ಶ್ರೀಮಂತ ತೈಲ

ವಿಶ್ವದ ಔದ್ಯೋಗಿಕ ನಾಗರಿಕತೆಯ ಉಳಿವು ಇಂಧನವನ್ನು ಅವಲಂಬಿಸಿದೆ ಎಂದರೆ ತಪ್ಪಾಗಲಾರದು. ಸೌದಿ ಅರೇಬಿಯ (ಔದ್ಯೋಗಿಕ) ಜಗತ್ತಿನ ಪ್ರಮುಖ ಆಕರ್ಷಣೆಯ ಕೇಂದ್ರ. ವಿಶ್ವದ ಒಟ್ಟು ಪೆಟ್ರೋಲಿಯಂ ಸಂಗ್ರಹದ ನಾಲ್ಕನೆಯ ಒಂದು ಭಾಗ ಪೆಟ್ರೋಲಿಯಂ ಇದು ಹೊಂದಿದೆ. ಅಮೇರಿಕ ಹೊಂದಿರುವ ಪೆಟ್ರೋಲಿಯಂದ ಹತ್ತು
ಪಟ್ಟು ಸೌದಿ ಅರೇಬಿಯ ಹೊಂದಿದೆ. ಅಷ್ಟೆ ಅಲ್ಲದೆ ವಿಶ್ವದ ಅತ್ಯಂತ ದೊಡ್ಡ ಕಚ್ಚಾ ತೈಲ ರಪ್ಪುಗಾರಿಕೆಯ ದೇಶವೂ ಆಗಿದೆ.

1938ರಲ್ಲಿ ಸೌದಿ ಅರೇಬಿಯ ಜಗತ್ತಿಗೆ ತನ್ನ ಇಂಧನದ ಬಾಗಿಲು ತೆರೆಯಿತು. ಅಮೇರಿಕನ್ ಅಯಿಲ್ ಕಂಪನಿಯ ಸಹಯೋಗತ್ವದೊಂದಿಗೆ ಸೌದಿ ಅರೇಬಿಯ ದಮಾಮ್ ಹತ್ತಿರ ತೈಲ ನಿಕ್ಷೇಪಗಳನ್ನು ಕಂಡು ಹಿಡಿಯಿತು. Aramco (Arebia American Oil company) ಅಂದಿನಿಂದ ಇಂದಿನವರೆಗೆ ಎಡೆಬಿಡದ ಸೌದಿಯಲ್ಲಿ ಕಾರ್ಯನಿರತ ವಾಗಿರುವುದನ್ನು ನೋಡುತ್ತೇವೆ.

ಪೂರ್ವದೆಡೆಗೆ ಶಡಗಮ್, ಫೌವರ್‌, ಹರಾದ್, ಪ್ರಸ್ಥಭೂಮಿಯ ಮರು ಭೂಮಿಯಲ್ಲಿ ನೂರು ಅಡಿ ದಪ್ಪನೆಯ ಸುಣ್ಣದ ವಲಯವಿದೆ. 1948ರಲ್ಲಿ ಇದರ ಪತ್ತೆಯಾಗುವವರೆಗೆ ಮರುಭೂಮಿಯ ಅಲೆಮಾರಿ ಜನಾಂಗದವರು ಒಂಟಿ ಕುರಿಗಳ
ಜೊತೆಗೆ ಇಲ್ಲಿ ಅಲೆದಾಡುತ್ತಿದ್ದರು. 150 ಮೈಲು ಉದ್ದ 25 ಮೈಲು ಅಗಲವಾದ ಈ ಪ್ರದೇಶಕ್ಕೆ ಫೌವರ್ ನಿಕ್ಷೇಪ ವೆಂದೇ ಕರೆಯುತ್ತಾರೆ. ಇದು ಜಗತ್ತಿನಲ್ಲಿಯೇ ಅತೀ ದೊಡ್ಡ ತೈಲ ನಿಕ್ಷೇಪ ಎನ್ನುವರು. ಇದು ಸೌದಿಯ ತೈಲ ನಿಕ್ಷೇಪಗಳಲ್ಲಿ ಒಂದು ಅಷ್ಟೇ.

ಸೌದಿಯ 58 ತೈಲ ಬಾವಿಗಳಲ್ಲಿ ಕೇವಲ ಏಳು ಬಾವಿಗಳಿಂದ ದೊರೆಯುವ ತೈಲ ಅಂತರಾಷ್ಟ್ರೀಯ ಗಿರಾಕಿಗಳ ಬೇಡಿಕೆಗಳನ್ನು  ಸಾಕಾಗುತ್ತದೆ ಎಂದರೆ ವಿಶ್ಚದ ತೈಲ ಮಾರುಕಟ್ಟೆಯಲ್ಲಿ ಸೌದಿ ಅರೇಬಿಯಾದ ಮಹತ್ವ ಎಷ್ಟೆಂದು ತಿಳಿದುಕೊಳ್ಳಬಹುದು. ಮರುಭೂಮಿ ಅಡಿಯಲ್ಲಿರುವ ಬಂಡೆಗಳು ಸ್ಪಂಜಿನಂತಿವೆ. ಹೆಚ್ಚಿನ ಒತ್ತಡದಲ್ಲಿ ಸ್ಪಂಜನ್ನು ಒತ್ತಿದಾಗ ದೊರೆಯುವ ಹಸಿರು-ಕಪ್ಪು ದ್ರವ ತೈಲ ಸಂಸ್ಕರಣಾಗಾರದ ಮೂಲಕ ಹಾಯ್ದು ಬಂದಾಗ ಪೆಟ್ರೋಲ್ ಅಗುತ್ತದೆ.

ಒಂದು ಚದರ ಇಂಚಿಗೆ 500 ಪೌಂಡು ಒತ್ತಡದಲ್ಲಿ ಸೌದಿ ತೈಲ ಭೂಗರ್ಭದಿಂದ ಮೇಲಕ್ಕೆ ಬರುವುದು. ಬಳಿಕ ಮೂಲಕ ಅದು  ‘ಗ್ಯಾಸ್‌ ಅಯಿಲ್ ಪ್ರತ್ಯೇಕಿಸುವ ಸ್ಥಾವರಗಳಿಗೆ ಪ್ರಯಾಣಿಸುತ್ತದೆ. ವಿವಿಧ ಹಂತಗಳ ತೈಲ ಸಂಸ್ಕರಣದಲ್ಲಿ
ವಿಷಪೂರಿತ ಹೈಡ್ರೋಜನ್ ಸಲ್ಫೈಡ್, ಕೆರೋಸಿನ್, ಗ್ಯಾಸೋಲಿನ್. ಪೆಟ್ರೋಲ್ ದೊರಕುತ್ತವೆ.

ರಸತನೂರಾ ಶುದ್ದೀಕರಣ ಸ್ಥಾವರ್ ದಿನಕ್ಕೆ 5 ರಿಂದ 10 ಲಕ್ಲ ಬ್ಯಾರೆಲ್ ಕಚ್ಚಾ ತೈಲ ಸಂಸ್ಕರಿಸುವದಾಗಿ ತಿಳಿಯುವುದು. ಎಷ್ಟೋ ವರ್ಷಗಳ ವರೆಗೆ ರಸತನೂರಾ ಒಂದೇ ತೈಲ ಸಂಸ್ಕರಿಸುವ ಕೇಂದ್ರವಾಗಿದ್ದು ಅಲ್ಲಿಯ ಬಂದರು ತೈಲ ನಿರ್ಯಾತದಲ್ಲಿ ಯಾವತ್ತು ಕಾರ್ಯ ಭರಿತವಾಗಿರುತ್ತಿತ್ತು. ನಂತರ ಜೆಡ್ಡಾರಿಯಾದ್‌ಗಳಲ್ಲಿ ಸ್ಥಾವರಗಳು ಸ್ಥಾಪಿತ ವಾದವು. ಸ್ಥಳೀಯರ ವಾಹನಗಳಿಗೆ ಪೆಟ್ರೋಲ್, ಇತರ ಕಚ್ಚಾವಸ್ತುಗಳ ತಯಾರಿಕೆಗೆ
ಬೇಕಾದ ಕಚ್ಚಾ ಎಣ್ಣೆಗಳ ಬೇಡಿಕೆ ಹೆಚ್ಚಾದುದರಿಂದ 1985ರ ಹೊತ್ತಿಗ ಜೆಡ್ಡಾದಲ್ಲಿ 2,50,000 ಬ್ಯಾರಲ್ ಹಾಗೂ ರಿಯಾದ್‌ನಲ್ಲಿ 1,20,000 ಬ್ಯಾರಲ್‌ಗಳ ಶುದ್ದೀಕರಣ ಸ್ಥಾವರಗಳು ಶುರುವಾದವು. ‘ಷೇಲ್’ ‘ಮೊಬೈಲ್’ ಮಂತಾದ ಹೆಸರುಗಳ ವಿದೇಶೀ ಕಂಪನಿಗಳ ಸಹಯೋಗತ್ವದಿಂದ ಸ್ಥಾಪಿಸಿದ ವಿಶಾಲವಾದ ಸ್ಥಾವರಗಳನ್ನು ನಾವು
ಇತ್ತೀಚಿನ 10-12 ವರ್ಷಗಳಿಂದ ನೋಡುತ್ತಲೇ ಇದ್ದೇವೆ.

ಹೀಗೆ ದೊರೆತ ಪೆಟ್ರೋಲನ್ನು 1.5 ಮಿಲಿಯ ಬ್ಯಾರೆಲ್ ಪೆಟ್ರೋಲ್ ಹಿಡಿಸುವ ಬೃಹತ್ ಟ್ಯಾಂಕುಗಳಿಗೆ ಸಾಗಿಸುವರು. ಟ್ಯಾಂಕ್‌ಗಳಿಂದ ತೈಲವಾಹಕ ಹಡಗಿಗೆ ತೈಲ ತುಂಬಿಸಲು 1000 ಅಡಿಗಳಷ್ಟು ಉದ್ದವಿರುವ ಬೃಹತ್ ತೈಲವಾಹಕ ಹಡಗು 32 ಗಂಟೆಗಳ ಕಾಲ ಕಾಯಬೇಕಾಗುತ್ತದೆಯಂತೆ. ಎರಡು ಮಿಲಿಯನ್ (20 ಲಕ್ಷ ಬ್ಯಾರಲ್) ಸೌದಿ ಕಚ್ಚಾ- ತೈಲ ತುಂಬಿಕೊಂಡ ತೈಲ ಟ್ಯಾಂಕರ್‌ ಹಡಗು ಹಿಂದೂ ಮಹಾ ಸಾಗರದಲ್ಲಿ 12,250 ಮೈಲು ಪ್ರಯಾಣಿಸಿ 35 ದಿನಗಳ ಬಳಿಕ ಅಮೇರಿಕ ತಲಪುತ್ತದೆ. ಅದು ತಂದಿರುವ ತೈಲ ಅಮೇದಿಕಾಕ್ಕೆ ಕೇವಲ ಮೂರು ಗಂಟೆಗಷ್ಟು ಸಾಕು, ಭೀಮನ ಹೊಟ್ಟೆಗೆ ಕಾಸಿನ ಮಜ್ಜಗೆ! ಅಮೇರಿಕಾದ ತೈಲ ಅವಶ್ಯಕತೆಯ ಪ್ರಮಾಣ ಎಷ್ಟಿರಬೇಕು? ಅಮೇರಿಕ
ತೈಲಕ್ಕಾಗಿ ಮಧ್ಯಪೂರ್ವವನ್ನು  ಅವಲಂಬಿಸಿದೆ ಎಂದೂ ತಿಳಿಯುತ್ತದೆ. ಅಷ್ಟಲ್ಲದೆ ಈಚಿನ ಕೊಲ್ಲಿಯುದ್ಧದಲ್ಲಿ ಅಮೇರಿಕ ಅಷ್ಟು ಮಹತ್ವದ ಪಾತ್ರ ವಹಿಸಿತೇಕೆ? ಎಲ್ಲರೂ ನೋಡಿಕೊಳ್ಳುವುದು ಮೊದಲು ತಮ್ಮ ಕ್ಷೇಮವನ್ನೇ. ಅಮೇರಿಕೆ ಇದಕ್ಕೆ ಪರೋಪಕಾರದ ಮುಖವಾಡ ತೊಡಿಸುವ ನಿಪುಣ.

ಸಾಮಾನ್ಯಗಾತ್ರದ ಒಂದು ಕಚ್ಚಾ ತೈಲ ಒಯ್ಯುವ ಟ್ಯಾಂಕರ್ ಮೂರು ಫುಟ್ಬಾಲ್ ಮೈದಾನಗಳಷ್ಟು ಉದ್ದವಿರುತ್ತದೆ. ಅದರ ತೈಲ ಹೊರುವ ಸಾಮರ್ಥ್ಯ 2 ಮಿಲಿಯ ಬ್ಯಾರಲ್‌ಗಳಿಗಿಂತಲೂ ಹೆಚ್ಚು ಒಂದು ಟ್ಯಾಂಕರ್‌ನಲ್ಲಿರುವ ಸಿಬ್ಬಂದಿಗಳು ಸಾಮಾನ್ಯವಾಗಿ ಕೇವಲ 25 ಜನ.

ಸೌದಿ ಅರೇಬಿಯ ಹಾಗೂ ಇತರ ಕೊಲ್ಲಿದೇಶಗಳು1970ರಲ್ಲಿ ಒಂದು ಗೂಡಿಕೊಂಂಡು ಓಪೆಕ್‌ಗುಂಪು ಮಾಡಿ ಕೊಂಡರು (Opec-Organisation of Petrolium Exporting countries). ಈ ಓಪೇಕ್ ಸಚಿವರುಗಳು ತೈಲದ ಬೆಲೆಗಳನ್ನು ನಿರ್ಧರಿಸುವ ಅಧಿಕಾರ ಕೈಗೆತ್ತಿಕೊಂಡಿದ್ದಾರೆ.

ಕಚ್ಚಾತೈಲ ನೆಲದಿಂದ ಬುಗ್ಗೆಯಾಗಿ ಹೊರಬೀಳುವಾಗ ಅದರೊಂದಿಗೆ ಗ್ಯಾಸಿನ ಪ್ರಮಾಣವೂ ಸಾಕಷ್ಟಿರುತ್ತದೆ. ಸಾಕಷ್ಟು ಪೈಪುಗಳ ಮೂಲಕ ದೇಶದ ತುಂಬೆಲ್ಲ ಹರಿದಾಡಿಸಿ ಸಂಗ್ರಹಿಸಿ ಹೆಚ್ಚಿನದಕ್ಕೆ ಬೆಂಕಿ ಹಚ್ಚಿಬಿಟ್ಟಿರುತ್ತಾರೆ. ವಿಮಾನದಿಂದ ಕಾಣುವ ಈ ಮರುಭೂಮಿಯ ತೈಲ ಪ್ರದೇಶಗಳ ಉರಿಯುವ ಬೆಂಕಿಯ ಚಿತ್ರ ಯಾವತ್ತೂ ನೆನಪಿನಲ್ಲಿ ಉಳಿಯುವಂಥದು.

ಪ್ರತಿಯೊಂದು ಬ್ಯಾರಲ್ ತೈಲದಿಂದಲೂ ಪೆಟ್ರೋಕೆಮಿಕಲ್ಸ್‌ಗಳನ್ನು ಪಡೆಯಲಾಗುತ್ತದೆ. ಈ ಪೆಟ್ರೋಕೆಮಿಕಲ್ಸ್‌ನ್ನು ದಿನಬಳಕೆಯ ನೂರಾರು ವಸ್ತುಗಳನ್ನಾಗಿ ಸಂಸ್ಕರಿಸಲಾಗುವುದು. ಔಷಧಿಗಳು, ಬಣ್ಣಗಳು, ಸ್ಫೋಟಕ ವಸ್ತುಗಳು,
ಅಲ್ಕೋಹಾಲ್‌ಗಳಿ, ಗೊಬ್ಬರ, ಪ್ಲಾಸ್ಟಿಕ್, ಆಂಟಿಸೆಪ್ಪಿಕ್‌ಗಳು, ಸೌಂದರ್ಯವರ್ಧಕ ಸಾಮಾನುಗಳು, ಸುಗಂಧ ದ್ರವ್ಯಗಳು, ಎಸೆನ್ಸ್ , ಫ್ಲವರ್, ಸ್ಯಾಕರಿನ್. ಅಸ್ಪಿರಿನ್ ಮುಂತಾದವುಗಳು. ಅಷ್ಟೇ ಅಲ್ಲದೆ ಪ್ಲಾಸ್ಟಿಕ್ ಡಬ್ಬ, ಬಕೀಟುಗಳು, ವಾಹನಗಳು ಟಯರ್‌ಗಳು, ಪೆಯಿಂಟ್‌ಗಳು, ಆಟದ ಸಾಮಾನುಗಳು. ಅಡುಗೆಮನೆಯ ಸಾಮಾನುಗಳು, ಪೀಠೋಪಕರಣಗಳು, ಫಿಲ್ಮ್ ಮುಂತಾದವುಗಳೆಲ್ಲ ಪೆಟ್ರೋಲಿಯಂ ಉತ್ಪನ್ನಗಳೆಂದರೆ ತೈಲ ಎಷ್ಟೊಂದು ಬೆಲೆಬಾಳುವ ಸರಕು ಎಂದು ಆಶ್ಚರ್ಯಪಡುವಂತಾಗುತ್ತದೆ.

ಪೆಟ್ರೋಲಿಯಂ ಸ್ಥಾವರಗಳಲ್ಲಿ ನುರಿತ ತಜ್ಞರ ಅವಶ್ಯಕತೆ ಮನಗಂಡು 1963ರಲ್ಲಿಯೇ ‘ಪೆಟ್ರೋಲಿಯಂ ಅಂಡ್ ಮಿನರಲ್ ಕಾಲೇಜ್’ ದಹರಾನ್‌ದಲ್ಲಿ ಶುರು ಮಾಡಿದ್ದಾರೆ. 1975ರಲ್ಲಿ ಸಾಕಷ್ಟು ಸುಧಾರಣೆಗೆ ಒಳಪಟ್ಟು  ಯೂನಿವರ್ಸಿಟಿ ಕೂಡಾ ಶುರುವಾಗಿ ಮಾಸ್ಟರ್ ಡಿಗ್ರಿಗಳನ್ನೂ ಕೊಡುತ್ತಿದ್ದಾರೆ. (Master degree in Industrial Management and petrolium Engineering)  ಜೆಡ್ಡಾ, ದಮಾಮ್, ಜುಬೆಲ್, ಯಾಂಬು – ಇವು ಮುಖ್ಯ ತೈಲ ನಿರ್ಯಾತ ಬಂದರುಗಳು.  ಪಕ್ಕಾ ಟ್ರೈನಿಂಗ್ ಪಡದ ಕೆಲಸಗಾರರಿದ್ದಾರೆ. Sea port Authority ಯವರೇ
ತರಬೇತಿ ಕೇಂದ್ರಗಳನ್ನು ತೆರೆದಿದ್ದಾರೆ.

ಜೆಡ್ಡಾ ಇಸ್ಲಾಮಿಕ ಪೋರ್ಟ್ ಯಾವತ್ತೂ ಗಿಜಗುಡುತ್ತಿರುತ್ತದೆ. ಕಚ್ಚಾತೈಲ ಪೆಟ್ರೋಲ್ ಜೊತೆಗೆ ಇತ್ತೀಚಿನ ವರ್ಷಗಳಲ್ಲಿ ಗೋದಿಯನ್ನೂ ನಿರ್ಯಾತ ಮಾಡುತ್ತಿದ್ದಾರೆ. ವಿದೇಶಗಳಿಂದ ಲಕ್ಷಾನುಲಕ್ಷ ಟನ್‌ಗಳಷ್ಟು ಕಟ್ಟಡ ಸಾಮಾನುಗಳಿಂದ ಹಿಡಿದು ದಿನಬಳಕೆಯ ನೂರಾರು ಬಗೆಯ ಸಾಮಾನುಗಳನ್ನು ಆಮದು ಮಾಡಿಕೊಳ್ಳುತ್ತಾರೆ. 1987-88ರ ಒಂದು ಅಂದಾಜಿನ ಪ್ರಕಾರ ತೈಲ ಹೊರತುಪಡಿಸಿ ಉಳಿದಂತೆ 65 ಮಿಲಿಯನ್ ಟನ್‌ಗಳಷ್ಟು ಸಾಮಾನು ಹೊಂದಿದ ಸರಕು ಸರಂಜಾಮುಗಳನ್ನು ಸೌದಿ ಬಂದರುಗಳು ನಿರ್ವಹಣೆ ಮಾಡುತ್ತವೆಯೆಂದು ತಿಳಿಯುತ್ತದೆ.

ಪ್ರಕೃತಿಯ ಅತ್ಯಂತ ಅಮೂಲ್ಯ ಸಂಪನ್ಮೂಲಗಳಲ್ಲಿ ಒಂದಾದ ತೈಲ ಸಾವಿರಾರು ವರ್ಷಗಳ ಮೊದಲೇ ಶೋಧಿಸ- ಲ್ಪಟ್ಟಿದೆ. ಆದರೆ ತೈಲಕ್ಕಾಗಿ ರಾಷ್ಟ್ರಗಳು ಯುದ್ಧಮಾಡಲು ಕೂಡಾ ಸಿದ್ಧವಾಗುವಷ್ಟು ತೈಲ ಮುಖ್ಯವಾದುದ್ದು ಕಳೆದ ಶತಮಾನದಲ್ಲಿ ಈ ‘ವಿಕಾಸ’ದ ಚರಿತ್ರೆ ಹೀಗಿದೆ.
ಪೆಟ್ರೋಲಿಯಂ ಆರಂಭದ ಹಂತ:
1859- ಎಡ್ವಿನ್ ಎಲ್ ಡ್ರೇಕ್ ಎಂಬಾತ ತೈಲ ಕೊರವ ಉಪಕರಣ ಬಳಸಿ ಅಮೇರಿಕದ
ಟೈಟಿಸ್ಟಿಲ್ ಎಂಬ ಊರಿನ ಬಳಿ ಮೊತ್ತ ಮೊದಲ ಬಾರಿಗೆ ಭೂಗರ್ಭದಿಂದ
ತೈಲವನ್ನು ಹೊರತೆಗೆದ.

1865 – ಜಾನ್. ಡಿ. ರಾಕ್‌ಫೆಲ್ಲರ್ 72,500 ಡಾಲರ್ ನೀಡಿ ಓಹಿಯೋ ಪ್ರಾಂತದ ಕ್ಲೀವ್
ಲ್ಯಾಂಡಿನಲ್ಲಿ ತೈಲ ವ್ಯಾಪಾರವನ್ನು ಕೊಂಡು ಕೊಂಡ. ಐದು ವರ್ಷದ ಬಳಿಕ
ರಾಕ್ ಫೆಲ್ಲರ್ ‘ಸ್ಟಾಂಡಡ್೯ ಆಯಿಲ್ ಕಂಪನಿ’ ಸ್ಥಾಪಿಸಿ ವಿಶ್ವದ ಮೊದಲ
ತೈಲ ದೊರೆಯಾದ.

1908 – ಕಚ್ಚಾತೈಲ ಶೋಧಿಸಲು ಮಧ್ಯಪೂರ್ವಕ್ಕೆ ವಿದೇಶಿಗರ ಆಗಮನ
ಶುರುವಾಯಿತು. ವಿಲಿಯಂ ಡಿ ಅರ್ಸಿ ಎಂಬಾತ ಇರಾನಿನ ಮಸ್ಜಿದ್
ಸೋಲಿಮಾನ್ ಎಂಬಲ್ಲಿ ಪ್ರಥಮ ಪ್ರಮುಖ ತೈಲ ಬಾವಿಯನ್ನು ಕಂಡು
ಹಿಡಿದ. ತರುವಾಯ ‘ಆಂಗ್ಲೋಪರ್ಶಿಯನ್ ಆಯಿಲ್ ಕಂಪನಿ’ಗೆ ತೈಲ
ಬಾವಿಯ ಉಸ್ತುವಾರಿ ವಹಿಸಿಕೊಟ್ಟ. ಅನಂತರ ಅದೇ ಕಂಪನಿ ‘ಬ್ರಿಟಿಷ್
ಪೆಟ್ರೋಲಿಯಂ’ ಎಂಬ ಕಂಪನಿಯಾಯಿತು.

1914 – ಬ್ರಿಟೆನ್ನಿನ ಪ್ರಧಾನಿ ವಿನ್‌ಸ್ಟನ್‌ ಚರ್ಚಿಲ್ ಬ್ರಿಟಿಷ್ ನೌಕಾಪಡೆಗೆ ತೈಲ
ಪೂರೈಸುವಂತೆ ಆಂಗ್ಲೋಪರ್ಶಿಯನ್ ಆಯಿಲ್ ಕಂಪನಿಯ ಜತೆ ಒಪ್ಪಂದ
ಒಂದಕ್ಕೆ ಸಹಿ ಹಾಕಿದಾಗ ಮಧ್ಯಪೂರ್ವದ ತೈಲ ಬಾವಿಗಳು ಆಯಕಟ್ಟಿನ
ಮಹತ್ವ ಪಡೆದವು.

1933 – ಸೌದಿ ಅರೇಬಿಯಾ ಅಮೇರಿಕದ ‘ಸ್ಟಾಂಡ್‌ರ್ಡ್ಡ್ ಆಯಿಲ್ ಕಂಪನಿ’ಗೆ
ಅರವತ್ತು ವರ್ಷಗಳ ಗಣಿ ಹಕ್ಕು ನೀಡಿ ಅಮೇರಿಕನ್ ಕಂಪನಿಗಳಿಗೆ
ಮಧ್ಯಪೂರ್ವದಲ್ಲಿ ಅವಕಾಶ ಮಾಡಿಕೊಟ್ಟಿತ್ತು.
1956 – ಈಜಿಪ್ಟದ ಅಧ್ಯಕ್ಷ ನಾಸೇರ್‌ ಒಂದು ಪ್ರಮುಖ ತೈಲ ಟ್ಯಾಂಕರ್ ಮಾರ್ಗವಾಗಿದ್ದ
ಸೂಯೆಚ್ ಕಾಲುವೆಯನ್ನು ರಾಷ್ಟ್ರೀಕರಿಸಿದರು. ಬ್ರಿಟಿಷ್, ಫ್ರೆಂಚ್, ಮತ್ತು
ಇಸ್ಟೇಲಿ ಪಡೆಗಳ ದಾಳಿಗೆ ರಂಗಸಿದ್ಧವಾಯಿತು.
1960 – ಇರಾನ್, ಇರಾಕ್, ಕುವೈತ್, ಸೌದಿ ಅರೇಬಿಯ ಮತ್ತು ವೆನಿಜುವೆಲಾ ಕೂಡಿ
‘ದಿ ಆರ್ಗನೈಜೇಶನ್ ಅಫ್ ಪೆಟ್ರೋಲಿಯಂ ಎಕ್ಸ್‌ಪೋರ್ಟ ಕಂಟ್ರೀಸ್’ ಎಂಬ
ಸಂಸ್ಥೆಯನ್ನು  ಸ್ಥಾಪಿಸಿದವು. ಈಗ ಓಪೆಕ್‌ದಲ್ಲಿ ಹದಿಮೂರು ಸದಸ್ಯ
ರಾಷ್ಟ್ರಗಳಿವೆ.

1970 – ‘ಓಕ್ಸಿಡೆಂಟಲ್ ಪೆಟ್ರೋಲಿಯಂ’ ನಿಂದ ಲಿಬಿಯಾಕ್ಕೆ ಶೇಕಡ 55 ಲಾಭ
ನೀಡಲಾಯಿತು. ಪರಿಣಾಮವಾಗಿ ಮಧ್ಯಪೂರ್ವ, ವೆನಿಜುವೆಲಾ, ಮತ್ತು
ಇಂಡೋನೇಶ್ಯಾದಲ್ಲಿರುವ ಎಲ್ಡ ವಿದೇಶೀ ತೈಲ ಕಂಪನಿಗಳ ಹಕ್ಕುಗಳ
ರಾಷ್ಟ್ರೀಕರಣಕ್ಕೆ ರಂಗ ನಿರ್ಮಾಣವಾಯಿತು.
1973 – ಅರಬ್‌ರಿಂದ ತೈಲ ದಿಗ್ಬಂಧ. ತ್ಯೆಲದ ಬೆಲೆಯನ್ನು ಗಗನಕ್ಕೇರಿಸಿ ಜಗತ್ತನ್ನು
ಅರ್ಥಿಕ ಹಿಂಜರಿತಕ್ಕೆ ತಳ್ಳಿತು.

1978 – ಅಮೇರಿಕ ಅಧ್ಯಕ್ಷ ಜಿಮ್ಮಿಕಾರ್ಟರ್ ಅವರ ಇಂಧನ ನೀತಿ ಕಾರ್ಯ
ಗತವಾಯಿತು. ಅದರ ಪ್ರಕಾರ ತೈಲ ಸಂರಕ್ಷಣೆಗೆ ಮತ್ತು ಬೇರೆ ಇಂಧನ
ಮೂಲಗಳ ಅಭಿವೃದ್ಧಿಗೆ ಕರೆನೀಡಲಾಯಿತು.

1979 – ಪ್ರಮುಖ ತೈಲ ಉತ್ಪಾದಕ ರಾಷ್ಟ್ರವಾದ ಇರಾನ್‌ನಲ್ಲಿ ಕ್ರಾಂತಿ ನಡೆದು
ಇರಾನಿನ ದೊರೆ ಷಾ ಪದಚ್ಯುತಿಗೊಂಡರು. ತೈಲ ಬೆಲೆಗಳು ಒಂದೇ ಸಮನೆ
ಏರಿದವು. ಅಮೇರಿಕದಲ್ಲಿ ಪೆಟ್ರೋಲಿಗಾಗಿ ಬಂಕ್‌ದ ಮುಂದೆ ಕ್ಯೂಗಳು
ಕಾಣಿಸಿಕೊಂಡವು.

1980 – ಇರಾಕ್ ಇರಾನಿನ ಮೇಲೆ ದಾಳಿ ನಡೆಸಿ ಎಂಟು ವರ್ಷಗಳ ಯುದ್ಧಮಾಡಿತು.
ಉಳಿದ ಓಪೆಕ್ ರಾಷ್ಟ್ರಗಳು ದಿನವೊಂದಕ್ಕೆ ಮೂವತ್ತೊಂದು ಮಿಲಿಯನ್
ಬ್ಯಾರಲ್ ತೈಲ ಉತ್ಪಾದಿಸಿ ದಾಖಲೆ ಮಾಡಿದವು.

1990 – ಇತ್ತೀಚೆಗಷ್ಟೆ ಅಗಸ್ಟ್‌ 2ರ ನಸುಕಿನಲ್ಲಿ ಇರಾಕ್ ಕುವೈತಿನ ಮೇಲೆ ದಾಳಿ
ನಡೆಸಿತು. ಅಮೇರಿಕ ಸೌದಿ ಅರೇಬಿಯಕ್ಕೆ ತನ್ನ ಸೇನೆ ಕಳಿಸಿತು. ಸೆಪ್ಟಂಬರ್
ಅಂತ್ಯದ ವೇಳೆಗೆ ತೈಲಬೆಲೆ ಬ್ಯಾರಲ್ ಒಂದಕ್ಕೆ 39 ಡಾಲರ್‌ಗಳಿಗೇರಿತು.

ಇದು ಒಂದು ದಶಕದಲ್ಲಿಯೇ ಗರಿಷ್ಠ ತೈಲಬೆಲೆ.
(ಎಸ್.ಎ ಅವರ ಲೇಖನ ಅಧಾರಗಳಿಂದ. ಅವರಿಗೆ ಕೃತಜ್ಞತೆಗಳು)

ಅಂದಿನಿಂದ ಇಲ್ಲಿಯವರೆಗೆ ತೈಲಬೆಲೆ ಏರುತ್ತಲೇಇದೆ. ಇರಾಕ್- ಕುವೈತ್ ಯುದ್ಧ ನಡೆದಾಗ ನಾನಲ್ಲಿರಲಿಲ್ಲ. ಗುತ್ತಿ ಯವರು ಸೌದಿ ಅರೇಬಿಯದಲ್ಲಿಯ ಯುದ್ದದ ಇರಾಕಿ ಅಕ್ರಮಣದ ಎಷ್ತೋ ವಿಷಯಗಳನ್ನು ಇಲ್ಲಿಗೆ ಬಂದಾಗ ಹೇಳಿದರು. ಅಲ್ಲಿ ಯುದ್ಧ ಸುರುವಾದಾಗ ಮೊದಲಿನ 8-10 ದಿನಗಳವರೆಗೆ ಫೋನ್‌ನಲ್ಲಿ ಮಾತಾಡುವುದೂ ಸಾಧ್ಯವಾಗಲಿಲ್ಲ. ಎಲ್ಲ ಅಂತರಾಷ್ಟ್ರೀಯ ದೂರವಾಣಿ ವ್ಯವಸ್ಥೆಯನ್ನು ಕಟ್ ಮಾಡಿದ್ದರು. ನಮಗಿಲ್ಲಿ ಹೆದರಿಕೆ. ನನ್ನ ಸಹೋದರ ಸೌದಿ ಅರೇಬಿಯದ ಬಾರ್ಡರ್ ಹಾಗೂ ಕುವೈತದ ಸಮೀಪವೇ ಇದ್ದಾರೆ. ಟಿ.ವಿ., ರೇಡಿಯೋ ಮುಖಾಂತರ ಸೌದಿ
ಸಮಾಚಾರ ಕೇಳುವಾಗ ಬೆಳಗಾವಿಯಲ್ಲಿ ಕುಳಿತ ನಮಗೆ ಎದೆ ನಡುಗುತ್ತಿತ್ತು.

ಸದ್ದಾಂ ಹುಸೇನ್ ಕುವೈತಿನ ಮೇಲೆ ನಡೆಸಿದ ಆಕ್ರಮಣ ವಿಶ್ವದ ಇಂಧನ ಸಮಸ್ಯೆಗೆ ಹೊಸ ತಿರುವು ನೀಡಿತು. ಓಪೆಕ್‌ದಲ್ಲಿ ಸದ್ದಾಂ ಹುಸೇನ್ ಪ್ರಮುಖ ಅಟ ಗಾರರಾದ ಮೇಲೆ ಕುವೈತನ್ನು ಆಕ್ರಮಿಮಿಸಿಕೊಂಡು ವಿಶ್ವದ ತೈಲ ಸಂಪತ್ತಿನ ಮೇಲೆ ತನ್ನ ಪ್ರಭುತ್ವ ಸ್ಥಾಪಿಸುವ ಮೂಲಕ ಪಾಶ್ಚಿಮಾತ್ಯ ಜಗತ್ತನ್ನು ಮುಖ್ಯವಾಗಿ ಅಮೇರಿಕವನ್ನು ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಕ್ಕಿಸಿದಂತಾಯು. ತೈಲ ಬೆಲೆಗಳು ಗಗನಕ್ಕೇರತೊಡಗಿದವು. ಇರಾಕ್-ಕುವೈತನ್ನು ಆಕ್ರಮಿಸಿಕೊಂಡ ನಂತರ ಸೌದಿ ತೈಲ ನಿಕ್ಷೇಪಗಳನ್ನು ನಿಯಂತ್ರಿಸುವ ಕನಸು ಕಂಡು ಕೊನೆಗೆ ಸಾಧ್ಯವಾಗದೇ ತೆಪ್ಪಗೆ ಬಿದ್ದಿರುವ ವಿಷಯ ಅಗಲೇ ಹಳೆಯದಾಯ್ತು.

ಈ ಎಣ್ಣೆ ವಸಾಹತುಗಳು ಮರುಭೂಮಿ ನಡುವೆ ಇದ್ದರೂ ಈಗ 10-12 ವರ್ಷಗಳಿಂದ (82 ರಿಂದ ಇತ್ತಿಆಚೆಗೆ) ಅದೆಲ್ಲಿಂದಲೋ ಮೇಲಿಂದ ಮೇಲೆ ದೊಡ್ಡ ಪ್ರಮಾಣದಲ್ಲಿ ಹುಳಗಳು ಕೀಟಗಳು ದಾಳಿ ಮಾಡುತ್ತಿವೆ. ಈ ಸ್ಥಳಗಳಲ್ಲಿರುವ ಉಜ್ವಲ ಪ್ರಕಾಶವೇ ಹುಳಗಳ ಅಕರ್ಷಣೆಗೆ ಕಾರಣ ಇರಬಹುದು. ಎಣ್ಣೆ ವಸಾಹತುಗಳಲ್ಲಷ್ಟೇ ಅಲ್ಲದೆ ಇತ್ತಿತ್ತಲಾಗಿ ನಗರದೆಡೆಗೂ ಧಾವಿಸುತ್ತಿವೆ. ನಗರದ ಚೆಂದಗಾರಿಕೆಗೆ ಹಚ್ಚಿದ ಹೂಗಿಡಗಳು, ಮನೆಯ ಅಂಗಳದಲ್ಲಿಯ ಹೂಗಿಡ- ಗಳಿಗೆಲ್ಲ ದಾಳಿ ಮಾಡಿ ಅರ್ಧ ತಾಸಿನಲ್ಲಿ ಗಿಡ ಬರಿದು ಮಾಡಿ ಹೋಗಿಬಿಡುವು. ಇವು ಚಿಟ್ಟೆ ಹಾಗೂ ದುಂಬಿಯಾಕಾರದ ಹುಳುಗಳು. ಈ ಮಿಡತೆಗಳದೇ ಒಂದು ವಿಶೇಷ ಜಾತಿ. ನೋಡಲು ಮಾಮೂಲಿ ಚಿಟ್ಟೆ- ಗಳಂತೆಯೇ; ಸ್ವಲ್ಪ ದೊಡ್ಡವು. ಅದರೆ ಇಡೀ ದೇಹವೆಲ್ಲ ಕೆಂಪು ಬಣ್ಣದ್ದು, ಸಾವಿರ ಸಾವಿರಗಳಷ್ಟು. ಈ ಕೆಂಪು ಮಿಡತೆಗಳು ಆಕಾಶದಲ್ಲಿ ಒಮ್ಮಿಂದೊ- ಮ್ಮೆಲೆ ಎಲ್ಲಿಂದಲೋ ಬಂದು ಗಿಡ ಬಳ್ಳಿಗಳಿಗೆಲ್ಲ ಮುತ್ತಿಗೆ ಹಾಕುವುವು. ಅವು ವಿಷಕಾರಿ ಕೀಟಗಳಿರುವು ದರಿಂದ ಆ ಸಮಯದಲ್ಲಿ ಎಲ್ಲ ಜನ ಮನೆ, ಆಫೀಸು ಎಲ್ಲೆಲ್ಲಿರುವರೋ ಅಲ್ಲೇ ಒಳಗಡೆ ಕಿಟಕಿ ಬಾಗಿಲು ಭಧ್ರಮಾಡಿ ಕುಳಿತು- ಬಿಡುವರು.

ಅವುಗಳ ವೇಗ ಅದೆಷ್ಟು ಇರುತ್ತೆಂದರೆ ಲೈಟುಗಳಿಗಾಗಲೀ, ಗಿಡಗಳಿಗಾಗಲೀ ಜೋರಾಗಿ ಡಿಕ್ಕಿ ಹೊಡೆದು ತಾವು ತಾವೇ ಸಾಯುವಷ್ಟು! 1982ರಿಂದ ಈಚೆಗೆ ಅಲ್ಲಲ್ಲಿ ಹೂವು ಹಣ್ಣು ತರಕಾರಿಗಳ ತೋಟಗಾರಿಕೆಯತ್ತ ಗಮನಕೊಟ್ಟು ಶ್ರಮಿಸಿ ಬೆಳೆಸುತ್ತಿದ್ದಂತೆಯೇ ಇವುಗಳ ಹಾವಳಿ ಹೆಚ್ಚಾಯಿತೆಂದು ತೋಗಾರಿಕೆ ಇಲಾಖೆಯವರ ವರದಿ. ಮೊದಲು ರಾಜಧಾನಿ ‘ರಿಯಾದ್’ದಲ್ಲಿ ದಾಳಿ ಮಾಡಿದುದಾಗಿ ತಿಳಿಸಿ 84ರ ಸುತ್ತ ಜೆಡ್ಡಾದ ಸುತ್ತೆ ಮುತ್ತಲಿನ ಪೊದೆಗಳಲ್ಲಿ ಶಾತ್ವತವಾಗಿ ತಳಊರಿದವು ಎಂದು ಹೇಳುವರು. ‘ಅಸಿರ್’ ತಂಪು ಪ್ರದೇಶದಲ್ಲಿ ಬೆಳೆಯುವ ತರಕಾರಿಗಳಿಗಂತೂ ಮಿಡತೆಗಳು – ಕೋರಿ ಹುಳಗಳು ತುಂಬಾ ತೊಂದರೆ ಕೊಡುತ್ತಿವೆಯಂತೆ.

ರಾತ್ರಿಯ ಪ್ರಜ್ವಲ ಬೆಳಕಿನಲ್ಲಿ ಕಾಣಿಸುವ ಪಾತರಗಿತ್ತಿಗಳಂತೂ ಒಂದಕ್ಕಿಂತ ಒಂದು ಸುಂದರ. ಅದರೆ ಅವು ನಮ್ಮ ಕಡೆಯಂತೆ  ಇರುವದಿಲ್ಲ. ದೂರದಿಂದ ನೋಡಲು ಅತಿ ಸುಂದರ. ಅದರೆ ಸಮೀಪದಿಂದ ಒರಟಾದವುಗಳು. ಅಷ್ಟೇ ಅಲ್ಲ ಅವುಗಳ ಕಣ್ಣು, ರೆಕ್ಕೆ ನೋಡಿದರೆ ಹೆದರಿಕೆ ಬರುವಂಥವು. ಇವು ತಮ್ಮ ಆತ್ಮಹತ್ಯೆ ಗಾಗಿಯೇ ಇಷ್ಟೊಂದು ಸುಂದರವಾಗಿ ಕಾಣಿಸಿ ಪ್ರಜ್ವಲಿಸುವ ಲೈಟ್‌ಗಳಿಗೆ ಹೊಡೆದು ಕೊಳ್ಳುತ್ತವೆಯೇನೋ ಅನಿಸುವುದು. ಓಯಾಸಿಸ್, ಗಾರ್ಡನ್‌ಗಳು ಇದ್ದಲ್ಲಿ ಇವುಗಳ ಹಾವಳಿ ಇದ್ದೇ ಇದೆ.

ಸೌದಿ ದೇಶ ಈ ಉಪದ್ರವವನ್ನು ಹೇಗೆ ಕಳೆದುಕೊಳ್ಳುತ್ತದೆ ನೋಡಬೇಕು.

ಒಟ್ಬಾರೆ, ಈ ಪ್ರಾಕೃತಿಕ ತೈಲ ಸಂವತ್ತು ಕೊಲ್ಲಿ ರಾಷ್ಟ್ರಗಳ ಆರ್ಥಿಕ ಜೀವನ ವಿಧಾನ ಹಾಗೂ  ವಿನ್ಯಾಸಗಳನ್ನೆಲ್ಲ ಬದಲಿಸಿಬಿಟ್ಟಿದೆ. ಆದರೆ ಅವರ ಥಾರ್ಮಿಕ ಜೀವನ, ನಂಬಿಕೆಗಳು ಬದಲಾದಂತಿಲ್ಲ ಒಂದಿಷ್ಟೂ. ಉಳಿದ ಪೌರ್ವಾತ್ಯ ಪಾಶ್ಚಾತ್ಯಗಳಿಗೂ ಕೊಲ್ಲಿ ರಾಷ್ಟ್ರಗಳಿಗೂ ಇದೇ ಮುಖ್ಯ ಮುಖ್ಯ ವ್ಯತ್ಯಾಸವಿರಬೇಕು.

*******

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಲಾಳುಗಳು ಕಲ್ಲಾಳಕ್ಕೆ
Next post ಅಕ್ಷರ

ಸಣ್ಣ ಕತೆ

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

cheap jordans|wholesale air max|wholesale jordans|wholesale jewelry|wholesale jerseys