ಮುಪ್ಪು

ದೇಹ ಗಳಿಯುತ್ತಿರಲು
ಮನಕೆ ಯೌವನವಯ್ಯ
ಮನಕೆ ಯೌವನವಿರಲು
ಆಸೆಗಳು ಹೆಚ್ಚಯ್ಯ,

ಸಾಧಿಸುವ ಶಕ್ತಿಗಳು
ಭೋಗಿಸುವ ಶಕ್ತಿಗಳು
ಕುಂದುತ್ತ ಬರಬರಲು
ನೊಂದು ಸಾಯುವೆವಯ್ಯ.

ನರೆಸುಕ್ಕುಗಳ ನೋಡಿ
ಮೋಸ ಹೋಗಲು ಬೇಡ
ಮನಕೆ ಸುಕ್ಕುಗಳಿಲ್ಲ
ಹಿರಿಯತನ ಮುನ್ನಿಲ್ಲ.

ಸಾಯುವಾ ಕಾಲಕ್ಕೆ
ಎನಿತೊಂದು ಆಸೆಗಳು,
ಮುಂದಿನಾ ಜನ್ಮಕ್ಕೆ
ಎನಿತೊಂದು ಬಿತ್ತುಗಳು.

ಆಡಿ ತೋರದೊಡೇನು
ಮಾಡಿ ತೋರದೊಡೇನು
ಮೂಡುತಿರೆ ಮನದಲ್ಲಿ
ಪಾಪ ವಾಸನೆಯಾಯ್ತು

ವಿಷಯಗಳ ಸುಖಕಿಂತ
ಹಿರಿಯ ಸುಖವೊಂದುಂಟು
ಗುರು ಕರುಣ ಬಂದಲ್ಲಿ
ಆ ಸುಖದ ತಿಳಿವುಂಟು

ಹಿರಿಯ ಸುಖ ಕಂಡಾಗ
ಮುಪ್ಪು ಬಂದಡಸುವುದು
ನಾಯಿಗಳು ಸಾಯುವುವು
ಮನವು ಬಯಲಾಗುವುದು.

ಮನಕೆ ಮುಪ್ಪಾಗದೆಯೆ
ಹಿರಿಯ ಸುಖ ತಾನಿಲ್ಲ
ಮನವೆ ಕರ್ಮದ ಮೂಲ
ಮನವನ್ನೆ ಕೊಲ್ಲುವುದು.

ಈ ಮುಪ್ಪು ಬಂದವರ
ಕಣ್ಣಿಟ್ಟು ಹುಡುಕುತಿರು
ಅವರ ನೆಲೆ ಸಿಕ್ಕಾಗ
ಹಿಂದೆಯೇ ನಡೆಯುತಿರು.

ಮುಪ್ಪಿನಲಿ ಸುಖವುಂಟು
ಜವ್ವನದಿ ಕುಂದುಂಟು
ಮುಪ್ಪನ್ನು ಬಯಸುವುದು
ಶ್ರಮದಿಂದ ಸಾಧಿಪುದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುಕ್ತಕ
Next post ಹೆಸರಿಗೆ ಮಾತ್ರವೆ

ಸಣ್ಣ ಕತೆ

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ದೊಡ್ಡ ಬೋರೇಗೌಡರು

    ಪ್ರಕರಣ ೭ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸಗಳ ಸಮಸ್ಯೆ ಬಹಳ ದೊಡ್ಡದೆಂದು ರಂಗಣ್ಣನಿಗೆ ತಿಳಿದುಬಂತು. ಮೇಲಿನವರು ಬರಿಯ ವರದಿಗಳನ್ನು ತಯಾರು ಮಾಡುವುದರಲ್ಲಿಯೂ ಹೊರಗಿನ ಪ್ರಾಂತದವರಿಗೆ - ಅದರಲ್ಲಿಯೂ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…