ಸರಳವಾಗಿ ಬದುಕುವುದೇ ಲೇಸು

ಸರಳವಾಗಿ ಬದುಕುವುದೇ ಲೇಸು
ಹೃದಯ ಶ್ರೀಮಂತಿಕೆಯಿಂದ|
ಸಿರಿಯ ಒಣ ಜಂಬ ಪ್ರತಿಷ್ಠೆ
ಬಡಿವಾರಗಳ ತೋರಿಕೆ ಇಲ್ಲದೆ||

ಸರಳತೆಯಿಂದ ಜಗತ್ತನ್ನೇ
ಗೆಲ್ಲಬಹುದು
ಸರಳತೆಯಿಂದಲಿ ಸ್ನೇಹ
ಸಂಯಮತೆಯ ಗಳಿಸಬಹುದು|
ಸರಳತೆಯಿಂದಲಿ
ಬುದ್ದಿ ಸಿದ್ಧಿಗಳ ಸಂಪಾದಿಸಬಹುದು
ಸರಳತೆಯಿಂದಲಿ ನಮ್ಮ ಗೌರವ
ದ್ವಿಗುಣಗೊಳಿಸಬಹುದು||

ಸರಳತೆಯಿಂದಲಿ ಕುಚೇಲ
ಕೃಷ್ಣನ ಸ್ನೇಹಿತನಾದನು|
ಸರಳತೆಯಿಂದಲಿ ಹನುಮಂತ
ರಾಮಸೇವಾ ಭಾಗ್ಯವ ಪಡೆದರು|
ಸರಳತೆಯಿಂದಲಿ ಅನ್ನಮಯ್ಯ
ಬಾಲಾಜಿಯ ಸೇವೆಗೈದರು|
ಸರಳಸಜ್ಜನಿಕೆಯಿಂದಲಿ ಬಸವಣ್ಣ
ವಿಶ್ವ ಮಾನವನಾಗಿ
ಜಗಜ್ಯೋತಿಯಾದರು|
ಸರಳತೆಯಿಂದಲಿ ಗಾಂಧೀಜಿ
ವಿಶ್ವದಿ ಮಹಾತ್ಮನೆನಿಸಿದರು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಂಡೆದ್ದು ಬದುಕೇವು
Next post ಅವನ ಕತೆ

ಸಣ್ಣ ಕತೆ

 • ಆ ರಾಮ!

  ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

 • ವಾಮನ ಮಾಸ್ತರರ ಏಳು ಬೀಳು

  "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

 • ಗಿಣಿಯ ಸಾಕ್ಷಿ

  ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

 • ಮೃಗಜಲ

  "People are trying to work towards a good quality of life for tomorrow instead of living for today, for many… Read more…

 • ಧರ್ಮಸಂಸ್ಥಾಪನಾರ್ಥಾಯ

  ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…