ಬಾಲ್ಯದಲ್ಲಿ ನಾನು
ಯಾವಾಗಲೂ ಸುಳ್ಳಿನ
ಮಿಠಾಯಿ ಮೆಲ್ಲುತ್ತಿದ್ದೆ.

ಲಾಭ-ನಷ್ಟದ ಪರಿವೆಯಿಲ್ಲದೆ
ಸುಳ್ಳಿನ ಮೊಗ್ಗುಗಳನ್ನು
ಪೋಣಿಸಿ ಮಾಡುತ್ತಿದ್ದೆ.

ಈಗನಿಸುತ್ತದೆ
ಆವೊತ್ತಿನ ಪ್ರತಿಯೊಂದು
ಸುಳ್ಳಿನಲ್ಲೂ ಮುಗ್ಧ ಹಂಬಲವಿತ್ತು
ಕಲ್ಪನೆಯ ಅಪ್ರತಿಮ
ಸೌಂದರ್ಯವಿತ್ತು.


ಸವಿತಾ ನಾಗಭೂಷಣ
Latest posts by ಸವಿತಾ ನಾಗಭೂಷಣ (see all)