ತದೇಕ ಚಿತ್ತದಿಂದ ಎಲಾ ಯುವಕ ನೀನು
ಅದೇನ ನೋಡುತ್ತಿರುವೆ ಗಾದೆಮಾತಿನ
ಮೀನ ಹೆಜ್ಜೆಗಳನ್ನೋ ಅಥವ
ನೀನು ಪ್ರೀತಿಸುವ ಹೆಣ್ಣಿನ ನಿಗೂಢ
ಒಳದಾರಿಗಳನ್ನೋ?

ತಳಮಳಿಸುವ ಸರೋವರದ
ತೆರೆಗಳ ಮೇಲೆ ತೇಲಿ
ಬರುತಿರುವ ಛಿದ್ರ ಚಿತ್ರ
ತಳೆಯುವುದಾವ ರೂಪ
ತಿಳಿಯಲು ನಾನೂ ನಿನ್ನಂತೆ
ಕಾದಿರುವೆ ಕಾತರದಿಂದ

ಆದರೆ ಮಾತ್ರ
ತೆರೆಗಳು ನಿಂತು ಎಲ್ಲ ತಿಳಿಯಾಗುವ ಹೊತ್ತು
ಮರೆತಿರಬಹುದೆ ನಾವು ಗುರುತು?
*****

ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)