
ಜಗದ ಜೀವವನುಂಡು ಹಲವು ಬಗಗಳ ಕಂಡು ನಗುತ ನೆಗೆದಾಡುತ್ತ ಹಗಲಿರುಳು ಹಾರಾಡಿ ತೆಗೆದು ತೀರದ ವಾರಿ ಹೊಗೆಯಾಗಿ ಹೂವಾಗಿ ಮುಗಿಸೆ ನಭಯಾತ್ರೆಗಳ ಹಗುರಾಗಿ ನಡೆದಿರುವೆ. ಬಿಸಿಲಿಂಗೆ ಮೈಯೊಡ್ಡಿ ಬಿಳಿ ವಸನಮಂ ಹೊದೆದು ಹಸಿತ ವದನದಿ ತೋರಿ ಕುಣಿಕುಣಿದು ನಲಿದ...
ವ್ಯವಸ್ಥೆಯ ಒಳಗಿನಿಂದ ಒಂದೊಂದೇ ಪ್ರಶ್ನೆಗಳೇಳುತ್ತವೆ ರಾಜಕೀಯದ ಬಣ್ಣ ಬಯಲಾಗುತ್ತದೆ ಶಸ್ತ್ರಾಸ್ತ್ರ ಕೆಳಗಿಟ್ಟ ಅವರು ಶಾಂತಿ ಮಂತ್ರಗಳ ಜಪಿಸುತ್ತಿದ್ದಾರೆ ನೋಡು! ಪಾರ್ಲಿಮೆಂಟರಿ ಪ್ರಜಾಪ್ರಭುತ್ವದಲಿ ಕೆಂಪು ಬಣ್ಣಕ್ಕೆ ಅನೇಕ ಛಾಯೆಗಳಿವೆ ತಾನೇ? ಶ...
ಯಾವ ಕ್ಷಣದಲಿ ಯಾರೋ ಯಾರೂ ಅರಿಯದ ಊರಲಿ ಕರೆದು ಮಾತಾಡಿಸಿದವರು ಯಾರೋ ಬಾಯಾರಿದ ವೇಳೆಯಲಿ ನೀರೂಡಿಸಿದವರು ಯಾರೋ ಯಾವ ಕ್ಷಣದಲಿ ಯಾರೋ ನಡೆ ತಪ್ಪಿ ಬಿದ್ದಾಗ ಹಿಡಿದೆತ್ತಿದವರು ಯಾರೋ ಬೇಸರದಿ ಅಲೆಯುತಿದ್ದಾಗ ಕೆಲಸ ನೀಡಿದವರು ಯಾರೋ ಪ್ರೀತಿಗಾಗಿ ಪರಿತ...
ದಿನನಿತ್ಯ ವೈಜ್ಞಾನಿಕವಾಗಿ ಏನಾದರೊಂದು ಆವಿಷ್ಕಾರಗಳಾಗುತ್ತಲೇ ಇರುತ್ತವೆ. ಜೈವಿಕವಾಗಿ ಆರೋಗ್ಯದಲ್ಲಿ ಕೃಷಿರಂಗದಲ್ಲಿ ಹೀಗೆ ಹೊಸ ಹೊಸ ತಂತ್ರಜ್ಞಾನಗಳನ್ನು ಕಂಡು ಹಿಡಿಯಲಾಗುತ್ತದೆ. ಈ ಬಾರಿ ಹುಬ್ಬಳ್ಳಿಯ ಯುವ ಉತ್ಸಾಹಿ ಶಿವಾನಂದ ಮೂರ್ತಿ ಅವರು ಕೃ...
ದಂಡ ಬಂತವ್ವ ದಂಡ ಸೊಲ್ಲಾಪುರದ ದಂಡ| ದಂಡ ನೋಡಿ ಬರತ ಹಡದವ್ವಾ| ಕೋಲೆನ್ನ ಕೋಲ|| ಹುಟ್ಟಿದ ಮಗಳವ್ವ ಕಟ್ಟಿ ಕಲ್ಲ ಇಳದಿಲ್ಲ| ಭ್ಯಾಡ ನನ ಮಗಳ ಹೊರಿಯಾಕ| ಕೋ|| ಭ್ಯಾಡ ಭ್ಯಾಡಂದರ ಭಿರಿಭಿರಿ ಹೋಗ್ಯಾಳ| ಹೋಗಿ ಅಗಸ್ಯಾಗ ನಿಂತಾಳ| ಕೋ|| ಢೇರ್ಯಾದ ಮ್ಯಾ...
ಜೀವದಲುಸಿರು ಇರುವಾಗ ನೋಡು ಕರುನಾಡು ನಾಲಿಗೆ ನುಡಿಯುತಿರುವಾಗ ಕನ್ನಡವ ಹಾಡು /ಪ// ಕನ್ನಡವ ಹಾಡು ಸಿರಿಗನ್ನಡವ ನೋಡು ಚೆಲುಗನ್ನಡ ಬೀಡು ಅದರಿಂದಲೆ ಈ ಹಾಡು /ಅ.ಪ./ ಹುಟ್ಟಿದ ಕೋಗಿಲೆ ಹಾಡುವುದು ಕನ್ನಡ ಸ್ವರದಲ್ಲಿ ಗಿರಿನವಿಲು ಗರಿ ಬಿಚ್ಚುವುದು ...
ಮತ್ತೆ ಮಳೆ ಹೊಯ್ಯುತಿದೆ ಆದರೆ ಎಲ್ಲಾ ನೆನಪಾಗುವುದಿಲ್ಲ. ಮತ್ತೆ ಮತ್ತೆ ಮಳೆ ಬರಬೇಕು ಅಂದರೇ ಈ ನೆಲ ಹಸಿರಾಗುವುದು ಹಸಿರಾದೊಡೆ ಚಿಗುರಿತೆಂದು ನಾವು ಭ್ರಮಿಸುವುದು, ಅದು ಜ್ವಾಲಾಮುಖಿಯ ಮೇಲಿನ ಹಸಿರೆಂದು ಈ ಇಳೆ ಅದೆಷ್ಟು ಸಲ ಗುಡುಗಿಲ್ಲ. ಗುಡುಗು...
ನಾನು ಸರಿಯಾಗಿದ್ದರೆ ಸಿಹಿ ದಾಂಪತ್ಯ ಇರದಿದ್ದರೆ ಏಕದಂ ಪಥ್ಯ! *****...
ನನ್ನ ಚಿಕ್ಕತಾಯಿ ಜೈಲಿನ ಬಾಯಿಗೆ ಬೀಳಲಿಕ್ಕಾದ ನನ್ನನ್ನು ಹೇಗೂ ಬಿಡುಗಡೆ ಮಾಡಿದಳು. ನಾನು ಮಾಡಿದ ತಪ್ಪಿಗೆ ನಾನೇ ಬಹಳ ನಾಚಿಕೆಪಟ್ಟು, ಅವಳ ಮೋರೆ ನೋಡುತ್ತಿರಲಿಲ್ಲ. ಅವಳೂ ನನ್ನ ಮೋರೆಯನ್ನು ಚಿರಕಾಲ ನೋಡಲಿಲ್ಲ. ಒಂದು ವರ್ಷದ ಮೇಲೆ ಅವಳು ತನ್ನ ಮ...
ಬಂಗಾರ ನೀರಿನಲಿ ಬೆಳಗುತಿದೆ ಬೆಳಗು ಮಂಜಿನ ತೆರೆಯಲಿ ಈ ಹೂವು ಆ ಹಕ್ಕಿ ನಲಿಯುತಿರೆ ನಯನ ಮನೋಹರ ವನಸಿರಿ ದುಂಬಿಗೆ ಮಧು ಮಹೋತ್ಸವ ಕನ್ನಡ ತೆನೆ ಹೊಯ್ದಾಡುತಿರೆ ಕನ್ನಡ ಕಂಪ ಸೂಸುವಂಗೆ ರಾಮನಾದರ್ಶ ಗಾಂಧೀಸತ್ಯ ಭೀಮ ಬಲ ಕೊಡು ತಾಯೇ ಮನವೆಂಬ ಮರ ಹೊತ್...
ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...
“ಕಿಟ್ಟೂ…….! ಚಳಿಯೊ……! ಹೊಟ್ಟೆಯಲ್ಲಿ ನಡುಕ……! ಅಯ್ಯೋ ಸಾಯ್ತಿನೊ ……. ಕಿಟ್ಟೂ ….. ಅಯ್ಯೋ….. ಅಯ್ಯೋ…. ಹ….. ಯ್ಯೋ…. ಎಂಥಾ… ವೇಳೆ ತಂದೆಪ್ಪಾ ಭಗವಂತಾ!…. ಅಯ್ಯ...
ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...
ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...
(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...















