ಮೋಹದಿಂದ ಬೆಸೆದುಕೊಂಡು ತತ್ತಿಗಳನ್ನಿಟ್ಟು
ಸರದಿಯಲ್ಲದಕೆ ಕಾವು ಕೊಟ್ಟು, ಹೊರಬಂದ
ಬೆಂಕಿ ಕೆಂಡದ ಕೊಂಡೆಬಾಯಿಗೆ ಗುಟುಕನ್ನಿಟ್ಟು
ಪುಟ್ಟ ಪುಟ್ಟ ರೆಕ್ಕೆಪುಕ್ಕ ಹುಟ್ಟಿದ ಪುಟ್ಟನಿಗೆ ಕುಪ್ಪಳಿಸುವುದ ಕಲಿಸಿ
ಹಾರಿಬಿಟ್ಟೆವು ನೋಡು ಗಗನಕ್ಕೆ
ಅದೀಗ ಸುತ್ತುತಲಿದೆ ನಭದಲ್ಲಿ ತಾನೇ ತಾನು
ಅಪ್ರಸ್ತುತ ಅಲ್ಲಿ ನಾನು ಮತ್ತು ನೀನು.
*****