Home / Srinivasamurthy MR

Browsing Tag: Srinivasamurthy MR

(ಏಕಾಂಕ ನಾಟಕ) ಪಾತ್ರಗಳು ೧. ಕವಿರಾಜ ೨. ಘೂಕರಾಜ [ಕವಿಯ ಮನೆ ಬೆಳಗಿನ ಜಾವ. ಕವಿ ತನ್ನ ಕೊಠಡಿಯಲ್ಲಿ ಮಂಚದ ಮೇಲೆ ಮಲಗಿರುವನು. ಮನೆಯು ಪೂರ್ವಾಭಿಮುಖವಾಗಿದೆ ; ಕೊಠಡಿಯ ಕಿಟಕಿಗಳು ಉತ್ತರಾಭಿಮುಖವಾಗಿವೆ. ಎರಡೇ ಕಿಟಕಿಗಳಿರುವುವು. ಸುಮಾರು ನಾಲ್ಕು...

ತುಂಬು ಜವ್ವನದಬಲೆ ಪತಿರಹಿತೆ ಶೋಕಾರ್ತೆ ಕಾಡುಮೇಡನು ದಾಟಿ ಭಯದಿಂದ ಓಡಿಹಳು ಒಬ್ಬಳೇ ಓಡಿಹಳು ಅಡಗಿಹಳು ಗುಹೆಯಲ್ಲಿ ಬಾಲೆ ಲಲಿತಾಂಗಿ. ಹುಲಿಕರಡಿಯೆಲ್ಲಿಹವೊ ವಿಷಸರ್ಪವೆಲ್ಲಿಹವೊ ಎಂದಾಕೆ ನಡುಗಿಹಳು ನಡುಗಿ ಗುಹೆಯನ್ನು ಬಿಟ್ಟು ಮುಂದೆ ಮುಂದೋಡಿಹಳು...

ದೇಹ ಗಳಿಯುತ್ತಿರಲು ಮನಕೆ ಯೌವನವಯ್ಯ ಮನಕೆ ಯೌವನವಿರಲು ಆಸೆಗಳು ಹೆಚ್ಚಯ್ಯ, ಸಾಧಿಸುವ ಶಕ್ತಿಗಳು ಭೋಗಿಸುವ ಶಕ್ತಿಗಳು ಕುಂದುತ್ತ ಬರಬರಲು ನೊಂದು ಸಾಯುವೆವಯ್ಯ. ನರೆಸುಕ್ಕುಗಳ ನೋಡಿ ಮೋಸ ಹೋಗಲು ಬೇಡ ಮನಕೆ ಸುಕ್ಕುಗಳಿಲ್ಲ ಹಿರಿಯತನ ಮುನ್ನಿಲ್ಲ. ಸ...

“ಎಲ್ಲಾ ತಿಂಡಿಯು ನನಗೇ ಬೇಕು ಎಲ್ಲಾ ಹಣ್ಣೂ ನನಗೇ ಬೇಕು ಆರಿಗು ಚೂರನು ಗೀರನು ಕೊಡೆನು” ಕೊಡೆನೆನ್ನುತ ಎಳ ಮಗ ಹರಮಾಡಿದನು. “ಅಣ್ಣನು ತಮ್ಮನು ಎಲ್ಲರು ಇರುವರು ಅಕ್ಕನು ತಂಗಿಯು ಎಲ್ಲರು ಇರುವರು ನಾನೂ ಅಮ್ಮಾ ಎಲ್ಲರು ಇರುವೆ...

ಚಂಡಿ! ನೀ ಗುಣವಂತೆ ಬರಿದೆ ದೂರಿದನವನು, ಮುದಿಗೂಬೆ ಹೇಳಿದುದೆ ಲೋಕಮೆಚ್ಚಿಕೆಯಾಯ್ತು ಕಂಡ ಕಂಡವರೆಲ್ಲ ಚಂಡಿತನವೆನಲಾಯ್ತು. ನಿನ್ನಂಥ ಸುಗುಣಿಗಳು ಈಗೆಲ್ಲಿ ದೊರೆಯುವರು ! ವಿಧಿಯ ಕಾರ್ಪಣ್ಯವಂ ಸೃಷ್ಟಿ ವೈರಸ್ಯವಂ ಈ ಯುಗದ ಹೆಂಗಳಂ ಬಣ್ಣಿಸಲುಮಳವಲ್ಲ...

ವೇದಾಂತ ಹೇಳಬಹುದು ಎಲ್ಲರೂ ಕೇಳಬಹುದು ಶಾಲನ್ನು ಸುತ್ತಿಕೊಂಡು ಬಿರುದನ್ನು ಧರಿಸಿಕೊಂಡು ವ್ಯಾಖ್ಯಾನ ಮಾಡಬಹುದು ಪುಸ್ತಕವ ಬರೆಯಬಹುದು ವೇದಾಂತ ಸಮಯಕ್ಕೆ ಬರುವುದೇನು ? ಕರುಳನ್ನು ಸಂತವಿಡಲಪ್ಪುದೇನು ? ಕಷ್ಟಗಳು ಬಂದು ಮುತ್ತಿ ದುಃಖಗಳು ಬಂದು ಒತ್...

ನಿಮ್ಮ ಪತ್ರ ಬಂದು ಸೇರಿ ಎರಡು ಮೂರು ಬಾರಿಯೋದಿ ಎಲ್ಲ ತಿಳಿದೆನು. ನೀವು ನನಗೆ ಗಂಡನಲ್ಲ ನಾನು ನಿಮಗೆ ಹೆಂಡಿರಲ್ಲ ನೀವು ತಿಳಿವುದು. ಕುಂಟು ಕಾಲು ಬಚ್ಚು ಬಾಯಿ ಮೆಳ್ಳುಗಣ್ಣು, ನಿಮ್ಮ ಸೇವೆ ಮಾಡಲಾರೆನು. ಬ್ರಹ್ಮ ಹಿಂದೆ ಗಂಟು ಹಾಕಿ ಗಂಡಹೆಂಡಿರಾದ...

ದೇವರ ಸತ್ಯವು ಊರಲಿ ಹರಡಿತು ಬಂದರು ಭಕ್ತರು ತಮತಮಗೆ | ಹೂವನು ಕಾಯನು ಹಣ್ಣನು ಜೋಡಿಸಿ ತಂದರು ಹರಕೆಯ ಬೇಡಲಿಕೆ. ದೇವರ ಮಹಿಮೆಯು ಹೆಚ್ಚಾಗಿರುವುದು ಕಿರುಗುಡಿ ಬಾಗಿಲು ಬಿಗಿದಿಹುದು | ದೇವರ ನೋಡಲು ಕಂಡಿಗಳಿರುವುವು ಕಿರುಬಾಗಿಲ ಬೆಳಕಂಡಿಗಳು. ಬಂದ...

ನೀವೆಲ್ಲ ಪುಣ್ಯಶಾಲಿಗಳಮ್ಮ ಹಠತೊಟ್ಟು ಬೈಗಳಿಂ ಕೋಪದಿಂ ಕೋರಿಕೆಯ ಸಾಧಿಪಿರಿ, ಸುಖಿಸುವಿರಿ ಒಡವೆ ವಸ್ತುವ ಪಡೆದು ಮೆರೆಯುವಿರಿ. ಎನ್ನಲ್ಲಿ ಹರವಿಲ್ಲ ಮುನಿಸಿಲ್ಲ ಬೈಗಳಂ ಮುನ್ನ ನಾ ಕಲಿತಿಲ್ಲ ಅಸುವೊಂದು ದೇಹವೆರಡಾಗಿಹುದು ಎಂದು ಸಂಸಾರ ನಡೆಸುವೆನಮ...

ಕುರುಡನೊಬ್ಬ ಕೋಲನೂರಿ ಮರದ ಕೆಳಗೆ ನಿಂದಿರುತ್ತ ಕರವ ನೀಡಿ ಬೇಡುತಿದ್ದ ಪುರದ ಜನರನು, “ಹುಟ್ಟು ಕುರುಡ ಕಾಸನೀಡಿ ಹೊಟ್ಟೆಗಿಲ್ಲ ದಯವ ತೋರಿ ಬಟ್ಟೆಯೆಂಬುದರಿಯೆ” ಎಂದು ಪಟ್ಟಣಿಗರನು. ಬೇಡುತಿದ್ದ ದೈನ್ಯದಿಂದ ಆಡುತಿದ್ದ ಶಿವನ ಮಾತ &#...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...