ಯಾವ ಹಾಡನು ನಾ ಹಾಡಲಿ,
ಇನ್ನು- ಬಾಳಿನ ಉಷೆಯನು ಎಚ್ಚರಿಸಲಿ?
ಬಂಗಾರ ಬಯಲಲಿ
ಸಿಂಗಾರ ಬೆಳೆಯಲಿ
ತಂದು ಇಕ್ಕಿದರೊಂದು ಕಿಡಿ ಬೆಂಕಿ !
ಬೆಳೆಯಲ್ಲಿ ಉರಿ ತಾಗಿ,
ಬಯಲೆಲ್ಲ ಹೊಗೆಯಾಗಿ
ಉಳಿದುದೆಲ್ಲವು ಇಲ್ಲಿ – ಎದೆ ಬೆಂಕಿ !
ನೋವನರಿಯದ ಬಾಳು
ಬಾಳಲ್ಲ, ಬರಿ ಬೀಳು ;
ನೋವಿನ ನಿಜವರಿತ ಬಾಳು ಗೋಳು !
ಒಲವಿನ ಗೆಳತಿಯ
ಹೃದಯದ ಪ್ರಣತಿಯ
ಮತ್ತೆ ಹೊತ್ತಿಸಲೆಂತು- ಹಾಡಲಿ?
*****
Latest posts by ಅನಂತನಾರಾಯಣ ಎಸ್ (see all)
- ಕನಸೊಂದ ಕಂಡೆ - May 13, 2019
- ಸುಂದರ ಉಷಾ ಸ್ವಪ್ನ - May 6, 2019
- ಜೈಲಿನ್ಕಂಡಿ - April 29, 2019