ಏಳಿರಿ ಏಳಿರಿ, ಬಲುಬೇಗ, ಬೆಳಗಾಯಿತು ಏಳಿರಿ ಬೇಗ | ಖೂಳರ ಭಾರವನಿಳಿವುದಕೆ ಮೇಳಾಗಿ ನಡೆಯಿರಿ ನೀವೀಗ| ಬಿಳಿಯರಮದವನು ತೆಗ್ಗಿಸುತೆ, ಗೆಳೆಯರರವರನು ಮಾಡುತ್ತೆ | ತಿಳಿಸುತೆ ನಮ್ಮಯ ಸಂಸ್ಕ್ರತಿಯ, ಗಳಪದೆ ಮುಂದಡಿಹಾಕುತ್ತೆ | ಬಳವನು ನೂರ್ಮಡಿ ಹೆಚ್ಚಿಸುತೆ ಖಳತನದಿಂದತಿ ದೂರಿರುತೆ | ಬಳರಹಿತರ ನೀವ್ಕಾಯುತ್ತೆ, ...

ಚಿಂತೆ ಜಾರಲಿ ಚಿತೆಯು ಹೋಗಲಿ ಒಲವು ಮಾತ್ರವೇ ಉಳಿಯಲಿ ಸುಖದ ಸಾಗರ ಶಿವನ ಮಿಲನಕೆ ಪ್ರೀತಿ ಮಾತ್ರವೆ ಬೆಳೆಯಲಿ ಪ್ರಭುವಿಗೆಲ್ಲವ ಕೊಟ್ಟ ಮೇಲಕೆ ಒಳಗೆ ಚಿಂತೆಯು ಯಾತಕೆ ಪ್ರೀತಿ ತಂದೆಗೆ ಸಕಲ ಅರ್‍ಪಿಸಿ ಮತ್ತೆ ಯೋಚನೆ ಯಾತಕೆ ನಿನ್ನ ಬಳಿಗೆ ಇರುವದೆಲ್...

“ಅಲ್ಲೊಂದು ಕಾಗೆಗಳ ಆಕ್ರಮಣಕ್ಕೆ ಗುರಿಯಾದ ಸಾಯುತ್ತ ಬಿದ್ದಿರುವ ಹದ್ದು. ಸೀತಾ ಅದನ್ನು ಉಳಿಸುವ ಪ್ರಯತ್ನ ಮಾಡುತ್ತಾಳೆ. ಆದರೆ ಉಪಯೋಗವಾಗುವುದಿಲ್ಲ. ಗಾಯಗೊಂಡು ಜೀವಕ್ಕಾಗಿ ಅಸಹಾಯಕತೆಯಲ್ಲಿಯೇ ಗುದ್ದಾಡುತ್ತಿರುವ ಆ ಹದ್ದು ತಪ್ಪಿಸಿಕೊಳ್ಳ...

ಕಣಜ ಕಾಳು ಎಳ್ಡೂ ಕೂಡ್ದಾಗ್ ಅಲ್ವ ಆಕೋದ್ ಬರ್‍ತಿ? ಮನಸು ಮೆಯ್ಯಿ ಎಳ್ಡೂ ಸೇರ್‍ಕೊಂಡ್ರ್ ಆಗ್ಲೇ ಪ್ರೀತಿ ಪೂರ್‍ತಿ! ೧ ಮನಸು ಮೆಯ್ಯಿ ಮುತ್ಕೊಟ್ಟಂಗಿತ್! ಸೌಂದ್ರ ಆರ್‍ದ ಮಾರ್‍ತಿ! ಒಂದಿದ್ರ್ ಇನ್ನೊಂದ್ ಇಲ್ದೌರಂದ್ರೆ- ಬಂಡಿ ಇಲ್ಲದ್ ಸಾರ್‍ತಿ! ...

ಅಲ್ಲೋಲಕಲ್ಲೋಲವಾದ ಸಾಗರದಲ್ಲು ನಾನು ಸಾಗರಬಿದ್ದು ಸಾಗಬಲ್ಲೆ. ಹಾಳು ಹಂಪೆಯ ಮಣ್ಣಿನಂಥ ಕಣ್‌ಗಳ ಕಂಡು, ನನ್ನ ಚೈತನ್ಯವೂ ನಿಂತ ಕಲ್ಲೆ! ಸಿಡಿಲ ಸೈರಿಸುವೆ, ಕಂಬನಿಯ ಸೈರಿಸಲಾರೆ, ನಂಜುಂಡ ಶಿವ ನುಂಗದಂಥ ನಂಜು; ಭವಭವಾಂತರದಲ್ಲಿ ತೊಳಲಾಡಿಸುತ್ತಿರುವ...

ಒಮ್ಮೆ ಮುಳ್ಳು, ಹೂವು ನಡುವೆ ಹೀಗೆ ಮಾತುಕತೆ ನಡೆದಿತ್ತು. ಹೂವೇ! “ನೋಡು ಅಲ್ಲಿ ಕಳ್ಳ ಬರುತಿದ್ದಾನೆ” ಎಂದು ಹೇಳಿದಾಗ ಹೂವು ನಗುತಲಿತ್ತು. “ಈ ಬಾರಿ ನಿನ್ನ ಎದುರಿಗೆ ಸುಳ್ಳ ನಿಂತಿದ್ದಾನೆ” ಎಂದಾಗಲು ಹೂವು ನಗುತಲಿತ್ತು. “...

ನಿರ್‍ಜೀವ ಜಗದೊಳಗಿಂದೆಲ್ಲರಾ ಶಕ್ತಿ ಯುಕ್ತಿಯಾಸಕ್ತಿ ಗೌಜಿ ಗದ್ದಲವೆಲ್ಲ ವಸನ ವಸತಿ ವ್ಯಸನದೊಳತಿ ಉಜ್ಜೀವನದ ಹಣ್ಣು ಹಾಲನ್ನಕಪ್ಪ ದುಡಿಮೆಯೊಳಿಲ್ಲ ಮತಿ ಮೋಜಿನಾ ನಗರ ಬದುಕಿನೊಳೆಲ್ಲ ಜೀವಜಗಭಾವ ಹತಿ ತಾಜ ಸಾವಯವವೆನುತಚ್ಚೊತ್ತಿದರೊಪ್ಪಿ ಸವಿಯುವಾಸ...

ಕನಕಾ ಬಾದುರ ಬೆಂಗಳೂರು ಮನಕ ಮೆಚ್ಚಿದ ಬಳ್ಳೊಳ್ಳಿ ಹತ್ತಾನೆ ಹರದಿ ಸೊಪ್ಪಿಗ್ ವಗ್ರಣಿಯಾದ ಬಳ್ಳೊಳ್ಳಿ ಹೌದಲೇ ಬಳ್ಳೊಳ್ಳೀ ಸಾಂಬರಲೇ ಬಳ್ಳೊಳ್ಳಿ || ೧ || ಕನಕಾ ಬಾದುರ ಬೆಂಗಳೂರು ಮನಕ ಮೆಚ್ಚಿದ ಬಳ್ಳೊಳ್ಳಿ ಹಗ್ಗದಂತಾ ನುಗ್ಗೀಕಾಯಿಗೆ ವಗ್ರಣಿಯಾದ ...

ಬರೆದವರು: Thomas Hardy / Tess of the d’Urbervilles ಮಲ್ಲಿಯು ಮಲ್ಲಮ್ಮಣ್ಣಿಯಾದಮೇಲೈ, ಮಲ್ಲಣ್ಣನೂ ಕೆಂಸಿಯೂ ಮಜ್ಜಿಗೆಯ ಹೆಳಿ ಯನ್ನು ಬಿಟ್ಟು, ಮ್ಲೆಸೂರಿಗೆ ಬಂದರು. ನಾಯಕನು ಈಡಿಗದಲ್ಲಿ ಹತ್ತುಸಾವಿರ ಕೊಟ್ಟು ಮನೆಯನ್ನು ಕೊಂಡುಕೊಂ...

ಗುಲಾಬಿ ಹೂ ಅರಳಲು ಬೆಳಗಿಗಾಗಿ ಕಾತರಿಸುತಿತ್ತು ನಿನ್ನ ದರುಶನಕ್ಕಾಗಿ ಕೃಷ್ಣ ನನ್ನ ಮನಚಡಿಪಡಿಸುತಿತ್ತು ದೂರದಿ ಮೃಗ ಜಲವ ಕಂಡು ಬಾಯಾರಿ ನಾ ನೋಡಿದೆ ನಿನ್ನ ಮರೆತು ಐಹಿಕ ಸುಖವೇ ಆತ್ಮಾನಂದವೆಂದು ನಂಬಿದೆ ಕಾಮಿನ ಕಾಂಚನಗಳ ಅಪೇಕ್ಷೆ ಜೀವನದ ಗುರಿ ಇ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...