ಕವಿಯ ಸೋಲು

Published on :

(ಏಕಾಂಕ ನಾಟಕ) ಪಾತ್ರಗಳು ೧. ಕವಿರಾಜ ೨. ಘೂಕರಾಜ [ಕವಿಯ ಮನೆ ಬೆಳಗಿನ ಜಾವ. ಕವಿ ತನ್ನ ಕೊಠಡಿಯಲ್ಲಿ ಮಂಚದ ಮೇಲೆ ಮಲಗಿರುವನು. ಮನೆಯು ಪೂರ್ವಾಭಿಮುಖವಾಗಿದೆ ; ಕೊಠಡಿಯ ಕಿಟಕಿಗಳು ಉತ್ತರಾಭಿಮುಖವಾಗಿವೆ. ಎರಡೇ ಕಿಟಕಿಗಳಿರುವುವು. ಸುಮಾರು ನಾಲ್ಕು ಅಡಿ ಉದ್ದ ಮೂರಡಿ ಅಗಲ ಒಂದೊಂದಕ್ಕೂ ಮೇಲಿನ ಬಾಗಿಲು ಕೆಳಗಿನ ಬಾಗಿಲು ಎಡ ಬಲ ಭಾಗಗಳಲ್ಲಿ ಇರುವುವು. ಕೊಠಡಿಯ ಉದ್ದ ೧೨ ಅಡಿಗಳು, ಅಗಲ ೧೦ ಅಡಿಗಳು, ಎತ್ತರ ೧೦ ಅಡಿಗಳು. […]

ಲಲಿತಾಂಗಿ

Published on :

ತುಂಬು ಜವ್ವನದಬಲೆ ಪತಿರಹಿತೆ ಶೋಕಾರ್ತೆ ಕಾಡುಮೇಡನು ದಾಟಿ ಭಯದಿಂದ ಓಡಿಹಳು ಒಬ್ಬಳೇ ಓಡಿಹಳು ಅಡಗಿಹಳು ಗುಹೆಯಲ್ಲಿ ಬಾಲೆ ಲಲಿತಾಂಗಿ. ಹುಲಿಕರಡಿಯೆಲ್ಲಿಹವೊ ವಿಷಸರ್ಪವೆಲ್ಲಿಹವೊ ಎಂದಾಕೆ ನಡುಗಿಹಳು ನಡುಗಿ ಗುಹೆಯನ್ನು ಬಿಟ್ಟು ಮುಂದೆ ಮುಂದೋಡಿಹಳು ಮೈಮರೆತು ಓಡಿಹಳು ಬಾಲೆ ಲಲಿತಾಂಗಿ. ಹಿಂದೆ ನೋಡಿದರತ್ತ ರಾವುತರು ಬರುತಿಹರು ವೇಗದಿಂದಟ್ಟಿಹರು ಹಗಲೆಲ್ಲ ಹಗಲೆಲ್ಲ ಓಡಿಹಳು ಚೀರುತ್ತ ಬೀಳುತ್ತ ಏಳುತ್ತ ಬಾಲೆ ಲಲಿತಾಂಗಿ. ದೀನ ರಕ್ಷಕನೆಂಬ ಬಿರುದಿಂದು ದೇವಂಗೆ ಎಂತು ಸಲುವದೊ ಕಾಣೆ ಆರಿಂದು ದೇವಿಯನು ಚೆಲುವೆಯನು […]

ಮುಪ್ಪು

Published on :

ದೇಹ ಗಳಿಯುತ್ತಿರಲು ಮನಕೆ ಯೌವನವಯ್ಯ ಮನಕೆ ಯೌವನವಿರಲು ಆಸೆಗಳು ಹೆಚ್ಚಯ್ಯ, ಸಾಧಿಸುವ ಶಕ್ತಿಗಳು ಭೋಗಿಸುವ ಶಕ್ತಿಗಳು ಕುಂದುತ್ತ ಬರಬರಲು ನೊಂದು ಸಾಯುವೆವಯ್ಯ. ನರೆಸುಕ್ಕುಗಳ ನೋಡಿ ಮೋಸ ಹೋಗಲು ಬೇಡ ಮನಕೆ ಸುಕ್ಕುಗಳಿಲ್ಲ ಹಿರಿಯತನ ಮುನ್ನಿಲ್ಲ. ಸಾಯುವಾ ಕಾಲಕ್ಕೆ ಎನಿತೊಂದು ಆಸೆಗಳು, ಮುಂದಿನಾ ಜನ್ಮಕ್ಕೆ ಎನಿತೊಂದು ಬಿತ್ತುಗಳು. ಆಡಿ ತೋರದೊಡೇನು ಮಾಡಿ ತೋರದೊಡೇನು ಮೂಡುತಿರೆ ಮನದಲ್ಲಿ ಪಾಪ ವಾಸನೆಯಾಯ್ತು ವಿಷಯಗಳ ಸುಖಕಿಂತ ಹಿರಿಯ ಸುಖವೊಂದುಂಟು ಗುರು ಕರುಣ ಬಂದಲ್ಲಿ ಆ ಸುಖದ […]

ಜಾಣ-ಕೋಣ

Published on :

“ಎಲ್ಲಾ ತಿಂಡಿಯು ನನಗೇ ಬೇಕು ಎಲ್ಲಾ ಹಣ್ಣೂ ನನಗೇ ಬೇಕು ಆರಿಗು ಚೂರನು ಗೀರನು ಕೊಡೆನು” ಕೊಡೆನೆನ್ನುತ ಎಳ ಮಗ ಹರಮಾಡಿದನು. “ಅಣ್ಣನು ತಮ್ಮನು ಎಲ್ಲರು ಇರುವರು ಅಕ್ಕನು ತಂಗಿಯು ಎಲ್ಲರು ಇರುವರು ನಾನೂ ಅಮ್ಮಾ ಎಲ್ಲರು ಇರುವೆವು ಒಂದಿಷ್ಟಿಷ್ಟನು ನಮಗೂ ಕೊಡಬೇಕು.” “ಆರಿಗು ಕೊಡೆನು ಎಲ್ಲವು ನನ್ನದು ?” ಎನ್ನುತ ಎಳ ಮಗ ಹಠಮಾಡಿದನು; ಅಣ್ಣ ತಮ್ಮ ಅಕ್ಕ ತಂಗಿ ಎವೆಯಿಕ್ಕದೆ ತಿಂಡಿಯ ನೋಡಿದರು. ಅಪ್ಪನ ಕೈಹಿಡಿದೆಳೆಯುತ ಕೇಳುತ […]

ಚಂಡಿಗೆ ಮೊರೆ

Published on :

ಚಂಡಿ! ನೀ ಗುಣವಂತೆ ಬರಿದೆ ದೂರಿದನವನು, ಮುದಿಗೂಬೆ ಹೇಳಿದುದೆ ಲೋಕಮೆಚ್ಚಿಕೆಯಾಯ್ತು ಕಂಡ ಕಂಡವರೆಲ್ಲ ಚಂಡಿತನವೆನಲಾಯ್ತು. ನಿನ್ನಂಥ ಸುಗುಣಿಗಳು ಈಗೆಲ್ಲಿ ದೊರೆಯುವರು ! ವಿಧಿಯ ಕಾರ್ಪಣ್ಯವಂ ಸೃಷ್ಟಿ ವೈರಸ್ಯವಂ ಈ ಯುಗದ ಹೆಂಗಳಂ ಬಣ್ಣಿಸಲುಮಳವಲ್ಲ. ಬಾರೆಂದೊಡಂ ಇಲ್ಲ ಹೋಗೆಂದೊಡಂ ಇಲ್ಲ ಬೇಕೆಂದೊಡಂ ಇಲ್ಲ ಬೇಡೆಂದೊಡಂ ಇಲ್ಲ ಕಪ್ಪಕಾಣಿಕೆಗಿಲ್ಲ ನಲ್ನುಡಿಗೆ ಮೊದಲಿಲ್ಲ ಕೋಪತಾಪಕುಮಿಲ್ಲ ಬೇಡಿಕೆಗೆ ಮುನ್ನಿಲ್ಲ ಏನೇನ ಪೇಳ್ದೊಡಂ ಅವರಲ್ಲಿ ನಿಷ್ಪಲಂ ಅವರ ಕೈವಿಡಿದರ್ಗೆ ಇಹದಿ ನಾಯಕ ನರಕ. ಜಗದ ಮೊಂಡುಗಳೆಲ್ಲ ಒಳಸಂಚು […]

ವೇದಾಂತ

Published on :

ವೇದಾಂತ ಹೇಳಬಹುದು ಎಲ್ಲರೂ ಕೇಳಬಹುದು ಶಾಲನ್ನು ಸುತ್ತಿಕೊಂಡು ಬಿರುದನ್ನು ಧರಿಸಿಕೊಂಡು ವ್ಯಾಖ್ಯಾನ ಮಾಡಬಹುದು ಪುಸ್ತಕವ ಬರೆಯಬಹುದು ವೇದಾಂತ ಸಮಯಕ್ಕೆ ಬರುವುದೇನು ? ಕರುಳನ್ನು ಸಂತವಿಡಲಪ್ಪುದೇನು ? ಕಷ್ಟಗಳು ಬಂದು ಮುತ್ತಿ ದುಃಖಗಳು ಬಂದು ಒತ್ತಿ ರೋಗಗಳು ಬಂದು ಹತ್ತಿ ಸಾಲಗಳು ಬಂದು ಸುತ್ತಿ ಕಣ್ಕಣು ಬಿಡುತಲಾಗ ಮತಿಗೆಟ್ಟು ಹೋಗುವಾಗ ವೇದಾಂತ ಬರುವುದನ್ನು ನೋಡಬೇಕು ವೇದಾಂತ ನುಡಿವುದನು ಕೇಳಬೇಕು. ತಾನಿದ್ದು ಮುದುಕನಾಗಿ ಬೆಳೆದ ಮಗ ತೀರಿಹೋಗಿ ಮೊಮ್ಮಗನು ಬಳಿಗೆ ಬಂದು ಬೆಪ್ಪಾಗಿಯಳುತ […]

ಒಂದು ಕಾಗದ

Published on :

ನಿಮ್ಮ ಪತ್ರ ಬಂದು ಸೇರಿ ಎರಡು ಮೂರು ಬಾರಿಯೋದಿ ಎಲ್ಲ ತಿಳಿದೆನು. ನೀವು ನನಗೆ ಗಂಡನಲ್ಲ ನಾನು ನಿಮಗೆ ಹೆಂಡಿರಲ್ಲ ನೀವು ತಿಳಿವುದು. ಕುಂಟು ಕಾಲು ಬಚ್ಚು ಬಾಯಿ ಮೆಳ್ಳುಗಣ್ಣು, ನಿಮ್ಮ ಸೇವೆ ಮಾಡಲಾರೆನು. ಬ್ರಹ್ಮ ಹಿಂದೆ ಗಂಟು ಹಾಕಿ ಗಂಡಹೆಂಡಿರಾದವೆಂದು ನೀವು ಬರೆವಿರಿ. ಬ್ರಹ್ಮಗಿಮ್ಮ ಹಾಕಲಿಲ್ಲ ಅಪ್ಪ ತಂದು ನನಗೆ ನಿಮಗೆ ಗಂಟುಹಾಕಿದ. ಹೆತ್ತ ತಂದೆ ಮಾರಿಕೊಂಡು ಮೃತ್ಯುವಾಗಿ ಕೊಲ್ಲಲಿಂತು ಮಾಡಲೇನಿದೆ. ಶಾಸ್ತ್ರ ಗೀಸ್ತ್ರ ತಿಳಿಯೆ ನಾನು ಬರೆದ […]

ಪೂಜಾರಿ

Published on :

ದೇವರ ಸತ್ಯವು ಊರಲಿ ಹರಡಿತು ಬಂದರು ಭಕ್ತರು ತಮತಮಗೆ | ಹೂವನು ಕಾಯನು ಹಣ್ಣನು ಜೋಡಿಸಿ ತಂದರು ಹರಕೆಯ ಬೇಡಲಿಕೆ. ದೇವರ ಮಹಿಮೆಯು ಹೆಚ್ಚಾಗಿರುವುದು ಕಿರುಗುಡಿ ಬಾಗಿಲು ಬಿಗಿದಿಹುದು | ದೇವರ ನೋಡಲು ಕಂಡಿಗಳಿರುವುವು ಕಿರುಬಾಗಿಲ ಬೆಳಕಂಡಿಗಳು. ಬಂದವರೆಲ್ಲರು ಕಾಯಿಗಳೊಡೆವರು ಹೊರಗಡೆ ಕರ್ಪೂರ ಹಚ್ಚುವರು | ತಂದಿಹ ಮುಡುಪನು ದೇವರು ಕೊಳ್ಳಲು ಹೊರಗಡೆ ತಪ್ಪದೆ ಬಿಟ್ಟಿಹರು. ಸಂಕಟಪಟ್ಟವರೊಬ್ಬರೆ ಬಂದರೆ ಸಂಜೆಯಲೇಕಾಂತದಲಿ | ಬಿಂಕವ ಬಿಟ್ಟಾ ದೇವರು ನುಡಿವನು ಅಂಜಿಕೆ ಕಳೆವನು […]

ಪುಣ್ಯಶಾಲಿ

Published on :

ನೀವೆಲ್ಲ ಪುಣ್ಯಶಾಲಿಗಳಮ್ಮ ಹಠತೊಟ್ಟು ಬೈಗಳಿಂ ಕೋಪದಿಂ ಕೋರಿಕೆಯ ಸಾಧಿಪಿರಿ, ಸುಖಿಸುವಿರಿ ಒಡವೆ ವಸ್ತುವ ಪಡೆದು ಮೆರೆಯುವಿರಿ. ಎನ್ನಲ್ಲಿ ಹರವಿಲ್ಲ ಮುನಿಸಿಲ್ಲ ಬೈಗಳಂ ಮುನ್ನ ನಾ ಕಲಿತಿಲ್ಲ ಅಸುವೊಂದು ದೇಹವೆರಡಾಗಿಹುದು ಎಂದು ಸಂಸಾರ ನಡೆಸುವೆನಮ್ಮ. ಎನ್ನ ಪತಿ ಮನೆಗೆ ಬರೆ ಮುಗುಳು ನಗೆ ಸೂಸುವೆನು ಬಂದವರನುಪಚರಿಸಿ ನಲ್ನುಡಿಯ ನುಡಿಯುವೆನು ಏಕಾಂತದಲ್ಲಿ ಮೆಲ್ಲನವರ ಬಳಿ ಸಾರುವೆನು ತನಿವಣ್ಣು ಕೆನೆವಾಲು ತಾಂಬೂಲ ನೀಡುವೆನು. ವಿನಯದಿಂ ಮೃದು ಮಧುರವಾಣಿಯಂ “ಎಲೆ ನಲ್ಲ! ಮಾತೊಂದು ನಡೆಸುವೆಯ ಕೇಳಲೋ […]

ಹಿರಿಯ ದಾನಿ

Published on :

ಕುರುಡನೊಬ್ಬ ಕೋಲನೂರಿ ಮರದ ಕೆಳಗೆ ನಿಂದಿರುತ್ತ ಕರವ ನೀಡಿ ಬೇಡುತಿದ್ದ ಪುರದ ಜನರನು, “ಹುಟ್ಟು ಕುರುಡ ಕಾಸನೀಡಿ ಹೊಟ್ಟೆಗಿಲ್ಲ ದಯವ ತೋರಿ ಬಟ್ಟೆಯೆಂಬುದರಿಯೆ” ಎಂದು ಪಟ್ಟಣಿಗರನು. ಬೇಡುತಿದ್ದ ದೈನ್ಯದಿಂದ ಆಡುತಿದ್ದ ಶಿವನ ಮಾತ “ಮಾಡಿರಯ್ಯ ಧರ್ಮವನ್ನು ನೋಡಿ ಹೋಗದೆ.” ಬಂದರಲ್ಲಿ ಪುರದ ಜನರು ಮಂದಿಯೆನಿತೊ ಲೆಕ್ಕವಿಲ್ಲ ಒಂದು ಕಾಸು ಕೊಡದೆಯವಗೆ ಮುಂದೆ ನಡೆದರು. ದೊಡ್ಡ ನಾಮ ದೊಡ್ಡ ಮುದ್ರೆ ಅಡ್ಡಬೂದಿ ನಡೆದುವೆಷ್ಟೊ ಗೊಡ್ಡು ತತ್ವ ಹೇಳಿಕೊಂಡು ಜಡ್ಡು ಹಿಡಿದವು. ಹಿರಿದು […]