Home / Poem

Browsing Tag: Poem

ಅಂತೂ ಇಂತೂ ಒಂದು ದಿನ ಒಂದೇ ಕ್ಷಣಾ ಈ ಕಂತೇ ಒಗೆಯುವುದು ನಿಶ್ಚಿತ ಇರುವುದರಾಗೇ ಸಾಧಿಸಬೇಕು ಜನ್ಮ ಹುಟ್ಟಿಬಂದಭಿಮತ ಹಾಂಗೂ ಹೀಂಗೂ ಸಾಗಿ ಹೋಗುತದ ಕಾಲ ಎಂಬ ಗಾಡೀ ಇಬ್ಬನಿಯಂಗೆ ಕನಸಿನಹಂಗೆ ಮ್ಯಾಲಿನ ಮೋಡದ ಮೋಡೀ ಹಿಡಿ ಹಿಡಿ ಹಿಡಿ ಹಿಡಿ ಅನ್ನೋದರಾಗ...

ಮನೆಯ ಅಂಗಳಕೆ ಬೆಳದಿಂಗಳ ಚಂದ್ರಮುಖಿ ಇವಳು ಮನೆಯವರಿಗೆಲ್ಲಾ ಆಸರು ಮನೆಯ ತೋಟಕ್ಕೆ ನೇಸರು ಸೂರ್ಯಮುಖಿ ಇವಳು ಕಷ್ಟ ಕಾರ್ಪಣ್ಯ ದುರಿತಗಳಿಗೆಲ್ಲಾ ಹಲ್ಲು ಉದುರಿಸುವ ಶೂರ್ಪನಖಿ ಇವಳು *****...

ಏನೇ ನೋವಿರಲಿ- ಯಾವುದೆ ಭಾಧೆಯ ಕಾವಿರಲಿ, ನಮ್ಮ ಮನೆಯೊಂದೇ – ಇದರಲಿ ಪ್ರೀತಿ ಆರದಿರಲಿ. ಸ್ನೇಹ ಪ್ರೀತಿ ಎಂತೋ-ವಿರಸವು ಕೂಡ ಸಹಜ ಅಂತೆ, ಚಿಂತೆ ಇಲ್ಲ ಇರಲಿ-ಎಲ್ಲೂ ಗೋಡೆ ಬಿರಿಯದಂತೆ ಬೇಸಿಗೆ ಉರಿಬೇಗೆ-ಜಡಿಮಳೆ ಸಿಡಿಲು ರೇಗಿ ಕೂಗೆ ಕದವು ಅ...

ಬರವಣಿಗೆಯ ಮೊದಲ ಅಕ್ಷರ ಗುರುವಿಲ್ಲದೇ ಕಲಿತ ಮಂತ್ರ ತಿದ್ದುವ ಉರು ಹೊಡೆಯುವ ಮರೆಯುವ ಮಾತೇ ಇಲ್ಲ ಸೊನ್ನೆ ಒಂದು ಬಿಡಿ ಹತ್ತು ಜೊತೆ ನೂರು ಮಾತು ಸೊನ್ನೆ ಇರುವಷ್ಟು ಮುಂದೆ ಹೆಚ್ಚು ತಾಕತ್ತು ಹಿಂದೆ ಭೂಮಿ ಚುಕ್ಕಿ ಸೂರ್ಯ ಸೊನ್ನೆಯ ಘನವೀರ್ಯ ಸೊನ್ನ...

ಏನು ಸಂಯಮ ನಿನ್ನದು ಎಂಥ ತಾಳ್ಮೆಯು ನಿನ್ನದು! ಎಲ್ಲ ಕಡೆಯೂ ಇರುವ ನಿನ್ನನೆ ಅಲ್ಲಗಳೆದರೂ ತಾಳ್ವುದು, ನಿನ್ನ ಕಾಣದ ಬೆರಳು ಸೋಕದೆ ಹೂವು ದಳಗಳ ತೆರೆವುದೇ? ನಿನ್ನ ಸನ್ನೆಯ ಆಜ್ಞೆ ಬಾರದೆ ಗಾಳಿ ಕಂಪನು ಹೊರುವುದೇ? ಗಿರಿಯು ನಿಲುವುದೆ, ಹೊನಲು ಹರಿವ...

ಅಂದು – ಋಷಿಗಳ್ ಯೋಗಿಗಳ ಪರಮ ದಾರ್ಶನಿಕರ್‍ ಭಕ್ತರ್‍ ವಿರಕ್ತರ್‍ ಕೀವಂದ್ರರ್‍ ದಿವ್ಯಚಕ್ಷುನಿನಿಂ ಅಣುವನೊಡೆದರ್‍ ಕಂಡರದ್ಭುತಮಂ, ಪೂರ್ಣ ದರ್ಶನಮಂ: ವ್ಯೋಮ ಭೂಮಿಗಳೊಳ್ ರವಿಯಾಗಿ ಶಶಿಯಾಗಿ ತಾರಾನಿಕರಮಾಗಿ ಸಿಡಿಲಾಗಿ ಮಿಂಚಾಗಿ ವೃಷ್ಟಿಯೆನ...

ಐಸ್ ಕ್ರೀಮ್ ಬೇಕೇ ಐಸ್ ಕ್ರೀಮ್ ಅಂತ ಕೂಗುತ ಬಂತು ಐಸ್ ಕ್ರೀಮ್ ಗಾಡಿ ಐಸ್ ಕ್ರೀಮ್ ಬೇಡ ಎಂದನು ಪುಟ್ಟ ಐಸ್ ಕ್ರೀಮ್ ಗಾಡಿ ಹೊರಟೋಯಿತ್ತು ಚುರುಮುರು ಬೇಕೇ ಚುರುಮುರು ಅಂತ ಕೂಗುತ ಬಂತು ಚುರುಮುರು ಗಾಡಿ ಚುರುಮುರು ಬೇಡ ಎಂದನು ಪುಟ್ಟ ಚುರುಮುರು ಗ...

ಕುಲಗೆಟ್ಟ ಹೆಣ್ಣಿವಳು ಅಂಟದಿರಿ ಜೋಕೆ ಹುಳುಕು ತುಂಬಿಹುದಂತೆ ಗೊಡವೆ ನಮಗೇಕೆ ಪತಿಹೀನೆಯಾದವಳು ಗತಿಹೀನೆಯಾದವಳು ಸುತರಿಲ್ಲದೇ ಮುಕ್ತಿ ಹೀನೆಯಾದವಳು ಮತಿ ಇಲ್ಲವೋ, ಅಕಟ ದೇಹವನು ಧರಿಸಿಹಳು ಹಿತವಿಲ್ಲದಾ ಜನಕೆ ಮುಖವ ತೋರುವಳು ಸಮಾಜದೊಳಗೆಲ್ಲ ಏನೇನೊ...

ಅಣ್ಣ ಬಸವಣ್ಣ ಇದೆಲ್ಲ ಏನಣ್ಣ? ನೀ ಬಾಯಿ ಬಿಟ್ಟರೂ ನಂಬದವರ ನೀ ಏನೆಂಬೆ? ಜಾತಿ ಹೀನನಾ ಮನೆಯ ಜ್ಯೋತಿ ನೀ… ಹೀನ ಜಾತಿಗಳ ಪೊರೆದ ದೊರೆ ನೀ…! * ಕಲ್ಯಾಣದ ಬೆಂಕಿ ನೀ ಕೆಳ ಜಾತಿ, ಮತ, ವರ್ಗಗಳಿಗೆ, ಕಣ್ಣು ನೀ ‘ಹೌದು! ಮಾದಿಗರ ಮನೆ ಮಗ ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...