ತಂದೆ-ತಾಯಿಯ ಮುದ್ದಿನ ಮಗನಾಗಿ
ಸಹೋದರ-ಸಹೋದರಿಯರ
ಮಮತೆ-ಕರುಣೆಯ ಸಹೋದರನಾಗಿ
ಕೈಹಿಡಿದ ಸತಿಗೆ ಪ್ರೀತಿಯ
ಅಕ್ಕರೆ ತೋರುವ ಪತಿಯಾಗಿ
ತನ್ನ ಅತ್ತೆ ಮಾವನಿಗೆ ವಿಶ್ವಾಸ
ಸುತ್ತುವರಿದಿರುವ ಆತ್ಮೀಯ
ಬಂದು ಕುಟುಂಬಕ್ಕೆ ಸ್ನೇಹಿತನಾಗಿ
ಉತ್ಸಾಹ ಆನಂದ ತುಂಬುವ
ಆದರ್ಶ ಪ್ರೀಯ ಮನುವಾಗಿ
ಎಲ್ಲಕ್ಕಿಂತ ಮಿಗಿಲಾದ
ತಾಯಿತನದ ಮಡುವಾಗಿ
ಕನ್ನಡಾಂಬೆಯ ಮಡಿಲಿನಲ್ಲಿ ಹುಟ್ಟಿ
ಪ್ರೀತಿ ಅಕ್ಕರೆಯಿಂದ ಕೂಡಿರುವ ನಾಡಿದು
ಕನ್ನಡಾಂಬೆಯ ನುಡಿಯನ್ನು ಆಲಿಸಿ
ಕನ್ನಡವೇ ಉಸಿರಾಗಿಸಿಕೊಂಡು
ಕನ್ನಡಕ್ಕಾಗಿ ತನ್ನ ಜೀವ ಮುಡಿಪಾಗಿಟ್ಟು
ಕನ್ನಡಕ್ಕೆ ಹಗಲಿರುಳು ಹೋರಾಡಿದೆ
ಕನ್ನಡಾಂಬೆಗೆ ಕೈ ಮುಗಿದು ಪ್ರಾರ್ಥಿಸುವೇ.
*****