
ತದೇಕ ಚಿತ್ತದಿಂದ ಎಲಾ ಯುವಕ ನೀನು ಅದೇನ ನೋಡುತ್ತಿರುವೆ ಗಾದೆಮಾತಿನ ಮೀನ ಹೆಜ್ಜೆಗಳನ್ನೋ ಅಥವ ನೀನು ಪ್ರೀತಿಸುವ ಹೆಣ್ಣಿನ ನಿಗೂಢ ಒಳದಾರಿಗಳನ್ನೋ? ತಳಮಳಿಸುವ ಸರೋವರದ ತೆರೆಗಳ ಮೇಲೆ ತೇಲಿ ಬರುತಿರುವ ಛಿದ್ರ ಚಿತ್ರ ತಳೆಯುವುದಾವ ರೂಪ ತಿಳಿಯಲು ನಾ...
ಪುಟಿದೇಳುವ ರಾಗದುಸಿರ ಭಾವದೆಳೆಯ ಮಧುರ ಭಾಷೆ ನಮ್ಮ ಭಾಷೆ ಕನ್ನಡ ಭಾಷೆ || ಹಸಿರಾಗಿಹ ನೆಲದನುಭಾವ ತುಂಬಿ ಕಂಪ ಬೀರುವ ಭಾಷೆ ನಮ್ಮ ಭಾಷೆ ಕನ್ನಡ ಭಾಷೆ || ಸದ್ವಿಚಾರ ತಾಳದಗಲ ಮಾನಭಿಮಾನದಿಂ ಮೆರೆದ ಭಾಷೆ ನಮ್ಮ ಭಾಷೆ ಕನ್ನಡ ಭಾಷೆ || ಕಲೆಯದನುರಾಗಲ...
ಹರನ ನಾಮವ ಹಿಡಿದು ದಿನಬೆಳಗು ಹಾಡುವಿ ಆ ಹರನು ಇನ್ನಾರು ತಿಳಿಯಲಾರಿ ಹೃದಯ ಗಂಗೆಯ ಹೊಳೆಯಲ್ಲಿ ತೇಲಿಬಿಟ್ಟಿರುವಿ ನಿಜಭಕ್ತಿ ತೊರೆದೀಶನನು ಕಾಣಲಾರಿ ಹರನೆಲ್ಲಿ; ನೀನೆಲ್ಲಿ; ಅವನ ಹುಡುಕುವಿಯೆಲ್ಲಿ ? ಅಹಂಕಾರದೊಳು ನೀ ಮರೆದು ಪೂಜಿಸಲು ನಿನ್ನ ಪತ್ರ...
ಬಾನು ರೆಪ್ಪೆ ಮುಚ್ಚುತಿದೆ ಇರುಳು ಸೆರಗ ಹೊಚ್ಚುತಿದೆ, ತಾರೆ ಚಂದ್ರ ತೀರದಲ್ಲಿ ನಕ್ಕು ಹರಟೆ ಕೊಚ್ಚುತಿವೆ, ಮಾತಾಡದೆ ಸಂಭ್ರಮದಲಿ ತೇಕಾಡಿದೆ ಮುಗಿಲು, ಹಾಡಲು ಶ್ರುತಿಗೂಡುತ್ತಿದೆ ಬೆಳುದಿಂಗಳ ಕೊರಳು! ದಡವ ಕೊಚ್ಚಿ ಹರಿಯುತಿದೆ ನದಿಗೆ ಮಹಾಪೂರ, ಗ...
ಮಾತು ಮಾತು ಮಾತು ಅದೆಷ್ಟು ಬಡಬಡಿಕೆ ಅವಿವೇಕಿ ಹಸಿರೊಟ್ಟಿಗೆ ಹದ ಬೆಂದ ನಂತರ ಅಖಂಡ ಮೌನ ಪ್ರಸ್ಥಾನಕ್ಕೆ ಕಾದಿರುವ ಮಹಾ ಜಾಣ ಮನ. *****...
ಬಾನಿನ ಕ್ಯಾನ್ವಾಸ್ನಲ್ಲಿ ದಿನ ಬೆಳಗು ಬಿಡಿಸುವೆ ಒಲವಿನ ಕೆಂಪು ಚಿತ್ರ ನಿನ್ನ ಪ್ರಣಯ ಪತ್ರ *****...
ಸಂಭ್ರಮದಲಿ ಬೆಳಕ್ಕಿ ಸಾಲು ರೆಕ್ಕೆ ಬಿಚ್ಚಿ ಬಾನು ತುಂಬ ಹಾರಾಡಿ ತಣಿ ತಣಿದು ಊರ ಹೊಲಗದ್ದೆಗಳ ಸ್ಪರ್ಶಿಸಿ ಬೆಟ್ಟದ ಮೇಲೆ ನೆರಳು ಹಾಯಿಸಿದವು. ಎಲ್ಲಾ ಜೀವಿಗಳ ನಿಟ್ಟುಸಿರು ಹೊತ್ತ ಮೋಡಗಳು ಮಳೆ ಬೀಜ ಬಿತ್ತಿವೆ ಆಷಾಢದ ಸಂಭ್ರಮ ಸಜ್ಜಾಗಿದೆ ಗಡಿಯಾರ...













