Shailaja Hassan

#ಕಾದಂಬರಿ

ಮುಸ್ಸಂಜೆಯ ಮಿಂಚು – ೨

0

ಅಧ್ಯಾಯ ೨ ಸೇವೆಗೆ ಮುಡಿಪಾಗಿಟ್ಟಳು ರಿತು ರಿತು ಬರುವುದನ್ನೇ ಕಾಯುತ್ತಿದ್ದ ತನುಜಾ, “ಇಂಟರ್‌ವ್ಯೂ ಏನಾಯ್ತೊ ಇಷ್ಟೊತ್ತಾದ್ರೂ ಬರಲಿಲ್ಲವಲ್ಲ, ಗಾಡಿ ಬೇರೇ ಇವತ್ತೇ ಕೆಟ್ಟುಹೋಗಿದೆ. ಎಷ್ಟು ಹೊತ್ತಿಗೆ ಅಲ್ಲಿಗೆ ಹೋದಳೋ? ಬರೋಕೆ ಆಟೋ ಸಿಕ್ತೋ ಇಲ್ಲವೋ? ಸಿಟಿಯಿಂದ ದೂರ ಬೇರೆ ಇದೆ. ಏನು ಮಾಡುತ್ತಾಳೋ? ಮನು ಬೇರೆ ಊರಿನಲ್ಲಿಲ್ಲ. ಅವರಿದ್ದಿದ್ದರೆ ಅವರೇ ಹೋಗಿ ಮಗಳ ಕರ್‍ಕೊಂಡು ಬಂದುಬಿಡುತ್ತಿದ್ದರು. […]

#ಕಾದಂಬರಿ

ಮುಸ್ಸಂಜೆಯ ಮಿಂಚು – ೧

1

ಅಧ್ಯಾಯ ೧ ವಿಲಕ್ಷಣ ಸಂದರ್ಶನ ರಿತು ಲಗುಬಗನೇ ಆವರಣವನ್ನು ದಾಟಿ ಒಳಹೊಕ್ಕಳು. ಸರಿಯಾದ ಸಮಯಕ್ಕೆ ತಲುಪಿದೆ ಎಂಬ ಸಮಾಧಾನದಿಂದ ಸುತ್ತಲೂ ನೋಟಹರಿಸುತ್ತ ಮುಂಭಾಗದಲ್ಲಿಯೇ ಹಾಕಿದ್ದ ಪ್ಲಾಸ್ಟಿಕ್ ಚೆಯರಿನ ಮೇಲೆ ಕುಳಿತುಕೊಂಡಳು. ಹೊರಡುವ ಘಳಿಗೆಯಲ್ಲಿ ಕೈನಿ ಕೈಕೊಟ್ಟಿತ್ತು. ಮತ್ತೆ ಎಲ್ಲಿ ಸಂದರ್ಶನಕ್ಕೆ ತಡವಾಗುವುದೋ ಎಂದು ಆಟೋ ಹಿಡಿದು ಅವಸರವಾಗಿ ತಲುಪಿದ್ದಳು. ಸಂದರ್ಶನಕ್ಕೆ ಇನ್ನೂ ಐದು ನಿಮಿಷ ಬಾಕಿ […]

#ಕವಿತೆ

ಈಡಿಪಸ್‌ಗೊಂದು ಪ್ರಶ್ನೆ

0

ಓ ಈಡಿಪಸ್ ನಿನ್ನೆದೆಂತಹ ಬದುಕು ಅಮಾನುಷ ವಿಧಿಬರಹಕೆ ಈಡಾಗಿ ಅರಿಯದೆ ಹಿಂದೆಂದೂ ನಡೆಯದಿದ್ದ ಮುಂದೆಂದೂ ನಡೆಯದಿರುವ ಘನಘೋರ ದುರಂತಕ್ಕೆ ಬಲಿಯಾದೆ ನವಮಾಸಗಳು ತನ್ನೊಡಲಲಿ ನಿನ್ನನಿರಿಸಿಕೊಂಡ ಹೆತ್ತವಳಿಗೆ ಮಾಲೆ ಹಾಕಿ ಅವಳೊಡೆಯನಾದೆ ಅವಳ ನಗ್ನತೆಯಲಿ ಸುಖವುಂಡು ನೀ ಸೃಷ್ಟಿಯಾದಲ್ಲಿಯೇ ನಿನ್ನ ಭ್ರೂಣವನ್ನೂ ಸೃಷ್ಟಿಸಿ ಹೇಯದಾಖಲೆಯ ಪಿತನಾದೆ ದುರ್ದೈವ ಈಡಿಪಸ್ ಗೊತ್ತಿತ್ತೇ ನಿನ್ನೆದೆಂತಹ ಹೀನಬದುಕೆಂದು ಯುಗ ಯುಗ ಕಳೆದರೂ […]

#ಕವಿತೆ

ದೂರ

0

ಇಷ್ಟುಕಾಲ ಒಟ್ಟಿಗಿದ್ದು ಅರ್ಥೈಸಿ ಕೊಂಡದೆಷ್ಟು ನನ್ನ ಕಣ್ಣೀನಾಳದ ಭಾವ ನೀ ಅಳೆಯಲು ನಿನ್ನ ಅಂತರಂಗದ ಬಿಂಬವಾ ನಾ ಅರಿಯಲು ಯತ್ನಿಸಿದಷ್ಟು ಗೌಪ್ಯ ಇದ್ದವಲ್ಲ ಮದ್ಯ ಗೋಡೆಗಳು ನೀನು ಕಟ್ಟಿದ್ದೊ ನಾನು ಕಟ್ಟಿದ್ದೊ ಅಂತು ಎದ್ದು ನಿಂತಿದ್ದವು ಆಳೆತ್ತರಕೆ ಪಾರದರ್ಶಕವಲ್ಲದ ಇಟ್ಟಿಗೆ ಗೋಡೆಗಳು ನೀನು ನಿನ್ನೊಳಗೆ ನಾನು ನನ್ನೊಳಗೆ ಗೋಡೆಯೊಡೆಯುವ ಯತ್ನ ನಿನ್ನದೋ ನನ್ನದೋ ಇದೆ ಅಹಂನಲಿ […]

#ಕವಿತೆ

ಹವಳ ದ್ವೀಪ

0

ದ್ವೀಪದ ಸುತ್ತಲೂ ನೀಲ ಕಡಲು ಹವಳದ ಒಡಲು ಮುಚ್ಚಿಟ್ಟ ಲೋಕ ಬಿಚ್ಚಿಡಲಾರದ ನಾಕ ಆಳದಲ್ಲೆಲ್ಲೋ ಬಿಸುಪು ಕಣ್ತಪ್ಪಿಸುವ ಹೊಳಪು ದೂರ ಬಹುದೂರ ದ್ವೀಪದ ಮಡಿಲು ಈಜಿದಷ್ಟು ದಣಿವು ಗುರಿ ತಲುಪಲಾರದ ಸೆಳವು ಬೇಕು ಇಂತಿಷ್ಟೆ ಕಸುವು ಹವಳದ ದಾಹ ದ್ವೀಪದ ಮೋಹ ಎಳೆದೊಯ್ಯುತ್ತಿದೆ ಆಳಕ್ಕಿಳಿಸುತ್ತಿದೆ ಈಜುವ ಕೈಗೆ ಸೋಲು ದಾರಿ ಎತ್ತ ಎತ್ತಲೊ ದ್ವೀಪದ ಸುತ್ತಲೂ […]

#ಕವಿತೆ

ಚಿಟ್ಟೆಗಳು

0

ಧರೆಯ ಮೇಲೆಲ್ಲಾ ಹಾರುವ ಬಣ್ಣ ಬಣ್ಣದ ಚಿಟ್ಟೆಗಳು ಹಾರುತ್ತವೆ ಒಮ್ಮೊಮ್ಮೆ ಒಡಲೊಳಗೆ ಅಂದೆಂದೋ ಯಾವನದೋ ತೆವಲಿಗೆ ಹುಟ್ಟಿದ ಆಚಾರ ವಿಚಾರಗಳ ತುಳಿದರೆ, ಉಕ್ಕುಕ್ಕಿ ಹರಿಯುತ್ತಿದ್ದ ಮಧುರ ಪ್ರೇಮದ ಪರಿ ಪರಿಧಿದಾಟಿ ವಿಜೃಂಭಿಸಿ ಹಿಡಿತದ್ಹೊರಗೆ ಹಾರಿದರೆ ಅಳುಕದೆ ಹೆಮ್ಮೆಯಲಿ ನಡೆದರೆ ಹಾರಾಡುತ್ತವೆ ಈ ಚಿಟ್ಟೆಗಳು ಒಡಲೊಳಗೆ ಧರ್ಮಶಾಸ್ತ್ರವ ಹರಿದು ಕಟ್ಟು ಕಟ್ಟಲೆಗಳ ಮುಷ್ಠಿ ಯಲಿ ಬಿಗಿದು ನಗುವವರ […]

#ಕವಿತೆ

ಸೃಷ್ಟಿಕ್ರಿಯೆ

0

ಅದಾವ ಕ್ಷಣದಲೊ ಗಮ್ಯತೆ ಸೇರಿ ಮಾಸವೊಂದರಲ್ಲೇ ಅಸ್ತಿತ್ವ ತೋರಿ ಅಸ್ಪಷ್ಟತೆಯಲ್ಲೇ ಪ್ರಭಾವ ಬೀರಿ ನಿನ್ನಾಟ ಒಡಲಲಿ ಬಾರಿ ಮತ್ತೇರಿ ಸೃಷ್ಟಿಕ್ರಿಯೆಯ ಆ ಕೈಚಳಕ ಹೊತ್ತು ತಂದಿದೆ ವರ್ಣಿಸಲಾಗದ ಪುಳಕ ಒದಿವಾಗ ಅವ ಎಡ ಬಲಕ ರೋಮಾಂಚನದ ಸಿಹಿಸಿಂಚನ ಮನಕ ನಿನ್ನ ಬರುವಿಕೆಯ ತವಕದಲಿ ಕ್ಷಣಗಳು ಯುಗವಾಗಿ ಕಳೆಯುತಲಿ ಮಡಿಲ ತುಂಬುವ ಕನಸಿನಲಿ ಒಡಲ ಭಾರದಿ ಕುಗ್ಗುತಲಿ […]

#ಕವಿತೆ

ಮಡಿಲು ಬರಿದೇ

0

ಒಡಲಲ್ಲೊಂದು ಕುಡಿ ಚಿಗುರಲಿಲ್ಲವೆಂದೇಕೆ ಹಲುಬುವಿರಿ, ಕುಡಿ ಗಾಗಿ ಹಂಬಲಿಸಿ ಕೊರಗಿ ಸೊರಗಿ ಬಾಳನ್ನೇಕೆ ವ್ಯರ್ಥಗೊಳಿಸಿ ಶೂನ್ಯ ವನ್ನಾಗಿಸುವಿರಿ ನಿಮ್ಮದೇನು ರಘುವಂಶ ಸೂರ್ಯವಂಶವೇ ಕುಲದೀಪಕನಿಲ್ಲದೆ ವಂಶ ಅಳಿಯತೆನಲು ಒಡಲು ಬರಿದಾಗಿಸಿದ ಆ ದೈವಕೆ ಸಡ್ಡು ಹೊಡೆದು ನಿಮ್ಮ ಹೃದಯವನ್ನೊಮ್ಮೆ ವಿಶಾಲಗೊಳಿಸಿ ಮಮತೆ ಮರೀಚಿಕೆಯಾಗಿರುವ ಕಂದಮ್ಮಗಳತ್ತ ದೃಷ್ಠಿಹಾಯಿಸಿ, ತರುವಿಲ್ಲದ ಲತೆಗಳಿಗೆ ಆಶ್ರಯವಾಗಿ ಬರಿದಾದ ಮಡಿಲ ತುಂಬಿಸಿಕೊಳ್ಳಿ ಒಡಲು ಬರಿದಾದರೇನು […]

#ಕವಿತೆ

ಕೇಳಿಸದೆ ನಿಮಗೂ ಅಃತಪುರದ ಪಿಸುದನಿ

0

ಬಣ್ಣಗೆಟ್ಟ ಇರುಳುಗಳ ನಡುನಡುವೆ ಹೊರಳಿ ನರಳಿವೆ ವಿರಹದುರಿಯ ದಳ್ಳುರಿ, ಎಲ್ಲಿ? ಎಲ್ಲಿ? ಹೋದವೆಲ್ಲಿ ಮುಗಿಲ ಪಡೆ? ಸುರಿಸದೆ ಒಂದಿಷ್ಟು ತಣ್ಣನೆ ಹನಿಗಳ ಬಾಯಾರಿವೆ, ತೊನೆಯುವ ಬಯಕೆ ಆಸೆಗಳ ಚೆಲ್ಲಾಟದಲಿ ಮೂಕಸಂಕಟ ಯಾರಿಗೆ ಬೇಕಾಗಿತ್ತು ನೂರು ಹೆಣ್ಣುಗಳ ನಡುವಿನ ರಾಣಿ ಪಟ್ಟ ಅನುದಿನವೂ ನವತಾರುಣ್ಯವ ಮೀಸಲು ಮುರಿವ ಮೃಷ್ಟಾನ್ನದ ನಡುವೆ ಉಂಡೆಸೆದ ಬಾಳೆಲೆಯ ನೆನಪೇ ಬರಿ ಕನಸು […]

#ಕವಿತೆ

ಮಾಧವಿಯ ವ್ಯಥ ಕಥೆ

0

ಕುದುರೆ ಏರಿಬರುವ ಶೂರಧೀರ ನನ್ನವ ಲೋಕಸುಂದರ ಚೆನ್ನ ಚೆನ್ನಿಗ ತನ್ನ ತುಂಬಿಕೊಂಡ ಕಣ್ಣ ಒಳಗೆ ಮತ್ಯಾರನೂ ನೋಡ ಬಯಸದವನ ಕೊರಳಿಗೆ ತನ್ನ ಮಾಲೆ ಕನಸು ಕಂಡ ಮಾಧವಿ ಏನಾಯ್ತೆ ಸಖಿ ನಿನ್ನ ವಿಧಿ ಮಾರಾಟವಾಯ್ತೆ ಒಡಲು ಅಷ್ಟಶತ ಶ್ವೇತ ಅಶ್ವಕೆ ಹುಂಬ ಶಿಷ್ಯನ ಒಣ ಪ್ರತಿಷ್ಠೆಯ ತೆವಲಿಗೆ ಕುಚೋದ್ಯದ ಗುರುದಕ್ಷಿಣೆ ಬಾಡಿಸಿತೇ ಇರುವಂತಿಕೆಯ, ಮದುವೆ ಇಲ್ಲಾ, […]