ಅಂಧಕಾರದ ಭ್ರಾಂತಿ ಕಳೆಯಿಸೊ
ಪ್ರಭೆಯೆ ನಿನಗೆ ವಂದನೆ,
ಅಂತರಂಗದ ಹಣತೆ ಸೊಗಯಿಸೊ
ಗುರುವೆ ನಿನಗೆ ವಂದನೆ |

ಧಾತ ವಿಧಾತ ನಾಥನ
ತೋರೋ ಕೈಯ ದೀವಿಗೆ
ಭೂತ ಭವಿಷ್ಯದ್ವರ್ತಮಾನ
ನಿನ್ನ ಹಿರಿಮೆಗರಿಮೆ ಸಾಕ್ಷಿಗೆ |

ಮಾತೃ ಮಮತೆ ಪಿತೃ ನಿಯತಿ
ಭ್ರಾತೃನೇಹದ ಚಂದನ,
ಶಿಸ್ತು ಸಂಯಮ ದಯಾ ಕ್ಷಮತಾ
ಶೀಲವಂತಿಕೆ ಚೇತನ |

ಕ್ಷಾತ್ರ ತೇಜದ ಕ್ಷ-ಕಿರಣವು
ಹೊಳಹು ಹೊಳಪಿನ ಕಾಂತಿಗೆ
ದೀಪ ದೀಪದಿಂದೆನಿತೊ ದೀಪವ
ದೀಪಿಸೋ ದೀಪಕ ಶಕುತಿಗೆ |
*****