ಸ್ವಾಮಿ ನಿಮ್ಮ ನಾಮ ಓಂ
ಯಾ ಇಮಾಮ ಶಾ ಹುಸೇನ || ಪ ||

ಕಾಮಿತಫಲ ಕರ್ಬಲ ನೆಲ
ತಾಮಸಕುಲ ಆ ಮಹಾಬಲ
ಭೂಮಿಪ ಬರೆದು ಧಾಮಲಛಲ ಕೋಮಲ ಛಲ || ಅ. ಪ. ||

ಧರಿಗೆ ಅವರ ಮದೀನ ಶಹರ
ಇರುವರಲ್ಲೆ ಚರಿಯರ
ಮರೆಯುವದು ಸಿರಿ ಹಜರತ್ ದೊರಿ
ಗರ್ಭದಮರಿ ಪ್ರಭು ಅವತಾರ ಪರಮಕಲಿ
ಧಾಮಶಪುರ ಹರಿ ಸಂಹರಿ || ೧ ||

ಸತ್ಯ ಶರಣರ ಕತಿ ಕೇಳೋ
ಮತ್ತೆ ಶಿಶುವಿನಾಳೊಳು
ಉತ್ತರಿಸುವೆ ವತ್ತರದಲಿ
ಮಸ್ತೀಕುಲ ಹಸ್ತಾಂಗಿತ
ಉಚ್ಚರಿಸುವೆ ಮೊಹರಮ್ ಸಾರತೇನಿ || ೨ ||
*****