ಇನ್ನೊಂದು ತಿಂಗಳು ಹೊಳ್ಳಿತೋ ಡಂಬಾಯ ಸಾಯಿತಿ ಹರಕುಬಾಯಿ ಚಂಪಾ ಕ.ಸಾ.ಪ.ಕ್ಕೆ ಕಾಲಿಕ್ಕಿ ವರ್ಷ ಆಗ್ತದ. ಅವರು ಈತನಕ ಮಾಡಿದ ಸಾದ್ನೆ ಸಲುವಾಗಿ ಅವರ ಚೇಲಾಗಳು ಅದ್ದೂರಿಯಾಗಿ ವರ್ಷಾಬ್ಧಿಕ ಆಚರಿಸಲಿಕ್ಕ ರೆಡಿ ಆಗ್ಲಿಕತ್ತಾರಂತ ಎಲ್ಲೆಲ್ಲೂ ಖಬರ್ ಆಗೇತ...
ದೀಪಗಳ ದಾರಿಯಲಿ ನಡುನಡುವೆ ನೆರಳು ನೆರಳಿನಲಿ ಸರಿವಾಗ ಯಾವುದೋ ಬೆರಳು ಬೆನ್ನಿನಲಿ ಹರಿದಂತೆ ಭಯಚಕಿತ ಜೀವ ತಣ್ಣನೆಯ ಒಡಲಲ್ಲಿ ಬೆದರಿರುವ ಭಾವ. ಆಸೆ ಕನಸುಗಳೆಲ್ಲ ತೀರಿದುವು ಕುಸಿದು ಭಾಷೆಗೂ ಸಿಗದಂಥ ಭಯದ ಮಳೆ ಬೆಳೆದು ಕಪ್ಪು ಮೋರೆಯ ಬೇಡ ಕರಿದಾರ ...
ಪಾಪಾತ್ಮ ರಾಜನ ರಾಜ್ಯದಲ್ಲಿ ಸಂಪತ್ತು ಬಹಳವಿತ್ತು. ಅದೆಲ್ಲ ಅರಮನೆ, ದಂಡು, ಪರಿವಾರ ಅವುಗಳಿಗೇ ಖರ್ಚಾಗಿ ಬಿಡುತ್ತಿತ್ತು. ಆದರೆ ರಾಜನಿಗೆ ಹಣವನ್ನು ಕೂಡಹಾಕಬೇಕೆಂಬ ಹವ್ಯಾಸ ಬಹಳ. ಅದಕ್ಕಾಗಿ ಅವನು ಹೆಂಡತಿ, ಮಕ್ಕಳು, ರಾಜ್ಯ ಬಿಟ್ಟುಕೊಟ್ಟು ಕೈಯಲ...
ತಾಯೆ ನಿನ್ನ ಕಂದನಾದೆನಲ್ಲ ಎಂಥ ಪುಣ್ಯವೇ ನಿನ್ನ ಅಮ್ಮನೆಂದು ಕರೆವ ಜೀವ ಏನು ಧನ್ಯವೇ! ನಿನ್ನ ಪಾದ ತೊಳೆಯಲು ಕಾತರಿಸಿದೆ ಕಡಲು ಕೋಟಿ ಕೋಟಿ ಜೀವಕೆ ರಕ್ಷೆ ನಿನ್ನ ಒಡಲು ಹಸಿರು ಮುರಿವ ಶಾಲಿವನದ ಸಾಲು ನಿನಗೆ ವಸ್ತ್ರ ಅಂಬರದಲಿ ಮಿಂಚಿದೆ ನಿನ್ನ ಕೈ...
ಹೊತ್ತು ಹೊರಟರೆ ಎಳ್ಳು ಅಮಾಸಿ. ಹೊಲಕ್ಕೆ ಚರಗ ಒಯ್ಯಬೇಕು. ಆ ಕಳಶಟ್ಟಿಯವರ ಮನೆಯಲ್ಲಿ ಏಳುಜನ ನೆಗೇಣಿಮಕ್ಕಳು. ಅವರು ಇಡಿಯರಾತ್ರಿ ನಿದ್ರಯಿಲ್ಲದೆ ಕೆಲಸಮಾಡಿದರು. ಒಲೆ, ಅಡಿಗೆಮನೆ ಮೊದಲು ಮಾಡಿ ಇಡಿಯ ಮನೆಯನ್ನು ಸಾರಿಸುವುದು. ಒತ್ತಲಕ್ಕೆ ಬೆಂಕಿ...
ಒಬ್ಬ ಅತ್ಯಂತ ಹೆಸರುವಾಸಿಯಾದ ರಾಜಕಾರಣಿ ತನ್ನ ಮಿತ್ರನಿಗೆ ಹೀಗೆ ಹೇಳಿದು “ನಮ್ಮಶಬ್ಬ ಕೋಶದಲ್ಲಿ ಭೀಕರ ಎನ್ನುವ ಶಬ್ದವೇ ಇಲ್ಲ ಅದು ನಿನಗೆ ಗೊತ್ತೆ?”. ಆ ಮಿತ್ರ ಹೇಳಿದಾ “ನಿಜ ನೀನು ಹೇಳೊದು; ಅದು `ಅಮ್ಮಾವ್ರ ಮುಂದೆ’...
ಐಸುರ ಮೋರುಮದಾಟ ಹೇಸಿ ತಗಿ ನಿನ್ನ ಪಾಠ ||ಪ|| ಒಂದು ಬೀಜ ಅಕ್ಷರವನರಿಯದೆ ಮಂದಿಯೊಳು ಬಹು ಜಾಣನೆನಸಿ ನಿಂದೆಗುಣ ನಿಜಾತ್ಮನರಿಯದೆ ಹಂದಿ ಜಲ್ಮಕೆ ಬಿದ್ದಿ ತಮ್ಮಾ ||೧|| ಕತ್ತಲ ಶಹಾದತ್ತು ಹ್ಯಾಂಗೋ ಛೇ ಮತಿಹೀನ ಹೋಗ...
ಅಲಾವಿ ಇನ್ನ್ಯಾತಕ್ಕಾಡಬೇಕು ||ಪ|| ಬೇಧವನರಿಯದೆ ನೀವು ಸಾಲತುರುಕರು ಕೂಡಿ ಕುಂದನಿಟ್ಟು ಕುಣಿಸ್ಯಾಡೋ ಅಲಾವಾ ಯಾತಕ್ಕಾಡಬೇಕು. . . ||೧|| ಆರು ಶಾಸ್ತ್ರ ಹದಿನೆಂಟು ಪುರಾಣ ಓದಿಕೋ ಪುರಾಣ ಓದಿಕೋ ಕಿತಾಬ ಯಾತಕ್ಕಾಡಬೇ...
ಹಿಡಿ ಹಿಡಿ ಹೋಗ್ತದ ಐಸುರ ಹೋಗ್ತದ ಐಸುರ ||ಪ|| ಜಡಿ ಜಡಿ ಬಲವಾಯ್ತು ಕರ್ಬಲ ಕರ್ಬಲ ಜಡಿದರ ಮಾರ್ಬಲಯೆಲ್ಲದ ಸಾರ್ಬಲದೊಳು ನೀ ನಡಿ ನಡಿ ||೧|| ಪಡಿ ಪಡಿ ಸಮ ರಂಗಭೂಮಿಯ ಶಾದತ್ತ ಪಡಿ ಶಾದತ್ತ ಪಡಿದರೆ...
ಹಾಡುದು ಬಿಡೋ ಮೂಢಾ ಕವಿತ ರಿವಾಯತ ||ಪ|| ರೂಢಿಪ ಶಾರಮದೀನದ ಪತಿಗಳು ಕೂಡಿದರ‍್ಹೋಗಿ ಶಾದತ್ತ ||೧|| ಕಲ್ಲಿನೊಳಗ ವಜ್ರ ಚೆಲ್ಲಿ ಕತ್ತಲದಿನ ಬಲ್ಲಿದರ‍್ಹೋಗಿ ಶಾದತ್ತ ||೨|| ಹೇಳುವರ‍್ಯಾರಿಲ್ಲ ಶಿಶುನಾಳ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...





