಡದ ಸ್ಥಳದಲ್ಲಿ ಅಡ್ಡಾಡಿ ಅಲ್ಲಿಯೇ ಇರುವ ಒಂದು ಮ್ಯೂಸಿಯಂ ಕೂಡಾ ಸಂದರ್ಶಿಸಿದ್ದಾರೆ, ಅಲ್ಲಿಕಂಡ ಚಿತ್ರಗಳು ಫೋಟೋಗಳು ನೋಡಿದಾಗ ಇತಿಹಾಸದ ಈ ರಾಕ್ಷಸೀಕೃತ್ಯ ಒಮ್ಮೆ ಕಣ್ಣುಮುಂದೆ ಸುಳಿದು ಮೈ ನಡುಗಿಸುತ್ತದೆ ಎಂದಿದ್ದಾರೆ. ಪಾಟಿಯಾಲಾದ ಪಂಜಾಬಿ ವಿಶ್ವವಿದ್ಯಾನಿಲಯದ ಆವರಣದಲ್ಲಿ ಜಾನಪದ ವೈವಿಧ್ಯ ಕಲೆಗಳಮ್ನ ಸಿಖ್ಖರ ವಿಶಿಷ್ಟ ಬಾಂಗ್ಡಾ ನೃತ್ಯವನ್ನು ನೋಡುವರು. ಅದು ಅತ್ಯಂತ ಅಕರ್ಷಣೀಯ ಚೈತನ್ಯಪೂರ್ಣ ಹುಮ್ಮಸ್ಸು ಉತ್ಸಾಹಗಳನ್ನು ಸೂಕ್ಷ್ಮ  ವೇದನೆಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿತ್ತು ಎನ್ನುವರು. ಸಿಖ್ಖರ ಧರ್ಮದ ಕೆಲವು ಒಳಪಂಗಡಗಳ ಪರಿಚಯವೂ ಇದರಲ್ಲಿದೆ. ಬಿಸಿರೋಟಿಗೆ ತಣ್ಣನೆಯ ಮೊಸರು ತಿನ್ನುವಸಂದರ್ಭ ಉಪ್ಪಿನಕಾಯಿಯನ್ನು ಪಲ್ಯವೆಂದು ಭಾವಿಸಿ ತಿಂದು ಪಟ್ಟುಪಾಡು ಹೀಗೆ ಕೆಲವು ಸಂದರ್ಭಗಳು ಲವಲವಿಕೆಯಿಂದ ಕೂಡಿವೆ.

“ಚಂದ್ರಕಾಂತ ಶಿಲೆಯ ಚಂಡಮಾರುತ” ಅಂಡಮಾನ ಪ್ರವಾಸ  ಸಂದರ್ಭದಲ್ಲಿ ತಾವು ಕಂಡ ಕೆಲವು ಯುವಕರ ಸಾಹಸ ಮುಖಾಂತರ ಅವರ ಸಂಭಾಷಣೆಯಲ್ಲಿ ರಚಿಸಿದ ಪ್ರವಾಸ ಕಥನ ವಾಣಿರಾವ್ ಅವರದಾಗಿದೆ. ಪ್ರವಾಸ
ಸಾಹಿತ್ಯದಲ್ಲಿ ಪ್ರವಾಸಿಯ ಅನುಭವಗಳೇ ಮುಖ್ಯವಾಗಿರಬೇಕಾದುದು ಅವಶ್ಯ. ಇಲ್ಲಿ ತಮ್ಮ ಅನುಭವಗಳಕ್ಕಿಂತ ಯುವಕರ ಸಾಹಸವ ಅವರ ಸಂತೋಷದ ಅನುಭವಗಳೇ ಇಡೀ ಪುಸ್ತಕ ತುಂಬಿಕೊಂಡಿದೆ. ಇಂಗ್ಲೀಷಿನ ಸಾಹಸ ಯಾತ್ರೆ ಪುಸ್ತಕಗಳ ಪ್ರಭಾವ ಇವರಿಗಾಗಿದೆ ಎಂದೆನಿಸುತ್ತದೆ.

ವಾಣಿರಾವ್ ಅವರದ್ದೇ ‘ಹಿಮಾಲಯ ಮಡಿಲಲ್ಲಿ’ ಎಂಬ ಇನ್ನೊಂದು ಪ್ರವಾಸ ಕೃತಿ ಇದು ಕಾದಂಬರಿ ರೂಪದಲ್ಲಿ ಇದೆ. ಒಂದು ಕೊಲೆಯ ನಿಗೂಢವನ್ನಾಧರಿಸಿ ದೇಶದ ಅನೇಕ ಭಾಗಗಳನ್ನು ಪರಿಚಯಿಸುತ್ತಾರೆ. ಬದರಿ ಕೇದಾರ, ಹಿಮಾಲಯದ ಗಂಗೋತ್ರಿ ಯಮನೋತ್ರಿ, ಅಮರನಾಥ, ಜೈನ ಮಂದಿರಗಳು, ಕಾಶ್ಮೀರ, ತಂಜಾವೂರ, ಕನ್ಯಾಕುಮಾರಿ, ಪಶುಪತಿನಾಥ ಮುಖಾಂತರ ಸುತ್ತಾಡಿಸುತ್ತ ಕರ್ನಾಟಕದ ಗಂಗಾ ಕಾವೇರಿಯವರೆಗೆ ವಿವರಣೆಗಳು ಸಿಗುವವು. ಇವೆಲ್ಲವುಗಳನ್ನು ಸುತ್ತಾಡಿಸುತ್ತ ಕೊನೆಗೆ ಕೊಲೆಯ ರಹಸ್ಯ ಸರಳ ವಿವರಣೆಯಿಂದ ಪರಿಹಾರವಾಗುವುದು. ಹೀಗೆ ಇವರು ಪ್ರವಾಸ ಸಾಹಿತ್ಯವನ್ನು ಕಥೆ, ಕಾದಂಬರಿಯ ಸಂಭಾಷಣೆಗಳಂತೆ ಬಳಸಿಕೊಳ್ಳುತ್ತ ವಿಶಿಷ್ಟ ರೀತಿಯಿಂದ ಬರೆದಿದ್ದಾರೆ.

ಮಮತಾರಾವ್ ಅವರ “ಕೈಲಾಸಾಧಿಪತಿಯ ಮನೆಯಂಗಳದಲ್ಲಿ” ಇದೊಂದು ಏಕಕಾಲಕ್ಕೆ ಪುರಾಣವೂ ನೂತನವೂ ಆಗುತ್ತಾ ಸಾಗುವ ಪ್ರವಾಸ ಕಥನ. ಸಮುದ್ರ ಮಟ್ಟದಿಂದ 16,500 ಅಡಿ ಎತ್ತರದಲ್ಲಿರುವ ಪರಮಶಿವನ ಧಾಮ.
ಇಲ್ಲಿ ಪರಿಕ್ರಮಿಸುವುದು ಸಾಮಾನ್ಯವಾದುದಲ್ಲ. ಅಂಕುಡೊಂಕಿನ ಪ್ರಪಾತಮಯವಾದ ಅರಣ್ಯಮಾರ್ಗದ ಅರೋವಣ, ಅವರೋಹಣ, ಯಾರ ಊಹೆಗೂ ನಿಲುಕದ ವಿಚಿತ್ರ ವಾತಾವರಣ ಅಗಮ್ಯವಾದ ಕಾಡು ಕಣಿವೆ, ಮಂಜು ಮುಸುಕಿದ
ಉಸಿರುಗಟ್ಟಿಸುವ ವಾತಾವರಣ. ಒಂದೊಂದು ಹೆಜ್ಜೆ ಎತ್ತಿಡುವುದೂ ಸಾವು ಬದುಕಿನ ಪ್ರಶ್ನೆಯಾಗು ಕಾಡುವ ಈ ಯಾತ್ರೆಯ ಕೊನೆಲ್ಲಿ ಸಿಗುವ ಅನುಭವ ತೀರಾ ವಿಶಿಷ್ಟವಾದುದು.

ಪುಣ್ಯ ಸಂಪಾದನೆಗಾಗಿ ಅಥವಾ ಪ್ರಕೃತಿ ಸೌಂದರ್ಯೋಪಾಸಕರಾಗಿ ಕೈಗೊಂಡ ಯಾತ್ರಾ ಪ್ರವಾಸ ಇದಲ್ಲ. ಇಲ್ಲಿ ಲೇಖಕಿ, ಪ್ರಕೃತಿ ಮತ್ತು ಮನುಷ್ಯನ ನಡುವಿನ ನಿರಂತರ ಸಂಘರ್ಷದ ಬಗೆಗೆ ಸಾಕಷ್ಟು ಚರ್ಚಿಸುತ್ತಾರೆ. ನಿಸರ್ಗದ
ವಿರಾಟ್ ಸ್ವರೂಪದ ಮುಂದೆ ಮನುಷ್ಯನ ಸಣ್ಣತನ ಇಲ್ಲಿ ಪರಿಚಯವಾಗುತ್ತದೆ ಎನ್ನುತ್ತಾರೆ.

ಎಚ್.ಎಸ್. ರಾಘವೇಂದ್ರರಾವ್ ಅವರ ‘ಜನ ಗಣ ಮನ’ ಕೃತಿಯಲ್ಲಿ ಬಂಗಾಳ, ಓರಿಸ್ಸಾದಲ್ಲಿಯ ತಮ್ಮ ಅನೇಕ ಅನುಭವಗಳನ್ನು ಅಲ್ಲಿಯ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಸಂದರ್ಭಗಳ ಹಿನ್ನೆಲೆಯಲ್ಲಿ ಕಂಡುಕೊಳ್ಳುತ್ತಾ
ಪರಿಚಯಿಸುತ್ತಾ ಹೋಗುತ್ತಾರೆ. ವಿಶ್ವಭಾರತಿ ಮತ್ತು ಶಾಂತಿನಿಕೇತನಗಳನ್ನು ನೋಡಿ ಅಂದಿನ ರಾಷ್ಟ್ರೀಯ ಮೌಲ್ಯಯುತವಾದ ಸ್ಥಳಗಳು ಇಂದು ಮ್ಯೂಸಿಯಂಗಳಾಗಿವೆ ಎಂದು ವಿಷಾದ ವ್ಯಕ್ತಪಡಿಸುವರು. ಅಲ್ಲಿ ಅನೇಕ ಹೆಸರಾಂತ ಸಾಹಿತಿಗಳಾದ ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಗೋಪಿನಾಥ ಮೊಹಂತಿಯವರನ್ನು ಭೇಟಿಯಾಗಿದ್ದಾರೆ. ಹಾಗೆಯೇ ಸುನೀಲಗಂಗೂಲಿ. ಶಿವಕುಮಾರ ಘೋಷ್ ಅಂತಹ ವಿದ್ವಾಂಸರರೊಂದಿಗೆ ಅಲ್ಲಿಯ ಶಿಕ್ಷಣ ಸಂಸ್ಕೃತಿ ಸಾಹಿತ್ಯದ ಬಗೆಗೆ ಚರ್ಚಿಸಿದ್ದಾರೆ. ಖುಜುರಾಹೋ ಮತ್ತು ಕೋನಾರ್ಕದ ಬಗೆಗೂ ಬರೆದಿದ್ದಾರೆ.

ಹೀಗೆ ಬೆರಳೆಣಿಕೆಯ ಕೆಲವು ಪ್ರವಾಸ ಕೃತಿಗಳು ಸಾಹಿತ್ಯಕ್ಕಿರಬೇಕಾದ ಸಾಹಿತ್ಯಿಕ ಮೌಲ್ಯಗಳನ್ನು ದೊರಕಿಸಿಕೊಡುತ್ತವೆ. ಮೇಲಿನ ಈ ಎಲ್ಲ ಕೃತಿಗಳು ಭಾರತದ ಉದ್ದಗಲ ಅಡ್ಡಾಡಿದವರ ಪ್ರವಾಸ ಕೃತಿಗಳಾದರೆ, ನಮ್ಮದೇ ಭಾರತದ ಭಾಗವಾಗಿದ್ದ ಅಂಡಮಾನ್, ನಿಕೋಬಾರ್, ಮಾಲ್ಡಿವ್ಸ್‌ ಲಕ್ಷದ್ವೀಪಗಳಲ್ಲಿ ಅಡ್ಡಾಡಿದ ನಮ್ಮ ಪ್ರವಾಸಿ ಲೇಖಕರ ಕೆಲವು ಕೃತಿಗಳು ಓದಲು ಸಿಗುತ್ತವೆ. ದೇ.ನಾ. ಶ್ರೀಯವರ (ಕಲಾತೀತರ ದ್ವೀಪದಲ್ಲಿ) ವಿಜಯದ ಸುಬ್ಬರಾಜ್ (ಸ್ವರ್ಗದ್ವೀಪದ ಕನಸಿನ ಬೆನ್ನೇರಿ) ರಹಮತ್ ತರಿಕೇರಿ (ಅಂಡಮಾನ್ ಕನಸು) ತ್ರೀವೇಣಿ ಶಿವಕುಮಾರ್ (ಹವಳದ್ವೀಪ) ಉಷಾ ಪಿ. ರೈ. (ಲಕ್ಷದ್ವೀಪಕ್ಕೆ ಲಗ್ಗೆ ಇಟ್ಬಾಗ) ಹೋ. ನಾಗರತ್ನ (ನಿಸರ್ಗಸ್ವರ್ಗ ಅಂಡಮಾನ್) ವಾಣಿರಾವ್ (ಚಂದ್ರಕಾಂತ ಶಿಲೆಯ ಚಂಡ ಮಾರುತ), ಎ.ಎಲ್‌.ರಾಮಚಂದ್ರರಾವ್ (ಮಾಲ್ಡಿವ್ಸ್‌ ದ್ವೀಪಗಳು)

ವಿಜಯಾಸುಬ್ಬರಾಜ್ ಅವರು ತಮ್ಮ ಕೃತಿ “ಸ್ವರ್ಗ ದ್ವೀಪದ ಕನಸಿನ ಬೆನ್ನೇರಿ” ಯಲ್ಲಿ ಅಂಡಮಾನ್ ಬಗೆಗೆ ತಾವು ಸಂಗ್ರಹಿಸಿದ ಒಂದಿಷ್ಟು ಮಾಹಿತಿಯನ್ನು ಹೇಳಿದ್ದಾರೆ. ಬಂಗಾಳಕೊಲ್ಲಿಯ ನಡುಗದ್ದೆಯಂತೆ ಕಾಣುವ ಅಂಡಮಾನ್ ಮತ್ತು ನಿಕೋಬಾರ್ ಸಣ್ಣ ಮತ್ತು ದೊಡ್ಡವಾದ ದ್ವೀಪ ಸಮುದಾಯವನ್ನು ಒಳಗೊಂಡಿದ್ದು, ವಿದ್ದಾಂಸರ ಅಭಿಪ್ರಾಯದಂತೆ ಮಲಯನ್ ಬಾಷೆಯ ಹಂಡುಮಾನ್ (ಹನುಮವನ್, ಕಪಿ) ಕ್ರಮೇಣ ಅಂಗಮೇನಿಯಾ ಅಂಡಮೇನಿಯಾ ಆಗಿ ಕೊನೆಗೆ ಅಂಡಮಾನ್ ಆಗಿ ಉಳಿದದ್ದು, ಇಲ್ಲಿಯ ಮೂಲ ನಿವಾಸಿಗಳು ಮಂಗೋಲಿಯನ್ನರು. ನಿಗ್ರೋ ಜನಾಂಗದವರೆಂದದ್ದು 17, 18 ನೇ ಶತಮಾನದಲ್ಲಿ ಯುರೋಪಿನ ಸಮುದ್ರ ಸಾಹಸಿಗಳ ಮತ್ತು ಮಿಷನರಿಗಳ
ಮುಖಾಂತರ ಈ ಭೂಪ್ರದೇಶ  ಪರಿಚಯ ಹೊಂದಿದ್ದು ವಿವರಿಸಿದ್ದಾರೆ. ನರಿ ಬುದ್ದಿಯ ಬ್ರಿಟಿಷರು ಏನನ್ನಾದರೂ ವಶಪಡಿಸಿಕೊಳ್ಳಬಲ್ಲ ರೆಂಬುದಕ್ಕೆ 1869ರಲ್ಲಿ ಅಂಡಮಾನನ್ನು ಸ್ಥಾಧೀನಪಡಿಸಿಕೊಂಡರು ಎನ್ನುತ್ತಾರೆ. ಈ ಬ್ರಿಟಿಷ್
ಜನಾಂಗಕ್ಕೂ ಅಂಡಮಾನಿಗೂ ಒಂದು ವಿಶೇಷ ಬಗೆಯ ರಾಜಕೀಯ ಸಂಬಂಧವಿತ್ತು. ಅಂಡಮಾನ್ ನಮ್ಮದೇ ಭಾರತದ ಭಾಗವಾಗಿದ್ದರೂ ನಮಗೇ ದಂಡನೆ  ನೀಡಲು ಇದನ್ನೇ ಕೇಂದ್ರವಾಗಿ ಬಳಸಿಕೊಂಡದ್ದು ದುರಂತವೆಂದು
ವಿಷಾದವ್ಯಕ್ತಪಡಿಸಿದ್ದಾರೆ. ಭೂಮಿಯ ಮೇಲಿನ ಸ್ವರ್ಗ ದ್ದೀಪದಲ್ಲಿ ತಮ್ಮ ಕಾಲೇಜಿನಿಂದ ಶೈಕ್ಷಣಿಕ ಪ್ರವಾಸಕ್ಕೆ ಹೋದ ಲೇಖಕಿ, ವಿದ್ಯಾರ್ಥಿಗಳು ಸಂತೋಷ, ಸಂಭ್ರಮದಲ್ಲಿ ಮುಳುಗೆದ್ದಿದ್ದಾರ.

ದೇ.ನಾ.ಶ್ರೀಯವರ ‘ಕಾಲಾತೀತರ ದ್ದೀಪದಲ್ಲಿ’ ಅಂಡಮಾನಿನ ಬಗೆಗೆ ಪರಿಚಯಿಸಿರುವ ಕೃತಿ. ವಿದ್ಯಾರ್ಥಿಗಳೊಂದಿಗೆ ಹಡಗಿನಲ್ಲಿ ಪ್ರಯಾಣಿಸಿದ ಸಂದರ್ಭದಿಂದ ಹಿಡಿದು ಮರಳಿ ಮನೆಗೆ ಬರುವವರೆಗಿನ ಸಂದರ್ಭಗಳನ್ನು ಅತ್ಯಂತ
ಸುಂದರವಾಗಿ ರಚಿಸಿದ್ದಾರೆ. ಅಲ್ಲಿಯ ಮೂಲನಿವಾಸಿಗಳು ಅವರ ಜೀವನದ ರೀತಿ ನೀತಿಗಳು ಓದುವಾಗ ಬೆರಗಾಗುತ್ತೇವೆ. ಮೂಲನಿವಾಸಿಗಳ ಕೆಲವು ಅಪರೂಪದ ಚಿತ್ರಗಳು ಇದರಲ್ಲಿವೆ. ಬರವಣಿಗೆ ಸಹಜ ಸರಳ ಸುಂದರ ನಿರೂಪಣೆಗಳಿಂದ ಕೂಡಿದ್ದು ತುಂಬಾ ಲವಲವಿಕೆಯಿಂದ ಓದಿಸಿಕೊರಿಡು ಹೋಗುತ್ತದೆ.

ಹೋ. ನಾಗರತ್ನ ‘ನಿಸರ್ಗಸ್ವರ್ಗ ಅಂಡಮಾನ್’ ಕೃತಿಯಲ್ಲಿ ಪ್ರಪಂಚದಲ್ಲಿಯೇ ಅತ್ಯಂತ ಸುಂದರವಾದ ದ್ದೀಪ ಅಂಡಮಾನವೆನ್ನುತ್ತಾರೆ. ಸಮುದ್ರದ ರುದ್ರಮನೋಹರ ಅಲೆಗಳ ನರ್ತನ, ಸಮುದ್ರದ ಗರ್ಭದಲ್ಲಿ ಅಡಗಿರುವ ಹವಳ ಮುತ್ತು ಜಲಚರ ಪ್ರಾಣಿಗಳ ಪ್ರಪಂಚ, ಅವುಗಳಿಂದ ನಿರ್ಮಿತವಾದ ಹವಳ ದ್ದೀಪಗಳು, ಶಂಖ,  ರಂಗುರಂಗಿನ ಮತ್ಸ್ಯಲೋಕ ಅವುಗಳ ಅಕರ್ಷಣೆಗೆ ಲೇಖಕಿ ಒಳಗಾಗಿದ್ದಾರೆ. ಜಾರವಾ ಒಂಗೆ, ಶಾಂಪೀನ್ ಆದಿವಾಸಿಗಳ ನಡೆನುಡಿ
ಅಚಾರಗಳನ್ನು ಪರಿಚಯಿಸಿ ಕೊಟ್ಟಿದ್ದಾರೆ.

“ಮಾಲ್ಡೀವ್ಸ್ ದ್ವೀಪಗಳು” ಪಾಟೀಲ ಪುಟ್ಟಪ್ಪನವರು ಎರಡು ತಿಂಗಳುಗಳವರೆಗೆ ತಮ್ಮ ಪತ್ನಿಯೊಂದಿಗೆ ಮಾಲ್ಡೀವ್ಸ್ ದ್ವೀಪದಲ್ಲಿ ಇದ್ದು ಬಂದು ಬರೆದ ಪ್ರವಾಸ ಕೃತಿ ಇದಾಗಿದೆ. ಮಾಲ್ಡೀವ್ಸ್ ದ್ದೀಪಗಳಲ್ಲಿಯ ಸಾಮಾಜಿಕ ಜನಜೀವನದ ವಿವರಣೆಗಳಿಂದ ಅನೇಕ ವಿಷಯಗಳನ್ನು ತಿಳಿದು ಕೊಂಡಂತಾಗುವುದು.

‘ಮಾಲ್ಡೀವ್ಸ್ ದ್ದೀಪಗಳು’ ಎ.ಎಲ್.ರಾಮಚಂದ್ರರಾವ್‌ರವರ ಪ್ರವಾಸ ಕೃತಿ. ಮಾಲ್ಡೀವ್ಸ್ ದ್ವೀಪಗಳ ಬಗೆಗೆ ಸಂಪೂರ್ಣ ಪರಿಚಯ ನಮಗೆ ಈ ಕೃತಿಯ ಮೂಲಕ ತಿಳಿಯುವುದು. ಶ್ರೀಲಂಕಾದಿಂದ 440 ಕಿ.ಮೀ. ಗಳಷ್ಟು ದೂರವಿರುವ ಈ ದ್ವೀಪಗಳು ಸಾಗರದಲ್ಲಿ ಮುಳುಗಿರುವ ದೊಡ್ಡ ದೊಡ್ಡ ಪರ್ವತ ಶ್ರೇಣೆಯ ಶಿಖರಗಳು ಎಂದಿದ್ದಾರೆ. ಈ ದ್ವೀಪಗಳ ಇತಿಹಾಸ, ಭೂಗೋಲ, ಸಾಮಾಜಿಕ ಪರಿಚಯವನ್ನೆಲ್ಲಾ ತಿಳಿಸಿಕೊಟ್ಟಿರುವರು. ಇಲ್ಲಿ ಹೆಚ್ಚಾಗಿ ಮುಸ್ಲಿಮರಿದ್ದು ಮೀನುಗಾರರಾಗಿರುವರೆನ್ನುವುದು ತಿಳಿದುಬರುವುದು.

ತ್ರಿವೇಣಿ ಶಿವಕುಮಾರ್‌ರರ ‘ಹವಳ ದ್ವೀಪಗಳಲ್ಲಿ’ ಅಂಡಮಾನ್ ಕುರಿತಾಗಿ ಸುಂದರವಾಗಿ ಬರೆದಿದ್ದಾರೆ.  ಸೆಲ್ಯುಲಾರ್‌ಜೈಲು, ಕಾಲಾಪಾನಿ ಶಿಕ್ಷೆಗೆ ಗುರಿಯಾದ ಸ್ವಾತಂತ್ರ ಹೋರಾಟಗಾರರ ಒಂದಿಷ್ಟು ವಿವರಗಳು, ಅದರಲ್ಲೂ ಕರ್ನಾಟಕದ ವೀರರ ಹೆಸರುಗಳು, ಊರುಗಳು ತಿಳಿಸಿ ಒಳ್ಳೆಯ ಕೆಲಸಮಾಡಿದ್ದಾರೆ. ರಾಸ್ ಐಲ್ಯಂಡ್, ವೈಪರ್ ಐಲ್ಯಂಡ್‌ಗಳ ಪರಿಚಯ ಹೇಳಿದ್ದಾರೆ. ಸೆಲ್ಯೂಲಾರ್ ಜೈಲ್ ಕುರಿತಾಗಿ ತೆಗೆದಿರುವ ದ್ದನಿ ಮತ್ತು ಬೆಳಕು ಕಾಯಕ್ರಮದಲ್ಲಿ ಖೈದಿಗಳು  ತೆಗೆಯಲು ಉಪಯೋಗಿಸುತ್ತಿದ್ದ ಕೈಗಾಣ, ಅವರ ಗೋಣಿ ಉಡುಪು ನೇಣುಗಂಬ, ಹಗ್ಗ  ನೋಡುತ್ತಿ- ದ್ದಂತೆಯೇ ಇವರ  ಗುಂಪಿನ ಸದಸ್ಯ ರೇಣುಕಾ ಅಂಕಲ್ ಬಿಕ್ಕಿಬಿಕ್ಕಿ ಅತ್ತದ್ದು, ಕಾರ್ಯಕ್ರಮ ಮುಗಿದ ಮೇಲೆ ಅಂಕಲ್ ಜೈಭಾರತ್ ಮಾತಾಕಿ ಎಂದು ಭಾವುಕರಾಗಿ ಜೈಕಾರಹಾಕಿದ್ದು ಓದುವಾಗ ಹೃದಯ ಆರ್ದ್ರವಾಗುತ್ತದೆ. ವೈಪರ್ ಐಲ್ಯಾಂಡಿನಲ್ಲಿ ಮಹಿಳಾ ಖೈದಿಗಳನ್ನು ಇಡುತ್ತಿದ್ದರಂತೆ. ಜಾಲಿಬಾಯ್ ದ್ವೀಪದಲ್ಲಿ ಅಡ್ಡಾಡಿದ್ದಾರೆ ಲೇಖಕಿ. ಈಜುಗಾರದ ಸಹಾಯದಿಂದ ಕಡಲೊಳಗಿನ ಅದ್ಬುತ ಲೋಕ ಕಂಡಿದ್ದಾರೆ. ಸಂತೋಷ ಪಟ್ಟದ್ದಾರೆ. ಲವಲವಿಕೆಯಿಂದ ಓದಿಸಿಕೊಂಡು ಹೋಗುವಕೃತಿ ಇದಾಗಿದೆ.

ಕೆ.ಉಷಾ ಪಿ. ರೈರವರು ‘ಲಕ್ಷದ್ವೀಪಕ್ಕೆ ಲಗ್ಗೆ ಇಟ್ಟಾಗ’ ಪ್ರವಾಸ ಕೃತಿಯಲ್ಲಿ ಲಕ್ಷದ್ವೀಪದ ಬಗೆಗೆ ಅನೇಕ ಮಾಹಿತಿಗಳನ್ನು ಕೊಟ್ಟಿದ್ದಾರೆ. ಸುಮಾರು 32 ಕಿಲೋಮೀಟರ್ ವಿಸ್ತಾರದಲ್ಲಿ ಅರ್ಧಲಕ್ಷಕ್ಕಿಂತ  ಜನಸಂಖ್ಯೆ ಇರುವ ಲಕ್ಷದ್ವೀಪ ನಮ್ಮ ದೇಶದ ಅತಿ ಚಿಕ್ಕ ಯೂನಿಯನ್ ಟೆರಿಟರಿ. ಲಕ್ಷದ್ವೀಪದ ಜನರು ಇಸ್ಲಾಂ ಧರ್ಮಸ್ಥರು. ಅವರೆಲ್ಲ ಅಲ್ಲಿಗೆ ಬಹಳ ಹಿಂದೆ ಬಂದು ನೆಲೆಸಿದ ಹಿಂದುಗಳೇ ಎನ್ನುವುದು ನಿರ್ವಿವಾದ. ಅಲ್ಲಿ ಒಟ್ಟು ಮುನ್ನೂರು ಮಸೀದಿಗಳಿವೆ. ಒಂದೊಂದು ಹಿಂದೂ ದೇವಸ್ಥಾನಗಳೂ ಇವೆ. ಸುಮಾರು ಕುಟುಂಬಗಳ ಹೆಸರು ಬ್ರಾಹ್ಮಣರ ಅಥವಾ ಮಲಬಾರಿನ ನಾಯರ್ ಹೆಸರುಗಳನ್ನು ಹೋಲುತ್ತವೆ. ಈ ದ್ವೀಪಕ್ಕೆ ಸುತ್ತುವರಿದಿರುವ ಭೋರ್ಗರೆವ ಸಮುದ್ರದಲ್ಲಿ ಚಾಚಿರುವ ಹವಳದ ಬಂಡೆಗಳ ಸಾಲುಗಳು, ದ್ವೀಪದ ತುಂಬಾ ಬೆಳೆದಿರುವ ಕಲ್ಪವೃಕ್ಷದ ಸಾಲುಗಳು ದ್ವೀಪವನ್ನು ಸ್ವರ್ಗಮಾಡಿದೆ ಎಂದಿದ್ದಾರೆ ಲೇಖಕಿ.

ಭಾರತಕ್ಕೆ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಕ್ಕೆ ಖ್ಯಾತಿ ಬಂದಿದೆ. ವಿದೇಶಿಗರಿಗೆ ಭಾರತ ಪ್ರವಾಸವೆಂದರೆ ನಮ್ಮ ಸಂಸ್ಕೃತಿಯೇ ಕಾರಣವೆನ್ನಬಹುದು. ದೇವಾಲಯಗಳು, ಸ್ಮಾರಕಗಳು, ಜನಜೀವನದಲ್ಲಿ ಹಾಸುಹೊಕ್ಕಾದ ಹಬ್ಬ ಆಚಾರ ನಂಬಿಕೆಗಳು, ಗ್ರಾಮೀಣ ಸೊಗಡು ಮುಂತಾದವುಗಳನ್ನು ನೋಡಬಯಸಿ ವಿದೇಶಿಗರು ಲಕ್ಷ ಲಕ್ಷಗಳ ಸಂಖ್ಯೆಯಲ್ಲಿ ಇಲ್ಲಿಗೆ ಅಗಮಿಸುತ್ತಿದ್ದಾರೆ. ಇಲ್ಲಿಯ ತಾಜ್‌ಮಹಲ್, ದಕ್ಷಿಣದ ಮಧುರೆ ಮೀನಾಕ್ಷಿ, ಅಜಂತಾ, ಎಲ್ಲೋರಾ. ಗುಹಾಂತರ ದೇವಾಲಯಗಳು. ಸೋಮನಾಥಪುರ, ಬೇಲೂರು ಐಹೊಳೆ, ಪಟ್ಟದಕಲ್ಲು ಹಂಪಿ ಮುಂತಾದ  ಶಿಲ್ಪಕಲಾಕೃತಿಗಳು ಅವರಿಗೆ ಆಕರ್ಷಣೀಯವಾಗಿವೆ. ಜೊತೆಗೆ ಡಾಲರ್‌ದಿಂದ ರೂಪಾಯಿಗಳಲ್ಲಿ  ಖರ್ಚುಮಾಡು- ವವರಿಗೆ ಯಾವುದೂ ಅವರಿಗೆ ಭಾರ ಎನಿಸುವುದಿಲ್ಲ. ಮೇಲಾಗಿ ಭಾರತೀಯರು ಅತಿಥಿ ಸತ್ಕಾರ ಪ್ರಿಯರೆನ್ನುವ
ಮನವರಿಕೆಯೂ ಅವರಿಗಿದೆ. ಇವೆಲ್ಲವೂ ಅವರಿಗೆ ಸಂತೋಷ ನೆಮ್ಮದಿ ಕೊಡುತ್ತವೆ. ಭಾರತಕ್ಕೆ ಭೇಟಿಕೊಟ್ಟ ಅನೇಕ ವಿದೇಶಿ ಪ್ರವಾಸಿಗರು ಭಾರತದ  ಅನೇಕ ಪ್ರವಾಸ ಕಥನಗಳನ್ನು ಬರೆದಿದ್ದಾರೆ.

ಹಾಗೆಯೇ ನಮ್ಮ ಪ್ರವಾಸಿಗರೂ ಅನೇಕ ಕಾರಣಗಳಿಂದ ವಿದೇಶಗಳಿಗೆ ಭೇಟಿ ನೀಡಿದ್ದಾರೆ. ಜಗತ್ತಿನ ಉದ್ದಗಲ ಅಡ್ಡಾಡುತ್ತ ಅಲ್ಲಿಯ ಅನೇಕ ಮಹತ್ವದ ವಿಷಯಗಳನ್ನು ದಾಖಲಿಸುತ್ತ ಹೋಗಿರುವುದು ನಮ್ಮ ಪ್ರವಾಸ ಸಾಹಿತಿಗಳ
ಕೃತಿಗಳಿಂದ ಕಂಡುಕೊಳ್ಳುತ್ತೇವೆ. ನಮ್ಮ ಏಷ್ಯಾ ಖಂಡದೊಳಗಿನ ದೇಶಗಳಾದ ಭಾರತದ ನೆರೆಯ ದೇಶಗಳು ಪಾಕಿಸ್ತಾನ, ರಶಿಯಾ, ಚೈನಾ, ಜಪಾನ್. ಸಿಂಗಾಪೂರ, ಇಂಡೋನೇಷಿಯಾ ಥಾಯ್‌ಲ್ಯಾಂಡ್‌, ವಿಯಟ್ನಾಮ್,
ಕಾಂಬೋಡಿಯಾ. ಕೊಲ್ಲಿ ದೇಶಗಳು ಮುಂತಾದ ದೇಶಗಳ ಬಗೆಗೆ ಸಾಕಷ್ಟು ವಿವರವಾದ ವಿಷಯಗಳು ತಿಳಿದುಕೊಳ್ಳಲು ನಮ್ಮ ಜ್ಞಾನಾರ್ಜನೆ ವೃದ್ಧಿಪಡಿಸಿಕೊಳ್ಳಲು ಇಂತಹ ಪ್ರವಾಸ ಕೃತಿಗಳು ಸಹಕಾರಿಯಾಗಿವೆ. ಏಷ್ಯಾದ ರಾಷ್ಟ್ರಗಳ ಬಗೆಗೆ ಪ್ರವಾಸ ಕೃತಿ ರಚಿಸಿದವರಾದ ಎಚ್‌.ವಿ. ಶ್ರೀರಂಗರಾಜು (ಸೋವಿಯತ್ ದಿನಚರಿ)
ಬಸವರಾಜ ಕಟ್ಟಮನಿ (ನಾನು ಕಂಡ ರಶಿಯಾ) ಜಿ.ಎಸ್. ಶಿವರುದ್ರಪ್ಪ (ಮಾಸ್ಕೋದಲ್ಲಿ ಇಪ್ತತ್ತೆರಡು ದಿನ) ಹ.ವೆಂ. ನಾಗರಾಜ್ (ನವರಶ್ಯದ ನೋಟ) ವಿ.ವಿ.ಉಪಾದ್ಯಾಯ (ಲೆನಿನ್‌ರನಾಡಿನಲ್ಲಿ) ಬೀಚಿ. (ದೇವರಿಲ್ಲದ ಗುಡಿ) ಬಿಳಿಗೆರೆ
ರಾಮಚಂದ್ರರಾಯದ (ನಾನು  ಕಂಡ ರಷ್ಯಾ) ಎಚ್‌.ಎಸ್‌.ಹರಿಶಂಕರ (ಸುಂದರ ಮಾಸ್ಕೊ ಸುಂದದ ರಶಿಯಾ) ಮುಂತಾದವರು ರಶ್ಯಾದ ಬಗೆಗೆ ತಿಳಿಸಿಕೊಟ್ಟಿದ್ದಾರೆ. ಚೀನಾದ ಬಗೆಗೆ ಎಚ್.ಅರ್. ದಾಸೇಗೌಡರ  (ಸಾಂಗ್‌ಸೇನ್‌ತುಂಗ್‌ನೆಲದಲ್ಲಿ) ಲಂಕಾದ ಬಗೆಗೆ ಕುದ್ಕಾಡಿ ವಿಶ್ವನಾಥ ರೈ ಅವರ ಲಂಕಾದರ್ಶನ, ಸುಧಾಮೂರ್ತಿ
(ಕಾವೇರಿಯಿರಿದ ಮೆಕಾಂಗಿಗೆ). ವಾಗೀಶ್ವರಿ ಶಾಸ್ತ್ರಿಯವರ (ಸಿರಿಸಿಂಗಾರದ ಸಿಂಗಾಪುರ), ಶಿವರಾಮಕಾರಂತರ (ಪೂರ್ವದಿಂದ ಅತ್ಯಪೂರ್ವಕ್ಕೆ). ವಿ.ಕೆ.ಗೋಕಾಕರ (ಸಮುದ್ರದಾಚೆಯಿಂದ) ಸಿ.ಎಸ್.ಅಂಗಡಿ, ನಿರಂಜನರು ಜಪಾನದ ಬಗೆಗೆ ಬರೆದ (ಎಕ್ಸ್‌ಪೋ 70) ಕು.ಶಿ.ಹರಿದಾಸ ಭಟ್ಟರ (ಜಗದಗಲ), ಪ್ರವೀಣಫರ್ನಾಂಡಿಸ್ (ಕಣ್ಣುಕುಕ್ಕುವ ಜಪಾನ್), ಅರಬ್  ಬಗೆಗೆ ಲತಾಗುತ್ತಿ (ನಾಕಂಡಂತೆ ಅರೇಬಿಯಾ), ಮತ್ತಿಹಳ್ಳಿನಾಗರಾಜ್ (ಮರುಭೂಮಿ ಚಿಗುರಿತು).
ದೇ.ಜ.ಗೌ.ರ (ಎಸುವಿಭೀಷಣರ ನಾಡಿನಲ್ಲಿ) ಹೀಗೆ ಅನೇಕರ ಕೃತಿಗಳು ಕಂಡುಬರುತ್ತವೆ.

ನಮ್ಮ ನೆರೆಯ ರಾಷ್ಟ್ರ ಪಾಕಿಸ್ತಾನಕ್ಕೆ ಹೋಗಿಬಂದ ಡಾ.ಶ್ರೀನಿವಾಸ್ ಕುಲಕರ್ಣಿಯವರು ‘ಪಾಕಿಸ್ತಾನದಲ್ಲಿ ನಾನು’ ಎಂಬ ಕೃತಿ ದಚಿಸಿದ್ದಾರೆ. 56 ವರ್ಷಗಳ ಹಿಂದಷ್ಟೇ ಅಸ್ತಿತ್ವಕ್ಕೆ ಬಂದ ದೇಶ ಪಾಕಿಸ್ತಾನ ಮತೀಯ ಆಧಾರದ
ಮೇಲೆ ದೇಶದ ವಿಭಜನೆಯಿಂದ ಸೃಷ್ಟಿಯಾದ ದೇಶ ಇದು ಎಂದು ಹೇಳುತ್ತಾ ಪುರಾತನ ನಾಗರಿಕತೆಯಾದ ಸಿಂದೂ ನದಿ ಸಂಸ್ಕೃತಿಕಾಲದ ಹರಪ್ಪಾ, ಮೆಹೆಂಜೊದಾರೋ ನಗರಗಳ ಅವಶೇಷ ನೆನಪಿಸಿಕೊಂಡಿದ್ದಾರೆ. ತಕ್ಷಶಿಲಾ,
ಪ್ರಾಚೀನ ಭಾರತದ  ಕೇಂದ್ರವಾಗಿದ್ದು ಅಲ್ಲಿ ಚಾಣಕ್ಯ, ವೈಯಾಕರಣಿ. ಪಾಣಿನಿ. ಚರಕರಂಥವರು ಇದ್ದು ಓದಿದ್ದು ಹೇಳುತ್ತಾರೆ. ಹಾಗೆಯೇ ಅಲ್ಲಿ ಬೌದ್ಧ ದೇವಾಲಯಗಳು, ಸ್ತೂಪಗಳು, ವಿಹಾರಗಳ ಬಗೆಗೆ ಪರಿಚಯಿಸುತ್ತಾ ಅಲ್ಲಿ ದೊರೆತ ಸ್ಮಾರಕಗಳನ್ನು. ಪಳೆಯುಂಳಿಕೆಗೆಳನ್ನು, ಅವಶೇಷಗಳನ್ನು. ಅತ್ಯಂತ ಕಾಳಜಿಯಿಂದ ಮ್ಯೂಸಿಯಂದಲ್ಲಿ  ರಕ್ಷಿಸಿಟ್ಟಿದ್ದಾಗಿ ಹೇಳಿದ್ದಾರೆ. ಮೊಗಲರಕಾಲದ ಶಾಲಿಮಾರ್‌ಗಾರ್ಡನ್ 1642ರಲ್ಲಿ ನಿರ್ಮಿಸಿದ್ದು, ಅದರ ಅಂದಚೆಂದಗಾರಿಕೆಗೆ ನಿಬ್ಬೆರಗಾಗಿದ್ದಾರೆ.

“ನಾನು ಕಂಡ ಬಂಗ್ಲಾದೇಶ” ಇದು ರಾವ್ ಬಹದ್ದೂರರ ಪ್ರವಾಸ ಕಥನ. ಬಂಗ್ಲಾದೇಶ ಸ್ವಾತಂತ್ರ್ಯ ಪಡೆದ ನಂತರ ಲೇಖಕರು ಆ ನಾಡಿನ ತುಂಬೆಲ್ಲ ಸುತ್ತಾಡಿದ್ದಾರೆ. ಪಾಕಿಸ್ತಾನದ ದಬ್ದಾಳಿಕೆಯನ್ನು ಅಂದು ಪೂರ್ವಪಾಕಿಸ್ತಾನ (ಇಂದಿನ
ಬಂಗ್ಲಾದೇಶ) ಹೇಗೆ ಎದುರಿಸಿದೆ ಎನ್ನುವ ಅನೇಕ ಸೂಕ್ಷ್ಮ ವಿವರಣೆಗಳನ್ನೆಲ್ಲ ಕೊಡುತ್ತ ಹೃದಯ ತೇವವಾಗಿಸುವಂತೆ ಬರೆದಿರುವರು. ಸಾವು ನೋವು ಹಿಂಸೆಗಳ ವಿರಾಟ್ ಸ್ವರೂಪಗಳನ್ನೆಲ್ಲಾ ಅಲ್ಲಿಯವರಿಂದಲೇ ಕೇಳಿ ಕಳವಳಪಟ್ಟು- ಕೊಂಡು ವಿವರವಾಗಿ ತಿಳಿಸಿಕೊಟ್ಟಿರುವರು. ಬಂಗ್ಲಾದೇಶ ಸ್ವತಂತ್ರ ಪಡೆದ ನಂತರ ಅಧ್ಯಕ್ಷ ಶೇಕ್ ಮುಜಿಬುರ್ ರೆಹಮಾನ ಅವರು ತಮ್ಮ ದೇಶದ ಏಳಿಗೆಗಾಗಿ ಪ್ರಯತ್ನಿಸುವ ಯೋಜನೆಗಳ ಬಗೆಗಿನ ಗುರಿಯಾಗಲೀ, ಅಲ್ಲಿಯ ಸಾಮಾಜಿಕ. ರಾಜಕೀಯ ವಿಷಯಗಳಲಾಲ್ಲಾಗಲಿ ಒಂದಡೆ ವಿವರವಾಗಿ ಓದಲು ಸಿಕ್ಕಿರುವ ಅಪರೂಪದ ಪುಸ್ತಕ
ಇದಾಗಿದೆ.

ಸುಮಾರು 800 ವರ್ಷಗಳ ಇತಿಹಾಸವಿರುವ ರಶಿಯದ ಬಗೆಗೆ ನಮ್ಮ ರಶಿಯಾ ಪ್ರವಾಸಿ ಲೇಖಕರು ಎನೂ ಬಿಡದೇ ಎಲ್ಲ ದಾಖಲಿಸಿದ್ದಾರೆ. ಝಾರ್‌ ಚಕ್ರವರ್ತಿಗಳ ಕಾಲದ ನಿರಂಕುಶ ಪ್ರಭುತ್ವ, ಆಕ್ರಮಣ, ಡಂಬಾಚಾರಗಳ ಚಿತ್ರಗಳೆಲ್ಲಾ
ಕಣ್ಣಿಗೆ ಕಟ್ಟುವಂತಿವೆ. ಕ್ರೆಮ್ಲಿನ್ ಗೋಡೆಗೆ ಎದುರಾಗಿರುವ ಕೆಂಪು ಚೌಕದ ಬಗೆಗೆ ನಮ್ಮೆಲ್ಲ ಲೇಖಕರು ವಿವರವಾಗಿ ಗುರುತಿಸಿದ್ದಾರೆ. ಕೆಂಪುಚೌಕು ಇಡೀ ಸೊವಿಯತ್ ರಶಿಯದ ಐತಿಹಾಸಿಕ, ರಾಜಕೀಯ, ಸಂಸ್ಕೃತಿಗಳ ಸಂಕೇತ- ವೆನ್ನಬಹುದಾಗಿದೆ. ರಷ್ಯಜನಾಂಗ ಜನ್ಮ ತಾಳಿದಾಗಿನಿಂದ ಹಿಡಿದು ಬಾಹ್ಯಾಕಾಶಯುಗ ಜನ್ಮ ತಳೆಯುವ ತನಕ ಅನೇಕ ಮಹತ್ವದ ಘಟನಾವಳಿಗಳನ್ನು ಈ ಕೆಂಪು ಚೌಕು ಸ್ಮರಣೆಗೆ ತರುವುದೆಂದು ರಶಿಯದ ಚರಿತ್ರೆಕಾರ ನಿಕೊಲಯಮ್‌ಕರಮಜಿನ್ ಹೇಳುತ್ತಾನೆ. ಶತಮಾನಗಳ ಸೋಲುಗೆಲುವು, ಸುಖದುಃಖ. ಆಸೆ ನಿರಾಶೆಗಳನ್ನು ಈ ಚೌಕು ಗುರುತಿಸಿದೆ. 1856ರಲ್ಲಿ ರೊಚ್ಚಿಗೆದ್ದ ಮಾಸ್ಕೋಜನ ನಿರ್ದಯ ಶ್ರೀಮಂತರ ತೆರಿಗೆ ಸುಲಿಗೆದಾದರನ್ನು. ಜೀವಂತ ಸುಲಿದದ್ದು ಇಲ್ಲಿಯೇ. ರಶಿಯದ ಸಮಸ್ತ ವ್ಯಾಪಾರ ವಹಿವಾಟುಗಳು ನೆಡೆಯುತ್ತಿದ್ದುದು ಇದೇ ಚೌಕದಲ್ಲಿಯೇ, ಚರ್ಚ್, ಮೆರವಣಿಗೆಗಳು. ನಡೆಯುತ್ತಿದ್ದುದು, ಕ್ರಾಂತಿನಾಯಕರನ್ನು ನೇಣುಗಂಬಕ್ಕೆ ಏರಿಸುತ್ತಿದ್ದುದು ಕೂಡಾ ಇಲ್ಲಿಯೇ. ಕೆಂಪು ಚೌಕದಲ್ಲಿ ನಡೆದ ಪ್ರತಿಯೊಂದು ಘಟನೆಯೂ ಇಡೀ ರಷ್ಯದ ಹರ್ಷಕ್ಕೆ ಇಲ್ಲವೇ  ಇಲ್ಲವೇ ಉದ್ರೇಕಕ್ಕೆ ಕಾರಣವಾಗುತ್ತಿತ್ತು. ಹೊಸ ಹೊಸ ತಲೆಮಾರುಗಳ ಹೊಸಹೊಸ ಹೋರಾಟಗಳನ್ನು ಹೂಡಿದ್ದು, ಪ್ರತಿಭಟನೆ ಪ್ರದರ್ಶನಗಳನ್ನು ನಡೆಸಿದ್ದು ಈ ಕೆಂಪು ಚೌಕದಲ್ಲಿಯೇ ಎಂದು ಸುದೀರ್ಘವಾಗಿ ತಿಳಿಸಿಕೊಡುತ್ತಾರೆ. ಹ.ವೆಂ.ನಾಗರಾಜ್‌ರವರು ತಮ್ಮ ಕೃತಿ ‘ನವ ರಷ್ಯದ ನೋಟ’ದಲ್ಲಿ.

ಸೋವಿಯತ್ ಸಮಾಜವಾದಿ ಗಣರಾಜ್ಯ ಸಾಧಿಸಿದ ಪ್ರಗತಿಯನ್ನು ತೋರಿಸುವ ಮ್ಯೂಸಿಯಂಗಳು ರಶಿಯಾದಲ್ಲಿ ಸಾಕಷ್ಟು ಇವೆ. ಟ್ಯಾಕ್ಟರ್ ಲಾರಿಗಳು, ಟೆಲಿವಿಜನ್ ಸೆಟ್ಟುಗಳು ಪ್ರಾಚೀನ ಆಭರಣಗಳು ಉಡುಗೆ ತೊಡುಗೆ,
ಪ್ರಸಿದ್ಧ ಲೇಖಕರ ರಾಜಕಾರಣಿಗಳ ಕಂಚಿನ ಪ್ರತಿಮೆಗಳು. ತೈಲಚಿತ್ರಗಳ ಅಪೂರ್ವ ಸಂಗ್ರಹಗಳು ಕಾಣಸಿಗುತ್ತವೆ ಎಂದಿದ್ದಾರೆ ಲೇಖಕರು. ಜಗತ್ತಿನ ರಂಗಭೂಮಿಗೆ ರಷ್ಯ ನೀಡಿರುವ ಒಂದು ವಿಶಿಷ್ಟ ಕಾಣಿಕೆ ಎಂದರೆ ಬ್ಯಾಲೆ ನೃತ್ಯ. ಬ್ಯಾಲೆ ನೃತ್ಯದ ಬಗೆಗೆ, ಅಲ್ಲಿಯ ರಂಗಮರದಿರಗಳ ಬಗೆಗೆ ತುಂಬ ಮೆಚ್ಚಿಕೊಂಡು ಬರೆದಿದ್ದಾರೆ ಲೇಖಕ  ಹ.ವೆಂ.ನಾಗರಾಜ್. ಬ್ಯಾಲೆಯ ಒಂದು ನೃತ್ಯಪ್ರದರ್ಶನಕ್ಕೆ ಏನಿಲ್ಗೆಂದರೂ ಮೂರುಸಾವಿರ ತಜ್ಞರ ತಂಡ ದುಡಿಯುತ್ತದೆಯಂತೆ. ರಶಿಯಾ ಪ್ರೇಕ್ಷಕನಿಗೆ ಬ್ಯಾಲೆಯನ್ನು ಸಿದ್ಧಗೊಳಿಸುವುದು ಮಾತ್ರವೇ ಅಲ್ಲ ಬ್ಯಾಲೆಗೆ  ಪ್ರೇಕ್ಷಕರನ್ನೂ ಸಿದ್ಧಗೊಳಿಸುವುದು.

ಜಗತ್ತಿನ ಸಾಹಿತ್ಯ ಪ್ರಪಂಚಕ್ಕೆ ರಷ್ಯದ ಲೇಖಕರ ಸ್ಥಾನಮಾನ ಬಹಳ ದೊಡ್ಡದು. ಪುಷ್ಕಿನ್ ರಷ್ಯದ ಸಾಹಿತ್ಯದ ಮಹಾಕವಿ (17ನೇ ಶತಮಾನ) ಅವನ ನೆನಪಿನಲ್ಲಿ ರಸ್ತೆಯ ಚೌಕು ಉದ್ಯಾನವನಗಳು, ರಂಗಮಂದಿರ, ಗ್ರಂಥಾಲಯಗಳಿಗೆಲ್ಲ ಹೆಸರಿಸಿರುವುದು ಅಲ್ಲಿ ಹೋಗಿ ಬಂದವರೆಲ್ಲ ದಾಖಲಿಸುತ್ತಾರೆ. ಪುಷ್ಕಿನ್ ನಂತರ ಅನೇಕ ಪ್ರತಿಭಾವಂತ ಹೆಸರಾಂತ ಲೇಖಕರ ಪಟ್ಟಿಯೇ ಕಂಡು ಬರುತ್ತದೆ. ಲಿಯೋಟಾಲ್‌ಸ್ಟಾಯ್. ಮ್ಯಾಕ್ಸಿಂ ಗೋರ್ಕಿ. ಡಾಸ್ಟೋವಸ್ಕಿ ಅಂತಹ ಹೆಸರಾರತರನ್ನು ನಾವು ಪದೇ ಪದೇ ನೆನಪಿಸಿಕೊಳ್ಳುತ್ತಾ ಉದಾಹರಿಸಿಕೊಳ್ಳುತ್ತೇವೆ.

ದೆ.ಜ.ಗೌ. “ರಶಿಯಾ ಪ್ರವಾಸ”ದಲ್ಲಿದ್ದಾಗ ಅಲ್ಲಿಯ ಜನರ ಪ್ರಾಮಾಣಿಕತೆ, ದುಡಿಮೆಯ ಬಗೆಗಿನ ಮನದಾಳದ ಪ್ರೀತಿ, ವೈಜ್ಞಾನಿಕ ಪ್ರಗತಿ, ಜೀವನಶ್ರದ್ಧೆ, ಸಂಶೋಧಕ ವಿದ್ವಾಂಸರು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವ ಆಸಕ್ತಿ, ತೋರುವ ಪರಿಶ್ರಮ, ಅವರ ಆಳವಾದ ವ್ಯಾಸಂಗ, ಸಮರ್ಪಣಾಭಾವ, ಪ್ರಾಮಾಣಿಕತೆ ಕಲೆ ಸಾಹಿತ್ಯಗಳ ಬಗೆಗಿನ ಅಪಾರ ಪ್ರೀತಿ ಅಭಿಮಾನಗಳ ಬಗೆಗೆ ತಿಳಿಸಿಕೊಡುತ್ತಾರೆ.

ಉಜ್ಬೇಕಿಸ್ತಾನ ಮೊದಲು ಸೋವಿಯತ್ ಒಕ್ಕೂಟದ ಒಂದು ಭಾಗವಾಗಿದ್ದ ಇದು ಈಗ ಸ್ವತಂತ್ರ್ಯ ಗಣರಾಜ್ಯವಾಗಿದೆ. ಉಜ್ಬೇಕಿಸ್ತಾನದ ಐತಿಹಾಸಿಕ ನಗರಗಳಾದ ತಾಷ್ಕೆಂಟ್, ಬುಖಾರಾ, ಸಮರಕಂದ, ಫರ್ಗಾನ್ ನಗರಗಳು ಒಂದಾನೊಂದು ಕಾಲದಲ್ಲಿ ಭಾರತಕ್ಕೆ ತೀರ ಸಾಂಸ್ಕೃತಿಕ ಸಾಮೀಪ್ಯವುಳ್ಳ ನಗರಗಳಾಗಿದ್ದವು. ತಮ್ಮ  ಕಲೆ ವಾಸ್ತುಶಿಲ್ಪದಿಂದ ಜಗದ್ವಿಖ್ಯಾತವಾಗಿದ್ದವು. ಫರ್ಗಾನ್ ಕಣಿವೆಯಲ್ಲಿ ಭಾರತವನ್ನಾಳಿದಮೊಗಲರು ಉದಯಿಸಿದ್ದರು. ಹದಿನಾರನೆಯ ಶತಮಾನದಲ್ಲಿ ಭಾರತದೊಂದಿಗೆ ಬುಖಾರಾ ನಗರ ವ್ಯಾಪಾರ ಸಂಬಂಧಹೊಂದಿರುವುದಾಗಿ
ತಿಳಿದುಬರುತ್ತದೆ ಎಂದು ವಿ.ವಿ.ಉಪಾದ್ಯಾಯರು ತಮ್ಮ ‘ಲೆನಿನ್‌ರ ನಾಡಿನಲ್ಲಿ’  ತಿಳಿಸುತ್ತಾರೆ. ಭಾರತೀಯರು ವಾಸಿಸುತ್ತಿದ್ದ ಬೀದಿಯೇ ಅಲ್ಲಿ ಇತ್ತೆಂದು ಹೇಳುತ್ತ ಅದು ಭಾರತದ ಬೀದಿ ಎಂದೇ ಪ್ರಖ್ಯಾತವಾಗಿದ್ದು ವಿದೇಶೀ ವ್ಯಾಪಾರ ವ್ಯವಹಾರಗಳ ಕೇಂದ್ರವಾಗಿತ್ತು ಎಂದು ಗುರುತಿಸಿದ್ದಾರೆ. ಅಲ್ಲಿ ಭಾರತದ ವರ್ತಕರು ವಿದೇಶಿ ವರ್ತಕರೊಂದಿಗೆ ವಸ್ತುಗಳ ಹಾಗೂ ನಾಣ್ಯಗಳ ವಿನಿಮಯ ನಡೆಸುತ್ತಿದ್ದರು. ಭಾರತದಿಂದ ಉತ್ತರ ಆಫಘಾನಿಸ್ತಾನದ ಮಾರ್ಗವಾಗಿ ಚಹಾ, ವರ್ಣದ್ರವ್ಯಗಳು, ಔಷಧಿ ವನಸ್ಪತಿಗಳು ರೇಷ್ಮೆ ಜರತಾರಿ ಬಟ್ಟೆಗಳು, ಕಾಶ್ಮೀರಿ ಶಾಲು
ಮುಂತಾದುವುಗಳನ್ನು ಕೊಂಡು ಹೋಗುತ್ತಿದ್ದರಲ್ಲದೆ ಬುಖಾರದಿಂದ ಕಚ್ಚಾ ರೇಶ್ಮೆಯನ್ನು ರವಾನಿಸುತ್ತಿದ್ದರು ಎಂದು ತಿಳಿಸುತ್ತಾರೆ. ಅಲ್ಲಿಯ ಶಿಲ್ಪಕಲೆಗಳ ಬಗೆಗೆ ಉಪಾದ್ಯಾಯರು ಬೆರಗಾಗಿರುವರು. ಮೂರು ಸಾವಿರ ವರ್ಷಗಗಿಂತಲೂ
ಹಿಂದಿನ ಇತಿಹಾಸ ಇರುವ ಸಂಸ್ಕೃತಿಯ ಹಿರಿಮೆಯ ಬಗೆಗೆ ಸಮರಕಂದ ನಗರದಲ್ಲಿರುವ, ಬುಖಾರಾ ನಗರದಲ್ಲಿರುವ, ಗೋರಿಬುಂಬಜ್‌ಗಳು ಅಪ್ರತಿಮ ಸೌಂದರ್ಯದಿಂದ ಒಳಗೊಂಡಿರುವ ಬಗೆಗೆ, ಸಮರ ಕಂದದಲ್ಲಿಯೇ ಹುಟ್ಟಿಬೆಳೆದು
ತನ್ನ ಕ್ರೌರ್ಯ ಮತ್ತು ಪಾಶವೀ ಕೃತ್ಯಗಳಿಗೆ ಕುಖ್ಯಾತನಾದ ತೈಮೂರ ಲೇನ್ (1399) ತನ್ನ ಸಾಮ್ರಾಜ್ಯ ವಿಸ್ತರಿಸುತ್ತಾ ರಾಜಮಹಾರಾಜರನ್ನು ಸದೆಬಡಿಯುತ್ತ ಭಾರತದ ಅಮೂಲ್ಯ ಸಂಪತ್ತನ್ನು ಆನೆ ಕುದುರೆಗಳ ಮೇಲೆ ಹೇರಿ ಸಮರಕಂದ
ನಗರಕ್ಕೆ ತಂದಿದ್ದು, ಇವೆಲ್ಲಾ ಇತಿಹಾಸದಲ್ಲಿ ಓದಿದ್ದು ಮತ್ತೆ ನೆನಪಾಗುವಂತೆ ಲೇಖಕರು ಹೇಳುತ್ತಾ ಹೋದದ್ದು ಕಣ್ಣಿಗೆ ಕಟ್ಟುವಂತಾಯ್ತು.

ಮೊಗಲರ ವಾಸ್ತು ಮತ್ತು ಭಿತ್ತಿಚಿತ್ತಾರಗಳ ಮೂಲಸ್ಥಾನ ಉಜ್ಜೆಕ್ ಸಂಸ್ಕೃತಿ ಎಂದು ತಿಳಿಯುತ್ತದೆ. ಅಲ್ಲಿ ತಯಾರಿಸುವ ನೆಲಹಾಸಿಗೆಗಳು. ಬಿತ್ತಿ ಚಿತ್ರಗಳು ಬಹಳ ಬೆಲೆಯುಳ್ಳವು. ಜರತಾರಿ ಕಸೂತಿಯುಳ್ಳ ಸುಮಾರು 10×10 ಅಡಿ ಚೌಕಾಕಾರದ ಒಂದು ಜಮಖಾನೆಯನ್ನು 45 ಮಂದಿ ಪಾಳಿಯಲ್ಲಿ ದಿನಕ್ಕೆ 24 ತಾಸಿನಂತೆ 8 ತಿಂಗಳು ದುಡಿದು ನೆಯ್ದುಕೂಡುತ್ತಾರಂತೆ. ಇಂತಹ ಬೆಲೆಯುಳ್ಳ ಹಾಸುಗೆಗಳಿಗೆ ವಿದೇಶಗಳಲ್ಲಿ ಈಗಲೂ ತುಂಬಾ ಬೇಡಿಕೆ ಇದೆ ಎನ್ನುವರು.

ಅಂತಾರಾಷ್ಟ್ರೀಯ ಮನ್ನಣೆ ಪಡೆದ ದೇಶ ಚೀನಾಕ್ಕೆ ಪ್ರೋ ಎಚ್.ಆರ್‌.ದಾಸೇಗೌಡರು ಪ್ರವಾಸ ಕೈಗೊಂಡು ‘ಸಾಂಗ್‌ಸೇನ್‌ತುಂಗ್ ನೆಲದಲ್ಲಿ’ ಪ್ರವಾಸ ಕಥನ ಬರೆದಿದ್ದಾರೆ. ಇತ್ತೀಚಿನ ದಶಕಗಳಲ್ಲಿ ಸಾಧಿಸಿರುವ ಪ್ರಗತಿಯ ಬಗೆಗೆ
ಸಾಕಷ್ಟು ವಿವರಗಳು ಇಲ್ಲಿವೆ. ಚೀನಾ ಕಮ್ಯೂನಿಸ್ಟ್ ಆಡಳಿತದಲ್ಲಿ ರಾಷ್ಟ್ರವ್ಯಾಪಿಯಾಗಿ ಐಕ್ಯತೆಯನ್ನು ಸಾಧಿಸಿದ ಬಗೆಗೆ ತಿಳಿಸುತ್ತಾ ಅನಕ್ಷರತೆಯ ಮೂಲೋಚ್ಛಾಟನೆ ಮಾಡಿ ಶೇ 90 ರಷ್ಟು ಶಿಕ್ಷಿತರಾಗಿರುವರಂತೆ ಎಂದಿದ್ದಾರೆ. ಈ ರಾಷ್ಟ್ರ ಅರೋಗ್ಯದ ಬಗೆಗೆ ಭದ್ರತೆಕೊಟ್ಟು ಎಲ್ಲರಿಗೂ ಆಹಾರ ಮನೆ  ದೊರಕಿಸಿಕೊಟ್ಟಿದ್ದಾರೆ. ಸಂಪೂರ್ಣ ಸ್ವಾವಲಂಬಿ- ಗಳಾಗಿದ್ದಾರೆ. ವಿದೇಶಿಗರಿಗೆ ಶರಣಾಗದೇ ತಮ್ಮ ಅಭಿವೃದ್ಧಿ ತಾವೇ ಮಾಡಿಕೊಂಡಿದ್ದಾರೆ. ವೈಯಕ್ತಿಕ ಭದ್ರತೆಗಿಂತ ಸಾಮೂಹಿಕ ಭದ್ರತೆಗೆ ಹೆಚ್ಚಿನ ಆದ್ಯತೆ. ವ್ಯಕ್ತಿ ಯಾವುದೇ ಆಸ್ತಿಯನ್ನು ಅನುಭವಿಹುದು. ಆದರೆ
ವೈಯಕ್ತಿಕವಾಗಿರದೇ ಸಮೂಹದಲ್ಲಿರುತ್ತದೆ.

ಅಧುನಿಕ ಚಿಂತನಾ ಲಹರಿ ಪ್ರಬಾವದಿಂದ ಅವರಲ್ಲಿ ಧಾರ್ಮಿಕ ಭಾವನೆ ಹಾಗೂ ಜಾತಿಯತೆಯ ಕೊಳೆ ಇಲ್ಲ. ಇಸ್ಲಾಂ. ಬೌದ್ಧ, ಕ್ರಿಶ್ಚಿಯನ್ ಧರ್ಮದವರು ಅವುಗಳನ್ನು ತಮ್ಮ ನೇರಕ್ಕಷ್ಟೇ ಆಚರಣೆಮಾಡುತ್ತಾರೆ. ಇದಾವುದೂ ಸಮಾಜದ
ಅಂದವನ್ನು ಹಾಳುಮಾಡುವುದಿಲ್ಲ. ಏಕತೆಗೆ ಭಂಗತರುವುದಿಲ್ಲ ಎನ್ನುತ್ತಾರೆ. ಚೀನಾದ ಜನ ಸ್ವಾಭಿಮಾನಿಗಳು, ರಾಷ್ಟ್ರಾಭಿಮಾನಿಗಳು, ಕಾರ್ಖಾನೆಯಲ್ಲಿ ಕಾರ್ಮಿಕರು. ಆಸ್ಪತ್ರೆಯಲ್ಲಿ ನರ್ಸುಗಳು, ಡಾಕ್ಟರ್‌ಗಳು, ಹೋಟೆಲ್ ನೌಕರರು. ಪಾರ್ಲಿಮೆಂಟಿನ ಸದಸ್ಯರು ಇನ್ನಿತರ ಕ್ಷೇತ್ರದ ಸಾಮಾನ್ಯರಿಗಿಂತ ದೊಡ್ಡವರವರೆಗೆಲ್ಲ ಬಹುಮಟ್ಟಗೆ
ಶ್ರಮಜೀವಿಗಳು. ಹೋಟೆಲುಗಳಲ್ಲಿ ಬಹುತೇಕ ಚೀನೀ ಹುಡುಗಿಯರು ಕೆಲಸ ಮಾಡುತ್ತಾರೆ. ಯಾಂತ್ರಿಕವಾಗಿ ಕೆಲಸ ಮಾಡುತ್ತಿರುತ್ತಾರೆ. ಕೆಲಸದ ಬಗೆಗೆ ಆಸಕ್ತಿ ಇರದಿದ್ದರೂ ಶಿಸ್ತು ವಿನಯಕ್ಕೆ ಕೊರತೆಯಿಲ್ಲ. ಚೀನೀಯರು ಬೇರೆಯವರೊಂದಿಗೆ ಬೆರೆತಂತೆ ತೋರಿದರೂ ಅವರೆಂದೂ ತಮ್ಮ ಸ್ವಂತಿಕೆ ಕಳೆದುಕೊಳ್ಳುವುದಿಲ್ಲ. ತಮಗೆ ಅಸಮಾಧಾನ ವಿಚಾರಗಳು ಬಂದರೆ ತಟಸ್ಥ ಮನೋಭಾವ ತಳೆದುಬಿಡುವರು ಎಂದಿದ್ದಾರೆ ಲೇಖಕರು.

ಚೈನಾದ ಇಂಪೀರಿಯಲ್ ಅರಮನೆ ಇದೊಂದು ಐತಿಹಾಸಿಕ ಸಾಂಸ್ಕೃತಿಕ ಸ್ಮಾರಕ ಎಂದು ದಾಸೇಗೌಡರು ತಿಳಿಸುತ್ತಾ ಅದರ ಅದ್ಭುತತೆಯನ್ನು ಹೊಗಳಿದ್ದಾರೆ. 500 ವರ್ಷಗಳ ದೀರ್ಘ ಇತಿಹಾಸ ಇರುವ ಈ ಅರಮನೆಯಲ್ಲಿ  9,999 ಕೊಠಡಿಗಳಿವೆ ಎಂದು ತಿಳಿಸುತ್ತ ಅಲ್ಲಿ ನಡೆಯುತ್ತಿರುವ ಪವಿತ್ರ ವಿಧಿ ವಿಧಾನಗಳ ಬಗೆಗೆ ತಿಳಿಸಿ ತೊಡುತ್ತಾರೆ. 1924ರ ತನಕ ಈ ಮನೆತನದ ಕಣಿವೆಯ ದೊರೆ ‘ಪೂಯಿ’ ಇಲ್ಲಿದ್ದುದು ಕಂಡು ಬರುತ್ತದೆ. ಈಗ ಅರಮನೆಗಳೆಲ್ಲ
ಮ್ಯೂಸಿಯಂಗಳಾಗಿ ಪ್ರವಾಸಿತಾಣಗಳಾಗಿರುವುದು ಸತ್ಯ ಎಂದಿದ್ದಾರೆ.

ಚೀನಾದ ಕೆಲವು ಸಾಂಸ್ಕೃತಿಕ ಬದುಕಿನ ಬಗೆಗೆ ಲೇಖಕಿ ವಾಗೀಶ್ವರಿ ಶಾಸ್ತ್ರೀಯವರು “ಸಿರಿಸಿಂಗಾರದ ಸಿಂಗಪುರ” ಎನ್ನುವ ಕೃತಿಯಲ್ಲಿ ತಿಳಿಸಿಕೊಡುತ್ತಾರೆ. ಅವರು ಸಿಂಗಾಪುರ ವ್ರವಾಸದಲ್ಲಿದ್ದಾಗ ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ
ಚೀನೀಯರ ಸಂಪ್ರದಾಯಗಳನ್ನು ಅತೀ ಹತ್ತಿರದಿಂದ ನೋಡಿದವರಾಗಿದ್ದಾರೆ. ಉದಾಹರಣೆಗೆ ಚೀನೀಯರ ಯುಗಾದಿ ಹಬ್ದದ ಬಗೆಗೆ ಚೀನೀಯರು ರಾಶಿ, ನಕ್ಷತ್ರಗಳುಳ್ಳ ಪಂಚಾಂಗವನ್ನು ನಂಬುತ್ತಾರೆ. ಅದರಂತೆ ಅವರು ಜನೆವರಿ ಅಥವಾ
ಫೆಬ್ರವರಿ ತಿಂಗಳಲ್ಲಿ ಬರುವ ಹಬ್ಬವನ್ನು ಯುಗಾದಿ ಹಬ್ಬ ಅಥವಾ ಹೊಸವರ್ಷದ ಹಬ್ಬವೆಂದು ಆಚರಿಸುತ್ತಾರೆ. ಅಂದು ಮನೆ ಮತ್ತು ಅಂಗಡಿಗಳನ್ನೆಲ್ಲಾ ಬಣ್ಣಗಳಿಂದ ಅಲಂಕರಿಸಿ ಹೊಸ ಸರಕು ಸಾಮಗ್ರಿಗಳನ್ನು ತರುವರು. ಬೀದಿ ಕಟ್ಟಡ- ಗಳನ್ನೆಲ್ಲಾ ಲೈಟ್‌ಗಳಿಂದ ಅಲಂಕರಿಸುತ್ತಾರೆ. ಕೆಂಪು ಬಣ್ಣ ಅವರಿಗೆ ಶುಭ ಬಣ್ಣ ಅದಕ್ಕೆಂದೇ ಹೊಸ ಬಟ್ಟೆಗಳಲ್ಲೂ ಕೆಂಪನ್ನೇ ಅರಿಸುವರು. ದುಷ್ಟಶಕ್ತಿಗಳ ನಿಗ್ರಹಕ್ಕೆ ಮನೆ ಊರು ಎಲ್ಲ ಜಾಗವನ್ನೂ. ಬೆಳಕಾಗಿ ಇಡಬೇಕಲ್ಲದೆ ತುಂಬಾ ಸದ್ದು ಗದ್ದಲ ಮಾಡುತ್ತಿರಬೇಕು. ಇದಲ್ಲದೇ ಈ ವೇಳೆಯಲ್ಲಿ ಕೆಂಪು ಬಣ್ಣವನ್ನು ಮನೆಮಾಡು ಗಳಲ್ಲೆಲ್ಲಾ ಹೆಚ್ಚಾಗಿ ಉಪಯೋಗಿಸಿದರೆ ಆ ದುಷ್ಟಶಕ್ತಿಯನ್ನು ದೂರಮಾಡುಬಹುದೆಂಬ ನಂಬಿಕೆ ಇದೆ. ಚಂದ್ರನ ಸಂಚಾರದಲ್ಲಿ ಒಂದು ನಿರ್ಧಿಷ್ಟ ಅವಧಿಯಲ್ಲಿ ಈ ದುಷ್ಟ ಶಕ್ತಿಗಳ ಪ್ರಾಬಲ್ಯ ಹೆಚ್ಚಾಗಿರುವುದರಿಂದ ಈ ಸದ್ದು ಗದ್ದಲ ಬೆಳಕುಗಳಿಂದ ಅವನ್ನು ಓಡಿಸುವುದು ಮತ್ತು ನೆಮ್ಮದಿಯಿಂದ ಇರುವುದೇ ಅವರ ಈ ಯುಗಾದಿ ಹಬ್ದವೆನ್ನುವರು.

ಸದ್ದು ಗದ್ದಲಕ್ಕೆ ಚೆಂಗೇ ಎಂಬ ಕಾರ್ಯಕ್ರಮ ಇಟ್ಟುಕೊಳ್ಳುತ್ತಾರೆ. ಸಿಂಹದ ಮುಖವಾಡಗಳನ್ನು ಹಾಕಿಕೊಂಡು ತಾಳಮದ್ದಳೆಗಳಿಂದ ಲಯಬದ್ಧವಾಗಿ ಕುಣಿಯುವುದೇ ಆಗಿದೆ. ಕೆಂಪು ಬಣ್ಣಕ್ಕೆ ಪ್ರಾಶಸ್ತ್ಯವಿದ್ದಂತೆಯೇ ಬಾಯಿಯಿಂದ
ಬೆಂಕಿಯನ್ನು ಉಗುಳಿ ದುಷ್ಟಶಕ್ತಿಯನ್ನು ಓಡಿಸುತ್ತೇವೆಂಬ ನಂಬಿಕೆಯಿಂದ ಹಾವಿನಾಕಾರಾದ ಡ್ರಾಗನ್ ಪ್ರಾಣಿಗೂ ಪ್ರಾಶಸ್ತ್ಯವಿದೆ. ಈ ಕುಣಿತದಲ್ಲಿ ನೂರರು ಅಡಿಗಳ ಡ್ರಾಗನ್ ಪ್ರಾಣಿಯನ್ನು ತಯಾರಿಸಿ ಅದನ್ನು ಸುತ್ತಿ ನಲಿಯುತ್ತಾ ನರ್ತನ ಮಾಡುವ ಒಂದು ವಿಶೇಷತೆಯೂ ಕೂಡಾ ಈ ಚೆಂಗೇ ಪ್ರದರ್ಶನದಲ್ಲಿದೆ ಎಂದಿದ್ದಾರೆ ಲೇಖಕಿ.

ಚೀನೀಯರ ಶವಸಂಸ್ಕಾರದ ಬಗೆಗೆ ಓದುವಾಗ ಒಂದು ವಿಭಿನ್ನ ಚಿತ್ರಣ ಕಣ್ಣುಮುಂದೆ ಬರುತ್ತದೆ. ಚೀನೀಯರಲ್ಲಿ ಶವಸಂಸ್ಕಾರದ ಬಗೆಗೆ ತುಂಬಾ ಕಾರ್ಯಕಲಾಪಗಳಿರುವುದು ತಿಳಿಸಿಕೊಡುವರು. ಶವವನ್ನು ಅವರು ಮನೆಯಲ್ಲಿ
ಬಹಳಹೊತ್ತು ಇಡುವುದಿಲ್ಲ. ಶವಪೆಟ್ಟಿಗೆಯಲ್ಲಿ ಹಾಕಿ ಪ್ಲಾಟುಗಳ ಕೆಳಗಡೆ ಒಂದು ಜಾಗದಲ್ಲಿ ಇರಿಸುತ್ತಾರೆ. ಶವಪೆಟ್ಟಿಗೆಯ ಬಾಗಿಲು ಮುಚ್ಚಿ ಆ ಪೆಟ್ಟಿಗೆಯ ಮೇಲೆ ಸತ್ತ ವ್ಯಕ್ತಿಯ ಪೋಟೋ ಇಟ್ಟಿರುತ್ತಾರೆ. ಅಲಂಕಾರಮಾಡಿ
ಪುಷ್ಪಗುಚ್ಛಗಳಿಂದ ತಮ್ಮ ಸಂತಾಪಗಳನ್ನು ವ್ಯಕ್ತಪಡಿಸುವುದಲ್ಲದೆ ಮೃತರಿಗಿಷ್ಟವಾದ ಬಗೆಗೆ ಜಾಸ್‌ಪೇಪರ್‌ಗಳನ್ನು ತಂದಿಡುತ್ತಾರೆ. ಸತತ ನಾಲ್ಕುದಿನ ಶವವನ್ನಿಟ್ಟು ವೈಭೋಗದಿಂದಲೂ ಶ್ರದ್ಧೆ ಭಕ್ತಿಗಳಿಂದಲೂ, ಪುರೋಹಿತನ ಮಂತ್ರ
ಪಠಣದಿಂದಲೂ ರಾತ್ರಿಯ ಹೊತ್ತು ಉತ್ತರಕ್ರಿಯೆಗಳನ್ನು ನಡೆಸುತ್ತಾರೆ. ಕುಟುಂಬದವರೆಲ್ಲಾ ಹೆಂಗಸರು ಗಂಡಸರಾದಿಯಾಗಿ ಬಿಳಿಯ ಉಡುಗೆಯನ್ನು ಧರಿಸಿ ತಲೆಯ ಮೇಲೆ ಗೊರಗಗಳಂತೆ ಮುಸುಕು ಹಾಕಿ ಈ ಕಾರ್ಯಕ್ರಮ ನಡೆಸುತ್ತಾರೆ. ಮಂತ್ರ ಪಠಣ ನಡೆಸುತ್ತಿದ್ದಂತೆಯೇ ಕ್ಷಣಕ್ಷಣಕ್ಕೂ ಮಂಡಿಯೂರಿ ನಮಸ್ಕರಿಸುತ್ತಾ ಹೆಣದ ಸುತ್ತ ಸುತ್ತುತ್ತಾ ಬಹುವಾಗಿ ಕಲಾಪಗಳನ್ನು ಮಾಡುತ್ತಾರೆ. ವಾದ್ಯ ವಿಶೇಷಗಳು ಉಂಟು. ಎಲ್ಲರು ಕೊಟ್ಟ ಜಾಸ್‌ಪೇಪರ್‌ಗಳನ್ನು ಮತ್ತು ಸತ್ತವರಿಗಿಷ್ಟವಾದ ಉಡುಗೊರೆಗಳನ್ನು ಮಾತ್ರ ಪಠಣದ ಮಧ್ಯೆ ಅಗ್ನಿಗೆ ಸ್ಪರ್ಷಮಾಡಿ
ಸುಡುತ್ತಾರೆ. ಸತ್ತ ಐದನೆಯ ದಿನ ಬಾಜಾಭಜಂತ್ರಿಯೊಂದಿಗೆ ಶವಯಾತ್ರೆ ಮಾಡಿ ಮುಗಿಸುತ್ತಾರೆ. ಮದುವೆಯ ಖರ್ಚಿಗಿಂತಲೂ ಈ ಉತ್ತರ ಕ್ರಿಯಾದಿಗಳ ಖರ್ಚೆ ಹೆಚ್ಚು. ಇದು ಕಡ್ಡಾಯವಾಗಿ ಎಲ್ಲರೂ ಮಾಡಲೇಬೇಕಾದ ಕಾರ್ಯವಂತೆ. ಚೀನಾ ಜನಾಂಗದವರಂತೂ ಭೂತಪ್ರೇತಗಳ ವಿಷಯದಲ್ಲಿ ಬಹುನಂಬಿಕೆ ಇದ್ದು, ಯಾವ
ಕಾರಣದಿಂದಲೂ ಪ್ರೇತಾತ್ಮಗಳು ಬರದಂತೆ ತಡೆಯುವ ಒಂದು ಪ್ರಯತ್ನದ ಕಾರ್ಯಕ್ರಮ ಇದು ಆಗಿದ್ದರೂ ಆಗಿರಬಹುದು. ಈ ಕಾರಣದಿಂದ ಅವರು ಹಸಿದ ಪ್ರೇತಾತ್ಮಗಳ ಪ್ರೀತ್ಯರ್ಥವಾಗಿ ಮನೆಯ ಬಾಗಿಲ ಹೊರಗೆ ಒಂದು ಸ್ಟ್ಯಾಂಡ್ ಇರಿಸಿ ಹಣ್ಣುಗಳನ್ನು ಅದರಲ್ಲಿರಿಸುತ್ತಾರೆ. ಅಲ್ಲದೆ ಪೇಪರ್‌ಗಳನ್ನು ಸುಡಲು ಒಂದು ಕೆಂಪು ಡಬ್ಬವನ್ನು ಮನೆ ಮುಂದೆ ಇಟ್ಟಿರುತ್ತಾರೆ. ಕೆಲವರು ಬಾಗಿಲಿಗೆ ಕೆಂಪು ಬಟ್ಟೆಯನ್ನು ತೋರಣದಂತೆ ಹಾಕಿರುತ್ತಾರೆ. ಈ ಎಲ್ಲಾ ಚರಣೆಗಳ ಹಿಂದೆ ಹಸಿದ ಆತ್ಮಗಳ ಒಂದು ಪ್ರಭಾವ ಕಾಣುತ್ತದೆ. ಆದ್ದರಿಂದ ಉತ್ತರಕ್ರಿಯಾದಿಗಳನ್ನು ಬಹು ಸಾಂಗವಾಗಿ ಮಾಡುತ್ತಾರೆಂಬುದೊಂದು ಅಭಿಪ್ರಾಯವನ್ನು ವಿವರಿಸಿರುವರು.

ಇಂದಿರಾ ಶಿವಣ್ಣ ಅವರ ಚೈನಾ-ಟಿಬೆಟ್‌ ಪ್ರವಾಸ ಕೃತಿ “ನಿಗೂಢಗಳ ನಿಚ್ಚಣಿಕೆ ಏರಿ” ಸಾಕಷ್ಟು ವಿಶೇಷತೆಗಳಿಂದ ತುಂಬಿಕೊಂಡ ಕಥನ. ಇದರಲ್ಲಿ ಚೀನಾದ ಪ್ರಸಿದ್ಧ ತತ್ವಜ್ಞಾನಿ ಕನ್‌ಫ್ಯೂಶಿಯಿಸ್‌ನ ಬರವಣೆಗೆಗಳಿಂದ ಚೀನಾದ
ಇತಿಹಾಸವನ್ನು ತಿಳಿದುಕೊಳ್ಳಬಹುದು ಎನ್ನುವರು. ಸುಮಾರು 5000 ವರ್ಷಗಳಿಂದ ಇಂದಿನ ಕಮ್ಯೂನಿಸ್ಟ  ಸರಕಾರದವರೆಗಿನ ಚೀನಾ ಇತಿಹಾಸದ ಪಕ್ಷಿನೋಟದ ಒಂದು ಅದ್ಭುತ ಪರಿಚಯ ಇಲ್ಲಿ ಮಾಡಿಕೊಟ್ಟಿದ್ದಾರೆ.

ಚೀನಾದ ಇತಿಹಾಸ ರಾಜಕೀಯ, ಸಾಂಸ್ಕೃತಿಕ  ಬೆಡಗನ್ನು ಕಂಡು ಬೆರಗಾದ ಲೇಖಕಿ ಆಧುನಿಕ ಜಗತ್ತುರ ಕಂಡ ಅತ್ಯಂತ ಶ್ರೇಷ್ಠನಾಯಕ ಮಾವೋತ್ಸೆತುಂಗ, ಕಮ್ಯೂನಿಸಂ ತತ್ವದ ಪ್ರತಿಪಾದಕ ಕಾರ್ಲ್ ಮಾರ್ಕ್ಸ್ , ಚೀನಾದೇಶವನ್ನು ಅನೇಕ ವರ್ಷಗಳ ಕಾಲ ಅಳಿ ವೈಭವೋಪೇತ ಜೀವನ ನಡೆಸಿದ ಸಾಮ್ರಾಜ್ಞೆ ಶಕ್ತಿಯ ಜೀವನ ಜಿತ್ರಣ. ಚೀನಾದ ಫಾರಬಿಡನ್ ಸಿಟಿಗಳ ಪರಿಚಯವೂ ನಮಗಿಲ್ಲಿ ಸಿಗುತ್ತದೆ.

ಓರಿಯೆಂಟಲ್ ಎಕ್ಸ್‌ಪ್ರೆಸ್ ಮೂಲಕ ಟಿಬೇಟ ಸುತ್ತಾಡಿ ಭೂರಮೆಯ ಸಿರಿಯಲ್ಲಿ ಅನಂದಿಸಿದ್ದಾರೆ. ಟಿಬೇಟಿನ ಇತಿಹಾಸ, ಸಂಸ್ಕೃತಿ. ಬೌದ್ಧಧರ್ಮ. ದಲೈಲಾಮಾರ ಬಗೆಗೆ ಸಾಕಷ್ಟು ತಿಳಿಸಿಕೊಟ್ಟಿರುವರು.

‘ಪೂರ್ವದಿಂದ ಅತ್ಯಪೂರ್ವಕ್ಕೆ’ ಇದು ಶಿವರಾಮ ಕಾರಂತರ ಪ್ರವಾಸ ಕೃತಿ. ಇದರಲ್ಲಿ ಅವರು ಶ್ರೀಲಂಕಾ, ನೇಪಾಳ, ಬಿರೂಟ್ ಇರಾನ್ ಅಪಘಾನಿಸ್ಥಾನ ಹಾಂಗ್‌ಕಾಂಗ್, ಜಪಾನ್ ದೇಶಗಳಿಗೆ ಹೋಗಿ ಬಂದ ದಟ್ಟ ಅನುಭವಗಳ ಸಾಹಿತ್ಯ
ಇದೆ. ಕಾರಂತರ ಪ್ರವಾಸ ಹಾಗೆಯೇ ಸುತ್ತಾಡಿಕೊಂಡು ಬರಲಿಕ್ಕಲ್ಲ ಅನ್ನುವ ಅನುಭವ ನಮಗಾಗುವುದು ಅವರ ನಾಲ್ಕು ಪ್ರವಾಸ ಕೃತಿಗಳೆಲ್ಲವನ್ನೂ ಓದಿದಾಗಲೇ. ಅವರು ಪ್ರತಿಯೊಂದನ್ನೂ ಕುತೂಹಲದಿಂದ ನೋಡುತ್ತಾ ತಮ್ಮಳಗೆ ತಾವೇ ಚರ್ಚಿಸಿಕೊಳ್ಳುತ್ತಾ ಅಯಾ ದೇಶಗಳ ಜನಜೀವನ ಅವರ ರೀತಿ ನೀತಿ ಸಂಸ್ಕೃತಿಗಳೆಲ್ಲವನ್ನೂ ಪರಿಚಯಿಸಿಕೊಳ್ಳುತ್ತಾರೆ. ಅಲ್ಲಿಲ್ಲಿಯ ಐತಿಹಾಸಿಕ, ಸಾಂಸ್ಕೃತಿಕ ಬದುಕನ್ನು ಸಾದ್ಯವಾದಷ್ಟೆಲ್ಲಾ ನಮಗೂ ಪರಿಚಯಿಸಿಕೊಟ್ಟಿದ್ದಾರೆ.

‘ಲಂಕಾದರ್ಶನ ಕೃತಿಯ ಲೇಖಕ ಕುದ್ಕಾಡಿ ವಿಶ್ವನಾಥ ರೈ. ಅವರು ಶ್ರೀಲಂಕಾ ಮತ್ತು ದಕ್ಷಿಣ ಭಾರತದ ಜನಜೀವನದಲ್ಲಿ ಎಷ್ಟೋ ಸಾಮರಸ್ಯಗಳಿವೆ ಎಂದು ತಿಳಿಸಿಕೊಟ್ಟಿದ್ದಾರೆ. ಶ್ರೀಲಂಕಾದ ಚರಿತ್ರೆಯಲ್ಲಿ ‘ಬೌದ್ಧದೇವಾಲಯಕ್ಕೆ ಮಹತ್ವದ ಸ್ಥಾನವಿದೆ. ಏಪ್ರಿಲ್ ಮೇ ತಿಂಗಳಿನ ವೈಶಾಖ  ಪೂರ್ಣಮೆಯಂದು
ಜಯಂತಿಯನ್ನು ‘ವೆಸಾಕ್’ ಎಂದು ಆಚರಿಸುತ್ತಾರಂತೆ. ಇಲ್ಲಿ ನೋಡುವ ಮುಖ್ಯ ವಾಸ್ತು ಕಲೆಯೆಂದರೆ ‘ಡಗೋಬ’ ಗಳ ರಚನೆ ಎಂದಿರುವರು. ದೊಡ್ಡ ಗುಡ್ಡಗಳನ್ನೇ ಅಲ್ಲಲ್ಲಿ ಬಳಸಿಕೊಳ್ಳುತ್ತಾ ಇಟ್ಟಗೆಗಳಿಂದ ಕಟ್ಟಿದ ಸಮಾಧಿಗಳಿವೆ. ಬುದ್ಧನ ದೇಹದ ಭಾಗಗಳು ಅವನ ಶಿಷ್ಯರ ದೇಹದ ಅವಶೇಷಗಳು ಮತ್ತು ಬುದ್ಧನಿಗೆ ಸಂಬಂಧಪಟ್ಟ ಯಾವುದೇ ವಿಷಯಗಳನ್ನು ಪವಿತ್ರವೆನ್ನುವ ಭಾವನೆಯಿಂದ ಡಗೋಬಗಳನ್ನು ಕಟ್ಟಿರುತ್ತಾರೆ ಎಂದಿದ್ದಾರೆ. ಇಲ್ಲಿ ಧ್ಯಾನದಲ್ಲಿ ಕುಳಿತಿರುವ ಬದ್ಧನ ವಿಗ್ರಹವು ಎಲ್ಲಾ ವಿಧಗಳಿಂದಲೂ ಶ್ರೇಷ್ಠವಾದುದು. ಧ್ಯಾನದಲ್ಲಿ ಕುಳಿತ ರೀತಿಯ ಅದ್ದುತ ಕಲ್ಪನೆ
ಮುಖದ ಭಾವನೆಗಳ ಸೂಕ್ಷ್ಮತೆ ಎಲ್ಲಾ ಅದ್ಭುತ. ಕ್ರಿಸ್ತ ಪೂರ್ವ 250-210ರಲ್ಲಿ ಬೋಧಿ ವೃಕ್ಷದ ಟೊಂಗೆಯನ್ನು ರಾಜಾ ಅಶೋಕನ ಪುತ್ರಿ ಸಂಘಮಿತ್ರೆಯು ಸಿಲೋನಿಗೆ ತಂದು ನೆಟ್ಟು ಅಧಿಕೃತವಾಗಿ ಬೌದ್ಧ ದರ್ಮಸ್ಥಾಪನೆಯಾದ ದಾಖಲೆ
ಚರಿತ್ರೆಯಲ್ಲಿದೆ. ಜಗತ್ತಿನಲ್ಲಿಯೇ ಅತಿಪುರಾತನವಾದ ಈ ವೃಕ್ಷದ ಟೊಂಗೆಯನ್ನು ಜಗತ್ತಿನ ಬೇರೆ ಬೇರೆ ಕಡೆಗಳಿಗೆ ಒಯ್ದು  ಬೌದ್ಧ ಧರ್ಮದ ಪ್ರಚಾರ, ಪುನರುತ್ಥಾನದ ಕೆಲಸ ಮಾಡುತ್ತಿದ್ದಾರೆ ಎನ್ನುತ್ತಾರೆ ಲೇಖಕರು.

‘ಕೊಹೋಬ್ ಕಂಕಾಯವು ಯಕ್’ ‘ಅನುವಮ್’ ಶ್ರೀಲಂಕಾದಲ್ಲಿ ಪರಂಪರಾಗತವಾಗಿ ಬಂದ ನೃತ್ಯಗಳು. ಶ್ರೀಲಂಕಾದಲ್ಲಿಯೂ ಮೂಢನಂಬಿಕೆಗಳಿವೆ. ಪವಾಡ ಪುನರ್ಜನ್ಮ ಜ್ಯೋತಿಷ್ಯ ಮಂತ್ರ ತಂತ್ರಗಳ ಬಗೆಗೆ ಸುಳ್ಳು ನಂಬಿಕೆ ಜನರಲ್ಲಿ ಉಂಟುಮಾಡಿ ಸುಲಿಗೆ ಮಾಡುತ್ತಾರೆ ಎಂದಿದ್ದಾರೆ ಲೇಖಕರು.

ಸುಧಾಮೂರ್ತಿಯವರ ಅದ್ಭುತವಾದ ಪ್ರವಾಸ ಕಥನ “ಕಾವೇರಿಯಿಂದ ಮೆಕಾಂಗಿಗೆ’ ಇಂಡೊಚೈನಾ ಎಂದು ಕರೆಯುವ ಕಾಂಬೋಡಿಯಾ, ಥೈಲ್ಯಾಂಡ್, ಲಾವೋಸ್ ಮತ್ತು ವಿಯೆಟ್ನಾಂ ದೇಶಗಳಲ್ಲಿ ಅಡ್ಡಾಡಿ ಅಲ್ಲೆಲ್ಲ ದಟ್ಟವಾಗಿ
ತುಂಬಿಕೊಂಡಿರುವ ಭಾರತೀಯ ಸಂಸ್ಕೃತಿಯ ಬಗೆಗೆ ವಿವರವಾಗಿ ತಿಳಿಸಿಕೊಟ್ಟಿದ್ದಾರೆ. ಇತ್ತೀಚಿನ ರಾಜಕೀಯ ಯುದ್ಧಗಳಿಂದ ಅಲ್ಲಿಗೆ ಪ್ರವಾಸಿಗರು ಹೋಗಲು ಹೆದರಿಕೊಳ್ಳುತ್ತಾರೆ. ಅದಕ್ಕೇಂದೇ ಅವರ ಮಗ ಮತ್ತು ಯಜಮಾನ ನಾರಾಯಣ ಮೂರ್ತಿಯವರು ಅಲ್ಲಿಗೆ ಹೋಗಲೇಕೂಡದೆಂದು ನಿರುತಾಸ್ಸೂಹಗೊಳಿಸಿದರಂತೆ. ಆದರೆ ಅವರು ತಮ್ಮ ಪ್ರವಾಸ ಪ್ರೀತಿಗೆ ದೇವರು ಕರುಣಿಸಿದ ವರ ಎಂದು ವಿನೀತರಾಗಿ ಹೇಳಿಕೊಂಡಿದ್ದಾರೆ. ಏಷ್ಯಾ ಖಂಡದ ಪೂರ್ವ ಮತ್ತು ಆಗ್ನೇಯ ರಾಷ್ಟ್ರಗಳಲ್ಲಿ ಭಾರತೀಯ ಸಂಸ್ಕೃತಿ ತುಂಬಿಕೊಂಡ ಅನೇಕ ದೇವಾಲಯಗಳ ಬುದ್ಧಸ್ತೂಪಗಳ, ಶಿಲ್ಪಕಲೆಗಳ ಬಗೆಗೆ ಪರಿಚಯಿಸಿಕೊಡುತ್ತಾ ಹೋಗುತ್ತಾರೆ. ಈ ಶ್ರೀಮಂತ ಸಂಸ್ಕೃತಿಗಳೆಲ್ಲಾ ಕ್ರಿ.ಶ.ಗಿಂತಲೂ ಮೊದಲಿನವೆಂದು ಹೇಳಬಹುದಾಗಿದೆ. ಆ ಕಾಲದಲ್ಲಿ ಭಾರತದ ಪೂರ್ವಕರಾವಳಿಯಿಂದ ವ್ಯಾಪಾರಿಗಳು ಈ ದ್ವೀಪಗಳಲ್ಲಿ ಬಂದು ಹೋಗುತ್ತಿದ್ದುದು ಸ್ಥಳೀಯರೊಂದಿಗೆ ಹೊಂದಿಕೊಂಡು ಭಾರತೀಯ ಸಂಸ್ಕೃತಿಯನ್ನು ವಿಸ್ತರಿಸತೊಡಗಿದ್ದು, ಭಾರತದ ಸಾಮ್ರಾಟ್ ಅಶೋಕನ ಕಾಲದಲ್ಲಿ ಬೌದ್ಧಮತ ಇಲ್ಲಿ ಪ್ರಚಾರವಾದುದು, ಇದಕ್ಕಿಂತಲೂ ಮೊದಲು ಹಿಂದೂ ಧರ್ಮದ
ಪ್ರಭಾವದಿಂದ ಶಿವದೇವಾಲಯ, ವಿಷ್ಣು ದೇವಾಲಯಗಳು ಇರುವುದಾಗಿ ತಿಳಿಸುತ್ತ ಅಲ್ಲಿಯ ದೇವಾಲಯಗಳನ್ನು ನೋಡಿ ನಿಬ್ಬೆರಗಾಗಿದ್ದಾರೆ. ಅಲ್ಲಿಯ ಮ್ಯೂಸಿಯಂಗಳಲ್ಲಿ ಭಾರತೀಯ ಸಂಸ್ಕೃತಿಯೇ ತುಂಬಿದೆ ಎನ್ನುವರು. ಎಲ್ಲ
ದೇವರುಗಳ ವಿಗ್ರಹಗಳು. ವಿವಿಧ ಕೆತ್ತನೆಯ ಅಂಬಾರಿಗಳು, ಪಲ್ಲಕ್ಕಿಗಳು, ಶಿಲ್ಪಗಳಲ್ಲಿ ಕೆತ್ತಿರುವ ರಾಮಾಯಣ ಕಥೆಗಳು ಎಲ್ಲಾ ಇವೆ ಎನ್ನುವರು.

ಕಾಂಬೋಡಿಯಾದ ಸಾಂಪ್ರದಾಯಿಕ ನೃತ್ಯಗಳು ಅತೀ ಆಕರ್ಷಕ ನೃತ್ಯಗಳ ಪ್ರಸಂಗಗಳಲ್ಲಿ ರಾಮಾಯಣದ ಕಥೆಯನ್ನು ಬಳಸಿಕೊಳ್ಳುತ್ತಾರೆ. ಇಲ್ಲಿಯ ಜನರಿಗೆ ಪ್ರಿಯವಾಗುವ ಪ್ರಸಂಗಗಳೆಂದರೆ ವಾಲಿ ಸುಗ್ರೀವರ ಕಾಳಗ, ಚೂಡಾಮಣಿ, ಅಪ್ಸರಾ ನೃತ್ಯ ಮುಂತಾದವುಗಳು. ಇಲ್ಲಿಯ ನೃತ್ಯಗಾರ್ತಿಯರ ವೇಷ ನಮ್ಮಲ್ಲಿಯ ಜರಿಸೀರೆ
ಉಟ್ಟಂತೆ, ಅದರೆ ಸ್ವಲ್ಪ ಬೇರೆ. ತಲೆಗೆ ಕಿರೀಟ, ತೋಳಬಂದಿ, ಕೊರಳಿಗೆ ಹಾರ, ಮುಡಿಯಲ್ಲಿ ಹೂವು. ನೃತ್ಯಗಾತಿಯರು ಬೆಡಗಿನಿಂದ ಒಂದೇ ಪಕ್ಕಕ್ಕೆ ಹೂವು ಮುಡಿಯುವರು ಎಂದು ಗುರುತಿಸಿದ್ದಾರೆ. ಲಾವೊಸ್. ಥೈಲ್ಯಾಂಡಿನಲ್ಲಿಯೂ ನೃತ್ಯಗಳು ಹೆಚ್ಚೂ ಕಡಿಮೆ ಸಾಮ್ಯತೆ ಇವೆ ಎನ್ನುತ್ತಾರೆ. ಇಲ್ಲಿಯ ನಾಲ್ಕು ದೇಶಗಳ
ಸಾಂಸ್ಕೃತಿಕ ಸಾಮ್ಯತೆಗಳ ಬಗೆಗೆ ಸಾಕಷ್ಟು ವಿಷಯಗಳಮ್ನ ತಿಳಿಸಿಕೊಟ್ಟಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿರುವ ರಾಜಕೀಯ ವಾತಾವರಣವನ್ನು ಹೇಳಿದ್ದಾರೆ. ಅಮೇರಿಕನ್ನರು ವಿಯಟ್ನಾಂ ಸಮರದಲ್ಲಿ ಭಾಗವಹಿಸಿದ್ದರ ಕಹಿ ಫಲ “ಅಮರೇಶಿಯನ್”ರ ಬಗೆಗೂ ಒಂದಿಷ್ಟು ತಿಳಿಸಿದ್ದಾರೆ. ಯುದ್ಧದಲ್ಲಿ ಅನೇಕ
ಅಮೇರಿಕನ್ ಸೈನಿಕರು ಸ್ಥಳೀಯ ವಿಯಟ್ನಾಂ ಹೆಂಗಸರೊಂದಿಗೆ ಸಂಪರ್ಕ ಇಟ್ಟುಕೊಂಡರು. ಕೆಲವೇಳೆ ‘ಮದುವೆ’ ಪದ್ದತಿಯಿಂದ ಹಲವು ವೇಳೆ ವೇಶ್ಯಾವೃತ್ತಿಯಿಂದ. ಯುದ್ಧ ಮುಗಿದ ಮೇಲೆ ಸೈನಿಕರು ‘ಪತ್ನಿ’ಯರನ್ನು ಬಿಟ್ಟು ಸ್ವದೇಶಕ್ಕೆ ತೆರಳಿದರು. ಇಂಥ ಸಂಬಂಧದಲ್ಲಿ ಹುಟ್ಟಿದ ಮಕ್ಕಳು ಅರ್ಧ ಬಿಳಿ ಅರ್ಧ ಕಪ್ಪಾಗಿದ್ದರು. ಇವರಿಗೆ “ಅಮೆರೇಶಿಯನ್’ ಅನ್ನುತ್ತಾರೆ. ಕರುಣಾವಿಹೀನವಾದ ವಿಯಟ್ನಾಂ ಸಮಾಜದಲ್ಲಿ ಇಂಥ ಮಕ್ಕಳನ್ನು ತುಚ್ಛವಾಗಿ ಕಾಣುತ್ತಾರೆ. ಆದ್ದರಿಂದ
ತಾಯಂದಿರು ಈ ಮಕ್ಕಳನ್ನು ದಾರಿಯಲ್ಲಿ ಬಿಸಾಕಿದರು. ರಸ್ತೆಯಲ್ಲಿ ಈ ಮಕ್ಕಳು ಬೆಳೆಯಬೇಕಾಯಿತು. ನಂತರದ ವರ್ಷಗಳಲ್ಲಿ ಅನೇಕ ಅಮರೇಶಿಯನ್‌ರು ಅಮೇರಿಕಾವನ್ನು ತಲುಪಲು ಹಾತೊರೆಯತೊಡಗಿದರು. 1980ರಲ್ಲಿ
ಅಮೇರಿಕಾದವರು ಇಂಥವರಿಗಾಗಿ ಬ್ಯಾಂಕಾಕ್ ಮೂಲಕ ಫಿಲಿಫೈನ್ಸ್‌ಗೆ ಬಂದು ಆರು ತಿಂಗಳು ಇಂಗ್ಲೀಷ್ ಟ್ರೈನಿಂಗ್ ತೆಗೆದುಕೊಂಡು ಅಮೇರಿಕಾ ಸೇರಲು ಪರವಾನಿಗಿ ಕೊಟ್ಟರಂತೆ. ಇಲ್ಲಿಯೂ ಮೋಸದ ಜಾಲವೇ ಹರಡಿರುವುದಾಗಿ
ತಿಳಿಸುತ್ತಾರೆ. ಹೀಗೆ ಇಂಡೋಚೈನಾ ದೇಶಗಳ ಒಂದು ಸಮಗ್ರಪರಿಚಯದಲ್ಲಿ ನಮಗೆ ಅನೇಕ ವಿಷಯಗಳು ಆಶ್ಚರ್ಯ, ಅದ್ಭುತಗಳಿಂದ ತುಂಬಿಕೊಂಡದ್ದು ತಿಳಿದುಬರುತ್ತದೆ.

ಜಪಾನ್ ದೇಶಕ್ಕೆ ನಮ್ಮ ಪ್ರವಾಸಿಗರು ಬಹಳ ಹಿಂದೆಯೇ ಹೋಗಿ ಬಂದಿದ್ದಾರೆ. ಜಪಾನೀಯರು ತಮ್ಮ ದೇಶವನ್ನು “ನಿಪ್ಪೋನ್ (ಉದಯರವಿ) ಎಂದು ಕರೆಯುತ್ತಾರೆ. ಕ್ರಿ.ಪೂ. 660ರಿಂದ ಇಂದಿನವರೆಗ ಒಂದೇ ಸಂತತಿಯ ಸುಮಾರು 125 ಅಳರಸರನ್ನು ಕಂಡಿರುವ ಜಪಾನ್ ತನ್ನದೇ ಅದ ವಿಶಿಷ್ಟ ಭಾಷೆ ಹಾಗೂ ಲಿಪಿಯನ್ನು ಹೊಂದಿರುವ ನಾಡಾಗಿದೆ. ಏಷ್ಯಾದಲ್ಲಿ ಅತ್ಯಂತ ಔದ್ಯೋಗಿಕೃತ ಶ್ರೀಮಂತ ರಾಷ್ಟ್ರವೂ ಆಗಿದೆ. ಇಲೆಕ್ಟ್ರಾನಿಕ್‌ ವಸ್ತುಗಳ ಉತ್ಪಾದನೆಗೆ ಇದು ಹೆಸರುವಾಸಿಯಾದ ದೇಶ. ಬೃಹತ್ ಕೈಗಾಶರಿಕಾ ಘಟಕಗಳು ಅಲ್ಲಿವೆ.  ಸಾಂಪ್ರದಾಯಿಕ ನೃತ್ಯಗಳು ಅತೀ ಆಕರ್ಷಕ ನೃತ್ಯಗಳ ಪ್ರಸಂಗಗಳಲ್ಲಿ ರಾಮಾಯಣದ ಕಧೆಯನ್ನು ಬಳಸಿಕೊಳ್ಳುತ್ತಾರೆ. ಇಲ್ಲಿಯ ಜನರಿಗೆ ಪ್ರಿಯವಾಗುವ ಪ್ರಸಂಗಗಳೆಂದರೆ ವಾಲಿ ಸುಗ್ರೀವರ ಕಾಳಗ, ಚೂಡಾಮಣಿ, ಅಪ್ಸರಾ ನೃತ್ಯ ಮುಂತಾದವುಗಳು. ಇಲ್ಲಿಯ ನೃತ್ಯಗಾರ್ತಿಯರ ವೇಷ ನಮ್ಮಲ್ಲಿಯ ಜರಿಸೀರೆ ಉಟ್ಟಂತೆ, ಅದರೆ ಸ್ವಲ್ಪ ಬೇರೆ. ತಲೆಗೆ ಕಿರೀಟ, ತೋಳಬಂದಿ, ಕೊರಳಿಗೆ ಹಾರ, ಮುಡಿಯಲ್ಲಿ ಹೂವು. ನೃತ್ಯಗಾತಿಯರು ಬೆಡಗಿನಿಂದ ಒಂದೇ ಪಕ್ಕಕ್ಕೆ ಹೂವು ಮುಡಿಯುವರು ಎಂದು ಗುರುತಿಸಿದ್ದಾರೆ. ಲಾವೊಸ್. ಥೈಲ್ಯಾಂಡಿನಲ್ಲಿಯೂ ನೃತ್ಯಗಳು ಹೆಚ್ಚೂ ಕಡಿಮೆ ಸಾಮ್ಯತೆ ಇವೆ ಎನ್ನುತ್ತಾರೆ. ಇಲ್ಲಿಯ ನಾಲ್ಕು ದೇಶಗಳ ಸಾಂಸ್ಕೃತಿಕ ಸಾಮ್ಯತೆಗಳ ಬಗೆಗೆ ಸಾಕಷ್ಟು ವಿಷಯಗಳಮ್ನ ತಿಳಿಸಿಕೊಟ್ಟಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿರುವ ರಾಜಕೀಯ ವಾತಾವದಣವನ್ನು ಹೇಳಿದ್ದಾರೆ. ಅಮೇರಿಕನ್ನರು’ ವಿಯಟ್ನಾಂ ಸಮರದಲ್ಲಿ ಬಾಗವಹಿಸಿದ್ದರ ಕಹಿ ಫಲ “ಅಮರೇಶಿಯನ್”ರ ಬಗೆಗೂ ಒಂದಿಷ್ಟು ತಿಳಿಸಿದ್ದಾರೆ. ಯುದ್ಧದಲ್ಲಿ ಅನೇಕ
ಅಮೇರಿಕನ್ ಸೈನಿಕರು ಸ್ಥಳೀಯ ವಿಯಟ್ನಾಂ ಹೆಂಗಸರೊಂದಿಗೆ ಸಂಪರ್ಕ ಇಟಶ್ಚಿಕೊಂಡರು. ಕೆಲವೇಳೆ “ಮದುವೆ ಪದ್ದತಿಯಿಂದ ಹಲವು ವೇಳೆ ವೇಶ್ಯಾವೃತ್ತಿಯಿಂದ. ಯುದ್ಧ ಮುಗಿದ ಮೇಲೆ ಸೈನಿಕರು ‘ಪತ್ನಿ’ಯರನ್ನು ಬಿಟ್ಟು ಸ್ವದೇಶಕ್ಕೆ ತೆರಳಿದರು. ಇಂಥ ಸಂಬಂದದಲ್ಲಿ ಹುಟ್ಟಿದ ಮಕ್ಕಳು ಅರ್ಧ ಬಿಳಿ ಅರ್ಧ ಕಪ್ಪಾಗಿದ್ದರು. ಇವರಿಗೆ “ಅಮೆರೇಶಿಯನ್’ ಅನ್ನುತ್ತಾರೆ. ಕರುಣಾವಿಹೀನವಾದ ವಿಯಟ್ನಾಂ ಸಮಾಜದಲ್ಲಿ ಇಂಥ ಮಕ್ಕಳನ್ನು ತುಚ್ಛವಾಗಿ ಕಾಣುತ್ತಾರೆ. ಆದ್ದರಿಂದ
ತಾಯಂದಿರು ಈ ಮಕ್ಕಳನ್ನು ದಾರಿಯಲ್ಲಿ ಬಿಸಾಕಿದರು. ರಸ್ತೆಯಲ್ಲಿ ಈ ಮಕ್ಕಳು ಬೆಳೆಯಬೇಕಾಯಿತು. ನಂತರದ ವರ್ಷಗಳಲ್ಲಿ ಅನೇಕ ಅಮರೇಶಿಯನ್‌ರು ಅಮೇರಿಕಾವನ್ನು ತಲುಪಲು ಹಾತೊರೆಯತೊಡಗಿದರು. 1980ರಲ್ಲಿ
ಅಮೇರಿಕಾದವರು ಇಂಥವರಿಗಾಗಿ ಬ್ಯಾಂಕಾಕ್ ಮೂಲಕ ಫಿಲಿಫೈನ್ಸ್‌ಗೆ ಬಂದು ಆರು ತಿಂಗಳು ಇಂಗ್ಲೀಷ್ ಟ್ರೈನಿಂಗ್ ತೆಗೆದುಕೊಂಡು ಅಮೇರಿಕಾ ಸೇರಲು ಪರವಾನಿಗಿ ಕೊಟ್ಟರಂತೆ. ಇಲ್ಲಿಯೂ ಮೋಸದ ಜಾಲವೇ ಹರಡಿರುವುದಾಗಿ
ತಿಳಿಸುತ್ತಾರೆ. ಹೀಗೆ ಇಂಡೋಚೈನಾ ದೇಶಗಳ ಒಂದು ಸಮಗ್ರಪರಿಚಯದಲ್ಲಿ ನಮಗೆ ಅನೇಕ ವಿಷಯಗಳು ಆಶ್ಚರ್ಯ, ಅದ್ಭುತಗಳಿಂದ ತುಂಬಿಕೊಂಡದ್ದು ತಿಳಿದುಬರುತ್ತದೆ.

ಜಪಾನ್ ದೇಶಕ್ಕೆ ನಮ್ಮ ಪ್ರವಾಸಿಗರು ಬಹಳ ಹಿಂದೆಯೇ ಹೋಗಿ ಬಂದಿದ್ದಾರೆ. ಜಪಾನೀಯರು ತಮ್ಮ ದೇಶವನ್ನು “ನಿಪ್ಪೋನ್ (ಉದಯರವಿ) ಎಂದು ಕರೆಯುತ್ತಾರೆ. ಕ್ರಿ.ಪೂ. 660ರಿಂದ ಇಂದಿನವರೆಗ ಒಂದೇ ಸಂತತಿಯ
ಸುಮಾರು 125 ಅಳರಸರನ್ನು ಕಂಡಿರುವ ಜಪಾನ್ ತನ್ನದೇ ಅದ ವಿಶಿಷ್ಟ ಭಾಷೆ ಹಾಗೂ ಲಿಪಿಯನ್ನು ಹೊಂದಿರುವ ನಾಡಾಗಿದೆ. ಏಷ್ಯಾದಲ್ಲಿ ಅತ್ಯಂತ ಔದ್ಯೋಗೀಕೃತ, ಶ್ರೀಮಂತ ರಾಷ್ಟ್ರವೂ ಆಗಿದೆ. ಇಲೆಕ್ಟ್ರಾನಿಕ್ ವಸ್ತುಗಳ ಉತ್ಪಾದನೆಗೆ ಇದು ಹೆಸರುವಾಸಿಯಾದ ದೇಶ. ಬೃಹತ್ ಕೈಗಾರಿಕಾ ಘಟಕಗಳು ಅಲ್ಲಿವೆ.

ವಿ.ಕೆ.ಗೋಕಾಕ್‌ರು ತಮ್ಮ ‘ಸಮುದ್ರದೀಚೆಯಿಂದ’ ಎಂಬ ಪ್ರವಾಸ ಕಥನದಲ್ಲಿ ಜಪಾನದ ಅನೇಕ ಸಾಂಸ್ಕೃತಿಕ ಸಂದರ್ಭಗಳನ್ನು ತಿಳಿಸಿಕೊಡುತ್ತಾ ಹೋಗಿದ್ದಾರೆ. ಅಲ್ಲಿಯ ಬುದ್ಧ ಮಂದಿರಗಳಿಗೆ ಸಂದರ್ಶಿಸಿದ್ದಾರೆ ಭಾರತೀಯ ಚಿತ್ರಕಲೆಯ ಪ್ರಭಾವ ಇಲ್ಲಿಯ ಕೆಲವು ಕಲಾಕೃತಿಗಳಲ್ಲಿ ಕಾಣಬಹುವಾಗಿದೆ ಎನ್ನುತ್ತಾರೆ. ಅಜಂತಾದಲ್ಲಿ ಪದ್ಮಪಾಣಿಯ ಚೆತ್ರವನ್ನು ಹೋಲುವ ಒಂದು ಕಲಾಕೃತಿ ಇಲ್ಲಿ ಇದೆ. ಅದರೆ ಕರದಲ್ಲಿ ಕಮಲದ ಬದಲಾಗಿ ಗುಲಾಬಿ ಹೂ ಇದೆ. ಒಂದು ಮಂದಿರದ ಕಟ್ಟಿಗೆಯ ಕೆತ್ತನೆಯಲ್ಲಿ ಒಂದು ಬಾಲ ಮುರಳೀಧರ ಮೂರ್ತಿ ಇದೆ ಎಂದಿದ್ದಾರೆ.

ಹಾಗೇಯೇ ಜಪಾನೀ ನಾಟಕ ಕಲೆಯ ಸಂಪ್ರದಾಯ “ಕಾಬೂಕಿ” ಮತ್ತು “ನೊ” ಪ್ರಕಾರದ ನಾಟಕಗಳ ಪರಿಚಯ, ಜಪಾನಿ ಪದ್ಧತಿಯ ತೋಟದ ಒಂದು ಸೂಕ್ಷ್ಮ ಕಲ್ಪನೆ. ಕುದಿಯುವ ನೀರಿಗೆ ಬೇರೆ ಬೇರೆ ಹರ್ಬಲ್ ಎಲೆಗಳನ್ನು ಹಾಕಿ
ತಯಾರಿಸುವ ಹಸಿರು ಬಣ್ಣದ ಚಹ, ಅದನ್ನು. ಚಿಕ್ಕಚಿಕ್ಕ ಕಪ್ಪುಗಳಲ್ಲಿ ಹಾಕಿ ಕಿಮೋನೋ ಧರಿಸಿದ ಸುಂದದ ತರುಣಿಯರು ಕೊಡುವ ಸಂಪ್ರದಾಯ, ಜಪಾನೀ ನೃತ್ಯಗಳಲ್ಲಿ ಕಾಣಿಸಿಕೊಳ್ಳುವ ಗೇಶಾಕನ್ನಿಕೆಯರ ವರ್ಣನೆ ಹೀಗೆ ಅನೇಕ ವಿಷಯಗಳನ್ನು. ಗೋಕಾಕರು ವಿವರಿಸಿದ್ದಾರೆ.

‘ಜಪಾನ ಪ್ರವಾಸ ಅನುಭವಗಳು’ ಬರೆದ ಎಕ್ಸ್‌ಪೋ 70ಕ್ಕೆ ಹೋಗಿ ಬಂದೆ ಸಿ.ಎಸ್. ಅಂಗಡಿಯವರಾಗಲಿ. ನಿರಂಜನರು ಸಂಪಾದಿಸಿದ ‘ಎಕ್ಸ್‌ಪೋ70ರ’ ಹದಿನೈದು ಲೇಖಕರ ಲೇಖನಗಳಲ್ಲಿ ಅಗಲಿ ಜಪಾನದ ಎಕ್ಸ್‌ಪೋ70ರ ಪರಿಚಯಗಳೇ ತುಂಬಿಕೊಂಡಿವೆ. ಅವರ ವಿಜ್ಞಾನ ತಂತ್ರಜ್ಞಾನ, ಚಿತ್ರಕಲೆ, ನೃತ್ಯ ಅತಿಥಿ ಸತ್ಕಾರ ಪ್ರಿಯತೆ  ಮುಂತಾದುವುಗಳಿಂದ ಜೊತೆಗೆ ಅವರ ಸಾಧನೆಯನ್ನು ಅಂಕಿ ಅಂಶಗಳಿಂದ ಪರಿಚಯಿಸಿಕೊಟ್ಟಿದ್ದಾರೆ.

ಪ್ರವೀಣ ಫರ್ನಾಂಡೀಸ್ ಅವರ “ಕಣ್ಣುಕುಕ್ಕುವ ಜಪಾನ್” ಅಲ್ಲಿಯವರ ಅದ್ದುತ ಸಾದನೆಗಳ ಬಗೆಗೆ ಮೆಚ್ಚಿಕೊಂಡು ಬರೆದಿದ್ದಾರೆ.

ಕು.ಶಿ.ಹರಿದಾಸ ಭಟ್ಟರು ತಮ್ಮ ‘ಜಗದಗಲ’ ಪ್ರವಾಸ ಕೃತಿಯಲ್ಲಿ ಹಾಂಗ್‌ಕಾಂಗ್, ಜಪಾನ್‌ಗಳ ಅನುಭವ ಬರೆದಿದ್ದಾರೆ. ತಮ್ಮ ಯಕ್ಷಗಾನ ಪ್ರದರ್ಶನಕ್ಕಾಗಿ ಹೋದ ಸಂದರ್ಭದಲ್ಲಿ ಅಲ್ಲಿ ತಮಗಾದ ಅನೇಕ ಅನುಭವಗಳು
ವಿವರಿಸಿರುವರು. ಯಕ್ಷಗಾನದ ವಿಷಯಕ್ಕೆ ಸಂಬಂದಪಟ್ಟಂತೆಯೇ ಹೆಚ್ಚಿನ ವಿವರಗಳನ್ನು ನಾವು ಇಲ್ಲಿ ಕಾಣುತ್ತೇವೆ. ದೇಶಗಳ ಒಳ ವಿವರಗಳು ಇಲ್ಲಿ ಹೆಚ್ಚಾಗಿ ಕಾಣಸಿಗುವುದಿಲ್ಲ.

ಪ್ರೋ. ಸಿ.ಎಚ್. ಮರಿದೇವರು ಬರೆದ “ಆಗ್ನೇಷಿಯಾ ಮತ್ತು ಜಪಾನ ರಾಷ್ಠ್ರಗಳಲ್ಲಿ” ಓದುವಾಗ ಅವರು ಹೇಳಿದಂತೆಯೇ ಅವರೊಂದಿಗೆ ಥಾಯಲ್ಯಾಂಡ್, ಹಾಂಕಾಂಗ್, ಜಪಾನ್, ಮಲೇಶಿಯಾ, ಮತ್ತು ,ಸಿಂಗಪೂರದ ರಾಷ್ಟ್ರಗಳನ್ನು ಸುತ್ತಾಡಿಕೊಂಡು ಬಂದ ಅನುಭವವಾಗುತ್ತದೆ. ಅಲ್ಲೆಲ್ಲ ತಾವು ಕಂಡ ತಂತ್ರಜ್ಞಾನಗಳಾಗಲಿ ಸಾಮಾಜಿಕ ಸಾಂಸ್ಕೃತಿಕ ಬದುಕಿನ ಬಗೆಗಾಗಲಿ ಪ್ರಬುದ್ಧವಾಗಿ ವಿವರವಾಗಿ ತಿಳಿಸಿರುವರು.

‘ಆಗ್ನೇಯದಂಗಳದಲ್ಲಿ’ ಇದು ವೆಂಕಟೇಶ ಮಾಚಕನೂರರು ಪ್ರವಾಸ ಕೃತಿ. ಥಾಯಲ್ಯಾಂಡ್, ಮಲೇಶಿಯಾ, ಸಿಂಗಪುರ. ಇಂಡೋನೇಶಿಯಾವನ್ನು ಭೂಗೋಳಿಕ. ಐತಿಹಾಸಿಕ. ಸಾಂಸ್ಕೃತಿಕ ಹಿನ್ನೆಲೆಯಲ್ಲಿ ನೋಡುತ್ತ ತಮ್ಮ
ಅನುಭವಗಳನ್ನು ವಿವರವಾಗಿ ಹೇಳಾತ್ತಾ ಹೋಗಿರುವರು.

ತೈಲ ಸಂಪತ್ತಿನಿಂದ ಜಗತ್ತಿನ ಭೂಪಟದಲ್ಲಿ ಬಾರೀ ಶ್ತೀಮಂತ ದೇಶಗಳಾಗಿ ಕಂಗೊಳಿಸುತ್ತಿರುವ ಏಶಿಯದ ಕೊಲ್ಲಿ ರಾಷ್ಟ್ರಗಳಿಗೆ ಹೋಗಿ ಬಂದ ನಮ್ಮ ಪ್ರವಾಸೀ ಲೇಖಕರು ತುಂಬ ಕಡಿಮೆ. ಅರಬ್ ಮತ್ತು ಇಸ್ರೇಲ್ ದೇಶಗಳಿಗೆ ಹೋಗಿ ಬಂದ ಬೆರಳೆಣಿಕೆಯ 3 ಲೇಖಕರ ಪ್ರವಾಸ ಕಥನಗಳು ಬಂದದ್ದು ಬಿಟ್ಟರೆ ಅಲ್ಲಲ್ಲಿ ಕೆಲವರ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದಷ್ಟೇ ಕಾಣಸಿಗುತ್ತವೆ. ಅದರೆ ಅರಬ್ ದೇಶಗಳ ಬಗೆಗೆ ಐತಿಹಾಸಿಕ, ರಾಜಕೀಯ, ಸಾಹಿತ್ಯ ಸಂಸ್ಕೃತಿಗಳ ಕುರಿತಾಗಿ ಬರೆದವರಲ್ಲಿ ವಿದೇಶಿಗರೇ ಹೆಚ್ಚು ಕಂಡು ಬರುತ್ತಾರೆ. ಅವರೆಲ್ಲಿ ಸಾಹಸ ಪ್ರವೃತ್ತಿಯವರು. ಕಡುಬಿಸಿಲಿನಲ್ಲಿ ಒಂಟೆಯ ಮೇಲೆ ಕುಳಿತು ನೂರಾರು ಮೈಲಿಗಳಷ್ಟು ಮರಳುಗಾಡನ್ನು ದಾಟುತ್ತಾ ಅನೇಕ ಎಡರುತೊಡರುಗಳನ್ನು ಎದುರಿಸುತ್ತಾ ಸಮಗ್ರ ಚಿತ್ರಣಗಳನ್ನು ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಮ್ಮ
ಭಾರತೀಯರು ಇಂತಹ ಸಾಹಸ ಪ್ರವೃತ್ತಿಯುಳ್ಳವರಲ್ಲ. ಯುರೋಪ ಅಮೇರಿಕಾ ಬಿಟ್ಟು ಬೇರೆ ದೇಶಗಳಿವೆ ಎಂಬ ಕಲ್ಪನೆಯೂ ಕೂಡಾ ಸಾಕಷ್ಟು ಜನರಿಗೆ ಇಲ್ಲ. 20ನೆಯ ಶತಮಾನದ ಪೂರ್ವಾರ್ದದಲ್ಲಿ ಕೊಲ್ಲಿ ರಾಷ್ಟ್ರಗಳು ತಮ್ಮ ತೈಲ ಸಂಪತ್ತಿನಿಂದ ಜಗತ್ತಿನ ಭೂಪಟದಲ್ಲಿ ಕಾಣಿಸಿಕೊಂಡವು.

ವಿಶ್ವದ ಅತಿ ದೊಡ್ಡ ರಾಷ್ಟ್ರಗಳ  ಹನ್ನೆರಡನೆಯ ಸ್ಥಾನ ಪಡೆದ ಅರಬ್ ದೇಶ ಸೌದಿ ಅರೇಬಿಯಾಕ್ಕೆ ಲತಾಗುತ್ತಿಯವರು ಹೋಗಿ ಬಂದು ‘ನಾಕಂಡಂತೆ ಅರೇಬಿಯಾ’ ಪ್ರವಾಸ ಕಥನ ರಚಿಸಿದ್ದಾರೆ. ಅಲ್ಲಿ ಅವರು ಸುದೀರ್ಘ ವರ್ಷಗಳಷ್ಟು ಇದ್ದುದರಿಂದ ಅನೇಕ ವಿಷಯಗಳು ವಿವರವಾಗಿ ಇದರಲ್ಲಿ ತಿಳಿಸಿದ್ದಾರೆ. ಜಗತ್ತಿನಲ್ಲಿ ದೊರೆಯುವ ಒಟ್ಟು ತೈಲದ ಮೂರನೆಯ ಭಾಗ ಇಲ್ಲಿಯೇ ಲಭ್ಯವಾಗುತ್ತದೆ. ಮರುಭೂಮಿಯ ತುಂಬೆಲ್ಲ ತೈಲ ಬಾವಿಗಳೇ ತುಂಬಿಕೊಂಡಿವೆ. ಎನ್ನುತ್ತಾರೆ. ಇದು ಜಗತ್ತಿನ ಶ್ರೀಮಂತ ರಾಷ್ಟ್ರ. ಹಿರಿಗಾಗಿ ಇಲ್ಲಿ ಹರಿಯುವ ಹಣದ ಹೊಳೆ ಇಂದ್ರಲೋಕವನ್ನೇ ಸೃಷ್ಟಿಸಿದೆ ಎನ್ನುವರು.

ಇತಿಹಾಸದ ಒಂದು ಕಾಲಘಟ್ಟದಲ್ಲಿ ಅರಬ್ಬ ಪ್ರಾಂತವು ಪ್ರಮುಖ ವಾಣಿಜ್ಯ ಕೇಂದ್ರವಾಗಿತ್ತು. ಈ ಪ್ರಾಂತವು ರೇಷ್ಮೆ ಹಾಗೂ ಅಭರಣಗಳ ಮಸಾಲೆ ಸಾಮಾನುಗಳ ಆಮದು ರಫ್ತು ವ್ಯಾಪಾರಕ್ಕಾಗಿ ಹೆಸರುವಾಸಿಯಾಗಿತ್ತು. ಈ ಸಾಮಾನುಗಳೆಲ್ಲಾ ಪೂರ್ವ ಆಫ್ರಿಕಾ ಹಾಗೂ ಭಾರತಗಳಿಂದ ಆಮದು ಮಾಡಿ ಮೆಡಿಟರೆಲಿನಿಯನ್ ಕೆಂಪು ಸಮುದ್ರದ ಮೂಲಕ  ದೇಶಗಳಿಗೆ ಸರಬರಾಜು ಮಾಡುತ್ತಿದ್ದರೆನ್ನುವುದು ಗೊತ್ತಾಗುವುದು. 6ನೆಯ ಶತಮಾನದಲ್ಲಿ ಇಸ್ಲಾಂ ಧರ್ಮದ ಪ್ರವರ್ತಕರಾದ ಮಹಮ್ಮದ್ ಪೈಲಗಂಬರಠ ಪವಿತ್ರ ಸ್ಥಳಗಳಾದ ಮಕ್ಕಾ ಮದೀನಾಗಳು ಇದೇ ದೇಶದಲ್ಲಿ ಇವೆ. ಇಲ್ಲಿ ನಡೆಯುವ ಬಕ್ರೀದ್ ಜಗತ್ತಿನ ಮುಸ್ತಿಂ ಬಾಂಧವರು ಸಾದ್ಯತೆ ಮಾಡಿಕೊಂಡು ಮಕ್ಕಾ ಮದೀನಾಗಳಿಗೆ
ಬಂದು ತಮ್ಮ ಧಾರ್ಮಿಕ ವಿಧಿ ವಿದಾನ ತೀರಿಸಿ ಹಜ್ ಅಥವಾ ಹಾಜಿಗಳೆಂದು ಮರಳುವರು ಎಂದಿದ್ದಾರೆ.

ಅರಬರ ಸುಂದರ ಬರವಣಿಗೆಯ ಕಲೆ ಕೆಲಿಗ್ರಾಫ್ ಬಗೆಗೆ ಹೇಳುತ್ತಾ, ಧಾರ್ಮಿಕ ಪಂಕ್ತಿಗಳನ್ನು ಕಲಾಕಾರರ ಕೈಚಳಕದಲ್ಲಿ ಬರವಣಿಗೆಯ ವಿವಿಧ ವಿನ್ಯಾಸಗಳು ಮೂಡಿಬರುವ ರೀತಿ ಹೇಳುತ್ತಾರೆ. ಸಾಹಿತ್ಯಕ್ಕೆ ಅರಬ್ಬರು ಶ್ರೇಷ್ಠ
ಕೊಡುಗೆಯನ್ನು ಕೊಟ್ಟಿದ್ದಾರೆ. ಅವರು ಕಾವ್ಯ ಪ್ರೇಮಿಗಳಾಗಿದ್ದರು. ಅವರ ಸಾಹಿತ್ಯಕ ಕೃತಿಗಳಲ್ಲಿ ಅರೇಬಿಯನ್ ನೈಟ್ ಕಥೆಗಳು  ಇದರಲ್ಲಿ ಅಲಿಬಾಬ ಮತ್ತು ನಲವತ್ತು ಕಳ್ಳರು, ಸಿಂದಬಾದ್ ನಾವಿಕ. ಅಲ್ಲಾವುದ್ದೀನನ ಅದ್ದುತ ದೀಪ
ಮುಂತಾದ ಕಧೆಗಳಿವೆ. ಉಮರ್ ಖಯಾಮನ ರುಬೈಯತ್ ಅರಬ್ದರ ಸುಪ್ರಸಿದ್ಧ ಕೃತಿ ಎನ್ನುಮವರು. ಬಹಳಷ್ಟು ವರ್ಷಗಳು ಈ ಲೇಖಕಿ ಅಲ್ಲಿದ್ದರಿಂದ ಆ ದೇಶದ ಅನೇಕ ಸಾಮಾಜಿಕ ಸಾಂಸ್ಕೃತಿಕ ಐತಿಹಾಸಿಕ ಮಹತ್ವದ ವಿಷಯಗಳನ್ನು ಹೇಳುತ್ತಾ ಹೋಗುತ್ತಾರೆ. ಅವರ ನ್ಯಾಯ ಶಿಕ್ಷೆಯ ಬಗೆಗೆ ಹೇಳುವಾಗ ಅಲ್ಲಿಯ ಕಾಯ್ದೆ ಕಾನೂನುಗೆಳೆಲ್ಲಾ ಮೌಲ್ವಿಯ ಹಿಡಿತದಲ್ಲಿಯೇ ಇದ್ದು ಇಸ್ಲಾಮಿಕ್ ಶರಿಯಾ ಕಾನೂನಿನ ಪ್ರಕಾರ ಮೌಲ್ವಿ ವಿಚಾರಿಸಿಕೊಳ್ಳುತ್ತಾನೆ. ಇಲ್ಲಿ ವಕೀಲರು ಕೋರ್ಟುಗಳೆಂದಿಲ್ಲ. ಆಯಾ ಅಪರಾಧಕ್ಕೆ ತಕ್ಕಂತೆ ಕುರಾನ್ ಹೇಳಿದ ಪ್ರಕಾರ ಮೌಲ್ವಿ ದಂಡನೆಗೆ ಒಳಪಡಿಸುತ್ತಾನೆ. ಉದಾ ಕಳ್ಳತನ ಮಾಡಿದರೆ ಕೈ ಕತ್ತರಿಸಿಬಿಡುತ್ತಾರೆ. ಕೊಲೆಗಾಗರು, ಅತ್ಯಾಚಾರಿಗಳು ಹಾಗೂ ಮಾದಕ ವಸ್ತು ಕಳ್ಳ ಸಾಗಾಣಿಕೆಗಳಲ್ಲಿ ಸಿಕ್ಕಿಬಿದ್ದರೆ ತಲೆ ಕಡೆಯುತ್ತಾರೆ. ಇಂತಹ ಸಂದರ್ಭಗಳನ್ನು ಜನ ಸಾಮಾನ್ಯರು ನೋಡುತ್ತಾರೆ. ನೋಡಲೆಂದೇ ಮೌಲ್ವಿಯ ಸಹಕತರ್ತರು ಹಾದಿಯಲ್ಲಿ
ಹೋಗುವವರನ್ನು ಕರೆಯುತ್ತಾರೆ. ನೀವೂ ಏನಾದರೂ ತಪ್ಪು ಮಾಡಿದರೆ ನಿಮಗೂ ಇದೇ ಗತಿ ಅನ್ನುವ ಅರ್ಥದಲ್ಲಿ ಕರೆಯುತ್ತಾರೆ ಎಂದೂ ಲೇಖಕಿ ಹೇಳುತ್ತಾರೆ. ಜೊತೆಗೆ ಅರಬರ ಉಡುಪುಗಳು, ಮದುವೆ. ಮಹಲುಗಳು, ಜಾಹೀರಾತುಗಳು ಮಹಿಳೆಯರ ಬದುಕು, ವಾಣಿಜ್ಯ, ಪ್ರಗತಿ, ವಸ್ತುಸಂಗ್ರಹಾಲಯಗಳ ಬಗೆಗೆ ಪರಿಚಯಿಸಿಕೊಡುತ್ತಾರೆ. ತಾವು ಅಲ್ಲಿಯ ಕೆಂಪು ಸಮುದ್ರದ ಒಡಲಾಳದಲ್ಲಿ ಸಂಬ್ರಮಪಟ್ಟ ಸಂದರ್ಭಗಳನ್ನು. ಮರುಭೂಮಿ. ಬೆಟ್ಟಗುಡ್ಡಗಳಲ್ಲಿ ಅಲೆದಾಡಿದ ಸಂತೋಷಗಳನ್ನು. ವಿವರಿಸಿರುವರು.

ಇಸ್ರೇಲ್ ದೇಶಕ್ಕೆ ಹೋಗಿ ಬಂದ ಮುತ್ತಿಹಳ್ಳಿ ನಾಗರಾಜ್‌ರವರು  ‘ಮರುಭೂಮಿ ಚಿಗುರಿತು”  ಪ್ರವಾಸ ಕಥನ ರಚಿಸಿದ್ದಾರೆ. ಅದರಲ್ಲಿ ಇಸ್ರೇಲಿಗರ ದೇಶಾಭಿಮಾನ  ಮೆಚ್ಚಿಕೊಂಡು ಬರೆದಿರುವರು. ಭಿನ್ನತೆಯಲ್ಲಿ ಏಕತೆಯ ಪ್ರತ್ಯಕ್ಷ ಉದಾಹರಣೆ ಇಸ್ರೇಲಿನಲ್ಲಿದೆ ಎಂದಿದ್ದಾರೆ. ಇಸ್ರೇಲ್‌ದಲ್ಲಿರುವ ಯಹೂದಿಗಳು ಭಿನ್ನಭಿನ್ನ. ದೇಶ, ಸಂಸ್ಕೃತಿ ಛಾಷೆಗಳಿಗೆ ಸೇರಿದವರು. ಸಾವಿರಾರು ವರ್ಷಗಳ ಹಿಂದೆ ದಬ್ಬಾಳಿಕೆಗಳಿಗೆ ಒಳಗಾಗಿ ತಾಯ್ನಾಡಿನಿಂದ ಉಚ್ಚಾಟಿಸಲ್ಪಟ್ಟು ಜಗತ್ತಿನ ಮೂಲೆ ಮೂಲೆಗಳಿಗೆ ಹೋಗಿ ನೆಲೆಸಿದ್ದರು. 1948 may, 14 ಇಸ್ರೇಲಿಗಳಿಗೆ ಮಹತ್ವದ ದಿನ. ಬ್ರಿಟಿಷರು ತಮ್ಮ 30 ವರ್ಪಗಳ ಅಳ್ವಿಕೆ ಮುಕ್ತಾಯಗೊಳಿಸಿ ದೇಶ ತ್ಯಜಿಸಿದರು. ಇಸ್ರೇಲಿಗಳಿಗೆ ವಿಜಯೋತ್ಸವ ಆಚರಿಸಲು ಅರಬರು ಅವಕಾಶ ಕೊಡಲಿಲ್ಲ. ಸ್ವತಂತ್ರ ಇಸ್ರೇಲನ್ನು ಆರಂಭದಲ್ಲಿಯೇ ಚಿವುಟಿ ಹಾಕಲು ಅರಬ್ ರಾಷ್ಟ್ರಗಳು ಮುಂದಾದವು. ಇಜಿಪ್ಪ, ಸಿರಿಯಾ. ಲೆಬನಾನ್, ಜೊರ್ಡಾನ್ ಇವುಗಳ ಸಶಸ್ತ್ರ ಪಡೆಗಳು ಯಹೂದಿಗಳ ಮೇಲೆ ಏಕಕಾಲಕ್ಕೆ ದಾಳಿ ಮಾಡಿದವು. ಸುತ್ತಲೂ ಶತ್ರು ರಾಷ್ಟಗಳಿಂದ ಅವರಿಸಲ್ಪಟ್ಟ ಇಸ್ರೇಲ್ ಗಾತ್ರ ಹಾಗೂ ಜನಸಂಖ್ಯೆಗೂ ಈ ಅರಬ್ ರಾಷ್ಟ್ರಗಳ ಗಾತ್ರ ಹಾಗೂ ಜನಸಂಖ್ಯೆಗೂ ಯಾವ ಹೋಲಿಕೆಯೂ ಇಲ್ಲ. ಇದೊಂದು ಅಸಮಬಲ ಹೋರಾಟ. ಅರಬರನ್ನು ಯಶಸ್ವಿಯಾಗಿ ಎದುರಿಸುತ್ತಿರುವ ಇಸ್ರೇಲ್‌ದ ಕೆಚ್ಚು ಮೆಚ್ಚುವಂಥದು. ಇಸ್ರೇಲ್
ಸ್ವತಂತ್ರ ರಾಷ್ಟ್ರ ಸ್ಥಾಪನೆಯಾದ ನಂತರ ಯಹೂದಿಗಳು ಪುನಃ ಹಿಂದಿರುಗಿದ್ದಾರೆ. ಅವರಲ್ಲಿ ಜರ್ಮನ್‌ರಿದ್ದಾರೆ. ಪೋಲೆಂಡದಿಂದ ಮತ್ತಿತರ ರಾಷ್ಟ್ರಗಳಿಂದ ಬಂದ ಯಹೂದಿಗಳಿದ್ದಾರೆ. ಹೀಗಾಗಿ ಇಸ್ರೇಲ್ ಒಂದೇ ಧರ್ಮ ವಿಭಿನ್ನ ಸಂಸ್ಕೃತಿಗಳ ಸಂಗಮವಾಗಿದೆ ಎಂದು ಹೇಳುತ್ತಾರೆ.

ಇಸ್ರೇಲಿಗರ ಸಾಧನೆಯ ಬಗೆಗೆ ಲೇಖಕರು ಹೃದಯ ತುಂಬಿ ಮಾತನಾಡಿರುವರು. ಹನಿ ನೀರಾವರಿ ಪದ್ಧತಿಯಿಂದ ಮರುಭೂಮಿಯನ್ನು ನಂದನವನವಾಗಿಸಿದ್ದು, ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ನಂತದ ಹುಡುಗರು ಮೂರು ವರ್ಷಗಳು ಹೆಂಗಸರು ಎರಡು ವರ್ಷಗಳವರೆಗೆ ಸೈನ್ಯದಲ್ಲಿ ಕಡ್ಡಾಯವಾಗಿ ಸೇವೆ ಸಲ್ಲಿಸುವುದು, ಇಸ್ಫೇಲಿ ಮಹಿಳೆಯರ ಸಾದನೆಗಳ ಬಗೆಗೆ ಸಂತೋಷ ಆಶ್ಚಯಪಟ್ಟಿರುವರು.

ಜಾಗತಿಕ ಧರ್ಮಗಳ ಪವಿತ್ರ ಸಂಗಮವಾಗಿರುವ ಇಸ್ರೇಲದ ರಾಜಧಾನಿ ಜೆರೂಸಲೆಂ ಬಗೆಗೆ ವಿವರಿಸಿರುವರು. ಇಲ್ಲಿರುವ “ಪಶ್ಚಿಮದಗೋಡೆ” (ಕ್ರಿ.ಪೂದಲ್ಲಿ ಕಟ್ಟದ ಒಂದು ಬೃಹತ್ ದೇವಾಲಯದ ಭಾಗ) ಗೆ ಪ್ರಾರ್ಥನೆ ಸಲ್ಲಿಸಲು
ಇಸ್ರೇಲಿಗಳು ಜಗತ್ತಿನಾದ್ಯಂತ ಅವರೆಲ್ಲಿಯೇ ಇರಲಿ ಒಮ್ಮೆಯಾದರೂ ಇಲ್ಲಿ ಬಂದು ಹೋಗುತ್ತಾರಂತೆ. ಹಾಗೆಯೇ ಇಸ್ಲಾಮಿಗರಿಗೆ ಮಕ್ಕಾ ಮದೀನಾದ ನಂತರ ಜೆರೂಸಲೆಂ ಕೂಡಾ ಮೂರನೆಯ ಪವಿತ್ರವಾದ ಸ್ಥಳ ಎಂದು ತಿಳಿಸುತ್ತಾ ಪ್ರವಾದಿ ಮಹಮದ್‌ರಿಗೆ ಇಲ್ಲಿಂದಲೇ ಸ್ವರ್ಗಾರೋಹಣವಾಯೆತೆಂದು ಹೇಳಿದ್ದಾರೆ.

ಹಾಗೆಯೇ ಕ್ರಿಶ್ಚಿಯನ್ನರಿಗೆ ಜೆರೂಸಲೆಂ ಯೇಸು ಕ್ರಿಸ್ತ ಹುಟ್ಟಿದ ಪವಿತ್ರ ಸ್ಥಳ ಎಂಬುದಾಗಿದೆ. ಬೆತ್ಲೆಹೆಮ್, ನಜರತ್‌ಗಳಲ್ಲಿ ಕ್ರಿಸ್ತ ಹುಟ್ಟಿ ಬೆಳೆದು ದರ್ಮಪ್ರಚಾರ ಮಾಡಿದ, ಶಿಲುಬೆಗೆ ಏರಿಸಿದ ಸ್ಥಳಗಳು ಚರ್ಚುಗಳು ಪವಿತ್ರವಾದವುಗಳು ಎಂದು ಹೇಳುತ್ತಾರೆ. ಧಾರ್ಮಿಕ ಪಂಗಡದವರು ತೀರ್ಥಯಾತ್ರೆಗಾಗಿ ತಂಡೋಪ ತಂಡವಾಗಿ ಬರುತ್ತಾರಂತೆ. ಇದರಿಂದ ಇಸ್ರೇಲ್‌ದ ಪ್ರವಾಸೋದ್ಯಮವು ಸಾಕಷ್ಟು ಆದಾಯವನ್ನು ಹೊಂದುತ್ತದೆ ಎಂದು ತಿಳಿಸಿರುವರು.

ದೇ.ಜ.ಗೌ. ರವರ ಪ್ರವಾಸ ಕಥನ “ಏಸು ವಿಭೀಷಣರ ನಾಡಿನಲ್ಲಿ” ಇಸ್ರೇಲಿನ ಬಗೆಗೆ ಅವರ ಸಾಧನೆಯ ಬಗೆಗೆ ಇಸ್ರೇಲ್ ಸಣ್ಣ ರಾಷ್ಟ್ರವಾದರೂ ಅವರು ಸಾಧಿಸಿರುವ ಪ್ರಗತಿ ಅದ್ಭುತವೆಂದು ಹೇಳಿದ್ದಾರೆ. ಏಸು ಹುಟ್ಟಿದ ಪವಿತ್ರ
ಭೂಮಿಯನ್ನು ಕಂಡೊಡನೆಯೇ ಏಸುವಿನ ಮಹಿಮೆಗಳನ್ನು ನೆನಪಿಸಿಕೊಳ್ಳುತ್ತಾರೆ. ತಮ್ಮನ್ನು ಅ ಮಹಾತ್ಮನ ನಾಡಿಗೆ ಕೈ ಹಿಡಿದು ಕರೆದೊಯ್ದ ಮಹಾನ್ ಚೇತನಕ್ಕೆ ನಮಿಸುವರು. ಇಸ್ರೇಲಿಗರ ಸಾಹಸ  ತಂತ್ರಜ್ಞಾನಗಳ ಬಗೆಗೆ ಮೆಚ್ಚಿಕೊಂಡಿದ್ದಾರೆ. ಭಾರತದ ಕೆಲವು ವಿಷಯಗಳನ್ನು ಸಾಂದರ್ಭಿಕವಾಗಿ ಹೋಲಿಸಿಕೊಳ್ಳುತ್ತಾ ಹೋಗುತ್ತಾರೆ. ಕೆಲವು ಕಡೆ ವ್ಯಧೆಯೂ ಪಟ್ಟಿದ್ದಾರೆ.

‘ಪ್ರವಾಸಿ ಹೆಜ್ಜೆಗಳು’ ಸುನೀತಾ ಶೆಟ್ಟಿಯವರ ದೇಶ ವಿದೇಶಗಳ ಕೃತಿ. ಸುಮಾರು ಇಪ್ಪತ್ತು ವರ್ಷಗಳಿಂದ ದೇಶ ವಿದೇಶಗಳನ್ನು ಸುತ್ತಾಡಿದ ಲೇಖಕಿಯ ಅನುಭವಗಳ ಕೃತಿ. ಭಾರತದ ಕಾಶ್ಮೀರ, ಬನಾರಸ, ದೇಗುಲಗಳ ನಾಡು ಒರಿಸ್ಸಾ, ಇತಿಹಾಸದ ಮಡಿಲು ಗುಜರಾತ. ಸ್ವರ್ಗ ಶ್ರೇಣಿಯ ಸಾತಪುಡಾ, ನೀಲಿ ಪರ್ವತದ ನಾಡು ಸಿಕ್ಕಿಂ, ರಾಜಸ್ಥಾನ. ಬೋಧಗಯಾ, ಖಜುರಾಹೋ ಕಡೆಗೆಲ್ಲ ಆಗಾಗ ಪ್ರವಾಸಿಸುತ್ತ ಯಾತ್ರಾಸ್ಥಳಗಳ ಬಗೆಗೆ, ರಾಜಕೀಯ ಬಗೆಗೆ, ಸಾಮಾಜಿಕ ಸಾಂಸ್ವತಿಗಳ ಬಗೆಗೆ ಬಹಳಷ್ಟು ಸೂಕ್ಷ್ಮವಾಗಿ ಗಮನಿಸುತ್ತಾ ದಾಖಲಿಸುತ್ತ ಹೋಗುವುದು ಇಲ್ಲಿಯ
ವಿಶೇಷ. ಹಾಗೆಯೇ ದೇಶದ ಹೊರಗಡೆ ವಿದೇಶಗಳಲ್ಲಿ ಪ್ರವಾಸಿಸುವಾಗಲೂ ಶಿಸ್ತಿನ ಅಧ್ಯಯನದಿಂದಲೇ ಹೋಗಿರುವುದು ಕಂಡುಬರುತ್ತದೆ. ಅರಬ್‌ದೇಶದ ದುಬಾಯಿಯ ಶ್ರೀಮಂತಿಕೆ ಬಗೆಗೆ ಸಿಂಗಾಪೂರ ಹಾಂಗ್‌ಕಾಂಗಿನ ಕಟ್ಟಡಗಳ ಬಗೆಗೆ, ಧೈಲ್ಯಾಂಡಿನ ಜನ ಜೀವನ, ದರ್ಮ, ಪ್ರೇಕ್ಷೆಣೀಯ ಸ್ಥಳಗಳ ಬಗೆಗೆ, ಆರ್ಕಿಡ್‌ ಹೂಬನಗಳ ಬಗೆಗೆ ಬಹಳ ಅಸಕ್ತಿಯಿಂದ ಓದುಗರಿಗೆ ಪರಿಚಯಿಸಿರುವರು.

1997ರಲ್ಲಿ ಅಂತರರಾಷ್ಟ್ರೀಯ ಬಂಟರ ಸಮಾವೇಶಕ್ಕೆಂದು 4 ದಿನಗಳು ಅಮೇರಿಕಾಕ್ಕೆ ಹೋಗಿದ್ದರು. ನಂತರದ 40 ದಿನಗಳು ಅವರ ಭಾವನ ಮಗನ ಮನೆಯಲ್ಲಿ ಇದ್ದು ಅಮೇರಿಕವನ್ನು ಸುತ್ತಾಡಿರುವರು. 1998ರಲ್ಲಿ ಪ್ರವಾಸಿ ಸಂಸ್ಥೆಯ
ಮೂಲಕ ಯುರೋಪ ಪ್ರವಾಸ ಕೈಗೊಂಡು ಕೆಲವೇ ಪ್ರಮುಖ ದೇಶಗಳನ್ನು ಅದರೊಳಗಿನ ಅತೀ ಪ್ರಮುಖ ಸ್ಥಳಗಳನ್ನು ನೋಡಿ ಸಂತೃಪ್ತರಾಗಿದ್ದಾರೆ.

ಕೊನೆಯದಾಗಿ ಅವರ ಪ್ರವಾಸ (ಈ ಪುಸ್ತಕದಲ್ಲಿ) ಭಾರತದ ಅಂಗವಾದ ಅಂದಮಾನಕ್ಕೆ ಹೋಗಿ ಬಂದಿದ್ದಾರೆ. ಭಾರತ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಅಲ್ಲಿ ಕೈದಿಗಳನ್ನು ಇರಿಸಿದ ಸೆಲ್ಯುಲಾರ್ ಜೈಲು ಹಾಗೂ ಸುತ್ತಮುತ್ತಲಿನ ಕೆಲವು ದ್ವೀಪಗಳನ್ನು ಸಂದರ್ಶಿಸಿರುವರು.

ಸುನಿತಾ ಶೆಟ್ಟೆಯವರು ಈ ಎಲ್ಲ ದೇಶ ವಿದೇಶಗಳಲ್ಲಿ ಲವಲವಿಕೆಯಿಂದ ಪ್ರವಾಸ ಮಾಡಿಬಂದು ತಮ್ಮ  ನುಭವಗಳನ್ನು ಓದುಗರೊಂದಿಗೆ ಹಂಚಿಕೊಂಡು ಸಂತೃಪ್ತರಾಗಿದ್ದಾರೆ. ಒಂದೇ ಪ್ರವಾಸ ಕೃತಿಯಲ್ಲಿ ಕೆಲವು ದೇಶಗಳ ಬಗೆಗೆ ನಮಗೆ ಏನೆಲ್ಲ ತಿಳಿದುಕೋಳ್ಳುವ ಅದರ ಪ್ರಯೋಜನ ಪಡೆದುಕೊಳ್ಳುವ ಅವಕಾಶ ಒದಗಿಸಿರುವ ಸುನೀತಾ ಅವರು ಪ್ರಶಂಸನೀಯರೆಂದೇ ಹೇಳಬೇಕು .

ಶಶಿಕಲಾ ನಾಯಕ ಅವರ “ವಿಶ್ವದರ್ಶನ”ದಲ್ಲಿ ಯುರೋಪು , ಉತ್ತರ ಅಮೇರಿಕಾ. ಕೆನಡಾ ವಿಭಾಗ, ಮತ್ತು ಏಷ್ಯಾದ ಪೂರ್ವ ವಿಭಾಗಗಳಲ್ಲಿ ಸಂಚರಿಸಿದಾಗಿನ ತಮ್ಮ ಅನುಭವಗಳನ್ನು ಸರಳ ಸಹಜ ಶೈಲಿಯಲ್ಲಿ ಬರೆದಿರುವರು. ಇವರು ಅಲ್ಲಿಲ್ಲಿಯ ಅಯಾದೇಶಗಳ ಸಂಸ್ಕೃತಿ ಕಲೆಗಳ ಬಗೆಗೆ ಅಸಕ್ತರಾಗಿದ್ದಾರೆ. ಉದಾ : ಭಾರತೀಯರುಗಳು ಅಮೇರಿಕಾ ನಿವಾಸಿಗಳಾದರೂ ತಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ಮರೆಯುವುದಿಲ್ಲ ಎಂದು ಹೇಳುತ್ತ ಅವರ ಬಗೆಗೆ ಹೆಮ್ಮೆ
ಪಟ್ಟುಕೊಂಡಿದ್ದಾರೆ. ಪರದೇಶದಲ್ಲಿದ್ದರೂ ಭಾರತೀಯ ಸಂಸ್ಕೃತಿಯನ್ನು ಉಳಿಸಿಕೊಂಡು ಸಂಘ, ಸಂಸ್ಥೆ, ಕೂಟಗಳ ಮೂಲಕ ಒಗ್ಗಟ್ಟಿನಲ್ಲಿರಲು ಪ್ರಯತ್ನಿಸುವುದರಿಂದ ತಾವು ಬಂಧು ಬಳಗದಿಂದ ದೂರವಿರುವರೆಂಬ ಭಾವನೆ ಕಡಿಮೆಯಾಗಿ ಕಷ್ಟ ಸುಖಗಳಲ್ಲಿ ಒಬ್ದರಿಗೊಬ್ಬರು ಮಾನಸಿಕವಾಗಿ ದೈಹಿಕವಾಗಿ ಸಹಾಯಕರಾಗಿ ಸಮಸ್ಯೆಗಳನ್ನು ಪರಿಹರಿಸುತ್ತಿರುವರೆಂಬ ಭಾವನೆ ನನಗಾಗಿದೆ ಎಂದು ಸಂತೋಷಪಟ್ಟಿದ್ದಾರೆ.

‘ಬಹರೈನ್ ದರ್ಶನ’ ಕುದ್ಕಾಡಿ ವಿಶ್ವನಾಥ ರೈ ಅವರ ಅರಬ್‌ನಾಡಿನ ಪ್ರವಾಸಕಥನ 2001ರಲ್ಲಿ ಅಲ್ಲಿ ನಡೆದಿರುವ ತುಳು  ಅಧ್ಯಕ್ಷರಾಗಿ ಪಾಲ್ಗೊಂಡಿರುವರು. ಈ ಸಂದರ್ಭದಲ್ಲಿ ಅಲ್ಲಿಯ ಮಿತ್ರರು ಇವರಿಂದ ನೃತ್ಯರೂಪದ ನಾಟಕಗಳನ್ನು ಮಾಡಿಸಿಕೊಂಡಿರುವರು. ಈ ನೃತ್ಯಗಳ ಮುಖಾಂತರ ತುಳುನಾಡು, ಕರ್ನಾಟಕ, ಭಾರತೀಯ ಸಂಸ್ಕೃತಿಯನ್ನು ಪರಿಚಯಿಸಿರುವರು. ಬಹರೈನ್‌ದಲ್ಲಿರುವ ಯಕ್ಷರಂಗ ಸಂಸ್ಥೆಯ ಬಗೆಗೆ ತಿಳಿಸಿರುವರು. ಬಹರೈನ್‌ನಲ್ಲಿರುವ ಭಾರತೀಯರ ಜೀವನಶೈಲಿ, ಅವರ ಮಕ್ಕಳು ಓದುವ ಭಾರತೀಯ ಶಾಲೆಗಳ ಬಗೆಗೆ ಬರೆಯುತ್ತ ಮುಸ್ಲಿಂರ ಸಾಮಾಜಿಕ ಜೀವನ ಶೈಲಿಯ ಬಗೆಗೂ ನಮಗೆ ಪರಿಚಯಿಸಿರುವರು. ಇದರಲ್ಲಿ ಅರಬ್ ಶ್ರೀಮಂತ ಶೇಖರ
ಹವ್ಯಾಸಗಳ ಬಗೆಗೂ ವಿವರಣೆ ಸಿಗುವವು.

ಲೀಲಾ ಮಿರ್ಲೆಯವರ ‘ಪ್ರವಾಸ(1995)’ ಕೃತಿ ಇದೊಂದು ಪ್ರಯಾಣಕ್ಕೆ ಹೊರಡುವವರ ಪೂರ್ವ ಸಿದ್ಧತೆಯ ಬಗೆಗೆ ಅನೇಕ ವಿಷಯಗಳನ್ನು ತಿಳಿಸಿಕೊಡುವ ಕೈಪಿಡಿಯಾಗಿದೆ. ಪ್ರತಿಯೊಬ್ದ ಪ್ರವಾಸಿಯೂ ಈ ಪುಸ್ತಕ ಓದಿಕೊಂಡು ತಮ್ಮ ಪ್ರವಾಸ ಶುರು ಮಾಡಿದರೆ ಸಾಕಷ್ಟು ಅನುಕೂಲತೆಗಳಾಗುತ್ತವೆಯೆನ್ನುವುದನ್ನು ನಾನಿಲ್ಲಿ ಕಂಡುಕೊಂಡ ಸತ್ಯ.

ಹೀಗೆ ಹೆಸರಿಸಬಹುದಾದ ಇನ್ನೂ ಅನೇಕ ಕೃತಿಗಳು ಭಾರತದ ಬಗೆಗೆ. ನೆರೆಯ ದೇಶಗಳ ಬಗೆಗೆ  ಸಾಕಷ್ಟು ಸಮೃದ್ಧಿಯಿಂದ ಕೂಡಿದ ಪ್ರವಾಸ ಕಥನಗೆಳೆಲ್ಲ ನಮ್ಮ ಜ್ಞಾನಾರ್ಜನೆಯನ್ನು ಹೆಚ್ಚಿಸುತ್ತಿವೆ.

****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಟ್ಟದಾ ಮೇಲಿಂದ ಮಡಿಕೇರಿಗೆ
Next post ಡೊಳ್ಳನ ಪದ

ಸಣ್ಣ ಕತೆ

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

cheap jordans|wholesale air max|wholesale jordans|wholesale jewelry|wholesale jerseys