ಅದೆಲ್ಲಾ ನನಗೆ ಹೇಳಬೇಡಿ
ಮನುಷ್ಯರಿಗೆ ಮನುಷ್ಯತ್ವ ಇದೆಯೋ ಮೊದಲು ನೋಡಿ
ನೀವು ಹೇಳುವ ಧರ್ಮ, ಧರ್ಮಯುದ್ಧ, ಜಿಹಾದ್ ಅದೆಲ್ಲಾ ನನಗೆ
ಸಂಬಂಧವಿಲ್ಲ.
ಬಿಲ್ಲು, ಬಾಣ, ಗದೆ, ಕೋವಿ, ತುಪಾಕಿಯಂಥಾ ಚಿಲ್ಲರೆ ಅಸ್ತ್ರಗಳು
ನನ್ನ ಹತ್ತಿರವಿಲ್ಲ.
ದಯವಿಟ್ಟು ತಿಳಕೊಳ್ಳಿ ನೀವು ಯಾರು ಒಪ್ಪಲಿ ಬಿಡಲಿ ನಾನು
ಸೂಪರ್ ಪವರ್,
ನಾನು ದೇವರ ಅವತಾರ,
ಅಮೇರಿಕಾದ ಬುಷ್ ಇಲ್ಲವೆ?
ಅವನತರ, ನಂಗೇನಿದ್ದರೂ ನನಗೆ ಬೇಕಾದವರ ರಕ್ಷಣೆ,
ಭಯೋತ್ಪಾದಕರ ಸಂಹಾರ.
*****