ವಿದಾಯ

ತೇಲಿ ತೇಲಿ ಹೋಗುತಿಹ
ಬೆಳ್ಮುಗಿಲುಗಳೇ
ನೀವು ಹೋಗುವಲ್ಲಿಗೆ
ಹೊತ್ತು ನಡೆಯಿರಿ
ನನ್ನ ಒಂದಿಷ್ಟು
ಕನಸುಗಳ ಗಂಟ
ನಿಮ್ಮ ಬೆನ್ನಲ್ಲಾದರೂ
ಸಾಕಾರವಾಗಲಿ
ಭಗ್ನವಾಗುಳಿದ ಕನಸುಗಳ
ಅವಶೇಷ

ಅಲ್ಲೆಲ್ಲೊ ಒಂದಿಷ್ಟು ಕಾವಿದ್ದರೂ
ಇಳಿಸಿಬಿಡಿ, ನನ್ನ ಕನಸುಗಳ
ಮೊಟ್ಟೆಯೊಡೆದು ಹಕ್ಕಿಗಳಾಗಿ
ಹಾರಾಡಲಿ

ಕಾವ ಕೊಟ್ಟು ಕೊಟ್ಟು
ಸಾಕಾದಷ್ಟೆ ಫಲ
ನನ್ನ ಕಾವಿಗೆ ಮೊಟ್ಟೆಯೊಡೆದು
ಹಕ್ಕಿಯಾಗುವ ಕುವತ್ತಿಲ್ಲ
ಅಲ್ಲಿ ಅಲ್ಲೆಲ್ಲೊ ನನ್ನ
ಕಣ್ಣೆವೆಗಳಾಚೆ
ಮೊಟ್ಟೆಯೊಡೆದ ಟಪ್ಪೆಂಬ ಸದ್ದು
ಗರಿ ಕೊಡವಿ ಪಟಪಟನೆ
ಹಾರಿದ್ದು, ಕೇಳಲಿ

ಕ್ಷೀಣವಾಗಿಯಾದರೂ
ಅದಷ್ಟಕ್ಕೆ ಸಾರ್ಥಕ ಈ ಜೀವ
ಎಲ್ಲೊ ಕನಸುಗಳು ಜೀವತಳೆದಭಾವ
ಹಾರಿದ ಕನಸುಗಳೇ
ವಿದಾಯ ನಿಮಗೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೂಜಿ ಹುಡುಕುವ ಅಜ್ಜಿ
Next post ವಾಸ್ತವತೆ

ಸಣ್ಣ ಕತೆ

 • ಲೋಕೋಪಕಾರ!

  ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

 • ಇನ್ನೊಬ್ಬ

  ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

 • ಕೆಂಪು ಲುಂಗಿ

  ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

 • ರಾಧೆಯ ಸ್ವಗತ

  ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

 • ಕಂಬದಹಳ್ಳಿಗೆ ಭೇಟಿ

  ಪ್ರಕರಣ ೪ ಮಾರನೆಯ ದಿನ ಪ್ರಾತಃಕಾಲ ಆರು ಗಂಟೆಗೆಲ್ಲ ರಂಗಣ್ಣನು ಸ್ನಾನಾದಿ ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಉಡುಪುಗಳನ್ನು ಧರಿಸುವುದಕ್ಕೆ ತೊಡಗಿದನು, ಬೈಸ್ಕಲ್ ಮೇಲೆ ಪ್ರಯಾಣ ಮಾಡಬೇಕಾದ್ದರಿಂದ ಸರ್ಜ್‍ಸೂಟು… Read more…