Home / Poem

Browsing Tag: Poem

ಬಿಲ್ಲಿಗೆ ಏರಿದೆ ಬಾಣ ಕೊರಳಿಗೆ ಹಾರಿದೆ ಪ್ರಾಣ ಭಯವಿಸ್ಮಯದಲಿ ಗೀತೆಯ ಕೊನೆಚರಣದ ಗಾನ ಸಂಜೆಯ ಸೂರ್ಯನ ಕೆಂಪಿಗೆ ಕಂಪಿಸುತಿದೆ ಮರದೆಲೆಯಲಿ ಸಂಚರಿಸಿಯು ನಿಂತಂತಿದೆ ಗಾಳಿಗು ನಿತ್ರಾಣ ಮಳೆಸುರಿದೂ ಹೊಳೆಹರಿದೂ ಹಕ್ಕಿ ಹಗುರ ದನಿಗರೆದೂ ಲೋಕ ಏಕೋ ಮಂಕು...

ಬೆಟ್ಟ ಅಡ್ಡವಾಗಿ ಕಂದಕದ ತಳಹಾಯ್ದು ನಿರಂತರವಾಗಿ ಹರಿದ ಹೊಳೆ ಬಯಲ ತೆರೆ ತರದು ಕೊಂಡ ಹರುವಿನಲಿ ಅರಿವು ಮುತ್ತಿ ಝಳುಝಳು ಈಜು. ಜೊತೆ ಜೊತೆಯಲಿ ಕನಸು ವಿಸ್ತೃತ ದಂಡೀ ಯಾತ್ರೆ ಅರ್ಥ ಅನರ್ಥಗಳ ದಾರಿ ತುಂಬ ತೆರೆದ ಹಸಿರು ಹಕ್ಕಿ ಪಿಕ್ಕಿ ಹಾಡಿದ ಹಾಡು...

ರಸ್ತೆಗಳು ಹೆದರಿ ಕತ್ತಲೆಯಲಿ ಮುದುರಿಕೊಳ್ಳುತ್ತಿದ್ದಂತೆಯೇ ಸರಿ ರಾತ್ರಿ ಬಿಚ್ಚಿಕೊಳ್ಳುತ್ತಾರೆ ಕಳ್ಳರು ಕದೀಮರು ತಮ್ಮ ವಿಕೃತ ಬಗೆ ಬಗೆಯ ಕಾಮನೆಗಳನ್ನು. *****...

ಲಕ್ಸರಿನ ಬೀದಿಯಲ್ಲಿ ಪೋಲೀಸರು ಒಬ್ಬ ಕಳ್ಳನನ್ನು ಬಿಡದೇ ಮರ್ದಿಸುತ್ತಿದ್ದಾರೆ ಅವನ ದವಡೆ ಒಡೆದು ರಕ್ತ ನಿರಂತರ ಸೋರುತ್ತಿದೆ. ಕೈರೊದ ಕ್ಲಬ್ಬಿನಲ್ಲಿ ಒಬ್ಬಾಕೆ ಎಲ್ಲರನ್ನೂ ಕೇಳುತ್ತಿದ್ದಾಳೆ: ಹಿಂದಾದುದನ್ನು ನಾನು ಕಂಡಿದ್ದೇನೆ ಮುಂದಾಗುವುದು ನನ...

ಮಳೆ ಮಳೆ ಮುದ್ದು ಮಳೆನೀನು ಬಂದರಲ್ಲಾ ಕೊಳೆಯಾಕೆ ಬರುವೆ ಇಲ್ಲಿಗೆ?ಕೇಳಿತೊಂದು ಮಗುವುಸುರಿವ ವರ್ಷ ಧಾರೆಗೆ ಮುದ್ದು ಮಗುವೇ, ಕೇಳು ಇಲ್ಲಿನಾನು ಬರದೆ ಇದ್ದರಿಲ್ಲಿಎಲ್ಲ ಬರಡು ಚಿಗುರು ಕೊರಡುಅಂತೆ ಹಾಗೆ ಬರುವೆ ನಾನುಹನಿಸಿ ನೀರ ಬರಿಸಿ ಚಿಗುರತಣಿಸಿ...

೧ ಕವಿತೆ ಹುಟ್ಟುವುದು ಮಹಲಿನಲ್ಲಲ್ಲ, ಮುರುಕು ಜೋಪಡಿಗಳಲ್ಲಿ. ಕವಿತೆ ಹುಟ್ಟುವುದು ಝಗಝಗಿಸುವ ದೀಪಗಳ ಬೆಳಕಿನಲ್ಲಲ್ಲ ಬುಡ್ಡಿ- ಬೆಳಕಿನ ಮಿಡುಕಿನಲ್ಲಿ. ಕವಿತೆ ಹುಟ್ಟುವುದು ಕಲ್ಪನೆಯ ಮೂಸೆಯಲ್ಲಲ್ಲ ದೈನಂದಿನ ಘಟನಾವಳಿಗಳಲ್ಲಿ. ಕವಿತೆ ಹುಟ್ಟುವುದ...

ನೆನಪು ಮರೆವು ಎರಡೂ ದೇವರು ಕೊಟ್ಟ ವರದಾನ ಯಾವುದನ್ನು ನೆನಪಿಡಬೇಕು ಯಾವುದನ್ನು ಮರೆಯಬೇಕು ಎಂಬ ವಿವೇಕವನ್ನು ಜಾರಿಯಲಿಟ್ಟರೆ, ಆದರೆರಡೂ ಶಾಪವಾಗಿ ಬಿಡಬಹುದು. ದಾರಿ ತಪ್ಪಿ ಮರೆಯಬೇಕಾದ್ದನ್ನು ನೆನಪಿಟ್ಟು ನೆನಪಿಡಬೇಕಾದ್ದನ್ನು ಮರೆತುಬಿಡುವ ಅವಿವ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...