
ಜೋಪಡಿಯ ಒಳಗಿಂದ ಖಾಲಿ ಮಡಕೆಯ ಮುಂದೆ ಅಳುವ ಕಂದನ ಕೂಗು ಕೇಳಿರುವೆ. ಸತ್ತ ನಗರದ ರಾಜರಸ್ತೆಯ ಓಣಿಯಲಿ ರಾತ್ರಿ ರಾಣಿಯರ ಬೇಹಾರ ಕಂಡಿರುವೆ. ನೆಟ್ಟ ಫಸಲಿಗೆ ಕಟ್ಟದ ಬೆಲೆ ಹೊಟ್ಟೆಗೆ ಒದ್ದೆ ಬಟ್ಟೆ, ಕಟ್ಟಿ ಮಲಗಿದ ರೈತನ ಕಣ್ಣೀರು ನೋಡಿರುವೆ. ಧರ್ಮ ಭ...
ಯಾವ ಹಾಡನು ನಾ ಹಾಡಲಿ, ಇನ್ನು- ಬಾಳಿನ ಉಷೆಯನು ಎಚ್ಚರಿಸಲಿ? ಬಂಗಾರ ಬಯಲಲಿ ಸಿಂಗಾರ ಬೆಳೆಯಲಿ ತಂದು ಇಕ್ಕಿದರೊಂದು ಕಿಡಿ ಬೆಂಕಿ ! ಬೆಳೆಯಲ್ಲಿ ಉರಿ ತಾಗಿ, ಬಯಲೆಲ್ಲ ಹೊಗೆಯಾಗಿ ಉಳಿದುದೆಲ್ಲವು ಇಲ್ಲಿ – ಎದೆ ಬೆಂಕಿ ! ನೋವನರಿಯದ ಬಾಳು ಬಾ...
ನೀರುಣಿಸಿ ಸಲುಹಿದರು ಹುಳುಹತ್ತಿ ಬೆಳೆಯಲಿಲ್ಲಾ ! ತಿಳಿಯಲಿಲ್ಲೆನಗೆ ಮಣ್ಣಲ್ಲಾ ಉಸುಕೆಂದು ಈ ನೆಲಾ! ಹೃದಯ ಬಟ್ಟಲೊಳು ಭಕ್ತಿ ಹಾಲು; ದೇವನೊಲಿಯಲಿಲ್ಲಾ! ಬಟ್ಟಲೇ ಎಂಜಲಾಗಿಹುದು; ಮಾಯೆ ಈ ಹೃದಯವಲಾ! ಚಲುವಾದ ಕಾಯಾಯ್ತು; ತಿನ್ನಲಾಸೆ ಮನಕಾಯ್ತು ಮರವ...
ಎಂಥ ಮಾತುಗಳ ಹೇಳಿದೆ ಗುರುವೇ ನಮಸ್ಕಾರ ನೂರು ಇಂಥ ನೀತಿಗಳ ಹೇಳಬಲ್ಲವನು ಕಬೀರನಲ್ಲದೆ ಯಾರು? ಹಿಂದೂ ಮುಸ್ಲಿಮ ಗಂಧಗಳೆಲ್ಲಾ ಮಣ್ಣಿನ ಶರೀರಕಷ್ಟೇ; ಆತ್ಮಕೆ ಮತದ ಬಂಧನವೆಲ್ಲಿದೆ? ಇರುವುದು ಸತ್ಯದ ನಿಷ್ಠೆ ವೇದ ಖುರಾನು ಗ್ರಂಥಸಾಹಿಬ ದಾರಿಯಿವೆ ಹಲವ...













