ಪನ್ನೀರು

ಬೆಳ್ಳಂಬೆಳಗಿನ ಶುದ್ಧ ಕಣ್ಣೀರು ಗುಲಾಬಿಹೂವಲಿ ನಿಂತ ಪನ್ನೀರು ಇಬ್ಬನಿ ದೇವರೆ ಖುದ್ದಾಗಿ ಬಂದು ಸುರಿಸಿದರಿಲ್ಲಿ ಸ್ಫಟಿಕದ ಬಿಂದು ಒಂದ್ಹನಿ ನಮಗೆ ಒಂದ್ಹನಿ ನಿಮಗೆ ಒಂದ್ಹನಿ ನೆರೆಮನೆ ಪುಟ್ಟುಡುಗಿ ಕೆನ್ನೆಗೆ! *****

ಚಂಡಿಗೆ ಮೊರೆ

ಚಂಡಿ! ನೀ ಗುಣವಂತೆ ಬರಿದೆ ದೂರಿದನವನು, ಮುದಿಗೂಬೆ ಹೇಳಿದುದೆ ಲೋಕಮೆಚ್ಚಿಕೆಯಾಯ್ತು ಕಂಡ ಕಂಡವರೆಲ್ಲ ಚಂಡಿತನವೆನಲಾಯ್ತು. ನಿನ್ನಂಥ ಸುಗುಣಿಗಳು ಈಗೆಲ್ಲಿ ದೊರೆಯುವರು ! ವಿಧಿಯ ಕಾರ್ಪಣ್ಯವಂ ಸೃಷ್ಟಿ ವೈರಸ್ಯವಂ ಈ ಯುಗದ ಹೆಂಗಳಂ ಬಣ್ಣಿಸಲುಮಳವಲ್ಲ. ಬಾರೆಂದೊಡಂ...