ಮೊದಲು ಅವನು ಅದನ್ನು ಕುಡಿದ
ಈಗ ಅದು ಅವನನ್ನು ತಿನ್ನುತ್ತಿದೆ
ಮಂಜಾವಿಂದ ಸಂಜೆಯವರೆಗೆ
ಸಂಜೆಯಿಂದ ಮುಂಜಾವಿನವರೆಗೆ
ಸದಾ ಕುಡಿಯುತ್ತಲೇ ಇದ್ದ
ಅರ್ಥವಿಲ್ಲದ ಇದನ್ನು ಬಿಡಿಸಲು ಮಾಡಿದ
ಹರಸಾಹಸವೆಲ್ಲ ವ್ಯರ್ಥ
ಯಾವಾಗಲೋ ಒಮ್ಮೊಮ್ಮೆ ಮನುಷ್ಯ ಬಯಸಬಹುದು ಒಂದು ಕಿಕ್
ಅಹೋರಾತ್ರಿ ಅದೇ ಕೆಲಸವೆಂದರೇ ಇದ್ಯಾವ್ ಕಿಕ್ ಏನಿದರ ಲಾಜಿಕ್
ಕೇಳಿದರೆ ಅಂತಿಮವಾಗಿ ಮನೋ ವೈದರು ಅಪ್ಪಣೆ ಕೊಡಿಸಿದ್ದು
ಅದು ಸೈಕಲಾಜಿಕ್.
*****

ಶ್ರೀನಿವಾಸ ಕೆ ಎಚ್
Latest posts by ಶ್ರೀನಿವಾಸ ಕೆ ಎಚ್ (see all)