ಓದದೇ ಬರೇದೇ ಅರೆಘಳಿಗೆ, ಬದುಕಲಾರೆ ಗುರುವೆ,
ಸದಾ ನಿನ್ನ ಚರಣದಾಸನು, ಅನಾವರತದಿ ಗುರುವೆ.
ಕೃತಕ ನಗೆ, ಸದಾ ಹಗೆ, ನಿತ್ಯ ಸ್ಫೋಟ, ಭೀತಿ ಗುರುವೆ,
ನೆಮ್ಮದಿ ಜೀವಕೆ, ಜ್ಞಾನವೊಂದೇ ತಾರಕ ಮಂತ್ರ ಗುರುವೆ.
ಓದಿಲ್ಲದೇ ಕುರುಡು ನಾಯಿ ಸಂತೆಗೆ, ಬಂದಂಗೆ ಗುರುವೆ,
ಓದೀನಾ ಗೀಳು, ನಯ, ವಿನಯ, ಸದಾ ಇಂತಿರಲಿ, ಗುರುವೆ.
ತೃಣ ಮೂಲ ನಾಽ! ಸಾವು, ನೋವು, ಕಾಡದೇ ನಿತ್ಯ ಗುರುವೆ,
ಸಂತೆ ಮುಗಿಯದೇ? ಚಿಂತೆಯಾಕೆ, ಕಂತೆ ಭಿಕ್ಷೆಗೆ, ಗುರುವೆ.
ಮೃತ್ಯು ಅಪ್ಪುವತನಕ, ಕಾಲಹರಣ ಯಾಕೆ ಗುರುವೆ,
ನಿಮ್ಮ ಅಜ್ಞೆಗೆ, ರಪ್ಪೆ ಅಲುಗದು, ‘ಎಲ್ಲ’ ವರವೆ! ಗುರುವೆ!
*****