ದೂರದೊಂದು ತೀರದಿಂದ

ಎಲ್ಲಿಂದಲೋ ತೇಲಿ ಮೆಲ್ಲನೆ
ಹರಿದು ಬಂದ ರಾಗ, ಹೂವಿನ
ಗಿಡಗಳ ಮೇಲೆ ಹಾರುವ ಚಿಟ್ಟೆ!
ಎದೆ ತುಂಬ ಪರಿವೆ ಇಲ್ಲದ ನೆನಪು,
ಅಂಗಳದಲಿ ಕುಪ್ಪಳಿಸುವ ನೀಲಿಹಕ್ಕಿ,
ಸಾವರ ಸಂತಸದ ಮೋಡಗಳ
ಸಂಚಲನ ಭಾನು!
ಒಮ್ಮೆ ಹೀಗೆ ಸಂತೃಪ್ತದಲಿ
ಹೊಳೆವ ಮನದ ಮಿಂಚು
ಮಾಯವಾಗಿವೆ ಜಗದ
ತಲ್ಲಣಗಳ ಮರೆತ ಮಾತು
ನೀ ಬರುವ ದಾರಿ ಸ್ವಚ್ಛವಾಗಿ ತಿಳಿಯಲಾಗಿದೆ.

ಎಲ್ಲಿಂದಲೋ ಸೂಸಿ ಬಂದ ಸುಹಾಸನೆ
ಕಾಮನ ಬಿಲ್ಲಿನ ರಂಗು
ಚಿಗುರು ಚಿಗುರಲಿ ಹಸಿರು ಕಂಪನ
ರಾಗ ತಾಳಕೆ ಭಾವಗೀತೆ ಹಾಡಿದ ಕೋಗಿಲೆ
ಘಮ್ಮೆಂದು ಸೂಸಿ ತಳಿರು ಹಗುರ
ಗಂಧಗಾಳಿ ಒಡಲ ತುಂಬ ಸೂಸಿ
ಬೆಳದಿಂಗಳ ಸಾಧಕ ಕವಿಗಳು
ಕೆರೆಯ ದಂಡೆಯ ಅಲೆಯಗುಂಟ
ಗಾಳ ಹಾಕಿದ ಹುಡುಗ ತುಂಟ
ಎಲ್ಲ ಪ್ರಶ್ನೆಗಳಿಗೆ ಉತ್ತರ ಕೇಳುವ
ತುಂಟ ಮಗಳು ಕವಿತಾ
ನೀ ನಡೆದು ಬರುವ ದಾರಿಯಲಿ ಯುಗಾದಿ ಸಂಭ್ರಮ.
*****

ಕೀಲಿಕರಣ : ಕಿಶೋರ್ ಚಂದ್ರ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಿಂಚುಳ್ಳಿ ಬೆಳಕಿಂಡಿ – ೬೭
Next post ಶ್ರೀ ಗುರುವಿಗೆ

ಸಣ್ಣ ಕತೆ

 • ವಿರೇಚನೆ

  ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

 • ತಿಮ್ಮರಯಪ್ಪನ ಕಥೆ

  ರಂಗಣ್ಣ ಎರಡು ತಿಂಗಳು ಕಾಲ ರಜ ತೆಗೆದು ಕೊಂಡು ಬೆಂಗಳೂರಿಗೆ ಬಂದು ವಾಸಮಾಡುತ್ತಿದ್ದನು. ಶಿವಮೊಗ್ಗದಲ್ಲಿ ಪಿತ್ತವೇರಿಸುವ ತುಂಗಾಪಾನವನ್ನು ನಿತ್ಯವೂ ಮಾಡಿ, ಕಿವಿ ಮೂಗು ಬಾಯಿಗಳಿಗೆಲ್ಲ ಮುಸುರುವ ಸೊಳ್ಳೆಗಳ… Read more…

 • ಆವಲಹಳ್ಳಿಯಲ್ಲಿ ಸಭೆ

  ಪ್ರಕರಣ ೯ ಹಿಂದೆಯೇ ನಿಶ್ಚೈಸಿದ್ದಂತೆ ಆವಲಹಳ್ಳಿಯಲ್ಲಿ ಉಪಾಧ್ಯಾಯರ ಸಂಘದ ಸಭೆಯನ್ನು ಸೇರಿಸಲು ಏರ್ಪಾಟು ನಡೆದಿತ್ತು. ರಂಗಣ್ಣನು ಹಿಂದಿನ ದಿನ ಸಾಯಂಕಾಲವೇ ಆವಲಹಳ್ಳಿಗೆ ಬಂದು ಮೊಕ್ಕಾಂ ಮಾಡಿದನು. ಸಭೆಯಲ್ಲಿ… Read more…

 • ಕೆಂಪು ಲುಂಗಿ

  ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

 • ಮನೆ “ಮಗಳು” ಗರ್ಭಿಣಿಯಾದಾಗ

  ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…