Home / Poem

Browsing Tag: Poem

ಉದ್ದದಾಡಿಯ ಕೆಂಗಣ್ಣಿನ ಮಂತ್ರವಾದಿ ಇದ್ದಾನೆ ಹಾಗೆಯೇ, ಅದೆಷ್ಟೊ ವರ್ಷಗಳಿಂದ ಮುಪ್ಪಿಲ್ಲ ಸಾವಿಲ್ಲ ಕುಡಿದು ಬಿಟ್ಟಿದ್ದಾನೆ ದೇವಲೋಕದ ಅಮೃತ ಏಳು ಸಾಗರದಾಚೆ ಅದೆಲ್ಲಿಯೋ ಉಸಿರಾಡುತ್ತಿದೆಯಂತೆ ಪ್ರಾಣಪದಕ ಹುಡುಕಿ ಕೊಲ್ಲಲಾರದೆ, ನರಳಿವೆ ನರಳುತ್ತಲೇ...

ತಾಯಿ ನೆಲವ ಒಮ್ಮೆಯೂ ಸೋಕದೆ ಬಣ್ಣ ಬಣ್ಣದ ಬೋಗುಣಿಗಳಲ್ಲಿ ಬೆಳೆದು ಅಲ್ಲಲ್ಲ, ಷೋಕಿಗೆ ಶಿಸ್ತಿನಿಂದ ಬೆಳೆಸಲ್ಪಟ್ಟು ತಾಯಿಬೇರೂ ಕತ್ತರಿಸಿಕೊಂಡು ಅತ್ತಿತ್ತ ಎಲ್ಲೆಂದರಲ್ಲಿ ಕೊಂಬೆ ಚಾಚದೇ ಜೈಲಿನ ಖೈದಿಯಂತೆ ಇದ್ದೂ ತಿನ್ನಲಾಗದ ರೋಗಿಷ್ಟ ಶ್ರೀಮಂತನಂ...

ಎಳತರಲ್ಲವನ ವಿಚಾರ ಶಕ್ತಿಯನ್ನು ಕಂಡವರೆಲ್ಲ ಅಂದುಕೊಂಡದ್ದು ಅವನೊಬ್ಬ ಚಿಂತಕನಾಗುತ್ತಾನೆ ಅಂತ ಆದರೆ ಬೆಳೆದಂತೆ ಅದು ಹಳಿತಪ್ಪಿ ಹಾಳಾಗಿ ಅವನೊಬ್ಬ ನಕ್ಸಲೈಟ್ ನರಹಂತಕನಾದದ್ದೊಂದು ಘೋರ ದುರಂತ. *****...

ಎಲ್ಲಿ ಕುಂತಾನೊ ದೇವರು ಎಲ್ಲವ ನೋಡುತ ಕುಂತಾನೊ ದೇವರು|| ನ್ಯಾಯಾಲಯದಲಿ ಜಡ್ಜನ ಮುಂದೆ ದೇವರ ಮೇಲೆ ಪ್ರಮಾಣ ಮಾಡಿಸಿ ಸುಳ್ಳನೆ ವಾದಿಸಿ ಸಾಧಿಸಿ ಗೆಲ್ಲುವ ಕಳ್ಳರ ಭಂಡರ ಉಳಿಸ್ಯಾನಲ್ಲಾ || ಎಲ್ಲಿ || ಪಾರ್ಲಿಮೆಂಟಿನಲಿ ವಿಧಾನಸೌಧದಿ ಜನಗಳ ಸೇವೆ ಮಾ...

ದೀನ ನೀನು ಹೇಗೆ ಮಹಾಮಾನಿಯೇ? ನಾವೇ ಋಣಿ ನಿನಗೆ ಹಿರಿಯ ದಾನಿಯೇ ಚಳಿ ಬಿಸಿಲಿನ ಪರಿವೆಯಿರದೆ ನಮ್ಮ ಮನೆಯ ಕಟ್ಟಿದೆ, ಮಳೆಯಲಿ ಬರಿಮೈಲಿ ದುಡಿದು ನಮ್ಮ ಮಾನ ಮುಚ್ಚಿದೆ, ಹಿಡಿ ತಂಗಳು ತಿಂದು ಮನೆಯ ಹಿತ್ತಿಲಲ್ಲಿ ಮಲಗಿದೆ, ತಾಯಿಯಂತೆ ಬಾಯಿ ಮುಚ್ಚಿ ನ...

ಕಪ್ಪು ಸುಂದರಿಯರಿವರು ಅದೆಷ್ಟು ಒನಪು ಒಯ್ಯಾರ ಬಿಗಿಮಿಡಿ ಚೂಪುಹೀಲ್ಡು ದಪ್ಪ ತುಟಿಯ ದೊಣ್ಣೆ ಮೂಗಿನ ಹುಡುಗಿಯರದದೇನು ತರಾತುರಿ ತುಟಿಗಂಟಿದ ಬೆವರೊ ಬೆವರಿಗಂಟಿದ ಲಿಪ್ ಸ್ಟಿಕ್ಕೊ ಗುಲಾಬಿಯೆಲ್ಲ ಕಪ್ಪು. ಕ್ಷಣಕ್ಷಣಕೂ ತೀಡಿತಿದ್ದಿಕೊಳ್ಳುವ ಕಪ್ಪು ...

ಮಗಳು ಎಳೆಯ ಮುಗುಳು ಎದೆಯ ಮೇಲೆ ಮಲಗಿರುವಳು ಸದ್ದು ಮಾಡಿದ ಎದೆಯ ಪ್ರಶ್ನಿಸುತ್ತಾಳೆ ಮೆಲ್ಲಗೆ ಯಾರು ನೀನು? ಎದೆಯ ಬಡಿತ ಹಮ್ಮಿನಿಂದ ಕ್ರೈಸ್ತನೆಂದಿತು ಸಣ್ಣಗೆ ಕಂಪಿಸಿದಳು ಮುಸ್ಲಿಮನೆಂದಿತು ಗರ್ವದಲಿ ಒಳಗೇ ದುಃಖಿಸಿದಳು ಹಿಂದುವೆಂದಿತು ಹೆಮ್ಮೆಯ...

ಪ್ರತಿ ಹೂವೂ ಸಾರುತ್ತಿದೆ ಭಗವಂತನ ಚೆಲುವ ಪ್ರತಿ ಬೆಳಗೂ ಹಾಡುತ್ತಿದೆ ಭಗವಂತನ ಒಲವ ಹರಿವ ನೀರು, ಸುಳಿವ ಗಾಳಿ ತಿರುಗುವ ಋತು ಚಕ್ರ ಮಾತಿಲ್ಲದೆ ಸೂಚಿಸುತಿವೆ ಭಗವಂತನ ನಿಲುವ. ಕೋಟಿ ತಾರೆ ಬಾನಿನಲ್ಲಿ, ಭೂಮಿಯೊಂದು ಚಿಕ್ಕಿ ನೀಲಿಬಾನಿನಲ್ಲಿ ಸುಳಿದ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...