Home / Poem

Browsing Tag: Poem

ಹರಿತ ಶಕ್ತಿಯ ಕೊಡಲಿಯ ಬಾಯಿಗೆ ಸಿಕ್ಕು ಅಲ್ಲಲ್ಲಿ ಸೆಕ್ಕಗಳೆದ್ದು ಚಿಮ್ಮಿದಾಗ… ವಾಸ್ತವಿಕತೆಯ ಮರೆತು ಅದರೊಳಗೆ ಒಂದಾದ ಬರಿ ಊಹೆಯ ಚಿತ್ರ. *****...

ಮುಂಬೆಳಗ ಮಂಜಿಗೆ ತೆರೆದ ಪುಟ್ಟ ಕಣ್ಣುಗಳು ರಣ ಮಧ್ಯಾಹ್ನದ ಝಳಕ್ಕೆ ಕರಗಲಿಲ್ಲವೆ? ಮಾನವನ ಕಣ್ಣುಗಳಿಗೆ ಹೆಚ್ಚು ಬೆಳಕು ತಾಳುವ ಶಕ್ತಿಯಿಲ್ಲ ಎಂದೆ? ಕತ್ತಲೆಯಿಂದ ಬಂದೆ ವಾಸ್ತವತೆಗೆ ಅದ್ಭುತದಿಂದ ಸಾಮಾನ್ಯಕ್ಕೆ ಸೌಂದರ್ಯದಿಂದ ಆಕಾರಕ್ಕೆ ತುಟಿಗೆ ತ...

ತೇಲಿ ತೇಲಿ ಹೋಗುತಿಹ ಬೆಳ್ಮುಗಿಲುಗಳೇ ನೀವು ಹೋಗುವಲ್ಲಿಗೆ ಹೊತ್ತು ನಡೆಯಿರಿ ನನ್ನ ಒಂದಿಷ್ಟು ಕನಸುಗಳ ಗಂಟ ನಿಮ್ಮ ಬೆನ್ನಲ್ಲಾದರೂ ಸಾಕಾರವಾಗಲಿ ಭಗ್ನವಾಗುಳಿದ ಕನಸುಗಳ ಅವಶೇಷ ಅಲ್ಲೆಲ್ಲೊ ಒಂದಿಷ್ಟು ಕಾವಿದ್ದರೂ ಇಳಿಸಿಬಿಡಿ, ನನ್ನ ಕನಸುಗಳ ಮೊಟ್...

ಕಳೆದು ಹೋಗಿಹ ಸಣ್ಣ ಕಣ್ಣಿನ ಸೂಜಿ ಹುಡುಕುತ್ತಿದ್ದಾಳೆ ಅರೆಗುರುಡಿನ ಅಜ್ಜಿ ಮೂಲೆ ಮೂಲೆ, ಸಂದಿ ಗೊಂದಿ ತಡವುತ್ತಾ, ಎಡವುತ್ತಾ ಅಸಂಬದ್ಧ ಗೊಣಗುತ್ತಾ ಅಪ್ರಚಲಿತ ಜಾನಪದ ಗೀತೆ ಗುನುಗುತ್ತಾ ಹರಿದ ಸೀರೆ ತುಂಡು ತೇಪೆಗೊಂದಿಷ್ಟು ಅರಿವೆ ಹಿಡಿದು ಮಸುಕ...

ಮೊದಲು ಅವನು ಅದನ್ನು ಕುಡಿದ ಈಗ ಅದು ಅವನನ್ನು ತಿನ್ನುತ್ತಿದೆ ಮಂಜಾವಿಂದ ಸಂಜೆಯವರೆಗೆ ಸಂಜೆಯಿಂದ ಮುಂಜಾವಿನವರೆಗೆ ಸದಾ ಕುಡಿಯುತ್ತಲೇ ಇದ್ದ ಅರ್ಥವಿಲ್ಲದ ಇದನ್ನು ಬಿಡಿಸಲು ಮಾಡಿದ ಹರಸಾಹಸವೆಲ್ಲ ವ್ಯರ್ಥ ಯಾವಾಗಲೋ ಒಮ್ಮೊಮ್ಮೆ ಮನುಷ್ಯ ಬಯಸಬಹುದು...

ಗದಲ ಗೋಜಲು ದೂಳು ದುಮ್ಮು ದುರ್ವಾಸನೆ ಸಿಡಿಮದ್ದುಗಳ ಕಟುನಾತ ಕೊಳಚೆ ಹರಿವ ಓಣಿ ಬೀದಿಗಳು ದಾರಿಯಲ್ಲಿ ಬಿಡಾಡಿ ದನ-ಜನಗಳು ಮುಂದೆ ಸಾಗಲು ಬಿಡದೆ ಅಡ್ಡಾದಿಡ್ಡಿ ನಿಂತು ಮೆಲುಕು ಹಾಕುತ್ತಿವೆ ಸರಭರ ವಾಹನಗಳು ಕಿವಿಕೊರೆಯುತ್ತಿವೆ ಧೂಳೆಬ್ಬಿಸಿ ಮೂಗಿಗ...

ಮೋಡಗಳಿಗೆಲ್ಲಿವೆಯೋ ಕಾಲು ಕುಟುಂಬವೇ ನಡೆಯುತಿಹುದಿಲ್ಲಿ ಅಪ್ಪ ಅಮ್ಮ ಮಕ್ಕಳು ಮೊಮ್ಮಕ್ಕಳು ಸಂಬಂಧಿಗಳು ಒಮ್ಮೆ ವೇಗ ಮಗದೊಮ್ಮೆ ನಿಧಾನ ಒಮ್ಮೆ ಮುನಿಸಿ ದೂರ ದೂರ ಮತ್ತೊಮ್ಮೆ ಸುತ್ತಿ ಒಬ್ಬರೊಳಗೊಬ್ಬರು ತಲೆಯ ಮೇಲೆ ಕಪ್ಪುಬುಟ್ಟಿ ಚಾಪಿ ಬಗಲಿಗೆ ಗಂಟ...

ಅಂಧಕಾರದ ಭ್ರಾಂತಿ ಕಳೆಯಿಸೊ ಪ್ರಭೆಯೆ ನಿನಗೆ ವಂದನೆ, ಅಂತರಂಗದ ಹಣತೆ ಸೊಗಯಿಸೊ ಗುರುವೆ ನಿನಗೆ ವಂದನೆ | ಧಾತ ವಿಧಾತ ನಾಥನ ತೋರೋ ಕೈಯ ದೀವಿಗೆ ಭೂತ ಭವಿಷ್ಯದ್ವರ್ತಮಾನ ನಿನ್ನ ಹಿರಿಮೆಗರಿಮೆ ಸಾಕ್ಷಿಗೆ | ಮಾತೃ ಮಮತೆ ಪಿತೃ ನಿಯತಿ ಭ್ರಾತೃನೇಹದ ಚ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...