ಬಾ ಬಾ ಮೋಹನೆ-ಬೇಗ
ಗೆಜ್ಜೆಯುಲಿಯೆ ಗೆಲು ಗೆಲ್ ಗೆಲ್ಲುಲಿವ
ಹೆಜ್ಜೆಹೆಜ್ಜೆಗೂ ಹೃದಯವ ತುಳಿವ
ನಸುನಗುವ ಹುಸಿಮುಳಿವ ಬಿಸವಂದದ ಸುಂದರಿ ನೀ
ಬೇಗ ಬಾ . . .
ನಮ್ಮಿರಮಿಂದಾವಮೃತವ ಪಡೆಯೆ,
ಆರಾಡಿಪರೀ ಮಂತನು ಅರಿಯೆ.
ಚಲಿಚಲಿಸುತ ಎದೆಯುಬ್ಬಿಸಿ ನೋವೆಬ್ಬಿಸಿ ನಲಿವವಳೇ
ಬೇಗ ಬಾ . . .
ನೀ ಹೆಡೆಬಿಚ್ಚುವ ಹಾವಂತಿರುವೆ
ಗರಿಕೆದರಿದ ನವಿಲಂದದಿ ಕುಣಿವೆ
ಇನ್ನಿಲ್ಲದ ಕಡುಬೆಡಗಿನ ಸಿಂಗಾರದ ಬಂಗಾರವೆ
ಬೇಗ ಬಾ . . .
ನಿನ್ನೊ೦ದಾಸೆಯೆ ನಮಗುಳಿವಂತೆ
ಮಿಕ್ಕಾಸೆಗೆ ಪೋ ಪೋ ಎನುವಂತೆ
ತಳುಕುವೆ ಬಳುಕುವೆ ಕಣ್ಮನವೆಮ್ಮುಳಿದೋಡುವ ಪರಿಯೊಳು
ಬೇಗ ಬಾ . . .
*****