ಇವತ್ತೆಲ್ಲಾ ಜೋರು ಮಳೆ ದಬದಬ ಬೀಳ್ತಾನೆ ಇದೆ. ದಿಗಿಲು ಹುಟ್ಸಿದ್ಹಂಗೆ, ನನ್ನ ಕೈಯಲ್ಲಿ ಹೊರಗೆ ಬರೋಕ್ಕು ಆಗಲ್ಲ, ಒಂದೇ ಸಮಗೆ ಉಸಿರು ಕಟ್ಟಿದ್ಹಾಂಗೂ ಆಗ್ತಿದೆ ಕಣ್ರೀ. ಕುಂಜಳಿ ತೆಕ್ಕೆಗೆ ಬಂದ ಪಾಂಜನ ಕೊಕ್ಕಲ್ಲಿ ಕೊಕ್ಕಿಟ್ಟು ನೋವ ಉಲಿಯಿತು. ಯಾ...
ಮೂಲ: ರವೀಂದ್ರನಾಥ ಠಾಕೂರ್ ಗೀತಾಂಜಲಿ (If thou speakest not ಎಂಬ ಕಾವ್ಯಖಂಡ) ನುಡಿಯದಿದ್ದರೇನು ನೀನು ನಿನ್ನ ಮೌನವನ್ನೆ ನಾನು ಹೃದಯದಲ್ಲಿ ತುಂಬಿ, ವಿರಹದಲ್ಲಿ ಬೇಯುತಿರುವೆ ಅಲುಗದಲೆಯೆ ಕಾಯುತಿರುವೆ ನಿನ್ನನ್ನೇ ನಂಬಿ. ಚುಕ್ಕಿಗಣ್ಣ ಬಿಚ್ಚಿ...
ನಮ್ಮ ಸಾವ್ಕಾರ್ ಸಂಗಪ್ಪ ಅಂದ್ರೆ ಸಾಮಾನ್ಯನಲ್ಲ. ಆತ ಸಾಮಾನ್ಯ ಅಲ್ಲ ಅನ್ನೋದು ‘ಸಾವ್ಕಾರ್’ ಅನ್ನೊ ಶಬ್ದದಲ್ಲೇ ಗೊತ್ತಾಗುತ್ತಾದ್ರೂ ಈ ಮಾತನ್ನು ಒತ್ತಿ ಹೇಳೋಕೆ ಕಾರಣವಿದೆ. ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ. ನಿಜವಾಗ್ಲೂ ಸಂಗಪ...
“Imagination is the body of Thought Be it for thee to find its harness out.” ಕಲೋಪಾಸಕ (ಮೊದಲು ಮಾತು) ಕಲೋಪಾಸಕನ ಜೀವಿತದ ಇತ್ಯರ್ಥವೇನೆಂಬ ಪ್ರಶ್ನೆಯು ನನ್ನನ್ನು ಅನೇಕ ವರ್ಷಗಳಿಂದ ಕೆಣಕುತ್ತಿತ್ತು. ಅವನ ಆಂತರಿಕ ...
ಕುಂಟನಾಗಿ ಕುರುಡನಾಗಿ ಗುರುವ ಕಂಡು ಉಳಿದೆನೆ ಮುಗ್ಧನಾಗಿ ದಗ್ಧನಾಗಿ ಲಿಂಗ ಬೆಳಕು ಪಡೆದೆನೆ ಎಲ್ಲ ಇಲ್ಲಿದೆ ಶಿವನ ಮನೆಯಿದೆ ತಾಯ ತೊಟ್ಟಿಲು ತೂಗಿದೆ ಇದೆ ಗುರುಮನೆ ನಿಜದ ಅರಮನೆ ಜ್ಯೋತಿ ಸಂಗಮವಾಗಿದೆ ಇಲ್ಲಿ ಅರಳಿದ ಹೂವು ಎಂದಿಗು ಬಾಡಿ ಹೋಗದು ಬೀ...
ಅಧ್ಯಾಯ ಹತ್ತು ವಿಷಯಕ್ಕೆ ನೇರವಾಗಿ ಬರುವ ಮುನ್ನ ಕೆಲವು ಉಪಕತೆಗಳನ್ನು ನಿರೂಪಿಸಿಬಿಡುತ್ತೇನೆ. ಕನಕಪುರಕ್ಕೆ ಹತ್ತಿರದಲ್ಲೊಂದು ಹಳ್ಳಿ. ಅಲ್ಲೊಬ್ಬ ಇಪ್ಪತ್ತರ ಹರೆಯದ ತರುಣ. ಹೆಸರು ರಾಮ. ಊರಿನವರ ದೃಷ್ಟಿಯಲ್ಲಿ ದಡ್ಡ. ಅದಕ್ಕೆ ‘ಯಾಡ್ರಾಮ’ ಎಂಬ ಉ...
ಬತ್ತಿದಾ ಎದೆಯೊಲವ ವಿಷಮ ವಿಷಸಮ ಬಾಳ ನಾಳಿನಲಿ ಕಣ್ಣಿಟ್ಟು ನೂಕುತಿದ್ದೆ. ಹಗಲಿರುಳು ಬೆಳೆಯುತಿಹ ಕೆಳೆಯ ಚಿಗುರಾಸೆಯಲಿ ಬರಿದೆದೆಯ ಶೂಲಗಳ ಮರೆಸುತಿದ್ದೆ. ಕನಸಿನಲಿ ಕುಣಿಯುತಿಹ ಚಪಲ ಬಂಧುರರೂಪ ಕಣ್ಣ ಹಿಡಿಕೆಗೆ ಆಂದು ನಿಲುಕದಾಯ್ತು ವನದಿ ಮನೆ ಮಾಡ...
ನೆಲದ ಮೇಲೆ ಈಸುವುದು, ನೋಡಿದಿರಾ ಮೀನಾವತಾರ ! ಮನುಕುಲೋದ್ಧಾರಕ ನನ್ನ ಕುವರ ! ಬಯಲನ್ನೆಲ್ಲ ಬೆನ್ನಲಿ ಹೊತ್ತಿರುವುದು, ನೋಡಿದಿರಾ ಕೂರ್ಮಾವತಾರ ! ವಂಶಾಧಾರಸ್ತಂಭ ನನ್ನ ಕುವರ ! ಮುಗಿಲನ್ನೆ ಮೊಗದಿಂದೆತ್ತಲು ಹವಣಿಸುವದು. ನೋಡಿದಿರಾ ವರಾಹಸ್ವಾಮಿ ...
ಒಬ್ಬ ಶಿಷ್ಯ ಹಸಿ ಜೇಡಿ ಮಣ್ಣಿನಲ್ಲಿ, ಬುದ್ಧನನ್ನು ಮಾಡಿ ಹಸಿವಿಗ್ರಹವನ್ನು ಪೂಜಿಸಿ, ಜಲ ಧಾರೆಯಿಂದ ಅಭಿಷೇಕ ಮಾಡುತ್ತಿದ್ದ. ಕೊಡಗಟ್ಟಲೆ ನೀರು ಸುರಿದಾಗ, ಹಸಿಮಣ್ಣಿನ ವಿಗ್ರಹ ಕರಗಿ ಹರಿದು ಹೋಗುತ್ತಿತ್ತು. ಇದನ್ನು ನೋಡುತ್ತಿದ್ದ ಗುರುಗಳು R...
ಕಾಡಹಳ್ಳಿ ಒಂದು ಚಿಕ್ಕ ಹಳ್ಳಿ. ಆ ಹಳ್ಳಿಯಲ್ಲಿ ಪಾಠಶಾಲೆ ಬಹಳ ವರ್ಷಗಳಿಂದಲೂ ಇರಲಿಲ್ಲ. ಗ್ರಾಮಸ್ಥರು ಸರ್ಕಾರದವರನ್ನು ಆಗಾಗ್ಗೆ ಕೇಳಿಕೊಳ್ಳುತ್ತಿದ್ದರು. ಆದರೆ ಅದು ಪ್ರಯೋಜನವಾಗಲಿಲ್ಲ. ಕಟ್ಟಕಡೆಗೆ ಊರಿನ ಮುಖಂಡರೆಲ್ಲಾ ಸೇರಿ, ಪಟೇಲ್ ತಿಮ್ಮೇಗೌಡನನ್ನು ಮುಂದಿಟ್ಟು ಕೊಂಡು ಇನ್ಸ್ಪ...
“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...
ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...
ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...
ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...
ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...








