ಬಂಗಾರ ನೀರಿನಲಿ
ಬೆಳಗುತಿದೆ ಬೆಳಗು
ಮಂಜಿನ ತೆರೆಯಲಿ
ಈ ಹೂವು ಆ ಹಕ್ಕಿ ನಲಿಯುತಿರೆ
ನಯನ ಮನೋಹರ ವನಸಿರಿ
ದುಂಬಿಗೆ ಮಧು ಮಹೋತ್ಸವ
ಕನ್ನಡ ತೆನೆ ಹೊಯ್ದಾಡುತಿರೆ
ಕನ್ನಡ ಕಂಪ ಸೂಸುವಂಗೆ
ರಾಮನಾದರ್ಶ ಗಾಂಧೀಸತ್ಯ
ಭೀಮ ಬಲ ಕೊಡು ತಾಯೇ
ಮನವೆಂಬ ಮರ ಹೊತ್ತ
ಈ ದೇಹಕೆ ಜ್ಞಾನವೆಂಬ
ನೀರನುಣಿಸಿ ಬೆಳೆಸುತಾಯೇ
ದುಷ್ಟ ಶಕ್ತಿ ಮರ್ಧಿನಿಯೇ
ಕರುಣಿಸು ಚೇತನವ
ಈ ಜಗವೇ ಹೊತ್ತಿ ಉರಿಯಲಿ
ಕನ್ನಡ ತನವೆಣದೆಂದೂ ಚಿಮ್ಮುತಿರಲಿ
ಉಸಿರಾಗಲಿ ಕನ್ನಡ ದನಿಯಾಗಲಿ ಕನ್ನಡ
ಬದುಕಾಗಲಿ ಕನ್ನಡ ಮನಸ್ಸಾಗಲಿ ಕನ್ನಡ
ಮಾಧ್ಯಮವಾಗಲಿ ಕನ್ನಡ ನಿತ್ಯವಾಗಲಿ ಕನ್ನಡ
ಕನ್ನಡ ಬನದ ಮಕ್ಕಳು
ಸಹೃದಯದಿ ಬೇಡುವೆವು ತಾಯೇ
ಹರಸು ನಮ್ಮನು
*****