ಕಾಯಿ ಕಾಯಿ

ಬಚ್ಚೋಂಕ ಕಾಯಿ ಬಚ್ಚಂಗಾಯಿ ಬಾಪೋಂಕ ಕಾಯಿ ಬಪ್ಪಂಕಾಯಿ ಕಾಯ್ ಕಾಯ್ ಕಾಯಿ ಎಲ್ಲರ ಕಾಯಿ ಹಿಗ್ಗಿದವರಿಗೆ ಹೀರೇ ಕಾಯಿ ಬಗ್ಗಿದವರಿಗೆ ಬದನೇ ಕಾಯಿ ಹಾಗಲ್ಲ ಅಂದವರಿಗೆ ಎಂಥಾ ಕಾಯಿ ಹಾಗಲ್ಲ ಅಂದವರಿಗೆ ಹಾಗಲ ಕಾಯಿ!...

ಒಂದು ಕಾಗದ

ನಿಮ್ಮ ಪತ್ರ ಬಂದು ಸೇರಿ ಎರಡು ಮೂರು ಬಾರಿಯೋದಿ ಎಲ್ಲ ತಿಳಿದೆನು. ನೀವು ನನಗೆ ಗಂಡನಲ್ಲ ನಾನು ನಿಮಗೆ ಹೆಂಡಿರಲ್ಲ ನೀವು ತಿಳಿವುದು. ಕುಂಟು ಕಾಲು ಬಚ್ಚು ಬಾಯಿ ಮೆಳ್ಳುಗಣ್ಣು, ನಿಮ್ಮ ಸೇವೆ ಮಾಡಲಾರೆನು....