ತಾಯಿ ಬಂದೆ ತುಳುಕಿ ನಿಂದೆ
ಕಣ್ಣ ನೀರ ತಟದಲಿ ||

ನಿನ್ನ ಹಸ್ತ ಶಿವನ ಹಸ್ತ
ಶಾಂತ ಗಂಗೆ ಧೋ ಧೋ
ನಿನ್ನ ಎದೆಯ ಹಾಲ ಹೊಳೆಯು
ಸುರಿದ ಜೋಗ ಜೋಜೋ

ಕೋಟಿ ಕೋಟಿ ಕೋಟಿ ಆತ್ಮ
ರೆಲ್ಲ ನಿನ್ನ ಶಿಶುಗಳು
ದೇಶ ಭಾಷೆ ಕೋಶ ಕೀಲ
ರೆಲ್ಲ ನಿನ್ನ ಹನಿಗಳು

ಗುಟುಗು ಗುಟುಗು ಯಾಕೆ ತಟಗು
ಪುಟಿದು ಪುಟಿಸಿ ಆಡಿಸು
ಚಿನ್ನ ಬಗರಿ ಬೀಸಿ ಒಗೆದು
ಬೆಳ್ಳಿ ಗಿರಿಯ ತೋರಿಸು
*****